ರಾಡ್ಗಳಿಂದ ಹೊಡೆದಾಡಿಕೊಂಡ ಬಸ್ ಸಿಬ್ಬಂದಿಯರು | ಇಬ್ಬರು ಅರೆಸ್ಟ್
ಮಣಿಪಾಲ: ಮಣಿಪಾಲದಲ್ಲಿ ಎರಡು ಬಸ್ ಸಿಬ್ಬಂದಿಗಳು ಉಕ್ಕಿನ ರಾಡ್‌ಗಳಿಂದ ಹೊಡೆದಾಡಿಕೊಂಡ ಘಟನೆ ನಡೆದಿದೆ. ರಾಡ್ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಜಗಳವಾಡಿದ ಇಬ್ಬರು ಬಸ್ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಬುಧವಾರ ಸಂಜೆ ಮಣಿಪಾಲ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬಸ್ ಸಿಬ್ಬಂದಿ ಬೀದಿ ಜಗಳದಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ. ವಾಗ್ವಾದದಲ್ಲಿ ಬಸ್ ಕಂಡಕ್ಷರ್‌ಗಳಾದ ಅಲ್ಪಾಜ್ ಮತ್ತು ವಿಜಯಕುಮಾರ್ ಅವರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಎರಡೂ ಬಸ್‌ಗಳನ್ನು ಮಣಿಪಾಲ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಣಿಪಾಲ […]
ರಾಡ್‍ಗಳಿಂದ ಹೊಡೆದಾಡಿಕೊಂಡ ಬಸ್ ಸಿಬ್ಬಂದಿಯರು | ಇಬ್ಬರು ಅರೆಸ್ಟ್ Read More »










