ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ | ಇಂದು ರಾತ್ರಿ ವಿಜ್ರಂಭಣೆಯಿಂದ ನೆರವೇರಲಿದೆ ಬ್ರಹ್ಮರಥೋತ್ಸವ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಕಳೆದ ಎಂಟು ದಿನಗಳಿಂದ ವೈಭವದಿಂದ ನಡೆಯುತ್ತಿದ್ದು, ಇಂದು ರಾತ್ರಿ ವೈಭವದ ಬ್ರಹ್ಮರಥೋತ್ಸವ ನಡೆಯಲಿದೆ. ಸಂಜೆ ಶ್ರಿ ದೇವಸ್ಥಾನದ ಒಳ ಹಾಗೂ ಹೊರಾಂಗಣದಲ್ಲಿ ಶ್ರೀ ದೇವರ ಬಲಿ ಉತ್ಸವ ನಡೆದು, ಬಳಿಕ ಶ್ರೀ ದೇವರು ರಥಬೀದಿಗೆ ಬರುವರು. ಆನಂತರ ಶ್ರೀ ಮಹಾಲಿಂಗೇಶ್ವರ ದೇವರು ರಥಾರೋಢರಾಗುವರು. ಈ ಹೊತ್ತಿನಲ್ಲಿ ಸಿಡಿಮದ್ದು ಪ್ರದರ್ಶನ ಪ್ರಾರಂಭಗೊಂಡು ಸುಮಾರು ಒಂದೂವರೆ ಗಂಟೆಗಳ ಕಾಲ ಸಿಡಿಮದ್ದು ಪ್ರದರ್ಶನ ನಡೆದ ಬಳಿಕ ಸಾವಿರಾರು ಭಕ್ತಾದಿಗಳ ಕೈಗಳ ಜಯಘೋಷಗಳೊಂದಿಗೆ ಬ್ರಹ್ಮರಥವನ್ನು ಎಳೆಯುತ್ತಾರೆ. […]