ಸುದ್ದಿ

ಉಚಿತ ಕೊಡುಗೆಗಳನ್ನು ನೀಡೋದ್ರಿಂದ ಬಡತನ ನಿರ್ಮೂಲನೆ ಆಗುವುದಿಲ್ಲ , ಉದ್ಯೋಗ ಸೃಷ್ಟಿಯೇ ಮುಖ್ಯ : ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ

ಉಚಿತ ಕೊಡುಗೆಗಳನ್ನು ನೀಡೋದ್ರಿಂದ ಬಡತನ ನಿರ್ಮೂಲನೆ ಆಗುವುದಿಲ್ಲ, ಅವಿಷ್ಕಾರದ ಮೂಲಕ ಉದ್ಯೋಗ ಸೃಷ್ಟಿಯೇ ಮುಖ್ಯ ಎಂದು ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿಯವರು ಹೇಳಿದ್ದಾರೆ. ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಸನ್ ಸೆಂಟರ್‌ನಲ್ಲಿ ಮಾ.12ರಂದು ನಡೆದ ಟ್ರೈ ಕಾನ್ ಮುಂಬೈ 2025 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಚಿತ ಕೊಡುಗೆಗಳಿಂದ ಬಡತನ ನಿವಾರಣೆಯಾಗುವುದಿಲ್ಲ ಎಂದರು. ಅವಿಷ್ಕಾರದಿಂದ ಹೆಚ್ಚು ಉದ್ಯೋಗ ಸೃಷ್ಟಿಯಾದಾಗ ಮಾತ್ರ ಬಡತನ ದೂರವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಈ ಕಾರ್ಯಕ್ರಮದಲ್ಲಿ ಮಾಜಿ NASSCOM ಅಧ್ಯಕ್ಷ ಹರೀಶ್ ಮೆಹ್ರಾ ಉಪಸ್ಥಿತರಿದ್ದರು. “ಉಚಿತ ಕೊಡುಗೆಗಳಿಂದ […]

ಉಚಿತ ಕೊಡುಗೆಗಳನ್ನು ನೀಡೋದ್ರಿಂದ ಬಡತನ ನಿರ್ಮೂಲನೆ ಆಗುವುದಿಲ್ಲ , ಉದ್ಯೋಗ ಸೃಷ್ಟಿಯೇ ಮುಖ್ಯ : ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ Read More »

ನೆಲ್ಲಿದಡಿ ಗುತ್ತು ಉಳಿಸಿ ಪಾದಯಾತ್ರೆ ತಾತ್ಕಾಲಿಕ ರದ್ದು

ದೈವಾರಾಧನೆಗೆ ಅಡ್ಡಿಪಡಿಸಿದವರ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆ ಮಂಗಳೂರು : ನೆಲ್ಲಿದಡಿ ಗುತ್ತು ಕಾಂತೇರಿ ಜುಮಾದಿ ದೈವದ ಆರಾಧನೆಗೆ ಅಡ್ಡಿಪಡಿಸಿದ ವಿಶೇಷ ಆರ್ಥಿಕ ವಲಯ (ಎಂಎಸ್‌ಇಝಡ್‌)ದ ವಿರುದ್ಧ ಮಾ.18ರಂದು ನಡೆಸುದ್ದೇಶಿಸಿದ್ದ ಬೃಹತ್‌ ಪಾದಯಾತ್ರೆ ತಾತ್ಕಾಲಿಕವಾಗಿ ರದ್ದಾಗಿದೆ. ಬಜ್ಪೆಯ ಪೇಜಾವರ ಮಾಗಣೆಯ ನೆಲ್ಲಿದಡಿ ಗುತ್ತಿನ ಪ್ರಸಿದ್ಧ ಕಾಂತೇರಿ ಜುಮಾದಿ ದೈವದ ಆರಾಧನೆಗೆ ಸರಕಾರಿ ಕಂಪನಿ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ಮಾ. 18ರಂದು ಬಜಪೆ-ನೆಲ್ಲಿದಡಿಗುತ್ತು ಪಾದಯಾತ್ರೆಯನ್ನು ಆಯೋಜಿಸಲಾಗಿತ್ತು. ಆದರೆ, ದೈವಸ್ಥಾನದ ಧಾರ್ಮಿಕ ವಿಧಿವಿಧಾನಗಳನ್ನು ಪಾಲಿಸುವ

ನೆಲ್ಲಿದಡಿ ಗುತ್ತು ಉಳಿಸಿ ಪಾದಯಾತ್ರೆ ತಾತ್ಕಾಲಿಕ ರದ್ದು Read More »

ನಾಪತ್ತೆಯಾದ ನಿತೇಶ್‌ ಬೆಳ್ಚಾಡ  ಪತ್ತೆ

ಮಂಗಳೂರು :  ಪ್ಯಾರಾಮೆಡಿಕಲ್ ವಿದ್ಯಾರ್ಥಿ ನಿತೇಶ್‌ ಬೆಳ್ಚಾಡ  ಸುಮಾರು  ದಿನಗಳಿಂದ ಮನೆಗೆ ಬಾರದೆ ನಾಪತ್ತೆಯಾಗಿದ್ದ. ಮೂಡುಪೆರಾರ ನಿವಾಸಿ ನಿತೇಶ್ ಗೋವಾದಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಫೆಬ್ರವರಿ 13 ಕ್ಕೆ ನಾಪತ್ತೆಯಾಗಿದ್ದ ಈತನ ಸುಳಿವಿಗೆ ಪೊಲೀಸರು ವಿಶೇಷ ತಂಡ ರಚಿಸಿ ಅನೇಕ ಕಡೆ ತನಿಖೆ ನಡೆಸಿದ್ದರು ಮಾಹಿತಿ ಲಭಿಸಿರಲಿಲ್ಲ. ಆದರೆ ನಿತೇಶ್‍ ಎಂಬವನು ಗೋವಾದಲ್ಲಿ ಸಿಕ್ಕಿದ್ದಾನೆ ಎನ್ನಲಾಗಿದೆ.

ನಾಪತ್ತೆಯಾದ ನಿತೇಶ್‌ ಬೆಳ್ಚಾಡ  ಪತ್ತೆ Read More »

ನಾಲ್ಕನೇ ವಾರಕ್ಕೆ ದಾಪುಗಾಲಿಟ್ಟ ಭಾವ ತೀರ ಯಾನ | ಇಂದು ಸಂಜೆ 7:15ಕ್ಕೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ನಿರ್ದೇಶಕ ಮಯೂರ ಅಂಬೆಕಲ್ಲು ಹಾಗೂ ಕಿರಣ್‍ ತೇಜಸ್‍ ನಿರ್ದೇಶನದಲ್ಲಿ ಮೂಡಿಬಂದ “ಭಾವ ತೀರ ಯಾನ” ಚಲನಚಿತ್ರ ಇಂದಿಗೆ ನಾಲ್ಕನೇ ವಾರಕ್ಕೆ ಕಾಲಿರಿಸಿದೆ. ಪುತ್ತೂರಿನ ಭಾರತ್ ಸಿನಿಮಾನ್ ನಲ್ಲಿ ನಿರಂತರ ಪ್ರದರ್ಶನ ಕಾಣುತ್ತಿದ್ದು ಮಾ.14 (ಇಂದು) ರಂದು ಸಂಜೆ 7.15 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ. ಕೌಂಟರ್‌ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show Appನಲ್ಲಿ ticketಗಳನ್ನು ಕಾಯ್ದಿರಿಸಿಕೊಳ್ಳಬಹುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.

ನಾಲ್ಕನೇ ವಾರಕ್ಕೆ ದಾಪುಗಾಲಿಟ್ಟ ಭಾವ ತೀರ ಯಾನ | ಇಂದು ಸಂಜೆ 7:15ಕ್ಕೆ ಚಿತ್ರ ಪ್ರದರ್ಶನ Read More »

ವಿದ್ಯಾರ್ಥಿಗಳಿಗೆ ಭಗವದ್ಗೀತೆ ಪುಸ್ತಕ ವಿತರಣೆ

 ಸೂರ್ಯ ಚೈತನ್ಯ ಪ್ರೌಢಶಾಲೆ ಕುತ್ಯಾರು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪೋಷಕರ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಬ್ರಹ್ಮಾವರದ ಸುಧಾಕರ ಎಂಬವರು ನೀಡಿದ ಭಗವದ್ಗೀತೆಯ ಪುಸ್ತಕಗಳನ್ನು ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ದಿವಾಕರ ಆಚಾರ್ಯ ಗೇರುಕಟ್ಟೆ ವಿತರಿಸಿದರು. ಎಸ್ ಎಸ್ ಎಲ್ ಸಿ ಪರೀಕ್ಷೆಯ ಅಂತಿಮ ಸಿದ್ಧತೆಯಲ್ಲಿರುವ ಸಂದರ್ಭದಲ್ಲಿ ಭಗವದ್ಗೀತೆ ಪುಸ್ತಕವು ವಿದ್ಯಾರ್ಥಿಗಳಿಗೆ ಹೊಸ ಚೈತನ್ಯವನ್ನು ನೀಡಲಿದೆ ಎಂದರು.  ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಸುಧಾಕರ ಇವರು  ಶ್ರೀ ಕೃಷ್ಣನ  ಪರಮ ಭಕ್ತರಾಗಿದ್ದು ಹಲವು ವರ್ಷಗಳಿಂದ ಈ ರೀತಿಯ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ.

ವಿದ್ಯಾರ್ಥಿಗಳಿಗೆ ಭಗವದ್ಗೀತೆ ಪುಸ್ತಕ ವಿತರಣೆ Read More »

ಕಡೇಶಿವಾಲಯ ಸರ್ಕಾರಿ ಪ್ರೌಢ ಶಾಲೆಯ ರಂಗ ಮಂದಿರ ನಿರ್ಮಾಣ ಕಾಮಗಾರಿಗೆ ಅನುದಾನ ಮಂಜೂರಾತಿ ಪತ್ರ ಹಸ್ತಾಂತರ

ಉಪ್ಪಿನಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವಿಟ್ಲ, ಪೆರ್ನೆ ವಲಯದ ಕಡೇಶಿವಾಲಯ ಸರ್ಕಾರಿ ಪ್ರೌಢ ಶಾಲೆಯ ರಂಗ ಮಂದಿರ ನಿರ್ಮಾಣ ಕಾಮಗಾರಿಗೆ ಶ್ರೀ ಕ್ಷೇತ್ರದಿಂದ ಮಂಜೂರಾಗಿರುವ ರೂ.1,00,000/- ಅನುದಾನದ ಮಂಜೂರಾತಿ ಪತ್ರವನ್ನು ನೀಡಲಾಯಿತು. ವಿಟ್ಲ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಯಾದ ರಮೇಶ್  ರೂ.1,00,000/- ಅನುದಾನದ ಮಂಜೂರಾತಿ ಪತ್ರವನ್ನು ಶಾಲಾ ಶಿಕ್ಷಕರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ರಾವ್, ಸದಸ್ಯೆ ನಳಿನಾಕ್ಷಿ,

ಕಡೇಶಿವಾಲಯ ಸರ್ಕಾರಿ ಪ್ರೌಢ ಶಾಲೆಯ ರಂಗ ಮಂದಿರ ನಿರ್ಮಾಣ ಕಾಮಗಾರಿಗೆ ಅನುದಾನ ಮಂಜೂರಾತಿ ಪತ್ರ ಹಸ್ತಾಂತರ Read More »

ಹಿಂದೂ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಬಾಲಕ | ಬಿಜೆಪಿ ಮುಖಂಡರಿಂದ ಸೂಕ್ತ ಕ್ರಮಕ್ಕೆ ಆಗ್ರಹ

ಪುತ್ತೂರು : ಅನ್ಯಕೋಮಿನ ಅಪ್ರಾಪ್ತ ಯುವಕನೋರ್ವ ಹಿಂದೂ ಯುವತಿಗೆ ಅಸಹ್ಯ ರೀತಿ ನಡೆದುಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ. ಈ ವೇಳೆ  ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಲಾಗಿದೆ. ಮಾಜಿ ಶಾಸಕ ಸಂಜೀವ ಮಠಂದೂರು ,ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಮುರುಳಿಕೃಷ್ಣ ಹಂಸತಡ್ಕ ಸಹಿತ ಹಲವು ಬಿಜೆಪಿ ಮುಖಂಡರು, ಹಿಂದೂ ಪರ ಸಂಘಟನೆ ಕಾರ್ಯಕರ್ತರು ಠಾಣೆಗೆ ಬೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಹಿಂದೂ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಬಾಲಕ | ಬಿಜೆಪಿ ಮುಖಂಡರಿಂದ ಸೂಕ್ತ ಕ್ರಮಕ್ಕೆ ಆಗ್ರಹ Read More »

ಸರಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.10 ಮೀಸಲಾತಿ?

ಮೀಸಲಾತಿಯನ್ನು ಶೇ.10ಕ್ಕೆ ಹೆಚ್ಚಿಸಲು ಸಚಿವ ಜಮೀರ್‌ ಸೂಚನೆ ಬೆಂಗಳೂರು : ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಮರಿಎಗ ಸರಕಾರಿ ಗುತ್ತಿಗೆಯಲ್ಲಿ ಶೆ.4 ಮೀಸಲಾತಿ ಒದಗಿಸಲು ಅವಕಾಶ ಮಾಡಿಕೊಟ್ಟ ಬೆನ್ನಲ್ಲೆ ಈಗ ಈ ಮೀಸಲಾತಿಯನ್ನು ಶೇ.10ಕ್ಕೆ ಹೆಚ್ಚಸಿಲು ಸದ್ದಿಲ್ಲದೆ ಪ್ರಯತ್ನ ನಡೆದಿದೆ. ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆಯಲ್ಲಿ ಶೇ.4 ಮೀಸಲಾತಿ ಘೋಷಣೆಯಾದ ಬೆನ್ನಲ್ಲೆ ಈಗ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ.10ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಸಂಬಂಧ ಕ್ರಮ ವಹಿಸುವಂತೆ ಸಚಿವ ಜಮೀರ್ ಅಹ್ಮದ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಮುಸ್ಲಿಮರ ಮೀಸಲಾತಿಯನ್ನು ಶೇ.10ಕ್ಕೆ ಹೆಚ್ಚಿಸುವಂತೆ

ಸರಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.10 ಮೀಸಲಾತಿ? Read More »

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ರನ್ಯಾ ಜೊತೆ ಸಿದ್ದರಾಮಯ್ಯ, ಪರಮೇಶ್ವರ್‌ ಇರುವ ಫೋಟೊ ಹಾಕಿ ಕಾಲೆಳೆದ ಬಿಜೆಪಿ

ಸಿಐಡಿ ತನಿಖೆ ದಿಢೀರ್‌ ಹಿಂದೆಗೆದುಕೊಂಡ ಕುರಿತು ನಾನಾ ಅನುಮಾನ ಬೆಂಗಳೂರು : ಕನ್ನಡ ಚಿತ್ರನಟಿ ರನ್ಯಾ ರಾವ್‌ ಗೋಲ್ಡ್ ಸ್ಮಗ್ಲಿಂಗ್‌ ಕೇಸ್‌ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದೆ. ಇಬ್ಬರ ಸಚಿವರ ಹೆಸರು ಈ ಪ್ರಕರಣದಲ್ಲಿ ತುಳುಕು ಹಾಕುತ್ತಿರುವ ಬೆನ್ನಲ್ಲೆ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಒಂದು ಫೋಟೊ ಕಾಂಗ್ರೆಸ್‌ನ ಆಕ್ರೋಶಕ್ಕೆ ಕಾರಣವಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರ್‌ ಆರೋಪಿ ರನ್ಯಾ ರಾವ್‌ ಜೊತೆ ಇರುವ ಫೋಟೊವನ್ನು ಬಿಜೆಪಿಯ ಸೋಷಿಯಲ್‌ ಮೀಡಿಯಾ ವಿಭಾಗ ಅಪ್‌ಲೋಡ್‌ ಮಾಡಿ

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ರನ್ಯಾ ಜೊತೆ ಸಿದ್ದರಾಮಯ್ಯ, ಪರಮೇಶ್ವರ್‌ ಇರುವ ಫೋಟೊ ಹಾಕಿ ಕಾಲೆಳೆದ ಬಿಜೆಪಿ Read More »

ಇನ್ನು ದೇವಳಗಳ ರೂಮ್‌ ಮಾಹಿತಿ ವೆಬ್‌ಸೈಟಿನಲ್ಲಿ ಲಭ್ಯ

ಭಕ್ತರ ಅನುಕೂಲಕ್ಕಾಗಿ 400 ದೇವಸ್ಥಾನ, ಛತ್ರಗಳ ಮಾಹಿತಿ ಅಪ್‌ಲೋಡ್‌ ಬೆಂಗಳೂರು: ಮುಜರಾಯಿ ಇಲಾಖೆ ಅಧೀನದಲ್ಲಿರುವ ರಾಜ್ಯದ ದೇವಾಲಯಗಳು ಮತ್ತು ಹೊರರಾಜ್ಯಗಳ ಛತ್ರಗಳಲ್ಲಿ ಲಭ್ಯವಿರುವ ಕೊಠಡಿಗಳ ಮಾಹಿತಿ ಇನ್ನು ವೆಬ್‌ಸೈಟಿನಲ್ಲಿ ಸಿಗಲಿದೆ. ಹಬ್ಬ, ಹರಿದಿನಗಳಂದು ಜನ ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳಿಗೆ ತೆರಳುತ್ತಾರೆ. ಈ ವೇಳೆ ದೇವಸ್ಥಾನ ಪರಿಸರದಲ್ಲಿ ಉಳಿದುಕೊಳ್ಳಲು ಕೊಠಡಿ ಸಿಗುವುದಿಲ್ಲ. ಈ ಸಮಸ್ಯೆ ಬಗೆಹರಿಸಲು ವೆಬ್‌ಸೈಟ್‌ನಲ್ಲಿ ಕೊಠಡಿಗಳ ಮಾಹಿತಿ ನೀಡಲು ಮುಜರಾಯಿ ಇಲಾಖೆ ನಿರ್ಧರಿಸಿದೆ.ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಜರಾಯಿ ಹಾಗೂ ಧಾರ್ಮಿಕ ಧತ್ತಿ ಇಲಾಖೆಗೆ

ಇನ್ನು ದೇವಳಗಳ ರೂಮ್‌ ಮಾಹಿತಿ ವೆಬ್‌ಸೈಟಿನಲ್ಲಿ ಲಭ್ಯ Read More »

error: Content is protected !!
Scroll to Top