ಅಪರಾಧ

ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ರಾಜೇಶ್‍ ಎಸ್‍.ಡಿ. ಆತ್ಮಹತ್ಯೆ

ಪುತ್ತೂರು: ತಾಲೂಕಿನ ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ, ಸರ್ವೆ ಷಣ್ಮುಖ ಯುವಕ ಮಂಡಲದ ಮಾಜಿ ಅಧ್ಯಕ್ಷ, ರಾಜೇಶ್ ಎಸ್. .ಡಿ (45) ಸೋಮವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ್ದ ರಾಜೇಶ್ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ತಾಯಿ, ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ರಾಜೇಶ್‍ ಎಸ್‍.ಡಿ. ಆತ್ಮಹತ್ಯೆ Read More »

ಕೆಲಸಕ್ಕೆ ಹೋದ ವ್ಯಕ್ತಿಯೋರ್ವ ನಾಪತ್ತೆ

ಕಡಬ: ಸಾರಣೆ ಕೆಲಸಕ್ಕೆಂದು ಹೋದ ವ್ಯಕ್ತಿಯೋರ್ವರು ನಾಪತ್ತೆಯಾದ ಘಟನೆ ಕಡಬದಲ್ಲಿ ನಡೆದಿದೆ. ಈ ಕುರಿತಾಗಿ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ವ್ಯಕ್ತಿಯನ್ನು ಕಡಬ ತಾಲೂಕು ಬಳ್ಳ ಗ್ರಾಮದ ಜೋಗಿ ಮನೆ ಚೆನ್ನಕೇಶವ ಜೋಗಿ (61) ಎಂದು ಪತ್ತೆಹಚ್ಚಲಾಗಿದೆ. ಮಾ.11 ರಂದು ತನ್ನ ಮನೆಯಿಂದ ಕೋಡಿಂಬಾಳಕ್ಕೆ ಸಾರಣೆ ಕೆಲಸಕ್ಕೆ ಹೋದವರು ತಿರುಗಿ ಬರಲಿಲ್ಲ. ಇವರ ಬಳಿ ಇದ್ದ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮನೆಯಿಂದ ಹೊರ ಹೋಗುವ ವೇಳೆ ಉದ್ದ ತೋಳಿನ ಹಸಿರು

ಕೆಲಸಕ್ಕೆ ಹೋದ ವ್ಯಕ್ತಿಯೋರ್ವ ನಾಪತ್ತೆ Read More »

ಹೊಸದಾಗಿ ಖರೀದಿಸಿದ ರಿಕ್ಷಾ ಪಲ್ಟಿ | ಚಾಲಕ ಅಪಾಯದಿಂದ ಪಾರು

ಪುತ್ತೂರು : ಹೊಸ ರಿಕ್ಷಾವೊಂದು ನಿಯಂತ್ರಣ ತಪ್ಪಿ ಗುಂಡಿಗೆ ಪಲ್ಟಿಯಾದ ಘಟನೆ ಪುತ್ತೂರಿನ ಸಾಲ್ಮರದ ಕೊಟೇಚಾ ಹಾಲ್ ಬಳಿ ನಡೆದಿದೆ. ಹೊಸ ರಿಕ್ಷಾ ಖರೀದಿಸಿದ ವ್ಯಕ್ತಿ ಚಲಾವಣೆ ಕಲಿಯುತ್ತಿದ್ದ ಎನ್ನಲಾಗಿದೆ. ರಿಕ್ಷಾಕ್ಕೆ ಹಾನಿಯಾಗಿದ್ದು, ಚಾಲಕ ಮತ್ತು ಇನ್ನೋರ್ವ ವ್ಯಕ್ತಿ ರಿಕ್ಷಾದಲ್ಲಿದ್ದರು ಸಹ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಹೊಸದಾಗಿ ಖರೀದಿಸಿದ ರಿಕ್ಷಾ ಪಲ್ಟಿ | ಚಾಲಕ ಅಪಾಯದಿಂದ ಪಾರು Read More »

ಡಾ.ಕೆ.ಚಿನ್ನಪ್ಪ ಗೌಡರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪ್ರದಾನ

ಪುತ್ತೂರು: ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ನಡೆದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭೂತಾರಾಧನೆ-ಜಾನಪದೀಯ ಅಧ್ಯಯನ, ಜಾಲಾಟ, ಸಂಸ್ಕೃತಿ ಸಿರಿ, ತುಳುಮಾನ್ಯ ಹಾಗೂ ಇನ್ನಿತರ ಕೃತಿಗಳು ಡಾ.ಚಿನ್ನಪ್ಪ ಗೌಡರ ಸಾಹಿತ್ಯ ಕೃತಿಗಳಾಗಿವೆ. ಈ ಹಿಂದೆ ಕರ್ನಾಟಕ ಸಾಹಿತ್ಯ

ಡಾ.ಕೆ.ಚಿನ್ನಪ್ಪ ಗೌಡರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪ್ರದಾನ Read More »

ಆನ್‌ಲೈನ್ ಮೂಲಕ  ಬಡಜನರ ಬ್ಯಾಂಕ್‍ ಖಾತೆ ವಂಚನೆ : ಇಬ್ಬರು ಆರೋಪಿಗಳ ಬಂಧನ

ಮಂಗಳೂರು : ಆನ್‌ಲೈನ್ ವಂಚನೆಯ ಮೂಲಕ  ಬಡ ಜನರ ಬ್ಯಾಂಕ್ ಖಾತೆಗಳನ್ನು ದುರುಪಯೋಗಿಸುತ್ತಿದ್ದ  ಇಬ್ಬರು ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ತಹಸೀಲ್ದಾರ್ ಗಲ್ಲಿಯ ಅವಿನಾಶ್ ಸುತಾರ್ (28), ರಾಮದೇವ ಗಲ್ಲಿಯ ಅನೂಪ್ ಕಾರೇಕರ್ (42) ಬಂಧಿತ ಆರೋಪಿಗಳು. ದಕ್ಷಿಣ ಕನ್ನಡ ಸೈಬರ್ ಕ್ರೈಂ ಪ್ರಕರಣದ ತನಿಖೆ ವೇಳೆ ಆರೋಪಿಗಳ ಪ್ಲಾನ್ ತಿಳಿದು ಬಂದಿದೆ. ಮುಗ್ಧ ಜನರ ಬ್ಯಾಂಕ್ ಖಾತೆಯೇ ಇವರ ಗುರಿಯಾಗಿತ್ತು. ಆರೋಪಿಗಳು ಅಮಾಯಕರಿಗೆ ಚಿಲ್ಲರೆ ಹಣ ನೀಡಿ ಬ್ಯಾಂಕ್ ಖಾತೆ ತೆರೆಯಲು

ಆನ್‌ಲೈನ್ ಮೂಲಕ  ಬಡಜನರ ಬ್ಯಾಂಕ್‍ ಖಾತೆ ವಂಚನೆ : ಇಬ್ಬರು ಆರೋಪಿಗಳ ಬಂಧನ Read More »

ಪಿಕ್ಅಪ್ ಡಿಕ್ಕಿಯಾಗಿ ವ್ಯಕ್ತಿಯೋರ್ವ ಮೃತ್ಯು

ಬಂಟ್ವಾಳ : ತುಂಬೆ ಜಂಕ್ಷನ್ ಬಳಿಯ ಹೆದ್ದಾರಿಯಲ್ಲಿ ಪಿಕ್ಅಪ್ ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವನಿಗೆ ವಾಹನ ಢಿಕ್ಕಿಯಾಗಿ ಮೃತ ಪಟ್ಟ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿ ತುಂಬೆ ನಿವಾಸಿ ಮಹಾಬಲ (47) ಎನ್ನಲಾಗಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಕ್ಅಪ್ ಡಿಕ್ಕಿಯಾಗಿ ವ್ಯಕ್ತಿಯೋರ್ವ ಮೃತ್ಯು Read More »

ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣ : ರಿಯಾ ಚಕ್ರವರ್ತಿಗೆ ಕ್ಲೀನ್‌ಚಿಟ್‌

ಆತ್ಮಹತ್ಯೆ ಹಿಂದೆ ಪ್ರೇಯಸಿಯ ಕೈವಾಡವಿಲ್ಲ ಎಂದು ವರದಿ ಸಲ್ಲಿಸಿದ ಸಿಬಿಐ ಮುಂಬಯಿ: ಬಾಲಿವುಡ್‌ ಸೆಲೆಬ್ರಿಟಿಗಳ ಮ್ಯಾನೇಜರ್‌ ಆಗಿದ್ದ ಉಡುಪಿ ಮೂಲದ ದಿಶಾ ಸಾಲ್ಯಾನ್‌ ಸಾವಿನ ಪ್ರಕರಣ ಐದು ವರ್ಷಗಳ ಬಳಿಕ ಮರಳಿ ಮುನ್ನೆಲೆಗೆ ಬಂದಿರುವಾಗಲೇ ಇನ್ನೊಂದೆಡೆ ಈ ಕೇಸಿನ ಜೊತೆಗೆ ತಳುಕು ಹಾಕಿಕೊಂಡಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ನಟನ ಪ್ರೇಯಸಿಯಾಗಿದ್ದ ರಿಯಾ ಚಕ್ರವರ್ತಿಗೆ ಕ್ಲೀನ್‌ಚಿಟ್‌ ನೀಡಿದೆ.2020 ಜೂನ್‌ 14ರಂದು ಸುಶಾಂತ್‌ ಸಿಂಗ್‌ ರಜಪೂತ್‌ ಸಿಂಗ್‌ ತನ್ನ ಫ್ಲ್ಯಾಟ್‌ನಲ್ಲಿ ನೇಣಿಗೆ ಶರಣಾಗಿದ್ದರು.

ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣ : ರಿಯಾ ಚಕ್ರವರ್ತಿಗೆ ಕ್ಲೀನ್‌ಚಿಟ್‌ Read More »

ನೇಣು ಬಿಗಿದು ಮಹಿಳೆ ಆತ್ಮಹತ್ಯೆ

ಪುತ್ತೂರು: ಮಹಿಳೆಯೋರ್ವರು ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡ ಘಟನೆ  ಕೊಡಿಪ್ಪಾಡಿ ಗ್ರಾಮದ ಕುದ್ಮಾನ್ ಎಂಬಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.   ಕುದ್ಮಾನ್ ನಿವಾಸಿ ಲಲಿತಾ ಅವರು ಆತ್ಮಹತ್ಯೆ ಮಾಡಿಕೊಂಡವರು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮನೆ ಹಿಂಬದಿಯ ಅಂಗಳದಲ್ಲಿರುವ ಗೇರು ಮರದ ಕೊಂಬೆಗೆ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಕಾಗದ ಪತ್ರ ಲಭಿಸಿದ್ದು, ಅದರಲ್ಲಿ ‘ನನ್ನ ಮರಣಕ್ಕೆ ನನ್ನ ಅನಾರೋಗ್ಯ ಕಾರಣ ಎಂದು ಬರೆದಿರುವುದು ಕಂಡು ಬಂದಿದೆ. ಮೃತರ ಪುತ್ರ ಸತೀಶ್

ನೇಣು ಬಿಗಿದು ಮಹಿಳೆ ಆತ್ಮಹತ್ಯೆ Read More »

ಹನಿಟ್ರ್ಯಾಪ್‌ ದಾಖಲೆ ಸಿಎಂ ಸಿದ್ದರಾಮಯ್ಯನವರಿಗೆ ಹಸ್ತಾಂತರ

ಹನಿಟ್ರ್ಯಾಪ್‌ನಲ್ಲಿ ದೊಡ್ಡ ದೊಡ್ಡವರ ಕೈವಾಡ ಇದೆ ಎಂದು ಮಾಹಿತಿ ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿರುವ ಹನಿಟ್ರ್ಯಾಪ್​ ಪ್ರಕರಣದ ದಾಖಲೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಸ್ತಾಂತರಿಸಲಾಗಿದೆ. ಸಚಿವ ರಾಜಣ್ಣ ಪುತ್ರ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ನಿನ್ನೆ ಸಿದ್ದರಾಮಯ್ಯನವರನ್ನು ಭೇಟಿಯಾಗಿ ದಾಖಲೆ ಸಮೇತ ಹನಿಟ್ರ್ಯಾಪ್ ಪ್ರಕರಣದ ಮಾಹಿತಿ ನೀಡಿದ್ದಾರೆ. ಹನಿಟ್ರ್ಯಾಪ್ ಯತ್ನ ಸಂಬಂಧ ಎಲ್ಲ ಸಾಕ್ಷ್ಯಗಳನ್ನು ಸಿಎಂಗೆ ನೀಡಿದ್ದೇನೆ. ಸೋಮವಾರ ಅಥವಾ ಮಂಗಳವಾರ ಡಿಜಿ ಮತ್ತು ಐಜಿಪಿಗೆ ದೂರು ಸಲ್ಲಿಸುವೆ ಎಂದು ಹೇಳಿದ್ದಾರೆ.ನನಗೆ ಕೂಡ ಹನಿಟ್ರ್ಯಾಪ್ ನಡೆಸಲು

ಹನಿಟ್ರ್ಯಾಪ್‌ ದಾಖಲೆ ಸಿಎಂ ಸಿದ್ದರಾಮಯ್ಯನವರಿಗೆ ಹಸ್ತಾಂತರ Read More »

ಕಾಡಿನ ಮಧ್ಯೆ ಪತ್ತೆಯಾದ ನಾಲ್ಕು ತಿಂಗಳ ಹೆಣ್ಣು ಮಗು | ಮಹಿಳೆಯಿಂದ  ಮಗು ರಕ್ಷಣೆ

ಉಜಿರೆ: ಬೆಳಾಲುವಿನ  ಕೊಡೋಳುಕೆರೆಯಲ್ಲಿ ನಾಲ್ಕು ತಿಂಗಳ ಹೆಣ್ಣು ಮಗುವೊಂದು ಕಾಡಿನ ಮಧ್ಯೆ ಬಿಟ್ಟು ಹೋದ ಘಟನೆ ಇಂದು(ಮಾ.22) ಬೆಳಗ್ಗೆ ನಡೆದಿದೆ. ಬೆಳಾಲು ಗ್ರಾ.ಪಂ ವ್ಯಾಪ್ತಿಯ ಮುಂಡ್ಕೊಟ್ಟು ರಸ್ತೆಯ ಕೊಡೋಳುಕೆರೆ ಕಾಡಿನಲ್ಲಿ ಮಗುವೊಂದು ಅಳುವ ಶಬ್ದ ದಾರಿಹೋಕ ಮಹಿಳೆಗೆ ಕೇಳಿದ್ದು, ತಕ್ಷಣ ಅವರು ಮಗುವನ್ನು ಕಂಡು ಸಂಬಂಧ ಪಟ್ಟವರಿಗೆ ತಿಳಿಸಿದ್ದಾರೆ. ಹಸುಕೂಸು ಆರೋಗ್ಯಕರವಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಧಾವಿಸಿದ್ದು,  ಮಹಿಳಾ ಮತ್ತು ಮಕ್ಕಳ ಇಲಾಖಾ ಬರುವಿಕೆಗಾಗಿ ಕಾಯುತ್ತಿದ್ದಾರೆ ಎಂದು ಬೆಳಾಲು ಗ್ರಾ.ಪಂ.

ಕಾಡಿನ ಮಧ್ಯೆ ಪತ್ತೆಯಾದ ನಾಲ್ಕು ತಿಂಗಳ ಹೆಣ್ಣು ಮಗು | ಮಹಿಳೆಯಿಂದ  ಮಗು ರಕ್ಷಣೆ Read More »

error: Content is protected !!
Scroll to Top