ಅಪರಾಧ

ಬಜಪೆ : ಮನೆಯ ಲಾಕರ್‌ನಲ್ಲಿದ್ದ 1 ಕೆಜಿ ಚಿನ್ನಾಭರಣ ಕಳ್ಳತನ

16 ಸಿಸಿ ಕ್ಯಾಮರಾ, 8 ನಾಯಿಗಳ ಕಣ್ಣುತಪ್ಪಿಸಿ ಕಳವು ಮಾಡಿದ ಚಾಣಾಕ್ಷ ಕಳ್ಳರು ಮಂಗಳೂರು: ಮನೆಯ ಲಾಕರ್‌ನಲ್ಲಿಟ್ಟ ಸುಮಾರು 1 ಕೆಜಿ ಚಿನ್ನವನ್ನು ಕಳ್ಳರು ಕದ್ದೊಯ್ದ ಘಟನೆ ಮಂಗಳೂರು ಬಜಪೆ ಸಮೀಪದ ಪೆರ್ಮುದೆಯಲ್ಲಿ ಸಂಭವಿಸಿದೆ. ಪೆರ್ಮುದೆಯ ಜಾನ್ವಿನ್‌ ಪಿಂಟೊ ಎಂಬವರ ಮನೆಯಲ್ಲಿ ಕಳ್ಳತನವಾಗಿರುವ ವಿಚಾರ ಮಂಗಳವಾರ ಬೆಳಕಿಗೆ ಬಂದಿದೆ. ಜಾನ್ವಿನ್‌ ಪಿಂಟೊ ಮತ್ತು ಅವರ ಪುತ್ರ ಪ್ರವೀಣ್‌ ಪಿಂಟೊ ಕುವೈಟ್‌ನಲ್ಲಿದ್ದಾರೆ. ಮನೆಗೆ ಬೀಗ ಹಾಕಿದ್ದು, ಮನೆಯ ಸುತ್ತ 16 ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಆದರೆ ಕಳ್ಳರು ಸಿಸಿ […]

ಬಜಪೆ : ಮನೆಯ ಲಾಕರ್‌ನಲ್ಲಿದ್ದ 1 ಕೆಜಿ ಚಿನ್ನಾಭರಣ ಕಳ್ಳತನ Read More »

ಇಸ್ರೇಲ್‌ ದಾಳಿಗೆ 10 ದಿನದಲ್ಲಿ 300 ಮಕ್ಕಳು ಸಾವು : ಯುನಿಸೆಫ್‌ ವರದಿ

15,000ಕ್ಕೂ ಅಧಿಕ ಮಕ್ಕಳನ್ನು ಬಲಿತೆಗೆದುಕೊಂಡ 18 ತಿಂಗಳ ಯುದ್ಧ ಗಾಜಾ: ಕದನ ವಿರಾಮ ಒಪ್ಪಂದ ಆದ ಬಳಿಕ ಪ್ಯಾಲೆಸ್ತೀನ್‌ ಮೇಲೆ ಇಸ್ರೇಲ್‌ ನಡೆಸಿದ ಎರಡನೇ ಸುತ್ತಿನ ದಾಳಿಯಲ್ಲಿ 300ಕ್ಕೂ ಅಧಿಕ ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಯುನಿಸೆಫ್‌ ವರದಿ ತಿಳಿಸಿದೆ. ಗಾಜಾದ ಪ್ಯಾಲೆಸ್ತೀಯನ್‌ ಪ್ರದೇಶದಲ್ಲಿ ಕಳೆದ 10 ದಿನಗಳಲ್ಲಿ 322 ಮಕ್ಕಳು ಸಾವನ್ನಪ್ಪಿದ್ದಾರೆ. 609 ಮಕ್ಕಳು ಗಾಯಗೊಂಡಿದ್ದಾರೆ ಎಂದು ಯುನಿಸೆಫ್ ತಿಳಿಸಿದೆ. ಮಾ.23ರಂದು ದಕ್ಷಿಣ ಗಾಜಾದಲ್ಲಿರುವ ಅಲ್ ನಾಸರ್ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಮೇಲೆ ನಡೆದ ದಾಳಿಯಲ್ಲಿ

ಇಸ್ರೇಲ್‌ ದಾಳಿಗೆ 10 ದಿನದಲ್ಲಿ 300 ಮಕ್ಕಳು ಸಾವು : ಯುನಿಸೆಫ್‌ ವರದಿ Read More »

ಉದ್ಯಮಿಗೆ ಹನಿಟ್ರ್ಯಾಪ್‌ : ಶಿಕ್ಷಕಿ ಸಹಿತ ಮೂವರು ಸೆರೆ

ವಿದ್ಯಾರ್ಥಿಗಳ ತಂದೆಯನ್ನೇ ಬಲೆಗೆ ಕೆಡವಿಕೊಂಡು ಬ್ಲ್ಯಾಕ್‌ಮೇಲ್‌ ಮಾಡಿದ ಟೀಚರ್‌ ಬೆಂಗಳೂರು: ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್‌ ಬಲೆಗೆ ಕೆಡವಿ ಲಕ್ಷಗಟ್ಟಲೆ ಹಣ ವಸೂಲು ಮಾಡಿದ ಶಿಕ್ಷಕಿ ಮತ್ತು ಆಕೆಯ ಇಬ್ಬರು ಸಹಚರರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್​ನಲ್ಲಿ ಖಾಸಗಿ ಪ್ರೀಸ್ಕೂಲ್ ನಡೆಸುತ್ತಿದ್ದ ಶ್ರೀದೇವಿ ರುಡಿಗಿ ಎಂಬಾಕೆಯೇ ಹನಿಟ್ರ್ಯಾಪ್ ಮಾಡಿದ ಶಿಕ್ಷಕಿ. ತನ್ನ ಶಾಲೆಗೆ ಬರುತ್ತಿದ್ದ ಮಕ್ಕಳ ತಂದೆಯನ್ನೇ ಬಲೆಗೆ ಕೆಡವಿಕೊಂಡು ಶ್ರೀದೇವಿ ಬ್ಲ್ಯಾಕ್‌ಮೇಲ್‌ ಮಾಡಿದ್ದಳು. ರಾಕೇಶ್ ಎಂಬ ಉದ್ಯಮಿಯ ಮಕ್ಕಳು ಶ್ರೀದೇವಿ ಕಲಿಸುತ್ತಿದ್ದ ಪ್ರೀಸ್ಕೂಲ್‌ಗೆ ಬರುತ್ತಿದ್ದರು.

ಉದ್ಯಮಿಗೆ ಹನಿಟ್ರ್ಯಾಪ್‌ : ಶಿಕ್ಷಕಿ ಸಹಿತ ಮೂವರು ಸೆರೆ Read More »

ಗ್ಯಾಸ್‌ ಸಿಲಿಂಡರ್‌ ಸ್ಫೋಟ : 7 ಮಂದಿ ಸಾವು

ಪಟಾಕಿಯ ಕಿಡಿ ತಗಲಿ ಸ್ಫೋಟಿಸಿದ ಸಿಲಿಂಡರ್‌ ಕೋಲ್ಕತ್ತಾ : ಪಶ್ಚಿಮ ಬಂಗಾಳದ ದಕ್ಷಿಣ ಪರಗಣ ಜಿಲ್ಲೆಯ ದೋಲಾಹಾತ್‌ ಎಂಬಲ್ಲಿ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ನಾಲ್ವರು ಮಕ್ಕಳು ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ. ಪಟಾಕಿ ಯಿಂದ ಸಿಡಿದ ಕಿಡಿ ಸಿಲಿಂಡರ್​ಗೆ ತಗಲಿ ಬೆಂಕಿಹತ್ತಿಕೊಂಡು ಸ್ಫೋಟಗೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಕಟ್ಟಡ ಬೆಂಕಿಗಾಹುತಿಯಾಗಿದೆ. ಬೆಂಕಿ ಅವಘಡದ ಬಳಿಕ ನಾಲ್ವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಮನೆಯಲ್ಲಿ ಪಟಾಕಿ ತಯಾರಿಸಲಾಗುತ್ತಿತ್ತು, ಈ

ಗ್ಯಾಸ್‌ ಸಿಲಿಂಡರ್‌ ಸ್ಫೋಟ : 7 ಮಂದಿ ಸಾವು Read More »

ನಿಷೇಧಿತ ಎಂಡಿಎಂಎ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ

ಪುತ್ತೂರು: ಕಾರಿನಲ್ಲಿ ನಿಷೇಧಿತ ಎಂಡಿಎಂಎ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪುತ್ತೂರು ನಗರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರ ಪೊಲೀಸ್ ಠಾಣೆ ನಿರೀಕ್ಷಕರು ಸೋಮವಾರ ಬೆಳಿಗ್ಗೆ ನರಿಮೊಗರು ಗ್ರಾಮದ ಮುಕ್ವೆ ಎಂಬಲ್ಲಿ ತಾತ್ಕಾಲಿಕ ಚೆಕ್‌ ಪಾಯಿಂಟ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಮಯ, ಸುಬ್ರಹಮಣ್ಯ ಕಡೆಯಿಂದ ಬಂದ ಮಾರುತಿ ಸುಝುಕಿ ಆಲ್ಟೋ 800 ಕಾರನ್ನು  ಪರಿಶೀಲಿಸಿದಾಗ ಕಾರಿನ ಡ್ಯಾಶ್ ಬೋರ್ಡ್‌ಲ್ಲಿ ಮಾದಕ ವಸ್ತುಗಳನ್ನು ಸೇದುವ ಸಾಧನಗಳು, ತೂಕ ಮಾಪಕ ಕಂಡುಬಂದಿತ್ತು. ಕಾರಿನ ಚಾಲಕ ಹಾಗೂ ಮತ್ತೊಬ್ಬನಲ್ಲಿ ಈ ಬಗ್ಗೆ

ನಿಷೇಧಿತ ಎಂಡಿಎಂಎ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ Read More »

ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ : ಮಹಿಳೆ ಸಹಿತ ನಾಲ್ವರು ವಶ

ಆಡಿಯೋ ಬಹಿರಂಗವಾದ ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರು ಬೆಂಗಳೂರು: ಸಚಿವ ಕೆ.ಎನ್‌. ರಾಜಣ್ಣ ಅವರ ಪುತ್ರ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರ ಹತ್ಯೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದ ಆಡಿಯೋ ತುಣುಕೊಂದು ಬಹಿರಂಗವಾದ ಬೆನ್ನಿಗೆ ತನಿಖೆ ಚುರುಕುಗೊಳಿಸಿರುವ ಪೊಲೀಸರು ಆಡಿಯೋದಲ್ಲಿದ್ದ ಪುಷ್ಪಾ ಎಂಬ ಮಹಿಳೆಯ ಸಹಿತ ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ಪಡೆದುಕೊಂಡಿದ್ದ ಎನ್ನಲಾದ ರೌಡಿಶೀಟರ್‌ ಸೋಮು ಎಂಬಾತನ ಕುರಿತು ರಾಕಿ ಹಾಗೂ ಪುಷ್ಪಾ ಎಂಬವರು ಮಾತುಕತೆ ನಡೆಸಿದ್ದ 18 ನಿಮಿಷದ

ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ : ಮಹಿಳೆ ಸಹಿತ ನಾಲ್ವರು ವಶ Read More »

ಕುರಿಯ ಮಲಾರ್ ನಿವಾಸಿ ಮೋಹನ್‍ ಆತ್ಮಹತ್ಯೆ

ಪುತ್ತೂರು: ಕುರಿಯ ಗ್ರಾಮದ ಮಲಾರ್ ನಿವಾಸಿ, ಕಲ್ಲರ್ಪೆ ಚಿನ್ನು‌ ಹೋಟೆಲ್ ಮಾಲಕ ಮೋಹನ್ (38 ವ.) ಅವರು ಸೋಮವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ತಿಳಿದು ಬಂದಿದೆ. ಮಲಾರಿನ ತನ್ನ ಮನೆಯ ಒಳಗಡೆಯೇ ನೇಣು‌ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂದರ್ಭ ಡೆತ್ ನೋಟ್‍ ಲಭಿಸಿದ್ದು, ಡೆತ್ ನೋಟ್’ನಲ್ಲಿ, ಸಾಲಬಾಧೆಯೇ ತನ್ನ ಸಾವಿಗೆ ಕಾರಣ ಎಂದು ಬರೆದಿಟ್ಟಿದ್ದಾರೆ. ನೆರೆಯ ಮನೆಯಲ್ಲಿ ಕಾರ್ಯಕ್ರಮಕ್ಕೆಂದು ಮನೆಯವರು ಹೋಗಿದ್ದ ಸಂದರ್ಭ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನ;ಲಾಗಿದೆ. ಮೃತರು ತಾಯಿ, ಪತ್ನಿ ಹಾಗೂ 4

ಕುರಿಯ ಮಲಾರ್ ನಿವಾಸಿ ಮೋಹನ್‍ ಆತ್ಮಹತ್ಯೆ Read More »

ಮನೆಯ ಆವರಣದೊಳಗೆ ಲಕೋಟೆಯಲ್ಲಿತ್ತು ಮಾನವನ ಅಸ್ಥಿ

ಪೊಲೀಸರ ತನಿಖೆಯಿಂದ ಬಯಲಾಯಿತು ಅಸಲಿ ವಿಷಯ ಮಂಗಳೂರು: ಉಳ್ಳಾಲದ ಮನೆಯ ಆವರಣವೊಂದರಲ್ಲಿ ಲಕೋಟೆಯಲ್ಲಿ ರಕ್ಷಿಸಿಟ್ಟ ಮಾನವ ಅಸ್ಥಿಗಳು ಪತ್ತೆಯಾಗಿದ್ದು, ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಪೊಲೀಸರ ತನಿಖೆ ಬಳಿಕ ಇದು ಯಾವುದೇ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಅಸ್ಥಿ ಅಲ್ಲ ಎಂದು ತಿಳಿದುಬಂದಿದೆ.ಕುಂಪಲದ ಚಿತ್ರಾಂಜಲಿ ನಗರದ ಮನೆಯೊಂದರ ಆವರಣದಲ್ಲಿ ಶನಿವಾರ ರಾತ್ರಿ ಸಂಸ್ಕರಿಸಿಟ್ಟ ಮಾನವ ಅಸ್ಥಿಗಳು ಪತ್ತೆಯಾಗಿದ್ದು, ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಅಸ್ಥಿಗಳ ಹಿಂದಿನ ಅಸಲಿಯತ್ತನ್ನು ಪತ್ತೆ

ಮನೆಯ ಆವರಣದೊಳಗೆ ಲಕೋಟೆಯಲ್ಲಿತ್ತು ಮಾನವನ ಅಸ್ಥಿ Read More »

ಮಗಳ ಬರ್ತ್‌ಡೇ ದಿನವೇ ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಪ್ಲ್ಯಾನ್‌

ಆಡಿಯೊ ಕ್ಲಿಪ್ಪಿಂಗ್‌ನಿಂದ ಬಯಲಾಯಿತು ಸುಪಾರಿ ಹಿಂದಿನ ಮರ್ಮ ಬೆಂಗಳೂರು: ಸಚಿವ ಕೆ.ಎನ್‌ ರಾಜಣ್ಣ ಅವರ ಪುತ್ರ, ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಅವರ ಮಗಳ ಬರ್ತ್‌ಡೇ ದಿನವೇ ಯತ್ನಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ತನ್ನ ಹತ್ಯಾಯತ್ನದ ಬಗ್ಗೆ ರಾಜೇಂದ್ರ ಅವರೇ ದೂರಿನ ಜೊತೆಗೆ ನೀಡಿದ್ದ ಆಡಿಯೊ ಕ್ಲಿಪ್ಪಿಂಗ್‌ ಈಗ ಬಯಲಾಗಿದ್ದು, ಇದರಲ್ಲಿ ಪುಷ್ಪಾ ಎಂದು ಹೇಳಿಕೊಂಡಿರುವ ಮಹಿಳೆ ರಾಕಿ ಎಂಬಾತನಿಗೆ ರಾಜೇಂದ್ರ ಅವರ ಹತ್ಯೆಯ ಪ್ಲ್ಯಾನ್‌ ವಿವರಿಸಿದ ಸಂಭಾಷಣೆಯಿದೆ. ರಾಜೇಂದ್ರ ತುಮಕೂರು ಎಸ್ಪಿಗೆ ನೀಡಿದ ಆಡಿಯೋದಲ್ಲಿ ಸುಪಾರಿ

ಮಗಳ ಬರ್ತ್‌ಡೇ ದಿನವೇ ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಪ್ಲ್ಯಾನ್‌ Read More »

ದರೋಡೆ ಮಾಡುವಾಗ ಸೈರನ್‌ ಮೊಳಗಿ ಇಬ್ಬರು ಕಳ್ಳರು ಸೆರೆ

ದೇರಳಕಟ್ಟೆಯ ಮುತ್ತೊಟ್ಟ್‌ ಫೈನಾನ್ಸ್‌ನಲ್ಲಿ ಕಳ್ಳತನ ಮಾಡಲು ಸಿಕ್ಕಿಬಿದ್ದ ಕಳ್ಳರು ಕೊಣಾಜೆ: ಕಳ್ಳತನ ನಡೆಸಲು ಯತ್ನಿಸುತ್ತಿರುವಾಗಲೇ ಸೈರನ್‌ ಮೊಳಗಿ ಕಳ್ಳರಿಬ್ಬರು ಒಳಗೆ ಲಾಕ್‌ ಆಗಿ ಸಿಕ್ಕಿಬಿದ್ದ ಘಟನೆ ಶನಿವಾರ ತಡರಾತ್ರಿ ದೇರಳಕಟ್ಟೆಯಲ್ಲಿ ಸಂಭವಿಸಿದೆ. ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆ ಜಂಕ್ಷನ್‌ನ ಮುತ್ತೂಟ್ ಫೈನಾನ್ಸ್‌ನ ಬೀಗ ಒಡೆಯುತ್ತಿರುವಾಗಲೇ ಫೈನಾನ್ಸ್ ಮಳಿಗೆಯ ಸೈರನ್ ಮೊಳಗಿದ್ದು, ಸ್ಥಳಕ್ಕೆ ಧಾವಿಸಿದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ದೇರಳಕಟ್ಟೆ ಜಂಕ್ಷನ್‌ನಲ್ಲಿರುವ ಎಚ್.ಎಂ ಟಿಂಬರ್ಸ್ ಸಂಸ್ಥೆಗೆ ಸೇರಿದ ವಾಣಿಜ್ಯ ಕಟ್ಟಡದ ಮೇಲಂತಸ್ತಿನಲ್ಲಿ ಕಾರ್ಯಾಚರಿಸುತ್ತಿರುವ ಮುತ್ತೂಟ್ ಫೈನಾನ್ಸ್‌ಗೆ

ದರೋಡೆ ಮಾಡುವಾಗ ಸೈರನ್‌ ಮೊಳಗಿ ಇಬ್ಬರು ಕಳ್ಳರು ಸೆರೆ Read More »

error: Content is protected !!
Scroll to Top