ಅಪರಾಧ

500 ನಕಲಿ ಚಿನ್ನದ ಬಳೆ ಅಡವಿಟ್ಟು ಬ್ಯಾಂಕಿಗೆ 2 ಕೋಟಿ ರೂ. ವಂಚನೆ

ಮಂಗಳೂರಿನ ಬ್ಯಾಂಕಿಗೆ ಪಂಗನಾಮ ಹಾಕಿದ ಖದೀಮ ಮಂಗಳೂರು : ಒಂದೆರಡಲ್ಲ ಬರೋಬ್ಬರಿ 500 ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು ಬ್ಯಾಂಕಿಗೆ 2 ಕೋಟಿ ರೂ.ಗೂ ಅಧಿಕ ಮೊತ್ತ ವಂಚಿಸಿದ ಪ್ರಕರಣವೊಂದು ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.ಮಂಗಳೂರಿನ ಸಮಾಜ ಸೇವಾ ಸಹಕಾರಿ ಸಂಘಕ್ಕೆ ವಂಚನೆ ಎಸಗಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲ ಗ್ರಾಮದ ಅಬೂಬಕ್ಕರ್ ಸಿದ್ದಿಕ್ ವಂಚಿಸಿದ ಆರೋಪಿ. 500 ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು ಅಬೂಬಕ್ಕರ್ ಸಿದ್ದಿಕ್ 2,11,89,800 ರೂ. ಸಾಲ ಪಡೆದು ಮೋಸ ಮಾಡಿದ್ದಾನೆ. […]

500 ನಕಲಿ ಚಿನ್ನದ ಬಳೆ ಅಡವಿಟ್ಟು ಬ್ಯಾಂಕಿಗೆ 2 ಕೋಟಿ ರೂ. ವಂಚನೆ Read More »

ಖತರ್‌ನಾಕ್‌ ಸೀರಿಯಲ್‌ ಕಿಲ್ಲರ್‌ ಕೊನೆಗೂ ಸೆರೆ

18 ತಿಂಗಳಲ್ಲಿ 11 ಪುರುಷರನ್ನು ಕೊಂದಿದ್ದ ಸರಣಿ ಹಂತಕ ಹೊಸದಿಲ್ಲಿ : 18 ತಿಂಗಳಲ್ಲಿ 11 ಪುರುಷರನ್ನು ಹತ್ಯೆ ಮಾಡಿದ್ದ ಸೀರಿಯಲ್ ಕಿಲ್ಲರ್​ನನ್ನು ಕೊನೆಗೂ ಪಂಜಾಬ್‌ ಪೊಲೀಸರು ಬಂಧಿಸಿದ್ದಾರೆ. ಹಂತಕ ಸಲಿಂಗಕಾಮಿಯಾಗಿದ್ದು, ಪುರುಷರೇ ಅವನ ಟಾರ್ಗೆಟ್‌ ಆಗಿದ್ದರು. ಕಳೆದ 18 ತಿಂಗಳಲ್ಲಿ ಬೆನ್ನುಬೆನ್ನಿಗೆ ನಡೆದ 11 ಪುರುಷರ ಹತ್ಯೆ ಪಂಜಾಬ್‌ ಪೊಲೀಸರಿಗೆ ಸವಾಲಾಗಿತ್ತು. ಪುರುಷರನ್ನು ಹತ್ಯೆ ಮಾಡುವ ಮುನ್ನ ಅವರ ಜತೆ ದೈಹಿಕ ಸಂಬಂಧ ಹೊಂದುತ್ತಿದ್ದ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. 11 ಕೊಲೆ ಲೆಕ್ಕಕ್ಕೆ ಸಿಕ್ಕಿದ್ದರೂ ಕೆಲವು

ಖತರ್‌ನಾಕ್‌ ಸೀರಿಯಲ್‌ ಕಿಲ್ಲರ್‌ ಕೊನೆಗೂ ಸೆರೆ Read More »

ದನದ ಕಾಲು ಕಡಿದ ಅನ್ಯಕೋಮಿನ ವ್ಯಕ್ತಿ | ಆರೋಪಿ ವಿರುದ್ಧ ಪ್ರಕರಣ ದಾಖಲು

ರಾಮಕುಂಜ: ಮೇಯಲು ಬಿಟ್ಟಿದ್ದ ದನದ ಕಾಲಿಗೆ ಪಕ್ಕದ ಮನೆಯ ವ್ಯಕ್ತಿಯೋರ್ವರು ಕತ್ತಿಯಿಂದ ಕಡಿದು ಗಂಭೀರ ಗಾಯಗೊಳಿಸಿದ ಘಟನೆ ರಾಮಕುಂಜ ಗ್ರಾಮದ ಕೊಂಡ್ಯಾಡಿ ಎಂಬಲ್ಲಿ ನಡೆದಿದೆ. ಕೊಂಡ್ಯಾಡಿ ನಿವಾಸಿ ದನ ಮಾಲಕಿ, ರಾಜೀವಿ ಎಂಬವರು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಅಬ್ಬಾಸ್ ಎಂದು ತಿಳಿದು ಬಂದಿದೆ. ಡಿ.22ರಂದು ಮಧ್ಯಾಹ್ನ 2 ಗಂಟೆಗೆ ಕೊಟ್ಟಿಗೆಯಿಂದ ದನವನ್ನು ತೋಟಕ್ಕೆ ಮೇಯಲು ಬಿಟ್ಟಿದ್ದು, ದನ ಸಂಜೆಯಾದರೂ ಮರಳಿ ಮನೆಗೆ ಬಾರದೇ ಇದ್ದದನ್ನು ಕಂಡು ದನವನ್ನು ಹುಡುಕಾಡಿದಾಗ ಪಕ್ಕದ ಮನೆಯ ಅಬ್ಬಾಸ್ ಎಂಬವರ

ದನದ ಕಾಲು ಕಡಿದ ಅನ್ಯಕೋಮಿನ ವ್ಯಕ್ತಿ | ಆರೋಪಿ ವಿರುದ್ಧ ಪ್ರಕರಣ ದಾಖಲು Read More »

ಸೇನಾ ವಾಹನ ಕಮರಿಗೆ ಉರುಳಿ ಐವರು ಯೋಧರು ಸಾವು

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಜಿಲ್ಲೆಯಲ್ಲಿ ನಿನ್ನೆ ಸಂಜೆ ಸೇನಾ ವಾಹನ 300 ಅಡಿ ಆಳದ ಕಂದಕಕ್ಕೆ ಉರುಳಿ ಸಂಭವಿಸಿದ ಅಪಘಾತದಲ್ಲಿ ಐವರು ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 12 ಮಂದಿ ಗಾಯಗೊಂಡಿದ್ದಾರೆ. 18 ಯೋಧರು ವಾಹನದಲ್ಲಿದ್ದರು ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ. ಸೇನಾ ವಾಹನವು ಜಿಲ್ಲೆಯ ಬನೋಯ್‌ಗೆ ತೆರಳುತ್ತಿದ್ದಾಗ ಘರೋವಾ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. 11 ಮರಾಠಾ ಲೈಟ್ ಇನ್‌ಫೆಂಟ್ರಿಯ ಸೇನಾ ವಾಹನ ಇದು ಎಂದು ಪೊಲೀಸರು ತಿಳಿಸಿದ್ದಾರೆ. ಆ ವಾಹನವು ಸುಮಾರು

ಸೇನಾ ವಾಹನ ಕಮರಿಗೆ ಉರುಳಿ ಐವರು ಯೋಧರು ಸಾವು Read More »

ಬಾಸ್‌ ಜೊತೆ ಹೋಗಲೊಪ್ಪದ ಪತ್ನಿಗೆ ತಲಾಕ್‌ ಕೊಟ್ಟ ಗಂಡ

ಮುಂಬಯಿ : ತನ್ನ ಬಾಸ್ ಜತೆ ಮಲಗಲು ಒಪ್ಪದ ಎರಡನೇ ಹೆಂಡತಿಗೆ ಗಂಡ ತ್ರಿವಳಿ ತಲಾಕ್‌ ನೀಡಿದ ಘಟನೆ ಮುಂಬಯಿ ಸಮೀಪ ಕಲ್ಯಾಣ್‌ನಲ್ಲಿ ಸಂಭವಿಸಿದ್ದು, ಗಂಡನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡಿಸೆಂಬರ್ 19ರಂದು ಕಂಪನಿಯ ಪಾರ್ಟಿ ನಡೆದಿದ್ದು, ಇದಕ್ಕೆ ಆರೋಪಿ 45 ವರ್ಷದ ವ್ಯಕ್ತಿ ತನ್ನ 28 ವರ್ಷದ ಎರಡನೇ ಹೆಂಡತಿಯನ್ನು ಕರೆದುಕೊಂಡು ಹೋಗಿದ್ದ. ಪಾರ್ಟಿಯ ಮಧ್ಯೆ ಈತ ಬಾಸ್‌ ಜೊತೆಗೆ ಹೋಗುವಂತೆ ಹೆಂಡತಿಗೆ ಹೇಳಿದ್ದಾನೆ. ಇದಕ್ಕೆ ಆಕೆ ಒಪ್ಪಿರಲಿಲ್ಲ. ಮನೆಗೆ ಬಂದ ಕೂಡಲೇ ಈ

ಬಾಸ್‌ ಜೊತೆ ಹೋಗಲೊಪ್ಪದ ಪತ್ನಿಗೆ ತಲಾಕ್‌ ಕೊಟ್ಟ ಗಂಡ Read More »

ಸಿ.ಟಿ.ರವಿ-ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರಕರಣದ ತನಿಖೆ ಸಿಐಡಿಗೆ: ಜಿ.ಪರಮೇಶ್ವರ್‌

ಅಶ್ಲೀಲ ಪದ ಹೇಳಿದ್ದಾರೆಯೇ ಎಂದು ತಿಳಿಯಲು ತನಿಖೆ ಬೆಂಗಳೂರು : ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನದ ಕೊನೆಯ ದಿನವಾದ ಡಿ.19ರಂದು ವಿಧಾನ ಪರಿಷತ್​ನಲ್ಲಿ ಎಂಎಲ್​​ಸಿ ಸಿ.ಟಿ ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ನಡುವಿನ ರಾದ್ಧಾಂತದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ತಿಳಿಸಿದ್ದಾರೆ. ಸಿ.ಟಿ.ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣ ದೇಶಾದ್ಯಂತ ಸದ್ದು ಮಾಡಿದೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ

ಸಿ.ಟಿ.ರವಿ-ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರಕರಣದ ತನಿಖೆ ಸಿಐಡಿಗೆ: ಜಿ.ಪರಮೇಶ್ವರ್‌ Read More »

ಯುವತಿಯ ಮೇಲೆ ಅತ್ಯಾಚಾರ: ಆರೋಪಿಯ ಬಂಧನ

ಬಂಟ್ವಾಳ : ನಾವೂರು ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವಕ್ಕೆ ಆಗಮಿಸಿದ್ದ ಯುವತಿಯೋರ್ವಳ ಮೇಲೆ ಯುವಕನೋರ್ವ ಅತ್ಯಾಚಾವೆಸೆಗಿದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಾವೂರು ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವಕ್ಕೆ ಮನೆಯವರ ಜೊತೆ ಆಗಮಿಸಿದ್ದ ಯುವತಿಯನ್ನು ಆರೋಪಿ ಕೊಠಡಿಯಲ್ಲಿ ಕೂಡಿ ಹಾಕಿ ಅತ್ಯಾಚಾರ ಮಾಡಿದ್ದಾನೆ. ಯುವತಿ ನೀಡಿದ ದೂರಿನ ಅನ್ವಯ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಯುವತಿಯ ಮೇಲೆ ಅತ್ಯಾಚಾರ: ಆರೋಪಿಯ ಬಂಧನ Read More »

ಉತ್ತರ ಪ್ರದೇಶದಲ್ಲಿ ಮೂವರು ಭಯೋತ್ಪಾದಕರು ಎನ್‌ಕೌಂಟರ್‌ಗೆ ಬಲಿ

ನಿಷೇಧಿತ ಖಲಿಸ್ಥಾನ್‌ ಕಮಾಂಡೊ ಫೋರ್ಸ್‌ಗೆ ಸೇರಿದ ಉಗ್ರರು ಲಖನೌ: ನಿಷೇಧಿತ ಖಲಿಸ್ತಾನ್‌ ಕಮಾಂಡೊ ಫೋರ್ಸ್‌ನ (ಖಲಿಸ್ತಾನ್‌ ಜಿಂದಾಬಾದ್‌ ಫೋರ್ಸ್‌) ಸಂಘಟನೆಯ ಮೂವರು ಭಯೋತ್ಪಾದಕರನ್ನು ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ಪೊಲೀಸರು ಎನ್‌ಕೌಂಟರ್‌ನಲ್ಲಿ ಸಾಯಿಸಿದ್ದಾರೆ. ಸೋಮವಾರ ಮುಂಜಾನೆ ಈ ಎನ್‌ಕೌಂಟರ್‌ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಹತರಾದ ಖಲಿಸ್ಥಾನಿ ಭಯೋತ್ಪಾದಕರನ್ನು ಗುರ್ವಿಂದರ್ ಸಿಂಗ್ (25), ವೀರೇಂದ್ರ ಸಿಂಗ್ ಅಲಿಯಾಸ್ ರವಿ (23), ಮತ್ತು ಜಸ್ಪ್ರೀತ್ ಸಿಂಗ್ ಅಲಿಯಾಸ್ ಪ್ರತಾಪ್ ಸಿಂಗ್ (18) ಎಂದು ಗುರುತಿಸಲಾಗಿದೆ. ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ

ಉತ್ತರ ಪ್ರದೇಶದಲ್ಲಿ ಮೂವರು ಭಯೋತ್ಪಾದಕರು ಎನ್‌ಕೌಂಟರ್‌ಗೆ ಬಲಿ Read More »

ಸುವರ್ಣ ಸೌಧದಲ್ಲಿ ಸಿ.ಟಿ.ರವಿ ಮೇಲೆ ಹಲ್ಲೆಗೆ ಯತ್ನ : 10 ಮಂದಿ ವಿರುದ್ಧ ಎಫ್‌ಐಆರ್‌

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಆಪ್ತ ಸೇರಿ 10 ಮಂದಿಯ ವಿರುದ್ಧ ಕೇಸ್‌ ಬೆಳಗಾವಿ: ಇಲ್ಲಿನ ಸುವರ್ಣಸೌಧದಲ್ಲಿ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಮೇಲೆ ಹಲ್ಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಆಪ್ತ ಸೇರಿ 10 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಸಿ.ಟಿ ರವಿ ಅಸಂವಿಧಾನಿಕ ಪದ ಬಳಕೆ ಆರೋಪ ಕೇಳಿಬಂದ ಬಳಿಕ ಸುವರ್ಣಸೌಧದಲ್ಲಿ ಭಾri ಹೈಡ್ರಾಮಾ ನಡೆದಿತ್ತು. ಲಕ್ಷ್ಮಿ ಹೆಬ್ಬಾಳ್ಕರ್‌ ಬೆಂಬಲಿಗರು ಸೌಧದೊಳಕ್ಕೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದರು. ಹಿರೇಬಾಗೇವಾಡಿ ಪೊಲೀಸ್‌

ಸುವರ್ಣ ಸೌಧದಲ್ಲಿ ಸಿ.ಟಿ.ರವಿ ಮೇಲೆ ಹಲ್ಲೆಗೆ ಯತ್ನ : 10 ಮಂದಿ ವಿರುದ್ಧ ಎಫ್‌ಐಆರ್‌ Read More »

ಸೈಬರ್‌ ವಂಚಕರಿಗೆ 500 ಸಿಮ್‌ಕಾರ್ಡ್‌ ಪೂರೈಸಿದವ ಸೆರೆ

ಆನ್‌ಲೈನ್‌ ವಂಚನೆ ಪ್ರಕರಣಗಳ ತನಿಖೆಯಲ್ಲಿ ಮಂಗಳೂರು ಪೊಲೀಸರ ಮಹತ್ವದ ಸಾಧನೆ ಮಂಗಳೂರು: ಸೈಬರ್​ ವಂಚಕರಿಗೆ 500ಕ್ಕೂ ಅಧಿಕ ಸಿಮ್‌ಕಾರ್ಡ್‌ಗಳನ್ನು ಪೂರೈಕೆ ಮಾಡಿದ್ದ ವಂಚಕನೊಬ್ಬನನ್ನು ಮಂಗಳೂರು ಪೊಲೀಸರು ದಿಲ್ಲಿಯಲ್ಲಿ ಬಂಧಿಸಿದ್ದಾರೆ. ಮಂಗಳೂರಿನ ಸೆನ್ ಕ್ರೈಂ ಪೊಲೀಸರ ಕೈಗೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ವಂಚಕ ಸಿಕ್ಕಿಬಿದ್ದಿದ್ದಾನೆ. ಅವನನ್ನು ಒಡಿಶಾ ಮೂಲದ ಕಣಾತಲ ವಾಸುದೇವ ರೆಡ್ಡಿ (25) ಎಂದು ಗುರುತಿಸಲಾಗಿದೆ. ಸೈಬರ್ ವಂಚನೆ ಪ್ರಕರಣದ ತನಿಖೆ ನಡೆಸುತ್ತಿದ್ದ ವೇಳೆ ಕಣಾತಲ ವಾಸುದೇವ ರೆಡ್ಡಿ ಸಿಮ್ ಪೂರೈಕೆ ಮಾಹಿತಿ ಮಂಗಳೂರಿನ ಸೆನ್ ಪೊಲೀಸರಿಗೆ

ಸೈಬರ್‌ ವಂಚಕರಿಗೆ 500 ಸಿಮ್‌ಕಾರ್ಡ್‌ ಪೂರೈಸಿದವ ಸೆರೆ Read More »

error: Content is protected !!
Scroll to Top