ಸುದ್ದಿ

ಕಾರು ಬೈಕ್‌ ಡಿಕ್ಕಿ : ಅಪಘಾತದಲ್ಲಿ ಸುಳ್ಯದ ಯುವಕ ಸಾವು

ಸುಳ್ಯ : ಬೆಂಗಳೂರಿನಲ್ಲಿ ನಡೆದ ಕಾರು ಬೈಕ್‌ ಡಿಕ್ಕಿ ಅಪಘಾತದಲ್ಲಿ ಕೊಲ್ಲಮೊಗ್ರ ನಿವಾಸಿಯೋರ್ವರು ಸಾವನಪ್ಪಿರುವ ಘಟನೆ ಏ.25 ರಂದು ಸಂಭವಿಸಿದೆ. ಕೊಲ್ಲಮೊಗ್ರ ಧರ್ಮಪಾಲ ಗೌಡ ಬಾಳೆಬೈಲು ಮತ್ತು ವಿಮಲಾಕ್ಷಿ ದಂಪತಿಯ ಪುತ್ರ ಯತೀಶ್ ಬಾಳೆಬೈಲು(30) ಮೃತಪಟ್ಟವರು. ಸೋಮವಾರ ಬೆಳಗ್ಗೆ ಯತೀಶ್ ಬೈಕ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಕಾರೊಂದು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಯತೀಶ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಅವಿವಾಹಿತರಾಗಿರುವ ಯತೀಶ್ ಬೆಂಗಳೂರಿನ ವಿಮಾನ ನಿಲ್ದಾಣ ಬಳಿ ಉದ್ಯೋಗದಲ್ಲಿದ್ದರು. ಮೃತರು […]

ಕಾರು ಬೈಕ್‌ ಡಿಕ್ಕಿ : ಅಪಘಾತದಲ್ಲಿ ಸುಳ್ಯದ ಯುವಕ ಸಾವು Read More »

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಳ್ಯಕ್ಕೆ ಭೇಟಿ

ಪುತ್ತೂರು : ಕಾಂಗ್ರೆಸ್ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದೀಗ ಸುಳ್ಯಕ್ಕೆ ಆಗಮಿಸಿದ್ದಾರೆ. ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದಾರೆ. ಮಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಸುಳ್ಯದ ಹೆಲಿಪ್ಯಾಡ್ ಗೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ, ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಸಮಾವೇಶ ನಡೆಯಲಿರುವ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಸಭಾಂಗಣದ ಬಳಿ ಆಗಮಿಸಿ ಸಭೆಯಲ್ಲಿ ಭಾಗವಹಿಸಿ, ಪಾಲ್ಗೊಂಡಿದ್ದಾರೆ‌. ಸುಳ್ಯಕ್ಕೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ನಾಯಕರು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಳ್ಯಕ್ಕೆ ಭೇಟಿ Read More »

ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ವಿಚಾರಣೆ ಮೇ 9 ಕ್ಕೆ ಮುಂದೂಡಿದೆ

ದೆಹಲಿ : ಮುಸ್ಲಿಂ ಸಮುದಾಯದ 2ಬಿ ಮೀಸಲಾತಿಯನ್ನು ರದ್ದುಪಡಿಸಿರುವ ಕರ್ನಾಟಕ ಸರ್ಕಾರದ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರವನ್ನು ಸುಪ್ರೀಂಕೋರ್ಟ್ ಮೇ 9 ಕ್ಕೆ ಮುಂದೂಡಿದೆ. ಇದರಿಂದ ಬಸವರಾಜ ಬೊಮ್ಮಾಯಿ ಅವರ ಸಂಪುಟದ ನಿರ್ಧಾರ ಜಾರಿಗೆ ಬಿದ್ದಿರುವ ಅಂಕುಶ ಮುಂದುವರೆದಿದೆ. ಮುಸ್ಲಿಮರಿಗೆ ಒಬಿಸಿ ವರ್ಗದಲ್ಲಿ ನೀಡಲಾಗುತ್ತಿದ್ದ ಶೇ 4ರ ಮೀಸಲಾತಿಯನ್ನು ರದ್ದುಗೊಳಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಂಗಳವಾರ ಮುಂದುವರೆಸಿತು. ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್ ಮತ್ತು ಬಿವಿ ನಾಗರತ್ನ ಅವರ ದ್ವಿಸದಸ್ಯ ಪೀಠಕ್ಕೆ

ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ವಿಚಾರಣೆ ಮೇ 9 ಕ್ಕೆ ಮುಂದೂಡಿದೆ Read More »

ಗೇಮ್ ಆಡುತ್ತಿದ್ದಾಗ ಮೊಬೈಲ್ ಸ್ಪೋಟ

ತೃಶೂರ್ : ಎಂಟು ವರ್ಷದ ಬಾಲಕಿ ಮೊಬೈಲ್ ಫೋನ್ ಸ್ಫೋಟಗೊಂಡು ಮೃತಪಟ್ಟಿರುವ ದಾರುಣ ಘಟನೆ ಕೇರಳದಲ್ಲಿ ಸಂಭವಿಸಿದೆ. ಮೂರನೇ ತರಗತಿ ಬಾಲಕಿ ಆದಿತ್ಯಶ್ರೀ ರಾತ್ರಿ ತಾಯಿಯ ಮೊಬೈಲ್‌ನಲ್ಲಿ ಗೇಮ್ ಆಡುತ್ತಿದ್ದಾಗ ಅದು ಸ್ಫೋಟಗೊಂಡಿದೆ. ಮುಖ ಮತ್ತು ಕೈಗೆ ಗಂಭೀರ ಸ್ವರೂಪದ ಸುಟ್ಟ ಗಾಯವಾಗಿದ್ದ ಬಾಲಕಿಯನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯಿದರೂ ಪ್ರಯೋಜನವಾಗಲಿಲ್ಲ. ತಶೂರು ಸಮೀಪದ ತಿರುವಿಲಾಮಲದ ಪಟ್ಟಿಪರಂಬು ಎಂಬಲ್ಲಿ ಈ ಘಟನೆ ಸಂಭವಿಸಿದೆ. ವಿಧಿವಿಜ್ಞಾನ ತಜ್ಞರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಗೇಮ್ ಆಡುತ್ತಿದ್ದಾಗ ಮೊಬೈಲ್ ಸ್ಪೋಟ Read More »

ಉ. ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಮತ್ತೆ ಜೀವ ಬೆದರಿಕೆ ಕರೆ

ಬೆದರಿಕೆಯೊಡ್ಡಿದವನನ್ನು ಗುರುತಿಸಿದ ಪೊಲೀಸರು ಲಖನೌ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಮತ್ತೆ ಜೀವ ಬೆದರಿಕೆ ಕರೆ ಬಂದಿದೆ. 112 ಟೋಲ್‌ಫ್ರೀ ನಂಬರ್‌ನಿಂದ ಕರೆ ಮಾಡಿ ಬೆದರಿಕೆವೊಡ್ಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಉತ್ತರ ಪ್ರದೇಶದ ಭಯೋತ್ಪಾದನೆ ನಿಗ್ರಹ ಪಡೆ ರಂಗಕ್ಕಿಳಿದಿದ್ದು, ಕರೆ ಮಾಡಿದ ವ್ಯಕ್ತಿಯನ್ನು ರಿಹಾನ್‌ ಎಂದು ಗುರುತಿಸಿದೆ. ಅವನಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಈತ ಕರೆ ಮಾಡಿದ್ದಲ್ಲದೆ ಸೋಷಿಯಲ್‌ ಮೀಡಿಯಾದಲ್ಲಿ ಮೆಸೇಜ್‌ ಕೂಡ ಹಾಕಿದ್ದ. ಆತನ ಡಿಪಿಯಲ್ಲಿ ಅಲ್ಲಾವು ಎಂದು ಬರೆದಿರುವ ಫೊಟೊ ಇದೆ.

ಉ. ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಮತ್ತೆ ಜೀವ ಬೆದರಿಕೆ ಕರೆ Read More »

ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ವಿರುದ್ಧ ಮುಂದುವರಿದ ಕಾರ್ಯಾಚರಣೆ

ಮುಖಂಡರ ಮನೆ, ಕಚೇರಿ ಮತ್ತಿತರ ಸಂಸ್ಥಾಪನೆ ಶೋಧ ದೆಹಲಿ : ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ನಾಯಕರಿಗೆ ಸೇರಿದ ಮನೆ ಮತ್ತಿತರ ಸಂಸ್ಥಾಪನೆಗಳ ಮೇಲಿನ ದಾಳಿ ಕಾರ್ಯಾಚರಣೆ ಮುಂದುವರಿದಿದೆ. ಇಂದು ಬೆಳ್ಳಂಬೆಳಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಾಲ್ಕು ರಾಜ್ಯಗಳಲ್ಲಿ ಬೃಹತ್‌ ಮಟ್ಟದ ಕಾರ್ಯಾಚರಣೆ ಪ್ರಾರಂಭಿಸಿದೆ.ಬಿಹಾರ, ಉತ್ತರ ಪ್ರದೇಶ, ಪಂಜಾಬ್‌ ಮತ್ತು ಗೋವಾ ರಾಜ್ಯಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ನೂರಾರು ಎನ್‌ಐಎ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಸಲಾಗುತ್ತಿದೆ.

ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ವಿರುದ್ಧ ಮುಂದುವರಿದ ಕಾರ್ಯಾಚರಣೆ Read More »

ಚುನಾವಣಾ ಕಣದಲ್ಲಿ ದಿನದಿನಕ್ಕೂ ಬದಲಾಗುತ್ತಿದೆ ಟ್ರೆಂಡ್‌

ರಾಜಕೀಯ ಪಂಡಿತರ ಅಂದಾಜಿಗೂ ನಿಲುಕುತ್ತಿಲ್ಲ ಚುನಾವಣಾ ಕಣ ಬೆಂಗಳೂರು : ಮತದಾನಕ್ಕೆ ಇನ್ನು ಕೆಲವೇ ದಿನಗಳು ಉಳಿದಿದ್ದರೂ ಚುನಾವಣಾ ಕಣದಲ್ಲಿ ದಿನದಿನಕ್ಕೂ ಟ್ರೆಂಡ್‌ ಬದಲಾಗುತ್ತಿದೆ. ಈ ಸಲದ ಚುನಾವಣೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಅಂದಾಜಿಸಲು ರಾಜಕೀಯ ವಿಶ್ಲೇಷಕರು ಕೂಡ ತಿಣುಕಾಡುತ್ತಿದ್ದಾರೆ. ಮೊದಲೆಲ್ಲ ಚುನಾವಣೆ ಘೋಷಣೆಯಾದ ಬಳಿಕ ಟ್ರೆಂಡ್‌ ಯಾವ ರೀತಿ ಇದೆ ಎಂಬ ಒಂದು ಅಂದಾಜು ಸಿಗುತ್ತಿತ್ತು. ಕೆಲವೊಂದಿಷ್ಟು ಸಮೀಕ್ಷೆಗಳು ಕೂಡ ಈ ಸಲ ಯಾವ ಪಕ್ಷ ಬಹುಮತ ಪಡೆಯಬಹುದು ಎಂದು ಅಂದಾಜಿಸಲು ನೆರವಾಗುತ್ತಿದ್ದವು. ಆದರೆ

ಚುನಾವಣಾ ಕಣದಲ್ಲಿ ದಿನದಿನಕ್ಕೂ ಬದಲಾಗುತ್ತಿದೆ ಟ್ರೆಂಡ್‌ Read More »

ರೈಲಿನ ಟಾಯ್ಲೆಟ್‌ನಲ್ಲಿ ಮೃತದೇಹ ಪತ್ತೆ : ಹೊರಜಗತ್ತಿಗೆ ವಿಷಯ ತಿಳಿದದ್ದು 24 ತಾಸು ಬಳಿಕ

ಮುಂಬಯಿ-ಮಂಗಳೂರು ರೈಲಿನಲ್ಲಿ ನಡೆದ ಮನಕಲಕುವ ಘಟನೆ ಮಂಗಳೂರು : ರೈಲಿನಲ್ಲಿ ಮೃತಪಟ್ಟ ವ್ಯಕ್ತಿಯ ಶವ ಮುಂಬಯಿಯಿಂದ ಮಂಗಳೂರು ತನಕ ಬಂದು ವಾಪಸು ಮುಂಬಯಿಗೆ ಹೋದ ಘಟನೆ ಮುಂಬಯಿ-ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಂಭವಿಸಿದೆ. ರೈಲಿನಲ್ಲಿ ಪ್ರಯಾಣಿಸುವಾಗ ನಾಪತ್ತೆಯಾಗಿದ್ದಾರೆಂದು ಭಾವಿಸಿ ಈ ವ್ಯಕ್ತಿಯ ಮನೆಯವರು ಮಂಗಳೂರು ಮತ್ತು ಮುಂಬಯಿಯಲ್ಲಿ ಹಲವು ನಿಲ್ದಾಣಗಳಲ್ಲಿ ಹುಡುಕಾಡಿದ್ದರು. ರೈಲಿನ ಸಿಬ್ಬಂದಿ ಕೂಡ ಇಡೀ ರೈಲನ್ನು ಹುಡುಕಾಡಿ ರೈಲಿನಲ್ಲಿ ಪತ್ತೆಯಾಗಿಲ್ಲ ಎಂದು ವರದಿ ನೀಡಿದ್ದರು. ಆದರೆ ಶವ ಭರ್ತಿ 24 ತಾಸು ಶೌಚಾಲಯದ ಒಳಗೆ

ರೈಲಿನ ಟಾಯ್ಲೆಟ್‌ನಲ್ಲಿ ಮೃತದೇಹ ಪತ್ತೆ : ಹೊರಜಗತ್ತಿಗೆ ವಿಷಯ ತಿಳಿದದ್ದು 24 ತಾಸು ಬಳಿಕ Read More »

ಬಲವಂತವಾಗಿ ಜೆಡಿಎಸ್​ ಅಭ್ಯರ್ಥಿ ಅಲ್ತಾಫ್ ಕುಂಪಲ ನಾಮಪತ್ರ ಹಿಂತೆಗೆಸಿದ ಕಾಂಗ್ರೆಸ್

ಮಂಗಳೂರು : ಕಾಂಗ್ರೆಸ್​​ನವರು ಧಮ್ಕಿ ಹಾಕಿ ನಾಮಪತ್ರ ವಾಪಸ್​ ಪಡೆಸಿದರು ಎಂದು ಉಳ್ಳಾಲದ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಲ ಆರೋಪಿಸಿದ್ದಾರೆ. ನಾನು ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೆ. ಶುಕ್ರವಾರ ನಾನು ಮಸೀದಿಯಲ್ಲಿ ಪ್ರಾರ್ಥನೆ ಮಾಡಿ ವಾಪಸ್ ಬರುತ್ತಿದ್ದೆ. ಆ ಸಂದರ್ಭ ಕಾಂಗ್ರೆಸ್​ನ ಉಸ್ಮಾನ್ ಕಲ್ಲಾಪು ಸೇರಿದಂತೆ ಹಲವರು ನನ್ನನ್ನು ಕರೆದುಕೊಂಡು ಹೋದರು. ಬೆದರಿಕೆ ಹಾಗೂ ಧಮ್ಕಿ ಹಾಕಿ ನಾಮಪತ್ರ ವಾಪಸ್ ತೆಗೆಯುವಂತೆ ಸಹಿ ಹಾಕಿಸಿಕೊಂಡಿದ್ದರು. ನಾನು ಯಾವುದೇ ಆಮಿಷಗಳಿಗೆ ಒಳಗಾಗಿಲ್ಲ, ಕೇವಲ ಒತ್ತಡದಿಂದ ನಾಮಪತ್ರ

ಬಲವಂತವಾಗಿ ಜೆಡಿಎಸ್​ ಅಭ್ಯರ್ಥಿ ಅಲ್ತಾಫ್ ಕುಂಪಲ ನಾಮಪತ್ರ ಹಿಂತೆಗೆಸಿದ ಕಾಂಗ್ರೆಸ್ Read More »

ಏ. 25 -26 : ಬಿಜೆಪಿಯಿಂದ ವಿಶೇಷ ಮಹಾ ಪ್ರಚಾರ ಅಭಿಯಾನ

ಕೇಂದ್ರದ 98, ರಾಜ್ಯದ 150ಕ್ಕೂ ಹೆಚ್ಚು ನಾಯಕರು ಭಾಗಿ ಬೆಂಗಳೂರು : ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಉಭಯ ಪಕ್ಷಗಳು ಅಬ್ಬರದ ಪ್ರಚಾರ ಕೈಗೊಂಡಿದೆ. ಅದರಂತೆ ಇದೀಗ ಏಪ್ರಿಲ್‌ 25, 26 ರಂದು ಬಿಜೆಪಿಯಿಂದ ವಿಶೇಷ ಮಹಾ ಪ್ರಚಾರ ಅಭಿಯಾನ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ‘ಬಿಜೆಪಿಯಿಂದ ರಾಜ್ಯದ 224 ವಿಧಾನಸಭೆ ಕ್ಷೇತ್ರದಲ್ಲಿ ವಿಶೇಷ ಮಹಾ ಪ್ರಚಾರ ಅಭಿಯಾನ ನಡೆಯಲಿದ್ದು, 98

ಏ. 25 -26 : ಬಿಜೆಪಿಯಿಂದ ವಿಶೇಷ ಮಹಾ ಪ್ರಚಾರ ಅಭಿಯಾನ Read More »

error: Content is protected !!
Scroll to Top