ಸುದ್ದಿ

ಮೂರನೇ ತಲೆಮಾರಿಗೂ ಮುಂದುವರಿದ ಎಂಡೋಸಲ್ಫಾನ್‌ ದುಷ್ಪರಿಣಾಮ

ಹೊಸದಾಗಿ 543 ಜನರಲ್ಲಿ ಎಂಡೋಸಲ್ಫಾನ್‌ ಅಂಶ ಪತ್ತೆ ಬೆಂಗಳೂರು: ಕರಾವಳಿ ಭಾಗದಲ್ಲಿ ಕಳೆದ ಹಲವು ದಶಕಗಳಿಂದ ಜನರ ಜೀವ ಹಿಂಡುತ್ತಿರುವ ಎಂಡೋಸಲ್ಫಾನ್ ಕ್ರಿಮಿನಾಶಕದ ಪರಿಣಾಮ ಮೂರನೇ ತಲೆಮಾರಿನ ತನಕ ಮುಂದುವರಿದುಕೊಂಡು ಬಂದಿರುವ ಆಘಾತಕಾರಿ ಅಂಶ ಪತ್ತೆಯಾಗಿದೆ. ಎಂಡೋಸಲ್ಫಾನ್‌ ಸಿಂಪಡಣೆಯಿಂದ ಜನರ ವಂಶವಾಹಿಯ ಮೇಲೆ ಪರಿಣಾಮವಾಗಿದ್ದು, ಹುಟ್ಟುವ ಮಕ್ಕಳು ಕೂಡ ಅಂಗವೈಕಲ್ಯಕ್ಕೊಳಗಾಗಿದ್ದರು. ಜನರ ಜೀವವನ್ನೇ ಹಿಂಡುತಿದ್ದ ರೋಗ ಈಗ 3ನೇ ತಲೆಮಾರಿಗೂ ಹಬ್ಬಿದೆ. ಹೊಸದಾಗಿ 543 ಜನರಿಗೆ ಎಂಡೋಸಲ್ಫಾನ್ ಅಂಶ ಇರುವುದು ಪತ್ತೆಯಾಗಿದೆ. ಒಂದೆಡೆ ಅಂಗವೈಕಲ್ಯದಿಂದ ನೋವು ಅನುಭವಿಸುತ್ತಿರುವ […]

ಮೂರನೇ ತಲೆಮಾರಿಗೂ ಮುಂದುವರಿದ ಎಂಡೋಸಲ್ಫಾನ್‌ ದುಷ್ಪರಿಣಾಮ Read More »

ಕುಖ್ಯಾತ ದಂಡುಪಾಳ್ಯ ಗ್ಯಾಂಗಿನ ಸದಸ್ಯ 29 ವರ್ಷಗಳ ಬಳಿಕ ಸೆರೆ

1997ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ಕೊಲೆ, ದರೋಡೆ ಕೃತ್ಯದ ಆರೋಪಿ ಮಂಗಳೂರು : ಕುಖ್ಯಾತ ದಂಡುಪಾಳ್ಯ ಗ್ಯಾಂಗಿನ ಓರ್ವ ಸದಸ್ಯನನ್ನು ಮಂಗಳೂರು ಪೊಲೀಸರು ಬರೋಬ್ಬರಿ 29 ವರ್ಷಗಳ ಬಳಿಕ ಬಂಧಿಸಿದ್ದಾರೆ. ಮಂಗಳೂರಿನ ಉರ್ವ ಪೊಲೀಸರು ಕಾರ್ಯಾಚರಣೆ ನಡೆಸಿ ಸುಮಾರು 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಚಿಕ್ಕ ಹನುಮ ಅಲಿಯಾಸ್​ ಚಿಕ್ಕ ಹನುಮಂತಪ್ಪನನ್ನು ಆಂಧ್ರ ಪ್ರದೇಶದಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ. ಬಂಧಿತನ ವಿರುದ್ಧ ಈವರೆಗೆ ರಾಜ್ಯದಲ್ಲಿ ಸುಮಾರು 13 ಕೊಲೆ, ದರೋಡೆ ಪ್ರಕರಣಗಳು ದಾಖಲಾಗಿವೆ. 1997 ಅಕ್ಟೋಬರ್​​ 11ರಂದು ಉರ್ವ ಮಾರಿಗುಡಿ ಕ್ರಾಸ್

ಕುಖ್ಯಾತ ದಂಡುಪಾಳ್ಯ ಗ್ಯಾಂಗಿನ ಸದಸ್ಯ 29 ವರ್ಷಗಳ ಬಳಿಕ ಸೆರೆ Read More »

ಅಕ್ರಮ ವಲಸಿಗರ ಪತ್ತೆ ಕಾರ್ಯ : ಪುನೀತ್‌ ಕೆರೆಹಳ್ಳಿ ಮತ್ತೆ ಬಂಧನ

ಒಂದೇ ವಾರದಲ್ಲಿ ಎರಡನೇ ಸಲ ಬಂಧಿಸಿದ ಪೊಲೀಸರು ಬೆಂಗಳೂರು: ಅಕ್ರಮ ಬಾಂಗ್ಲಾದೇಶ ವಲಸಿಗರ ಪತ್ತೆ ಕಾರ್ಯಾಚರಣೆ ಮಾಡುತ್ತಿರುವ ರಾಷ್ಟ್ರ ರಕ್ಷಣಾ ಪಡೆಯ ಮುಖಂಡ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಾಪುರದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಇದ್ದಾರೆ ಎಂಬ ಆರೋಪದ ಹಿನ್ನೆಲೆ ಪುನೀತ್ ಕೆರೆಹಳ್ಳಿ ಅಲ್ಲಿಗೆ ತೆರಳಿದ್ದರು. ಹಸನ್ ಎಂಬಾತ ಅಕ್ರಮ ಬಾಂಗ್ಲಾ ವಲಸಿಗ ಎಂದು ಪುನೀತ್ ಕೆರೆಹಳ್ಳಿ ಆರೋಪಿಸಿದ್ದಲ್ಲದೆ, ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು

ಅಕ್ರಮ ವಲಸಿಗರ ಪತ್ತೆ ಕಾರ್ಯ : ಪುನೀತ್‌ ಕೆರೆಹಳ್ಳಿ ಮತ್ತೆ ಬಂಧನ Read More »

ಕೆಲಸ ಹುಡುಕಿ ಹೋಗಿದ್ದ ಯುವತಿಯ ಕೊಲೆ: ಆಕೆಯ ಪ್ರಿಯಕರನೇ ಆರೋಪಿ

ಧಾರವಾಡ: ಕೆಲಸ ಹುಡುಕಿ ಜ. 19 ರಂದು ಮನೆಯಿಂದ ಹೋಗಿದ್ದ ಯುವತಿ ಝಕಿಯಾ ಮುಲ್ಲ(19) ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಆಕೆಯ ಪ್ರಿಯಕರ ಸಾಬೀರ್ ಮುಲ್ಲಾ‌ನೇ ಶಾಲಿನಿಂದ ಕತ್ತು ಹಿಸುಕಿ, ಕೊಲೆ ನಡೆಸಿದ್ದಾಗಿ ತಿಳಿದು ಬಂದಿದೆ. ಝಕಿಯಾ ಮತ್ತು ಸಾಬೀರ್ ಸಂಬಂಧಿಗಳಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಮದುವೆಗೆ ಮನೆಯವರು ಸಹ ಒಪ್ಪಿದ್ದು, ಮುಂದಿನ ತಿಂಗಳು ನಿಶ್ಚಿತಾರ್ಥ ನಡೆಸುವುದಕ್ಕೂ ಚಿಂತನೆ ನಡೆಸಿದ್ದರು. ಜ. 20 ರಂದು ಆತನ ಜೊತೆ ಆಕೆ ಸುತ್ತಾಡಲು ಹೋಗಿದ್ದಾಳೆ. ಈ ವೇಳೆ ಮದುವೆಗೆ ಸಂಬಂಧಿಸಿದ

ಕೆಲಸ ಹುಡುಕಿ ಹೋಗಿದ್ದ ಯುವತಿಯ ಕೊಲೆ: ಆಕೆಯ ಪ್ರಿಯಕರನೇ ಆರೋಪಿ Read More »

ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್

ಪುತ್ತೂರು: ಹಿಂದೂ ನಾಯಕ, RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿಗೆ ‌ಸಂಬಂಧಿಸಿದ ಹಾಗೆ ಮಹತ್ವದ ಆದೇಶವೊಂದನ್ನು ಹೈ ಕೋರ್ಟ್ ನೀಡಿದೆ. ಈ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆದಿದ್ದು, ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಯಾವುದೇ ಬಲವಂತದ ಅಥವಾ ಒತ್ತಡದ ಕ್ರಮ ತೆಗೆದುಕೊಳ್ಳದಂತೆ ಆದೇಶಿಸಿದೆ. ಈ ಸಂಬಂಧದ ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗಿದ್ದು, ಪ್ರಭಾಕರ ಭಟ್

ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್ Read More »

ರೈಲಿನ ಶೌಚಾಲಯ ಲಾಕ್ ಮಾಡಿ, ಎರಡು ಗಂಟೆ ಒಳ ಸೇರಿದ ಜೋಡಿ: ಸಾರ್ವಜನಿಕರಿಂದ ತರಾಟೆ

ನವದೆಹಲಿ: ರೈಲಿನ ಶೌಚಾಲಯದೊಳಗೆ ಸೇರಿಕೊಂಡ ಲಾಕ್ ಮಾಡಿ ಜೋಡಿಯೊಂದು ಎರಡು ಗಂಟೆಗೂ ಅಧಿಕ ಕಾಲ ಅದರೊಳಗೆ ಕಳೆದು ಬೇರೆ ಪ್ರಯಾಣಿಕರ ಆಕ್ರೋಶಕ್ಕೆ ತುತ್ತಾದ ಘಟನೆ ನಡೆದಿದ್ದು, ಈ ಬಗ್ಗೆ ಪ್ರಶ್ನೆ ಮಾಡಿದಾಗ ಯುವತಿ ನೀಡಿದ ಹಾರಿಕೆಯ ಉತ್ತರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಕೆಂಗಣ್ಣಿಗೂ ತುತ್ತಾಗಿದೆೆ. ಎರಡು ಗಂಟೆಯ ಬಳಿಕ ಶೌಚಾಲಯದಿಂದ ಹೊರ ಬಂದ ಜೋಡಿಯನ್ನು ಸಹ ಪ್ರಯಾಣಿಕರು ಪ್ರಶ್ನಿಸಿದ್ದು, ಈ ವೇಳೆ ಯುವತಿ ನನ್ನ ಇಷ್ಟ. ಯಾರನ್ನು ಒಳಗೆ ಕರೆದುಕೊಂಡು ಹೋಗಬೇಕು ಎನ್ನುವುದು

ರೈಲಿನ ಶೌಚಾಲಯ ಲಾಕ್ ಮಾಡಿ, ಎರಡು ಗಂಟೆ ಒಳ ಸೇರಿದ ಜೋಡಿ: ಸಾರ್ವಜನಿಕರಿಂದ ತರಾಟೆ Read More »

ಭಾಷಣ ಮಾಡದೆ ತೆರಳಿದ ರಾಜ್ಯಪಾಲರು : ವಿಧಾನ ಸಭೆಯಲ್ಲಿ ಹೈಡ್ರಾಮಾ

ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿ ರಾಜ್ಯಪಾಲರ ಭಾಷಣವಿಲ್ಲದೆ ಕಲಾಪ ಬೆಂಗಳೂರು: ನಿರೀಕ್ಷೆಯಂತೆಯೇ ವಿಧಾನ ಮಂಡಲದಲ್ಲಿಂದು ಹೈಡ್ರಾಮಾ ನಡೆದಿದೆ. ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅಧಿವೇಶನಕ್ಕೆ ಜಂಟಿ ಭಾಷಣ ಮಾಡುವ ಉದ್ದೇಶದಿಂದ ಬಂದರೂ ಆರಂಭದ ಕೆಲವು ಸಾಲನ್ನು ಹೇಳಿ ಸದನದಿಂದ ಹೊರ ನಡೆದಿದ್ದಾರೆ. ರಾಜ್ಯಪಾಲರು ಹೊರನಡೆಯುತ್ತಿದ್ದಂತೆ ಆಡಳಿತ ಪಕ್ಷದ ಶಾಸಕರು ಭಾರೀ ವಿರೋಧ ವ್ಯಕ್ತಪಡಿಸಿ ಧಿಕ್ಕಾರ ಕೂಗಲು ಆರಂಭಿಸಿದರು. ಆಡಳಿತ ಸದಸ್ಯರ ವಿರೋಧದ ನಡುವೆಯೂ ರಾಜ್ಯಪಾಲರು ವಿಧಾನಸೌಧದಿಂದ ಹೊರನಡೆದರು. ಇದೇ ಮೊದಲ ಬಾರಿಗೆ ರಾಜ್ಯದ ಅಧಿವೇಶನ ಇತಿಹಾಸದಲ್ಲಿ ರಾಜ್ಯಪಾಲರು ಭಾಷಣ

ಭಾಷಣ ಮಾಡದೆ ತೆರಳಿದ ರಾಜ್ಯಪಾಲರು : ವಿಧಾನ ಸಭೆಯಲ್ಲಿ ಹೈಡ್ರಾಮಾ Read More »

ದೇವಸ್ಥಾನಗಳಲ್ಲಿ ಕೇಸರಿ ಧ್ವಜ ಹಾಕಬೇಡಿ ಎಂದ ರಮಾನಾಥ ರೈ ಹೇಳಿಕೆಗೆ ಭಾರಿ ವಿರೋಧ

ಎಸ್‌ಡಿಪಿಐ ಓಲೈಸಲು ಹಿಂದೂ ವಿರೋಧಿ ಹೇಳಿಕೆ ಎಂದು ಟೀಕೆ ಮಂಗಳೂರು : ದೇವಸ್ಥಾನಗಳು ಎಲ್ಲರೂ ಹೋಗುವ ಜಾಗ ಅಲ್ಲಿ ಕೇಸರಿ ಧ್ವಜ ಸೇರಿದಂತೆ ಯಾವುದೇ ಧ್ವಜ ಹಾರಿಸಬಾರದು ಎಂದಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ಸಿನ ಹಿರಿಯ ನಾಯಕ ರಮಾನಾಥ ರೈಯವರ ಹೇಳಿಕೆ ವಿವಾದದ ಕಿಡಿ ಹೊತ್ತಿಸಿದೆ.ಅವರು ನೀಡಿದ ಹೇಳಿಕೆ ಹಿಂದೂ ನಾಯಕರನ್ನು ಕೇರಳಿಸಿದೆ. ಬುಧವಾರ ಮಂಗಳೂರಿನಲ್ಲಿ ಕಾಂಗ್ರೆಸ್‌ ವತಿಯಿಂದ ಮನರೇಗ ಯೋಜನೆಯ ಹೆಸರು ಬದಲಾವಣೆ ವಿರುದ್ಧ ನಡೆದ ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿದ ರಮಾನಾಥ ರೈ

ದೇವಸ್ಥಾನಗಳಲ್ಲಿ ಕೇಸರಿ ಧ್ವಜ ಹಾಕಬೇಡಿ ಎಂದ ರಮಾನಾಥ ರೈ ಹೇಳಿಕೆಗೆ ಭಾರಿ ವಿರೋಧ Read More »

ಮಾಲ್‌ನಲ್ಲಿ ಅಗ್ನಿ ಅವಘಡ : ಒಂದೇ ಮಳಿಗೆಯೊಳಗೆ 30 ಮೃತದೇಹ ಪತ್ತೆ

ಭೀಕರ ಬೆಂಕಿ ದುರಂತದಲ್ಲಿ 100ಕ್ಕೂ ಅಧಿಕ ಜನರು ಸಾವಿಗೀಡಾಗಿರುವ ಶಂಕೆ ಇಸ್ಲಾಮಾಬಾದ್‌: ಕರಾಚಿಯ ಭೂಗತ ಜಗತ್ತಿನ ಪಾತಕಿ ದಾವೂದ್‌ ಇಬ್ರಾಹಿಂ ಒಡೆತನದ ಗುಲ್ ಪ್ಲಾಜಾ ಶಾಪಿಂಗ್‌ ಮಾಲ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. ಪರಿಶೀಲನೆ ವೇಳೆ ಒಂದೇ ಮಳಿಗೆಯಲ್ಲಿ 30 ಶವಗಳು ಪತ್ತೆಯಾಗಿದ್ದು, ಒಟ್ಟು ಸಾವು 100 ಮೀರಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಪಾಕಿಸ್ತಾನದ ʻಮನಿ ಕ್ಯಾಪಿಟಲ್‌ʼ ಅಂತಲೇ ಫೇಮಸ್‌ ಆಗಿರುವ ಕರಾಚಿ ಸದರ್‌ ಪ್ರದೇಶದಲ್ಲಿರುವ ಗುಲ್‌ ಶಾಪಿಂಗ್‌ ಮಾಲ್‌ನ ನೆಲಮಾಳಿಗೆಯಲ್ಲಿ ಜ.17

ಮಾಲ್‌ನಲ್ಲಿ ಅಗ್ನಿ ಅವಘಡ : ಒಂದೇ ಮಳಿಗೆಯೊಳಗೆ 30 ಮೃತದೇಹ ಪತ್ತೆ Read More »

ಖ್ಯಾತ ಸ್ವಾಮೀಜಿಯನ್ನು ಬ್ಲ್ಯಾಕ್‌ಮೇಲ್‌ ಮಾಡಿ 1 ಕೋ.ರೂ.ಗೆ ಬೇಡಿಕೆ : ಮಹಿಳೆ ಸೆರೆ

ಫೋನಿನಲ್ಲಿ ಪರಿಚಯಮಾಡಿಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಮಹಿಳೆ ಬೆಂಗಳೂರು : ರಾಜ್ಯದ ಪ್ರತಿಷ್ಠಿತ ಮಠದ ಸ್ವಾಮೀಜಿಯೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ಚಿಕ್ಕಮಗಳೂರು ಮೂಲದ ಸ್ಫೂರ್ತಿ ಎಂಬ ಮಹಿಳೆಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸ್ವಾಮೀಜಿಯಿಂದ ಈಗಾಗಲೇ 4.5 ಲಕ್ಷ ರೂ. ವಸೂಲಿ ಮಾಡಿದ್ದ ಮಹಿಳೆ ಮತ್ತೆ 1 ಕೋಟಿ ರೂ. ನೀಡುವಂತೆ ಒತ್ತಡ ಹೇರಿದ್ದಳು ಎನ್ನಲಾಗಿದೆ. ಐದು ತಿಂಗಳ ಹಿಂದೆ ಸ್ವಾಮೀಜಿಗೆ ಕರೆ ಮಾಡಿದ ಸ್ಫೂರ್ತಿ, ತಿಪಟೂರಿನಲ್ಲಿ ವ್ಯಾಸಂಗ ಮಾಡಿದ್ದೇನೆ ಎಂದು ಪರಿಚಯಿಸಿಕೊಂಡಿದ್ದಳು.

ಖ್ಯಾತ ಸ್ವಾಮೀಜಿಯನ್ನು ಬ್ಲ್ಯಾಕ್‌ಮೇಲ್‌ ಮಾಡಿ 1 ಕೋ.ರೂ.ಗೆ ಬೇಡಿಕೆ : ಮಹಿಳೆ ಸೆರೆ Read More »

error: Content is protected !!
Scroll to Top