ಅಪರಾಧ

ಮಹಿಳೆ ಕುತ್ತಿಗೆಯಿಂದ ಚಿನ್ನದ ಸರ ಕಸಿದು ಪರಾರಿ

ಉಡುಪಿ: ಅಪರಿಚಿತ ವ್ಯಕ್ತಿಯೊಬ್ಬ ಪಾದಾಚಾರಿ ಮಹಿಳೆಯೊಬ್ಬರ 3.5 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಸಿದು ಪರಾರಿಯಾದ ಘಟನೆ ಮಣಿಪಾಲದ ಡಬ್ಲ್ಯೂಜಿಎಸ್‍ ಎಚ್‍ ಎ ಕಾಲೇಜು ಬಳಿ ನಡೆದಿದಿದೆ. ಪರ್ಕಳದ ಹೇರ್ಗಾ ನಿವಾಸಿ ವಸಂತಿ (51)  ಸುಮಾರು 45 ಗ್ರಾಂ ತೂಕದ, ಅಂದಾಜು 3,50,000 ರೂ. ಮೌಲ್ಯದ ಚಿನ್ನದ ಸರ ಕಳೆದುಕೊಂಡಿದ್ದಾರೆ. ಮಣಿಪಾಲದ ಖಾಸಗಿ ಆಸ್ಪತ್ರೆಯ ಬಿಲ್ಲಿಂಗ್ ವಿಭಾಗದಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ವಸಂತಿ ಅವರು ಸಂಜೆ 5:30 ರ ಸುಮಾರಿಗೆ ತಮ್ಮ ಕರ್ತವ್ಯ ಮುಗಿಸಿ […]

ಮಹಿಳೆ ಕುತ್ತಿಗೆಯಿಂದ ಚಿನ್ನದ ಸರ ಕಸಿದು ಪರಾರಿ Read More »

ರಷ್ಯಾ ಅಧ್ಯಕ್ಷ ಪುಟಿನ್‌ ಕಾರು ಸ್ಫೋಟ : ಜಗತ್ತಿನಾದ್ಯಂತ ಕಳವಳ

ನಡುರಸ್ತೆಯಲ್ಲಿ ಸ್ಫೊಟಿಸಿತು ಜಗತ್ತಿನ ಅತಿ ಬಲಿಷ್ಠ ನಾಯಕನ ಕಾರು ಮಾಸ್ಕೊ: ಜಗತ್ತಿನ ಅತಿ ಬಲಿಷ್ಠ ನಾಯಕರಲ್ಲಿ ಒಬ್ಬರಾಗಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಬಳಸುವ ಗರಿಷೃ ಸುರಕ್ಷತಾ ವ್ಯವಸ್ಥೆಯುಳ್ಳ ಲಿಮೋಸಿನ್‌ ಕಾರು ರಾಜಧಾನಿ ಮಾಸ್ಕೊದ ರಸ್ತೆಯಲ್ಲೇ ಸ್ಫೋಟಗೊಂಡಿದೆ. ಕೆಲವೇ ದಿನಗಳಲ್ಲಿ ಪುಟಿನ್‌ ಸಾವನ್ನಪ್ಪುತ್ತಾರೆ ಎಂದು ಇತ್ತೀಚೆಗಷ್ಟೇ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿದ್ದರು. ಹೀಗಾಗಿ ಪುಟಿನ್‌ ಹತ್ಯಾ ಯತ್ನ ನಡೆದಿದೆಯೇ ಎಂಬ ಅನುಮಾನ ಉಂಟಾಗಿದೆ.ಮಾಸ್ಕೊ ನಗರದ ಫೈನಾನ್ಶಿಯಲ್‌ ಸ್ಟೆಬಿಲಿಟಿ ಬೋರ್ಡ್‌ ರಹಸ್ಯ ಸೇವಾ ಪ್ರಧಾನ ಕಚೇರಿಯ ಬಳಿ 2,75,000

ರಷ್ಯಾ ಅಧ್ಯಕ್ಷ ಪುಟಿನ್‌ ಕಾರು ಸ್ಫೋಟ : ಜಗತ್ತಿನಾದ್ಯಂತ ಕಳವಳ Read More »

ಛತ್ತೀಸ್‌ಗಢದಲ್ಲಿ 16 ನಕ್ಸಲರ ಹತ್ಯೆ

ರಾಯ್‌ಪುರ: ಛತ್ತೀಸ್‌ಗಢದ ಸುಕ್ಮಾ ಮತ್ತು ದಾಂತೆವಾಡ ಜಿಲ್ಲೆಗಳ ಗಡಿಭಾಗದಲ್ಲಿರುವ ಗೋಮಗುಂಡ ದಟ್ಟಾರಣ್ಯದಲ್ಲಿ ಇಂದು ಮತ್ತೆ 16 ನಕ್ಸಲರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ನಸುಕಿನ ವೇಳೆಗೆ ಪೊಲೀಸರು ಮತ್ತು ನಕ್ಸಲರ ನಡುವೆ ಭಾರಿ ಗುಂಡಿನ ಚಕಮಕಿ ನಡೆದಿದೆ. ನಿನ್ನೆಯಿಂದೀಚೆಗೆ ಇಲ್ಲಿ ನಕ್ಸಲ್‌ ನಿಗ್ರಹ ಪಡೆಯ ಪೊಲೀಸರು ಭದ್ರತಾ ಪಡೆಯ ಸಹಕಾರದೊಂದಿಗೆ ಕೂಂಬಿಂಗ್‌ ನಡೆಸುತ್ತಿದ್ದರು. ಇಂದು ನಸುಕಿನ ಹೊತ್ತು ಪೊಲೀಸರಿಗೆ ನಕ್ಸಲರು ಎದುರಾಗಿದ್ದು, ಗುಂಡಿನ ಕಾಳಗದಲ್ಲಿ 16 ನಕ್ಸಲರು ಸತ್ತಿರುವುದು ದೃಢಪಟ್ಟಿದೆ. ಇನ್ನೂ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ

ಛತ್ತೀಸ್‌ಗಢದಲ್ಲಿ 16 ನಕ್ಸಲರ ಹತ್ಯೆ Read More »

ಕೆವಿಜಿ ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ | ವಸತಿನಿಲಯದ ಮೇಲ್ವಿಚಾರಕಿಗೆ  ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು

ಪುತ್ತೂರು :  ಸುಳ್ಯದ ಡೆಂಟಲ್ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿಯೋರ್ವರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರ ಪ್ರಕರಣಕ್ಕೆ ಸಂಬಂಧಿಸಿದ  ವಸತಿನಿಲಯ  ಮೇಲ್ವಿಚಾರಕಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ವಿದ್ಯಾರ್ಥಿನಿಯ ತಂದೆ ಬೆಳಗಾವಿ ಜಿಲ್ಲೆಯ ಅಥೇನಿ ತಾಲೂಕಿನ ಸಿದ್ಧಪ್ಪ ಶಿವಪ್ಪ ನಿಡೋಣಿ ಅವರು ಫೆ.27ರಂದು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನ್ನ ಮಗಳು ವಿದ್ಯಾಭ್ಯಾಸ ಮಾಡುತ್ತಿರುವ ವೇಳೆ ಅದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನವೀನ್ ಎಂಬ ವಿದ್ಯಾರ್ಥಿಯು ಮಗಳಿಗೆ ಫೋನ್ ಮಾಡಿ, ನಿನ್ನ ಫೋಟೋಸ್‍

ಕೆವಿಜಿ ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ | ವಸತಿನಿಲಯದ ಮೇಲ್ವಿಚಾರಕಿಗೆ  ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು Read More »

ಹತ್ಯೆಗೆ ಸುಪಾರಿ : ದೂರು ದಾಖಲಿಸಿದ ಎಂಎಲ್‌ಸಿ ರಾಜೇಂದ್ರ

ಸಾಯಿಸಲು ರೌಡಿಶೀಟರ್‌ಗೆ 70 ಲ.ರೂ. ಸುಪಾರಿ ನೀಡಿದ್ದಾರೆ ಎಂದು ಆರೋಪ ತುಮಕೂರು: ಸದನದಲ್ಲಿ ಹನಿಟ್ರ್ಯಾಪ್‌ ಬಾಂಬ್‌ ಸಿಡಿಸಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ ವಿಧಾನ ಪರಿಷತ್‌ ಸದಸ್ಯ ರಾಜೇಂದ್ರ ಅವರು ತನ್ನ ಹತ್ಯೆಗೆ ಯತ್ನ ನಡೆಯುತ್ತಿದೆ ಎಂದು ತುಮಕೂರಿನಲ್ಲಿ ದೂರು ದಾಖಲಿಸಿದ್ದಾರೆ. ರಾಜೇಂದ್ರ ನೀಡಿದ ದೂರಿನ ಪ್ರಕಾರ ತುಮಕೂರಿನ ಕ್ಯಾತ್ಸಂದ್ರ ಪೊಲೀಸರು ರೌಡಿ ಶೀಟರ್ ಸೋಮು ಸೇರಿದಂತೆ ಐದು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಭರತ್, ಅಮಿತ್, ಗುಂಡಾ ಮತ್ತು ಯತೀಶ್ ಇತರ ಆರೋಪಿಗಳು.

ಹತ್ಯೆಗೆ ಸುಪಾರಿ : ದೂರು ದಾಖಲಿಸಿದ ಎಂಎಲ್‌ಸಿ ರಾಜೇಂದ್ರ Read More »

ಸೈಬರ್‌ ವಂಚಕರ ಕಿರುಕುಳದಿಂದ ವೃದ್ಧ ದಂಪತಿ ಆತ್ಮಹತ್ಯೆ

ಹಣ ಕೊಟ್ಟರೂ ಕರೆ ಮಾಡಿ ಬೆದರಿಕೆಯೊಡ್ಡುತ್ತಿದ್ದ ವಂಚಕರು ಬೆಂಗಳೂರು: ಸೈಬರ್‌ ವಂಚಕರ ಕಾಟ ತಾಳಲಾರದೆ ವೃದ್ಧ ದಂಪತಿ ಸಾವಿಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ. ಡಯಾಗೊ ಸಂತಾನ್ ನಜರೆತ್ (82) ಮತ್ತು ಫ್ಲೇವಿಯಾನಾ ನಜರೆತ್ (79) ಆತ್ಮಹತ್ಯೆಗೆ ಶರಣಾದ ದಂಪತಿ. ಆತ್ಮಹತ್ಯೆಗೆ ಮುನ್ನ ದಂಪತಿ ಡೆತ್‌ನೋಟ್‌ ಬರೆದಿಟ್ಟಿದ್ದು, ಅದರಲ್ಲಿ ಸೈಬರ್‌ ವಂಚನೆಯ ಮಾಹಿತಿ ನೀಡಿದ್ದಾರೆ.ಫ್ಲೇವಿಯಾನಾ ನಜರೆತ್ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರೆ, ಡಯಾಗೊ ಚಾಕುವಿನಿಂದ ಕುತ್ತಿಗೆ ಕೊಯ್ದು ಆತ್ಮಹತ್ಯೆ

ಸೈಬರ್‌ ವಂಚಕರ ಕಿರುಕುಳದಿಂದ ವೃದ್ಧ ದಂಪತಿ ಆತ್ಮಹತ್ಯೆ Read More »

ನಟ ದರ್ಶನ್‍ ಹೆಸರಲ್ಲಿ ಪುತ್ತೂರಿನಲ್ಲಿ ಎರಡು ತಂಡಗಳ ವಾರ್

ಪುತ್ತೂರು : ನಟ ದರ್ಶನ್ ತನ್ನ ಸಂಕಷ್ಠಗಳು ನಿವಾರಣೆಯಾಗಲಿ ಎಂದು ಫ್ಯಾಮಿಲಿ ಸಮೇತರಾಗಿ  ಕೇರಳದ ಮಾಡಾಯಿಕಾವು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ  ವಿಚಾರದಲ್ಲಿ ಪುತ್ತೂರಿನಲ್ಲಿ ಎರಡು ತಂಡಗಳ ನಡುವೆ ಬಾರಿ ಜಗಳಗಳಾಗಿವೆ. ವಾರದ ಹಿಂದೆ ನಟ ದರ್ಶನನ್ನು ಪುತ್ತೂರಿನ ಪ್ರಜ್ವಲ್ ರೈ ಪಾತಾಜೆ ಎಂಬವರು ಮಾಡಾಯಿಕಾವು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಶತ್ರುಸಂಹಾರ ಪೂಜೆ ನೆರವೇರಿಸಿದ್ದರು. ಈ ವೇಳೆ ದರ್ಶನ ಜೊತೆಯಲ್ಲೇ ಮಾಡಾಯಿಕಾವು ದೇವಸ್ಥಾನದಲ್ಲಿ ದರ್ಶನ್ ಜೊತೆ ಪ್ರಜ್ವಲ್ ರೈ ಫೋಟೋ ತೆಗೆಸಿಕೊಂಡಿದ್ದಾರೆ. ಇದನ್ನು ಪ್ರಜ್ವಲ್ ರೈ ತನ್ನ

ನಟ ದರ್ಶನ್‍ ಹೆಸರಲ್ಲಿ ಪುತ್ತೂರಿನಲ್ಲಿ ಎರಡು ತಂಡಗಳ ವಾರ್ Read More »

ಮಂಗಳೂರು : ವಧಿಸಲು ಸಾಗಿಸುತ್ತಿದ್ದ 25 ಗೋವುಗಳ ರಕ್ಷಣೆ

ಬಜಪೆ ಸಮೀಪ ಬಜರಂಗ ದಳ ಕಾರ್ಯಕರ್ತರ ಸಾಹಸಮಯ ಕಾರ್ಯಾಚರಣೆ ಮಂಗಳೂರು : ವಧಿಸುವ ಉದ್ದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 25 ಜಾನುವಾರುಗಳನ್ನು ಬಜರಂಗ ದಳ ಕಾರ್ಯಕರ್ತರು ರಕ್ಷಿಸಿದ್ದಾರೆ. ನಗರದ ಹೊರವಲಯದ ಬಜಪೆ ಸೂರಲ್ಪಾಡಿಯಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದೆ. ಮಂಗಳೂರು ಕಡೆಯಿಂದ ಮೂಡುಬಿದಿರೆಯತ್ತ ಗೋವುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ವಾಹನವನ್ನು ತಡೆದು ಪರಿಶೀಲನೆ ನಡೆಸಿದ ವೇಳೆ ಪಿಕಪ್‌ ಗೂಡ್ಸ್ ವಾಹನದಲ್ಲಿ ಕಾಲುಗಳನ್ನು ಕಟ್ಟಿ ಅಮಾನುಷವಾಗಿ 25 ಗೋವುಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಗೋವುಗಳ

ಮಂಗಳೂರು : ವಧಿಸಲು ಸಾಗಿಸುತ್ತಿದ್ದ 25 ಗೋವುಗಳ ರಕ್ಷಣೆ Read More »

ಪತ್ನಿಯನ್ನು ಕತ್ತರಿಸಿ ಸೂಟ್‌ಕೇಸ್‌ನಲ್ಲಿ ತುಂಬಿಸಿಟ್ಟು ಪಲಾಯನ ಮಾಡಿದ್ದ ಪತಿ ಪುಣೆಯಲ್ಲಿ ಸೆರೆ

ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ಬರ್ಬರ ಹತ್ಯೆ ಬೆಂಗಳೂರು: ಪತ್ನಿಯನ್ನು ಕೊಂದು ಆಕೆಯ ದೇಹವನ್ನು ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿಸಿ ಪಲಾಯನ ಮಾಡಿದ್ದ ಪತಿಯನ್ನು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಲಾಗಿದೆ. ಹುಳಿಮಾವು ಬಳಿಯ ನಿವಾಸವೊಂದರಲ್ಲಿ ಸೂಟ್‌ಕೇಸ್‌ನಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ ಸಂಚಲನ ಸೃಷ್ಟಿಸಿತ್ತು, 32 ವರ್ಷದ ಗೌರಿ ಅನಿಲ್ ಸಂಬೇಕರ್ ಅವರನ್ನು ಆಕೆಯ ಪತಿ ಮಹಾರಾಷ್ಟ್ರ ಮೂಲದ ರಾಕೇಶ್ ಕೊಲೆ ಮಾಡಿ ಹೆಣವನ್ನು ಕತ್ತರಿಸಿ ಸೂಟ್‌ಕೇಸ್‌ನಲ್ಲಿ ತುಂಬಿಸಿಟ್ಟು ಬಳಿಕ ಹೆಂಡತಿಯ ತಾಯಿಗೆ ಫೋನ್‌ ಮಾಡಿ ತಿಳಿಸಿ ಪಲಾಯನ ಮಾಡಿದ್ದ. ಈ ಮಾದರಿಯ

ಪತ್ನಿಯನ್ನು ಕತ್ತರಿಸಿ ಸೂಟ್‌ಕೇಸ್‌ನಲ್ಲಿ ತುಂಬಿಸಿಟ್ಟು ಪಲಾಯನ ಮಾಡಿದ್ದ ಪತಿ ಪುಣೆಯಲ್ಲಿ ಸೆರೆ Read More »

ಜಾನುವಾರು ಸಾಗಾಟಮಾಡುತ್ತಿದ್ದ ಮೂವರು ಆರೋಪಿಯರ ಬಂಧನ

ಪುತ್ತೂರು : ಗೂಡ್ಸ್‌ ವಾಹನವೊಂದರಲ್ಲಿ ಹಿಂಸಾತ್ಮಕವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣ ಉಪ್ಪಿನಂಗಡಿಯ  34ನೇ ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಜಂಕ್ಷನ್ ನಲ್ಲಿ ನಡೆದಿದೆ. ಈ ಪ್ರಕರಣವನ್ನು  ಪೊಲೀಸರು ಪತ್ತೆ ಹಚ್ಚಿ, ಹಾಸನ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.  ಕೃತ್ಯಕ್ಕೆ ಬಳಸುತ್ತಿದ್ದ ವಾಹನ ಹಾಗೂ ಜಾನುವಾರು ವಶಪಡಿಸಿಕೊಂಡಿರುವ ಘಟನೆ ಹಾಸನ ತಾಲೂಕು ಸಾಲಗಾಮೆ ಹೋಬಳಿ ನಿವಾಸಿಗಳಾದ ಪ್ರತಾಪ್ ಎಸ್.ಎಂ.(28ವ.), ಪವನ್ ಸಿ.(24ವ.), ಶ್ರೇಯಸ್ ಹೆಚ್.ವಿ.(24ವ.) ಬಂಧಿತ ಆರೋಪಿಗಳಾಗಿದ್ದಾರೆ. ಮಾ.25ರಂದು ಸಂಜೆ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಮನಿಶಾ ಎಂ.,

ಜಾನುವಾರು ಸಾಗಾಟಮಾಡುತ್ತಿದ್ದ ಮೂವರು ಆರೋಪಿಯರ ಬಂಧನ Read More »

error: Content is protected !!
Scroll to Top