ಬೀದರ್ನಲ್ಲಿ 13 ಸಾವಿರ ಎಕರೆಗೂ ಅಧಿಕ ಜಮೀನು ವಕ್ಫ್ ಪಾಲು | ಐತಿಹಾಸಿಕ ಸ್ಮಾರಕ, ಪ್ರವಾಸಿ ತಾಣ, ಸರ್ಕಾರಿ ಆಸ್ಪತ್ರೆಯೂ ವಕ್ಫ್ ಗೆ
ಬೆಂಗಳೂರು: ವಿಜಯಪುರದ ಬಳಿಕ ಈಗ ವಚನಕಾರ ಬಸವಣ್ಣನವರ ಕರ್ಮಭೂಮಿ ಎಂದೇ ಅರಿಯಲ್ಪಡುವ ಬೀದರ್ನಲ್ಲೂ ಸಾವಿರಾರು ಎಕರೆ ಭೂಮಿ ವಕ್ಫ್ ಕಬಳಿಸಿರುವುದು ಬಹಿರಂಗವಾಗಿದೆ. ಬೀದರ್ನಲ್ಲಿ ಬರೋಬ್ಬರಿ 13,295 ಎಕರೆ ಭೂಮಿ ವಕ್ಫ್ ಪಾಲಾಗಿದೆ. ತಲೆತಲಾಂತರಗಳಿಂದ ಕೃಷಿ ಮಾಡುತ್ತಿದ್ದ ಸಾವಿರಾರು ಎಕರೆ ರೈತರ ಜಮೀನಿನಲ್ಲಿ ವಕ್ಫ್ ಹೆಸರು ಸೇರಿಕೊಂಡಿದೆ. 13,295 ಎಕರೆ ಜಮೀನು ತನ್ನದು ಎಂದು ವಕ್ಫ್ ಬೋರ್ಡ್ ಅಧಿಕೃತ ದಾಖಲೆಯನ್ನು ನೀಡಿದೆ. ಐತಿಹಾಸಿಕ ಸ್ಮಾರಕಗಳು, ಪ್ರವಾಸಿ ತಾಣಗಳು, ಗ್ರಾಮಕ್ಕೆ ಗ್ರಾಮ, ಸರ್ಕಾರಿ ಆಸ್ಪತ್ರೆ, ಸಹಸ್ರಾರು ರೈತರ ಫಲವತ್ತಾದ ಕೃಷಿ […]










