ಸುದ್ದಿ

ಬಿಪಿಎಲ್‌ ಕಾರ್ಡ್‌ ರದ್ದು ಮಾಡದಂತೆ ಸಿದ್ದರಾಮಯ್ಯ ಆದೇಶ

ಈಗಾಗಲೇ ರದ್ದಾಗಿರುವ ಕಾರ್ಡ್‌ಗಳನ್ನು ಸರಿಮಾಡಿಕೊಡಲು ಸೂಚನೆ ಬೆಂಗಳೂರು : ಬಿಪಿಎಲ್ ಕಾರ್ಡ್ ರದ್ದಾಗುತ್ತಿರುವ ವಿಚಾರ ತೀವ್ರ ಆಕ್ರೋಶಕ್ಕೆ ಗುರಿಯಾಗುತ್ತಿದ್ದಂತೆ ಎಚ್ಚೆತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಬಿಪಿಎಲ್‌ ಕಾರ್ಡ್‌ ರದ್ದು ಮಾಡಬಾರದು ಎಂದು ಆದೇಶ ಹೊರಡಿಸಿದ್ದಾರೆ.ಸುಮಾರು 11 ಲಕ್ಷ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡಿರುವ ಸರಕಾರದ ಕ್ರಮದ ವಿರುದ್ಧ ಸಾರ್ವಜನಿಕರು ಸಿಡಿದೆದ್ದಿದ್ದಾರೆ. ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವುದರಿಂದ ಎಚ್ಚೆತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ನೌಕರರು ಮತ್ತು ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಯಾರೊಬ್ಬರ ಬಿಪಿಎಲ್​ ಕಾರ್ಡ್​​ ರದ್ದು ಮಾಡದಂತೆ ಆಹಾರ […]

ಬಿಪಿಎಲ್‌ ಕಾರ್ಡ್‌ ರದ್ದು ಮಾಡದಂತೆ ಸಿದ್ದರಾಮಯ್ಯ ಆದೇಶ Read More »

ಹೇರ್‌ ಡ್ರೈರ್‌ ಸ್ಫೋಟಗೊಂಡು ಮಹಿಳೆಯ ಎರಡೂ ಕೈ ಛಿದ್ರ

ಆರ್ಡರ್‌ ಮಾಡದಿದ್ದರೂ ಕೊರಿಯರ್‌ನಲ್ಲಿ ಬಂದ ಹೇರ್‌ ಡ್ರೈಯರ್‌ ಬಗ್ಗೆ ಅನುಮಾನ ಬೆಂಗಳೂರು: ಕೊರಿಯರ್‌ನಲ್ಲಿ ಬಂದ ಹೇರ್ ಡ್ರೈಯರ್ ಕೇಯಲ್ಲೇ ಸ್ಫೋಟಗೊಂಡು ಮೃತ ಯೋಧರೊಬ್ಬರ ಪತ್ನಿಯ ಎರಡೂ ಕೈಗಳು ತುಂಡಾಗಿರುವ ದಾರುಣ ಘಟನೆ ಬಾಗಲಕೋಟೆಜಿಲ್ಲೆಯ ಇಳಕಲ್ ನಗರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.ಯೋಧ ದಿ.ಪಾಪಣ್ಣ ಎಂಬವರ ಪತ್ನಿ ಬಸಮ್ಮ ಯರನಾಳ ಅವರ ಎರಡೂ ಕೈಗಳು ತುಂಡಾಗಿವೆ. 2017ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಪಾಪಣ್ಣ ಮೃತಪಟ್ಟಿದ್ದರು. ಬಸಮ್ಮ ಅವರ ಸ್ನೇಹಿತೆ ಶಶಿಕಲಾ ಎಂಬವರ ಹೆಸರು, ನಂಬರ್ ಇದ್ದ ಪಾರ್ಸಲ್ ಕೊರಿಯರ್‌ನಲ್ಲಿ

ಹೇರ್‌ ಡ್ರೈರ್‌ ಸ್ಫೋಟಗೊಂಡು ಮಹಿಳೆಯ ಎರಡೂ ಕೈ ಛಿದ್ರ Read More »

ವಿಕ್ರಂ ಗೌಡನ ಹೆಂಡತಿಯೂ ನಕ್ಸಲ್‌ ನಾಯಕಿ

ಮೂರು ವರ್ಷಗಳಿಂದ ಕೇರಳದ ಜೈಲಿನಲ್ಲಿದ್ದಾಳೆ ವಿಕ್ರಂ ಗೌಡ ಪ್ರೀತಿಸಿ ಮದುವೆಯಾದ ನಕ್ಸಲ್‌ ಯುವತಿ ಕಾರ್ಕಳ : ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿರುವ ನಕ್ಸಲ್‌ ನಾಯಕ ವಿಕ್ರಂ ಗೌಡನ ಹೆಂಡತಿಯೂ ನಕ್ಸಲ್‌ ಆಗಿದ್ದು, ಪ್ರಸ್ತುತ ಜೈಲಿನಲ್ಲಿದ್ದಾಳೆ. ನಕ್ಸಲ್‌ ಸಂಘಟನೆಯಲ್ಲೇ ಇದ್ದ ಸಾವಿತ್ರಿ (38) ಎಂಬ ಯುವತಿಯನ್ನು ಪ್ರೀತಿಸಿ ವಿಕ್ರಂ ಗೌಡ ಮದುವೆಯಾಗಿದ್ದ. ಇಬ್ಬರೂ ಅನೇಕ ವರ್ಷ ಮಾವೋವಾದಿ ಚಟುವಟಿಕೆಗಳಲ್ಲಿ ಜೊತೆಯಾಗಿ ತೊಡಗಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ಈಕೆಯೂ ವಿಕ್ರಂ ಗೌಡನ ಊರಿನವಳೇ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಖಚಿತವಾದ ಮಾಹಿತಿಗಳು ಇಲ್ಲ.ಸಾವಿತ್ರಿ

ವಿಕ್ರಂ ಗೌಡನ ಹೆಂಡತಿಯೂ ನಕ್ಸಲ್‌ ನಾಯಕಿ Read More »

ಪಡಿತರ ಪಡೆಯಲು ಬಂದು ಖೆಡ್ಡಾಕ್ಕೆ ಬಿದ್ದ ವಿಕ್ರಮ್‌ ಗೌಡ

ಮೂರುದಿನಗಳಿಂದ ಹೊಂಚು ಹಾಕಿ ಕುಳಿತಿದ್ದ ಎನ್‌ಎನ್‌ಎಫ್‌ ಪಡೆ ಕಾರ್ಕಳ : ಹೆಬ್ರಿಯ ಕಬ್ಬಿನಾಲೆ ಸಮೀಪ ಪೀತಬೈಲು ಎಂಬಲ್ಲಿ ಸೋಮವಾರ ರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲ್‌ ನಾಯಕ ವಿಕ್ರಂ ಗೌಡ (44) ಹತನಾಗಿದ್ದಾನೆ. ಈ ಕಾರ್ಯಾಚರಣೆಯ ಒಂದೊಂದೇ ಮಾಹಿತಿ ಈಗ ಬಹಿರಂಗವಾಗುತ್ತಿದೆ. ನಕ್ಸಲರು ಪೀತಬೈಲಿನಲ್ಲಿರುವ ಮನೆಗಳಿಗೆ ಪಡಿತರ ಮತ್ತು ಹಣ ಪಡೆಯಲು ಬಂದು ಪೊಲೀಸರು ರಚಿಸಿದ್ದ ಖೆಡ್ಡಾಕ್ಕೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಈ ಭಾಗದಲ್ಲಿ ನಕ್ಸಲರ ಓಡಾಟ ಮರಳಿ ಶುರುವಾಗಿರುವ ಕುರಿತು ನಕ್ಸಲ್‌ ನಿಗ್ರಹ ಪಡೆಗೆ ಖಚಿತ ಸುಳಿವು

ಪಡಿತರ ಪಡೆಯಲು ಬಂದು ಖೆಡ್ಡಾಕ್ಕೆ ಬಿದ್ದ ವಿಕ್ರಮ್‌ ಗೌಡ Read More »

ಮಹಾರಾಷ್ಟ್ರ, ಜಾರ್ಖಂಡ್‌ ಮತದಾನ ಪ್ರಾರಂಭ

ಭಾರಿ ಪೈಪೋಟಿಗೆ ವೇದಿಕೆಯಾದ ಎರಡು ರಾಜ್ಯಗಳ ಚುನಾವಣೆ ಮುಂಬಯಿ : ಮಹಾರಾಷ್ಟ್ರದ ಎಲ್ಲ 288 ಮತ್ತು ಮತ್ತು ಜಾರ್ಖಂಡ್‌ನ ಎರಡನೇ ಹಂತದ ಚುನಾವಣೆ ಇಂದು ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಶುರುವಾಗಿದ್ದು, ಜನರು ಬೆಳಗ್ಗಿನಿಂದಲೇ ಉತ್ಸಾಹದಿಂದ ಮತಗಟ್ಟೆಯತ್ತ ಧಾವಿಸುತ್ತಿದ್ದಾರೆ. ಜೊತೆಗೆ ಉತ್ತರ ಪ್ರದೇಶ ಸೇರಿದಂತೆ ನಾಲ್ಕು ರಾಜ್ಯಗಳ 15 ವಿಧಾನಸಭಾ ಸ್ಥಾನಗಳಿಗೆ ಇಂದು ಉಪಚುನಾವಣೆಯೂ ನಡೆಯುತ್ತಿದೆ. ಮಹಾರಾಷ್ಟ್ರ ವಿಧಾನಸಭೆಯ ಎಲ್ಲಾ 288 ಸ್ಥಾನಗಳಿಗೆ ಮತ್ತು ಜಾರ್ಖಂಡ್‌ನ ಎರಡನೇ ಹಂತದ 38 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ.

ಮಹಾರಾಷ್ಟ್ರ, ಜಾರ್ಖಂಡ್‌ ಮತದಾನ ಪ್ರಾರಂಭ Read More »

ಮುಡಾ ಹಗರಣ : ರಾತ್ರಿ ತನಿಖಾಧಿಕಾರಿಯನ್ನು ಭೇಟಿಯಾದ ಸಿದ್ದರಾಮಯ್ಯ ಬಾಮೈದ

ನೋಟಿಸ್‌ ಇಲ್ಲದೆ ಲೋಕಾಯುಕ್ತ ಕಚೇರಿಗೆ ಬಂದಿರುವ ಹಿನ್ನೆಲೆಯಲ್ಲಿ ಹಲವು ಅನುಮಾನ ಮೈಸೂರು: ಮುಡಾ ಹಗರಣದಲ್ಲಿ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ನಿನ್ನೆ ರಾತ್ರಿ ಹಗರಣದ ತನಿಖೆ ನಡೆಸುತ್ತಿರುವ ಅಧಿಕಾರಿಯನ್ನು ನೋಟಿಸ್‌ ಇಲ್ಲದೆ ಭೇಟಿ ಮಾಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸೈಟ್‌ ಹಂಚಿಕೆ ಅಕ್ರಮದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಎಸ್‌ಪಿ ಟಿ.ಜೆ.ಉದೇಶ್ ಅವರನ್ನು ಸಿದ್ದರಾಮಯ್ಯ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ರಾತ್ರೋರಾತ್ರಿ ಭೇಟಿ ಮಾಡಿದ್ದಾರೆ. ಅವರನ್ನು ಲೋಕಾಯುಕ್ತರು ಭೇಟಿಗೆ ಕರೆದಿರಲಿಲ್ಲ ಎನ್ನಲಾಗಿದೆ.ಮಂಗಳವಾರ ಮುಡಾದ

ಮುಡಾ ಹಗರಣ : ರಾತ್ರಿ ತನಿಖಾಧಿಕಾರಿಯನ್ನು ಭೇಟಿಯಾದ ಸಿದ್ದರಾಮಯ್ಯ ಬಾಮೈದ Read More »

ಇಂದು ಮದ್ಯ ಮಾರಾಟ ಬಂದ್‌ ಇಲ್ಲ

ಸಿಎಂ ಜೊತೆ ಮಾತುಕತೆ ನಡೆಸಿದ ಬಳಿಕ ಬಂದ್‌ ಕರೆ ವಾಪಸ್‌ ಬೆಂಗಳೂರು: ಇಂದು ನಡೆಯಬೇಕಿದ್ದ ಬಾರ್‌, ವೈನ್‌ಶಾಪ್‌ ಬಂದ್‌ ನಿರ್ಧಾರವನ್ನು ಹಿಂದೆಗೆದುಕೊಳ್ಳಲಾಗಿದೆ. ಮದ್ಯ ಮಾರಾಟ ಮಳಿಗೆಗಳು ಎಂದಿನಂತೆ ವ್ಯಾಪಾರ ನಡೆಸಲಿವೆ. ಸರ್ಕಾರದ ಮುಂದೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ನವೆಂಬರ್ 20ರಂದು ರಾಜ್ಯಾದ್ಯಂತ ಬಾರ್‌ಗಳನ್ನು ಬಂದ್ ಮಾಡುವ ಘೋಷಣೆ ಮಾಡಲಾಗಿತ್ತು. ಆದರೆ ಮುಖ್ಯಮಂತ್ರಿಗಳ ಜೊತೆಗಿನ ಸಂಧಾನ ಸಭೆ ಸಫಲವಾಗಿದ್ದು, ಬಾರ್‌ ಬಂದ್ ಕರೆಯನ್ನು ವಾಪಸ್ ಪಡೆಯಲಾಗಿದೆ.ನ.19ರಂದು ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಕರುಣಾಕರ ಹೆಗಡೆ ನೇತೃತ್ವದ ನಿಯೋಗ ಮುಖ್ಯಮಂತ್ರಿ

ಇಂದು ಮದ್ಯ ಮಾರಾಟ ಬಂದ್‌ ಇಲ್ಲ Read More »

ಕಾಂಗ್ರೆಸ್‌ ಸರಕಾರ ಬಂದ ಬಳಿಕ ನಕ್ಸಲ್‌ ಚಟುವಟಿಕೆ ಹೆಚ್ಚಳ : ಸುನಿಲ್‌ ಕುಮಾರ್‌

ಸಾಹಿತಿ, ಬುದ್ಧಿಜೀವಿಗಳ ಸೋಗಿನಲ್ಲಿ ಇರುವ ನಗರ ನಕ್ಸಲರನ್ನು ಮಟ್ಟ ಹಾಕಲು ಆಗ್ರಹ ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಿಕ್ಕೆ ಬಂದ್ಮೇಲೆ ಮತ್ತೆ ನಕ್ಸಲರ ಚಟುವಟಿಕೆಗಳು ಮತ್ತು ಇನ್ನಿತರ ಅಪರಾಧ ಕೃತ್ಯಗಳು ಹೆಚ್ಚಾಗಿವೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಆರೋಪಿಸಿದ್ದಾರೆ.ಹೆಬ್ರಿಯ ನಕ್ಸಲ್‌ ಎನ್‌ಕೌಂಟರ್‌ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮತ್ತು ಪೊಲೀಸರ ಕಾರ್ಯಚರಣೆಯನ್ನು ಸ್ವಾಗತ ಮಾಡುತ್ತೇನೆ. ಅನೇಕ ವರ್ಷಗಳಿಂದ ನಕ್ಸಲ್ ಚಟುವಟಿಕೆ ಸ್ತಬ್ದವಾಗಿತ್ತು. ಆದರೆ ಕಳೆದ ಒಂದೂವರೆ ವರ್ಷದಿಂದ ಮತ್ತೆ ನಕ್ಸಲ್ ಚಟುವಟಿಕೆಗಳು ಶುರುವಾಗಿವೆ.

ಕಾಂಗ್ರೆಸ್‌ ಸರಕಾರ ಬಂದ ಬಳಿಕ ನಕ್ಸಲ್‌ ಚಟುವಟಿಕೆ ಹೆಚ್ಚಳ : ಸುನಿಲ್‌ ಕುಮಾರ್‌ Read More »

ನಕ್ಸಲ್‌ ವಿಕ್ರಂ ಗೌಡ ಎನ್‌ಕೌಂಟರ್‌ : ಗೃಹ ಸಚಿವರು ಹೇಳಿದ್ದಿಷ್ಟು

2-3 ನಕ್ಸಲರಿಗೆ ಎನ್‌ಕೌಂಟರ್‌ನಲ್ಲಿ ಗುಂಡೇಟು? ಬೆಂಗಳೂರು: ವಿಕ್ರಂ ಗೌಡ ಎಂಬ ಗ್ರೇಡೆಡ್ ನಕ್ಸಲ್‌ನನ್ನು ಪೊಲೀಸರು ಸೋಮವಾರ ಸಂಜೆ ಎನ್‌ಕೌಂಟರ್ ಮಾಡಿದ್ದಾರೆ ಎಂದು ಗೃಹಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.ಎನ್‌ಕೌಂಟರ್ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕಳೆದ 20 ವರ್ಷಗಳಿಂದ ವಿಕ್ರಂನನ್ನು ಪೊಲೀಸರು ಹುಡುಕುತ್ತಿದ್ದರು. ಆದರೆ ವಿಕ್ರಂ ತಪ್ಪಿಸಿಕೊಂಡು ಓಡಾಡುತ್ತಿದ್ದ. ಅನೇಕ ಎನ್‌ಕೌಂಟರ್‌ಗಳಲ್ಲಿ ವಿಕ್ರಂ ಗೌಡ ತಪ್ಪಿಸಿಕೊಂಡಿದ್ದ. ಸೋಮವಾರ ಸಂಜೆ ವಿಕ್ರಂ ಗೌಡ ಎನ್‌ಕೌಂಟರ್ ಆಗಿದೆ. ಸೋಮವಾರ ಪೊಲೀಸರ ಮೇಲೆ ವಿಕ್ರಂ ಶೂಟ್ ಮಾಡಿದ್ದ. ಪೊಲೀಸರು ಪ್ರತಿದಾಳಿ ನಡೆಸಿ

ನಕ್ಸಲ್‌ ವಿಕ್ರಂ ಗೌಡ ಎನ್‌ಕೌಂಟರ್‌ : ಗೃಹ ಸಚಿವರು ಹೇಳಿದ್ದಿಷ್ಟು Read More »

ಕೇವಲ ಎರಡು ತಾಸಿನಲ್ಲಿ ಸಿಗಲಿದೆ ತಿಮ್ಮಪ್ಪನ ದರ್ಶನ

ತಿರುಪತಿಯಲ್ಲಿ ತಾಸುಗಟ್ಟಲೆ ಕ್ಯೂ ನಿಲ್ಲುವ ಬವಣೆ ತಪ್ಪಿಸಲು ಹೊಸ ವ್ಯವಸ್ಥೆ ತಿರುಪತಿ: ವಿಶ್ವಪ್ರಸಿದ್ಧ ತಿರುಪತಿ ದೇಗುಲದಲ್ಲಿ ದೇವರ ದರ್ಶನಕ್ಕಾಗಿ ತಾಸುಗಟ್ಟಲೆ ಸರತಿ ಸಾಲಿನಲ್ಲಿ ಕಾದುನಿಲ್ಲುವ ಬವಣೆ ತಪ್ಪಲಿದೆ. ಎಲ್ಲ ಭಕ್ತರಿಗೆ ಕ್ಷಿಪ್ರವಾಗಿ ತಿಮ್ಮಪ್ಪನ ದರ್ಶನ ಸಿಗುವಂತಾಗಲು ದೇವಳದ ಆಡಳಿತ ನೋಡಿಕೊಳ್ಳುತ್ತಿರುವ ಟಿಟಿಡಿ ಹೊಸ ವ್ಯವಸ್ಥೆ ಮಾಡಲು ಮುಂದಾಗಿದೆ. ಈ ವ್ಯವಸ್ಥೆ ಜಾರಿಗೆ ಬಂದ ಬಳಿಕ ಎಷ್ಟೇ ರಶ್‌ ಇದ್ದರೂ ಕೇವಲ ಎರಡರಿಂದ ಮೂರು ಗಂಟೆಗಳಲ್ಲಿ ಸಾಮಾನ್ಯ ಭಕ್ತರಿಗೂ ದೇವರ ದರ್ಶನ ಮಾಡಲು ಸಾಧ್ಯವಾಗಲಿದೆ.ಕೇವಲ 2ರಿಂದ 3 ಗಂಟೆಯೊಳಗೆ

ಕೇವಲ ಎರಡು ತಾಸಿನಲ್ಲಿ ಸಿಗಲಿದೆ ತಿಮ್ಮಪ್ಪನ ದರ್ಶನ Read More »

error: Content is protected !!
Scroll to Top