ಸುದ್ದಿ

ನಾಳೆಯಿಂದ ಶುರುವಾಗಲಿದೆ ಐಪಿಎಲ್‌ ಹಬ್ಬ : 2 ತಿಂಗಳು ಕ್ರಿಕೆಟ್‌ ಪ್ರೇಮಿಗಳಿಗೆ ಭರಪೂರ ಮನರಂಜನೆ

ಮಾ.28ರಂದು ಆರ್‌ಸಿಬಿ-ಸನ್‌ರೈಸರ್ಸ್‌ ಹೈದರಾಬಾದ್ ಮಧ್ಯೆ ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯ ಬೆಂಗಳೂರು : ಶನಿವಾರದಿಂದ ಸುಮಾರು ಎರಡು ತಿಂಗಳು ಕ್ರಿಕೆಟ್‌ ಪ್ರೇಮಿಗಳಿಗೆ ಐಪಿಎಲ್‌ ಪಂದ್ಯಗಳ ಹಬ್ಬ. ಈ ವರ್ಷದ ಐಪಿಎಲ್ ಪಂದ್ಯಗಳು ಮಾರ್ಚ್ 28ರಿಂದ ಪ್ರಾರಂಭವಾಗಲಿವೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಪಂದ್ಯಗಳು ಸಂಜೆ 7.30ಕ್ಕೆ ಪ್ರಾರಂಭವಾಗುತ್ತವೆ. 19ನೇ ಆವೃತ್ತಿಯ ಐಪಿಎಲ್​ನ ವೇಳಾಪಟ್ಟಿಯನ್ನು ಬಿಸಿಸಿಐ ಎರಡು ಹಂತದಲ್ಲಿ ಪ್ರಕಟಿಸಿದೆ. ಐಪಿಎಲ್ ಪಂದ್ಯಗಳು ನಡೆಯುವ ರಾಜ್ಯಗಳಲ್ಲಿ […]

ನಾಳೆಯಿಂದ ಶುರುವಾಗಲಿದೆ ಐಪಿಎಲ್‌ ಹಬ್ಬ : 2 ತಿಂಗಳು ಕ್ರಿಕೆಟ್‌ ಪ್ರೇಮಿಗಳಿಗೆ ಭರಪೂರ ಮನರಂಜನೆ Read More »

ಇರಾನ್‌ ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ಏ.6ರವರೆಗೆ ಮುಂದೂಡಿದ ಟ್ರಂಪ್‌

ಶಾಂತಿ ಮಾತುಕತೆ, ಸಂಧಾನ ಮಾತುಕತೆಗಳು ಚೆನ್ನಾಗಿ ನಡೆಯುತ್ತಿವೆ ಎಂದ ಅಮೆರಿಕದ ಅಧ್ಯಕ್ಷ ಅಮೆರಿಕ: ಇರಾನ್‌ನ ವಿನಂತಿಯ ಮೇರೆಗೆ ಇಂಧನ ಸಂಪನ್ಮೂಲಗಳ ಮೇಲಿನ ದಾಳಿಯ ಗಡುವನ್ನು ಏಪ್ರಿಲ್ 6ರವರೆಗೆ ಮುಂದೂಡಲಾಗಿದೆ. ಶಾಂತಿ ಮಾತುಕತೆ, ಸಂಧಾನ ಮಾತುಕತೆಗಳು ಚೆನ್ನಾಗಿ ನಡೆಯುತ್ತಿವೆ ಎಂದು ಅಮೆರಿಕದ ಅಧ್ಯಕ್ಷ ಡಿನಾಲ್ಡ್‌ ಟ್ರಂಪ್‌ ಹೇಳಿಕೊಂಡಿದ್ದಾರೆ. ಈ ಬಗ್ಗೆ ಟ್ರುಥ್ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು, ಅಮೆರಿಕ-ಇರಾನ್ ಮಧ್ಯೆ ಶಾಂತಿ ಸಂಧಾನ ಸಭೆಗಳು ಚೆನ್ನಾಗಿ ನಡೆಯುತ್ತಿವೆ. ಇತರರು ಹಾಗೂ ಫೇಕ್‌ನ್ಯೂಸ್ ಮಾಧ್ಯಮಗಳು ಹೇಳುತ್ತಿರುವುದಕ್ಕೆ ವ್ಯತಿರಿಕ್ತವಾಗಿ ಮಾತುಕತೆಗಳು

ಇರಾನ್‌ ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ಏ.6ರವರೆಗೆ ಮುಂದೂಡಿದ ಟ್ರಂಪ್‌ Read More »

ವಿದ್ಯಾರ್ಥಿನಿಗೆ ಪ್ರಪೋಸ್‌ ಮಾಡಿದ್ದ ಪ್ರೊಫೆಸರ್‌ ಅಬ್ದುಲ್ಲ ಅರೆಸ್ಟ್‌

ಕ್ಲಾಸ್‌ನಲ್ಲೇ ವಿದ್ಯಾರ್ಥಿನಿಗೆ ಪ್ರಪೋಸ್‌ ಮಾಡಿದ್ದ ಅಸಿಸ್ಟೆಂಟ್ ಪ್ರೊಫೆಸರ್‌ ಬೆಂಗಳೂರು: ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಚಾಕೋಲೆಟ್ ಕೊಟ್ಟು ಲವ್ ಪ್ರಪೋಸ್ ಮಾಡಿದ ಅಸಿಸ್ಟೆಂಟ್ ಪ್ರೊಫೆಸರ್‌ನನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಪ್ರೋಫೆಸರ್ ಅಬ್ದುಲ್ ವಿರುದ್ಧ ನೆಲಮಂಗಲದ ಖಾಸಗಿ ಕಾಲೇಜು ಆಡಳಿತ ಮಂಡಳಿ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಪ್ರೊಫೆಸರ್ ವಿರುದ್ಧ ಕ್ರೈಂ ನಂಬರ್ 79, ಬಿಎನ್‌ಎಸ್ ಆಕ್ಟ್ 74, 75, 329 (3) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬೆನ್ನಲ್ಲೇ ತನಿಖೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ

ವಿದ್ಯಾರ್ಥಿನಿಗೆ ಪ್ರಪೋಸ್‌ ಮಾಡಿದ್ದ ಪ್ರೊಫೆಸರ್‌ ಅಬ್ದುಲ್ಲ ಅರೆಸ್ಟ್‌ Read More »

ತೃತೀಯಲಿಂಗಿ ಜೊತೆ ಬಂಗಲೆಯಲ್ಲಿ ಸಿಕ್ಕಿಬಿದ್ದ ಸಚಿವ

ವಿಡಿಯೋ ವೈರಲ್‌ ಆಗಿ ಆಡಳಿತ ಪಕ್ಷಕ್ಕೆ ಮುಜುಗರ ತಂದ ಪ್ರಕರಣ ಮುಂಬೈ : ಸಚಿವರೊಬ್ಬರು ತೃತೀಯಲಿಂಗಿ ಜತೆ ಸಿಕ್ಕಿಬಿದ್ದಿರುವ ವಿಡಿಯೋ ವೈರಲ್ ಆಗಿ ಮಹಾರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಮಹಾರಾಷ್ಟ್ರ ಸಚಿವ, ಎನ್​ಸಿಪಿ ನಾಯಕ ನರಹರಿ ಜಿರ್ವಾಲ್ ತಮ್ಮ ಬಂಗಲೆಯಲ್ಲಿ ಟ್ರಾನ್ಸ್​ಜೆಂಡರ್ ಜತೆ ಇದ್ದ ವಿಡಿಯೋ ವೈರಲ್ ಆಗಿದೆ. ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿ ಅವರ ರಾಜೀನಾಮೆಗೆ ಒತ್ತಾಯಿಸಿದೆ. ಎರಡು ತಿಂಗಳಲ್ಲಿ ನರಹರಿ ಜಿರ್ವಾಲ್‌ ಹುಟ್ಟು ಹಾಕಿದ ಎರಡನೇ ವಿವಾದವಿದು. ಸಚಿವಾಲಯದಲ್ಲಿ 35 ಸಾವಿರ ರೂ.

ತೃತೀಯಲಿಂಗಿ ಜೊತೆ ಬಂಗಲೆಯಲ್ಲಿ ಸಿಕ್ಕಿಬಿದ್ದ ಸಚಿವ Read More »

ಸುಳ್ಯ: ಗೋವು ಅಕ್ರಮ ಸಾಗಿಸುತ್ತಿದ್ದ ಮೂವರು ಸೆರೆ

ಸುಳ್ಯ: ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ ಘಟನೆ ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಪಿಕಪ್ ಚಾಲಕ ಕೇರಳ ಮೂಲದ ಇಸಾಕ್ (40), ಸುಳ್ಯದ ನಾವೂರು ನಿವಾಸಿ ಇಬ್ರಾಹಿಂ ಎಂಬವರು ಗೋವುಗಳನ್ನು ಅಮರಮುಡ್ನೂರಿನಿಂದ ಖರೀದಿಸಿ, ಅನುಮತಿ ಪಡೆಯದೆ ವಧೆ ಮಾಡುವ ಸಲುವಾಗಿ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆಲೆಟ್ಟಿ ಮಾರ್ಗವಾಗಿ ಕೇರಳದ ಕಡೆಗೆ ಪಿಕಪ್ ವಾಹನದಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಸುಳ್ಯ ಪೊಲೀಸರು ಪಿಕಪ್

ಸುಳ್ಯ: ಗೋವು ಅಕ್ರಮ ಸಾಗಿಸುತ್ತಿದ್ದ ಮೂವರು ಸೆರೆ Read More »

ಒಂದನೇ ತರಗತಿ ದಾಖಲಾಗಲು ವಯೋಮಿತಿ ಸಡಿಲಿಕೆ: ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಣಯ ಪ್ರಕಟ

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷಕ್ಕೆ ಅನ್ವಯಿಸುವಂತೆ ಕರ್ನಾಟಕದಲ್ಲಿ ಒಂದನೇ ತರಗತಿಗೆ ದಾಖಲಾಗಲು ಇದ್ದ 6 ರ ವಯೋಮಿತಿಯನ್ನು ಸಡಿಲಿಸಿರುವುದಾಗಿ ಮಹತ್ವದ ಘೋಷಣೆಯನ್ನು ರಾಜ್ಯ ಸರ್ಕಾರ ಮಾಡಿದೆ. ಈ ಸಂಬಂಧ ಮಾತನಾಡಿರುವ ಸಚಿವ ಮಧು ಬಂಗಾರಪ್ಪ, ಒಂದನೇ ತರಗತಿಗೆ ದಾಖಲಾಗಲು ಇದ್ದ 6 ವರ್ಷದ ಮಿತಿಯನ್ನು 5 ವರ್ಷ 10 ತಿಂಗಳಿಗೆ ಸಡಿಲಿಕೆ ಮಾಡಲಾಗುವುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ ಕೆಜಿ ಮತ್ತು ಯುಕೆಜಿ ಗೂ ಹೊಸದಾಗಿ ಕಾನೂನು ತಂದು ಶಾಶ್ವತ ಪರಿಹಾರ ನೀಡುವ ಬಗ್ಗೆ ಕೆಲಸ ಮಾಡುತ್ತಿದ್ದೇವೆ.

ಒಂದನೇ ತರಗತಿ ದಾಖಲಾಗಲು ವಯೋಮಿತಿ ಸಡಿಲಿಕೆ: ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಣಯ ಪ್ರಕಟ Read More »

ಎ. 6 : ಮಂತ್ರವಾದಿ ಗುಳಿಗ, ಕಲ್ಲುರ್ಟಿ ಹಾಗೂ ಕೊರಗಜ್ಜ ದೈವದ ನೇಮೋತ್ಸವ

ಕಡಬ: ಮಂತ್ರವಾದಿ ಗುಳಿಗ, ಕಲ್ಲುರ್ಟಿ ಹಾಗೂ ಕೊರಗಜ್ಜ ಸನ್ನಿಧಿ ಕುದ್ಮಾರು ಇಲ್ಲಿ ಎ. 6 ರಂದು ಮಂತ್ರವಾದಿ ಗುಳಿಗ, ಕಲ್ಲುರ್ಟಿ ಹಾಗೂ ಕೊರಗಜ್ಜ ದೈವದ ನೇಮೋತ್ಸವ ಜರುಗಲಿದೆ. ಎ. 6 ರಂದು ಸಂಜೆ ಗಂಟೆ 6 ಕ್ಕೆ ದೈವಗಳ ಭಂಡಾರ ತೆಗೆಯುವುದು ರಾತ್ರಿ ಗಂಟೆ 7 ರಿಂದ ಗುಳಿಗ ದೈವದ ನೇಮ ರಾತ್ರಿ ಗಂಟೆ 9 ರಿಂದ ಅನ್ನಸಂತರ್ಪಣೆ ರಾತ್ರಿ ಗಂಟೆ 10 ರಿಂದ ಕಲ್ಲುರ್ಟಿ ದೈವದ ನೇಮ ನಡೆಯಲಿದೆ. ಹಾಗೆಯೇ ಎ. 7 ರಂದು ಬೆಳಿಗ್ಗೆ

ಎ. 6 : ಮಂತ್ರವಾದಿ ಗುಳಿಗ, ಕಲ್ಲುರ್ಟಿ ಹಾಗೂ ಕೊರಗಜ್ಜ ದೈವದ ನೇಮೋತ್ಸವ Read More »

ಅಕ್ಷಯ ಪದವಿ ಕಾಲೇಜಿನಲ್ಲಿ ಅದ್ವಯ ಕನ್ನಡ ಸಾಹಿತ್ಯ ಸಂಘದಿಂದ ಅಂಕುರ ಭಿತ್ತಿಪತ್ರ ಅನಾವರಣ

ಪುತ್ತೂರು: ಅಕ್ಷಯ ಪದವಿ ಕಾಲೇಜಿನಲ್ಲಿ ಅದ್ವಯ ಕನ್ನಡ ಸಾಹಿತ್ಯ ಸಂಘದಿಂದ ಅಂಕುರ ಭಿತ್ತಿಪತ್ರ ಅನಾವರಣ ಕಾರ್ಯಕ್ರಮವು ನಡೆಯಿತು. ಕರ್ನಾಟಕ ಸಂಘ, ಪುತ್ತೂರು ಇದರ ಅಧ್ಯಕ್ಷಪುರಂಧರ ಭಟ್ ಬಿ. ಇವರು ಅಂಕುರ ಭಿತ್ತಿಪತ್ರಿಕೆಯ ಅನಾವರಣ ಮಾಡಿ, ದೀಪ ಪ್ರಜ್ವಲನೆಗೈದರು. ಬಳಿಕ ಮಾತನಾಡಿದ ಅವರು, ತಮ್ಮ ಬಾಲ್ಯದ ದಿನಗಳಲ್ಲಿನ ನೆನಪನ್ನು ಬಿತ್ತರಿಸಿ ಮುಂದಿನ ದಿನಗಳಲ್ಲಿ ಅಂಕುರ ಹೆಮ್ಮರವಾಗುವಂತೆ ನಿಮ್ಮ ಭವಿಷ್ಯವು ಉಜ್ವಲವಾಗಲಿ ಎಂದು ಹಾರೈಸಿದರು. ಮುಖ್ಯ ಅತಿಥಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷ ಉಮೇಶ್ ನಾಯಕ್

ಅಕ್ಷಯ ಪದವಿ ಕಾಲೇಜಿನಲ್ಲಿ ಅದ್ವಯ ಕನ್ನಡ ಸಾಹಿತ್ಯ ಸಂಘದಿಂದ ಅಂಕುರ ಭಿತ್ತಿಪತ್ರ ಅನಾವರಣ Read More »

ಉಗ್ರರ ಜೊತೆ ನಂಟು: ಬಳ್ಳಾರಿಯ ಅಬ್ದುಲ್ ಸಲಾಮ್‌ನನ್ನು ಬಂಧಿಸಿದ ವಿಜಯವಾಡ ಪೊಲೀಸರು

ಬಳ್ಳಾರಿ: ಆನ್‌ಲೈನಿನಲ್ಲಿ ‌ಮೂಲಭೂತವಾದದ ಬಗ್ಗೆ ಪ್ರಚಾರ, ಉಗ್ರರ ಜೊತೆ ನಂಟು ಹೊಂದಿರುವ ಆರೋಪದಲ್ಲಿ ದೇಶದಲ್ಲಿ 12 ಯುವಕರನ್ನು ಬಂಧಿಸಲಾಗಿದ್ದು, ಇದರಲ್ಲಿ ಓರ್ವ ಬಂಧಿತ ಬಳ್ಳಾರಿಯವ ಎಂದು ತಿಳಿದು ಬಂದಿದೆ. ಶಂಕಿತನನ್ನು ಬಳ್ಳಾರಿಯ ಅಬ್ದುಲ್ ಸಲಾಮ್ (36) ಎಂದು ಗುರುತಿಸಲಾಗಿದೆ. ಕರ್ನಾಟಕ, ಬಿಹಾರ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಿಜಯವಾಡ ಪೊಲೀಸರು ನಡೆಸಿದ ಕಾರ್ಯಾಚರಣೆಯ ಸಂದರ್ಭದಲ್ಲಿ ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ನಿಷೇಧಿತ ಉಗ್ರ ಸಂಘಟನೆಗಳ ಜೊತೆ ನಂಟು, ಉಗ್ರವಾದದ ಬಗ್ಗೆ ಪ್ರಚಾರ ಮಾಡುತ್ತಿರುವ ಹಿನ್ನೆಲೆ ಆರೋಪಿ

ಉಗ್ರರ ಜೊತೆ ನಂಟು: ಬಳ್ಳಾರಿಯ ಅಬ್ದುಲ್ ಸಲಾಮ್‌ನನ್ನು ಬಂಧಿಸಿದ ವಿಜಯವಾಡ ಪೊಲೀಸರು Read More »

ತರಗತಿಯಲ್ಲೇ ‌ವಿದ್ಯಾರ್ಥಿನಿಗೆ ಲವ್ ಪ್ರೊಪೋಸ್ ಮಾಡಿದ ಪ್ರೊಫೆಸರ್

ಬೆಂಗಳೂರು: ವಿದ್ರಾರ್ಥಿನಿಯೊಬ್ಬಳಿಗೆ ಪ್ರೊಫೆಸರ್ ಒಬ್ಬ ತರಗತಿ ನಡೆಯುತ್ತಿರುವಾಗಲೇ ಲವ್ ಪ್ರೊಪೋಸ್ ಮಾಡಿದ್ದು, ಇದು ವಿವಾದ ಸೃಷ್ಟಿ ಮಾಡಿದೆ. ಪ್ರತಿಷ್ಟಿತ ಮೆಡಿಕಲ್ ಕಾಲೇಜೊಂದರಲ್ಲಿ ಈ ಘಟನೆ ನಡೆದಿದೆ. ಪ್ರೊ. ಅಬ್ದುಲ್ಲಾ ಎಂಬಾತ ಚಾಕೊಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರೇಮ ನಿವೇದನೆಯನ್ನು ತರಗತಿಯಲ್ಲೇ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿನಿ ಆಕ್ರೋಶದಿಂದ ಆತನನ್ನು ಪ್ರಶ್ನೆ ಮಾಡಿದ್ದಾಳೆ. ಘಟನೆಯಿಂದ ವಿವಾದ ಉಂಟಾಗಿತ್ತು, ಬೇರೆ ವಿದ್ಯಾರ್ಥಿಗಳು ಸಹ ಪ್ರೊಫೆಸರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಆತನನ್ನು ಹಿಂಬಾಲಿಸಿ ಕ್ಯಾಂಪಸ್ ನಲ್ಲೇ ಹೊಡೆದಿರುವ ಘಟನೆ ಸಹ ನಡೆದಿದೆ. ಪರಿಸ್ಥಿತಿ

ತರಗತಿಯಲ್ಲೇ ‌ವಿದ್ಯಾರ್ಥಿನಿಗೆ ಲವ್ ಪ್ರೊಪೋಸ್ ಮಾಡಿದ ಪ್ರೊಫೆಸರ್ Read More »

error: Content is protected !!
Scroll to Top