ಅಪರಾಧ

ಮದ್ಯದ ನಶೆಯಲ್ಲಿ ನಡುರಸ್ತೆಯಲ್ಲಿ ರಂಪಾಟ ಮಾಡಿದ ಯುವತಿಯರು

ಯದ್ವಾತದ್ವಾ ಸ್ಕೂಟಿ ಚಲಾಯಿಸಿ ಹಲವು ವಾಹನಗಳಿಗೆ ಡಿಕ್ಕಿ ಬೆಂಗಳೂರು: ಇಬ್ಬರು ಯುವತಿಯರು ಕಂಠಪೂರ್ತಿ ಮದ್ಯ ಸೇವಿಸಿ ಹಾದಿಬೀದಿಯಲ್ಲಿ ರಂಪಾಟ ನಡೆಸಿದ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಹುಳಿಮಾವು ಬಳಿ ಶನಿವಾರ ತಡರಾತ್ರಿ ನಡೆದಿದೆ. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಯುವತಿಯರು ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಕ್ಯಾಬ್‌ಗೆ ಡಿಕ್ಕಿ ಹೊಡೆದು ಚಾಲಕ ಜೊತೆ ಡಿಕ್ಕಿ ಹೊಡೆದು ಜಗಳ ಮಾಡಿದ್ದಾರೆ. ಕ್ಯಾಬ್‌ ಚಾಲಕ ನಿಮ್ಮದೇ ತಪ್ಪು ಎಂದಿದ್ದಕ್ಕೆ ಮದ್ಯದ ಬೆರಳು ತೋರಿಸಿ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಲು […]

ಮದ್ಯದ ನಶೆಯಲ್ಲಿ ನಡುರಸ್ತೆಯಲ್ಲಿ ರಂಪಾಟ ಮಾಡಿದ ಯುವತಿಯರು Read More »

ಜೈಲಿನಲ್ಲಿದ್ದ ಉಗ್ರ ಅನಾರೋಗ್ಯದಿಂದ ಸಾವು

ಆರು ವರ್ಷಗಳಿಂದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಬಂಧಿಯಾಗಿದ್ದ ಉಗ್ರ ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿತನಾಗಿದ್ದ ಶಂಕಿತ ಭಯೋತ್ಪಾದಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಸುದ್ದಗುಂಟೆಪಾಳ್ಯ ಸ್ಫೋಟಕ ವಸ್ತು ಸಂಗ್ರಹ ಪ್ರಕರಣದಲ್ಲಿ ಬಂಧಿತನಾಗಿದ್ದ ಸಾಧಿಕ್ ಪಾಷಾ (47) ಅನಾರೋಗ್ಯದಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ. ನಿನ್ನೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ. ಸಾದಿಕ್ ಪಾಷಾ ಕಳೆದ ಆರು ತಿಂಗಳಿಂದ ಲೋ ಬಿಪಿ ಹಾಗೂ ಹೈ ಶುಗರ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ

ಜೈಲಿನಲ್ಲಿದ್ದ ಉಗ್ರ ಅನಾರೋಗ್ಯದಿಂದ ಸಾವು Read More »

ತುಮಕೂರಿನ ನಾಲ್ವರು ಬಿಹಾರದಲ್ಲಿ ನಿಗೂಢವಾಗಿ ಸಾವು

ಧರ್ಮಶಾಲೆಯಲ್ಲಿ ಮೂರು ದಿನದಿಂದ ಕೊಳೆಯುತ್ತಿದ್ದವು ಶವಗಳು ನಳಂದ : ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಒಂದೇ ಕುಟುಂಬದ ನಾಲ್ವರು ಶುಕ್ರವಾರ ಬಿಹಾರದ ನಳಂದ ಜಿಲ್ಲೆಯ ರಾಜಗೀರ್‌ನ ಧರ್ಮಶಾಲೆಯೊಂದರಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಶವಗಳಾಗಿ ಪತ್ತೆಯಾಗಿದ್ದಾರೆ. ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಪ್ರಕರಣದ ತನಿಖೆಗಾಗಿ ಕರ್ನಾಟಕ ಪೊಲೀಸರ ತಂಡ ಬಿಹಾರಕ್ಕೆ ತೆರಳಿದೆ. ಮೃತರನ್ನು ತಾಯಿ ಜಿ.ಆರ್.ಸುಮಂಗಲಾ (78), ಮಗ ಜಿ.ಆರ್.ನಾಗಪ್ರಸಾದ್ (50) ಹಾಗೂ ಆಕೆಯ ಇಬ್ಬರು ಪುತ್ರಿಯರಾದ ಜಿ.ಆರ್.ಶಿಲ್ಪಾ (48) ಹಾಗೂ ಜಿ.ಆರ್‌.ಶ್ರುತಾ (43) ಎಂದು ಗುರುತಿಸಲಾಗಿದೆ. ಸುಮಂಗಲಾ,

ತುಮಕೂರಿನ ನಾಲ್ವರು ಬಿಹಾರದಲ್ಲಿ ನಿಗೂಢವಾಗಿ ಸಾವು Read More »

ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ

ಮಂಗಳೂರು : ಕಾರಿನಲ್ಲಿ ಗಾಂಜಾ ತುಂಬಿಸಿಕೊಂಡು‌ ಮಾರಾಟ ಮಾಡಲು ತೆರಳುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಣಾಜೆ ಪೊಲೀಸರು ಮುಡಿಪು ಬಳಿ ಬಂಧಿಸಿ‌ ಅಪಾರ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನೌಶಾದ್ ಮತ್ತು ಇಬ್ರಾಹಿಂ ಎಂದು‌ ಗುರುತಿಸಲಾಗಿದೆ. ಆರೋಪಿಗಳು ಮೇಲ್ಕಾರ್ – ಸಜೀಪ – ಬೋಳಿಯಾರು ಮಾರ್ಗವಾಗಿ ಗಾಂಜಾದ ಕಟ್ಟುಗಳನ್ನು ತೆಗೆದುಕೊಂಡು ಮುಡಿಪು ಮತ್ತು ಕೇರಳ ರಾಜ್ಯಕ್ಕೆ ಮಾರಾಟ ಮಾಡಲು ತರುತ್ತಿದ್ದಾರೆಂದು ಮಾಹಿತಿ ಬಂದ‌ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸರು ಕುರ್ನಾಡು ಗ್ರಾಮದ ಮಿತ್ತಕೋಡಿ ಎಂಬಲ್ಲಿ ವಾಹನವನ್ನು ತಡೆದು ನಿಲ್ಲಿಸಿದ್ದಾರೆ.

ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ Read More »

ದೇವಾಲಯದ ಆವರಣದಲ್ಲಿ ಮಾಂಸದ ಕವರ್ ಪತ್ತೆ

ಬಳ್ಳಾರಿ: ನಾಗಲಕೆರೆಯಲ್ಲಿರುವ ದೇವಾಲಯವೊಂದರಲ್ಲಿ ಮಾಂಸದ ಚೀಲವೊಂದು ಪತ್ತೆಯಾದ ಘಟನೆ ನಡೆದಿದೆ. ಆಂಜನೇಯ ದೇವಾಲಯದ ಹಿಂದಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಮುಂದಿರುವ ಗರುಡ ಸ್ಥಂಬದ ಮುಂದೆ ಮಾಂಸದ ಕವರ್ ಪತ್ತೆಯಾಗಿರುವುದಾಗಿದೆ. ಬೆಳಗ್ಗಿನ ವೇಳೆ ದೇಗುಲದ ಅರ್ಚಕರ ಗಮನಕ್ಕೆ ಈ ಮಾಂಸದ ಚೀಲ ಬಂದಿದ್ದು, ತಕ್ಷಣವೇ ಸ್ಥಳೀಯರು ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿರುವ ಪೊಲೀಸರು ಮಾಂಸದ ಕವರ್ ಅನ್ನು ತೆರವು ಮಾಡಿದ್ದು, ಇದು ಕಿಡಿಗೇಡಿಗಳ ಕೃತ್ಯವೋ ಅಥವಾ ನಾಯಿಗಳು ತಂದು ಹಾಕಿರುವುದೋ ಎನ್ನುವುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಈ

ದೇವಾಲಯದ ಆವರಣದಲ್ಲಿ ಮಾಂಸದ ಕವರ್ ಪತ್ತೆ Read More »

ಮಹಿಳಾ ಅಧಿಕಾರಿಯ ರಹಸ್ಯ ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್‌ ಮಾಡುತ್ತಿದ್ದ ಮೂವರ ಬಂಧನ

ಬೆಡ್‌ರೂಮ್‌ನ ಲೈಟಿಂಗ್ ವೋಲ್ಟರ್‌ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ವಿಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದದ ಪಾತಕಿಗಳು ಬೆಂಗಳೂರು : ಬೆಳಗಾವಿಯ ಮಹಿಳಾ ಅಧಿಕಾರಿಯೊಬ್ಬರ ಬೆಡ್‌ರೂಮ್‌ನೊಳಗೆ ಕ್ಯಾಮರಾ ಇಟ್ಟು ಖಾಸಗಿ ಕ್ಷಣಗಳನ್ನು ಸೆರೆ ಹಿಡಿದು 50 ಲಕ್ಷ ರೂ. ಕೊಡುವಂತೆ ಬ್ಲಾಕ್‌ಮೇಲ್‌ ಮಾಡುತ್ತಿದ್ದ ನಕಲಿ ಪತ್ರಕರ್ತರನ್ನು ಬೆಳಗಾವಿ ಪೊಲೀಸರು ಬಂದಿಸಿ ಜೈಲಿಗಟ್ಟಿದ್ದಾರೆ. ಮನೆಗೆ ನುಗ್ಗಿ ಬೆಡ್‌ರೂಮ್‌ನಲ್ಲಿದ್ದ ಲೈಟಿಂಗ್ ವೋಲ್ಟರ್‌‌ಗಳಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿದ್ದ ಆರೋಪಿಗಳು ಖಾಸಗಿ ದೃಶ್ಯ ಸೆರೆಯಾದ ಬಳಿಕ ಮಹಿಳಾ ಅಧಿಕಾರಿಗೆ 50 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದರು‌. ಹಣ ಕೊಡದಿದ್ದರೆ

ಮಹಿಳಾ ಅಧಿಕಾರಿಯ ರಹಸ್ಯ ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್‌ ಮಾಡುತ್ತಿದ್ದ ಮೂವರ ಬಂಧನ Read More »

ಬಾಲಿವುಡ್‌ನ ಖ್ಯಾತ ಹಾಸ್ಯನಟ ರಾಜ್‌ಪಾಲ್‌ ಯಾದವ್‌ ತಿಹಾರ್‌ ಜೈಲುಪಾಲು

ಕೇಸಿನಲ್ಲಿ ರಿಲೀಫ್‌ ನೀಡಲು ನಿರಾಕರಿಸಿದ ನ್ಯಾಯಾಲಯ ನವದೆಹಲಿ: ಬಾಲಿವುಡ್‌ನ ಹಾಸ್ಯ ನಟ ರಾಜ್​ಪಾಲ್ ಯಾದವ್ ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿ ಜೈಲುಪಾಲಾಗಿದ್ದಾರೆ. ಪ್ರಕರಣದಲ್ಲಿ ಅವರಿಗೆ ರಿಲೀಫ್ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು. ಈ ಕಾರಣದಿಂದ ಅವರು ತಿಹಾರ್ ಜೈಲಿನ ಅಧಿಕಾರಿಗಳ ಎದುರು ಶರಣಾಗಿದ್ದಾರೆ. ಗುರುವಾರ ಸಂಜೆ ನಾಲ್ಕು ಗಂಟೆಗೆ ಅವರು ಜೈಲಿಗೆ ಹೋಗಿದ್ದು, ಅಧಿಕಾರಿಗಳು ಆ ಬಳಿಕ ತಮ್ಮ ಪ್ರಕ್ರಿಯೆ ನಡೆಸಿದ್ದಾರೆ. ಅವರನ್ನು ಈಗ ಜೈಲಿನಲ್ಲಿ ಇಡಲಾಗಿದೆ. ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ರಾಜ್​​ಪಾಲ್ ವಿರುದ್ಧ

ಬಾಲಿವುಡ್‌ನ ಖ್ಯಾತ ಹಾಸ್ಯನಟ ರಾಜ್‌ಪಾಲ್‌ ಯಾದವ್‌ ತಿಹಾರ್‌ ಜೈಲುಪಾಲು Read More »

ವಿವಾಹದ ಭರವಸೆ ನೀಡಿ ಯುವತಿಗೆ ವಂಚನೆ: ಆರೋಪಿ ಅಂದರ್

ಪುತ್ತೂರು: ವಿವಾಹದ ಭರವಸೆ ನೀಡಿ ಯುವತಿಯೊಬ್ಬಳನ್ನು ಗರ್ಭವತಿಯನ್ನಾಗಿ ಮಾಡಿದ ಆರೋಪಿಯನ್ನು ಪುತ್ತೂರು ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಬಕ ನಿವಾಸಿ ಪ್ರಕಾಶ್ ಗೌಡ ಎಂದು ಗುರುತಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವಿವಾಹದ ಭರವಸೆ ನೀಡಿ ಯುವತಿಗೆ ವಂಚನೆ: ಆರೋಪಿ ಅಂದರ್ Read More »

ಪ್ರಚೋದನಕಾರಿ ಪೋಸ್ಟ್‌ : ಬಂಟ್ವಾಳ, ಕಡಬದ ಇಬ್ಬರು ಯುವಕರು ಸೆರೆ

ಕಳೆದ ವರ್ಷ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ಪೋಸ್ಟ್‌ ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಪ್ರಚೋದನಾತ್ಮಕ ಪೋಸ್ಟ್ ಹಂಚಿಕೊಂಡ ಆರೋಪದ ಮೇಲೆ ಮಣಿಪಾಲ ಪೊಲೀಸರು ಬಂಟ್ವಾಳ ಮತ್ತು ಕಡಬದ ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಪುತ್ತೂರು ರಸ್ತೆ ನಿವಾಸಿ ನಿತೇಶ್ ಕೆ. (20) ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದ ನಿವಾಸಿ ಹಿತೇಶ್ ಎ. (19) ಬಂಧಿತ ಆರೋಪಿಗಳು. ಆರೋಪಿ ನಿತೇಶ್‌ನನ್ನು ಜನವರಿ 30ರಂದು ಪುತ್ತೂರು ತಾಲೂಕಿನ ಕಲಾಬ

ಪ್ರಚೋದನಕಾರಿ ಪೋಸ್ಟ್‌ : ಬಂಟ್ವಾಳ, ಕಡಬದ ಇಬ್ಬರು ಯುವಕರು ಸೆರೆ Read More »

ಬೃಹತ್‌ ಆನ್‌ಲೈನ್‌ ವಂಚನೆ ಜಾಲ ಬಯಲು : 11 ಮಂದಿ ಸೆರೆ

ದೇಶ-ವಿದೇಶಗಳಲ್ಲಿ ಹರಡಿದ ಜಾಲ, ನೂರಾರು ಬ್ಯಾಂಕ್‌ ಖಾತೆಗಳು, ಸಾವಿರಾರು ಕೋಟಿ ರೂ. ವ್ಯವಹಾರ ಮಂಗಳೂರು: ನೇಪಾಳದಲ್ಲಿ ಕುಳಿತು ಭಾರತೀಯರನ್ನು ಟಾರ್ಗೆಟ್ ಮಾಡಿ ನೂರಾರು ಕೋಟಿ ವಂಚಿಸಿದ ಆನ್‌ಲೈನ್‌ ವಂಚನೆ ಜಾಲವೊಂದನ್ನು ಭೇದಿಸಿರುವ ಮಂಗಳೂರು ಸೆನ್‌ ಪೊಲೀಸರು ಈ ಸಂಬಂಧ 11 ಆರೋಪಿಗಳನ್ನು ಬಂಧಿಸಿದ್ದಾರೆ. ವಂಚಕರ ತಂಡದಲ್ಲಿ 16 ಭಾರತೀಯರು ಹಾಗೂ ಚೀನಾದ ವಂಚಕರಿದ್ದು, ನೇಪಾಳ ಪೊಲೀಸರು ಚೀನಾದ ವಂಚಕರನ್ನು ಈಗಾಗಲೇ ಬಂಧಿಸಿದ್ದಾರೆ. 5 ಭಾರತೀಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ. ಗುಜರಾತ್‌ನ ಬಾವಾ ನಗರ್ ಜಿಲ್ಲೆಯ

ಬೃಹತ್‌ ಆನ್‌ಲೈನ್‌ ವಂಚನೆ ಜಾಲ ಬಯಲು : 11 ಮಂದಿ ಸೆರೆ Read More »

error: Content is protected !!
Scroll to Top