ಸುದ್ದಿ

ಕಡೇಶಿವಾಲಯದ ಅಶೋಕ್‍ ರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ  ವೀಲ್ ಚೇರ್ ವಿತರಣೆ

ಉಪ್ಪಿನಂಗಡಿ : ಕಡೇಶಿವಾಲಯದ  ಅಶೋಕ್‍ ರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಬದಲಿ ವೀಲ್ ಚೇರ್ ವಿತರಿಸಲಾಯಿತು. ಅಶೋಕ್ ಎಂಬುವವರು ಕಳೆದ 20 ವರ್ಷಗಳಿಂದ ಪ್ರಗತಿ ಬಂಧು ತಂಡದಲ್ಲಿ ಕರ್ತವ್ಯ ನಿರ್ವೈಸುತ್ತಿದ್ದರು. ಸುಮಾರು 5 ವರ್ಷಗಳಿಂದ  ಅನಾರೋಗ್ಯ, ಅಂಗ ವಿಕಲರಾಗಿದ್ದು, ಪ್ರಸ್ತುತ ಅನಾರೋಗ್ಯ ತೀವ್ರ ತರವಾಗಿದೆ. ಈ ಕಾರಣದಿಂದ  ತುರ್ತಾಗಿ ಕಾಮೋಡು ವೀಲ್ ಚೇರ್ ಅವಶ್ಯಕತೆ ಇದ್ದು, ಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ಬದಲಿ ವೀಲ್‍ ಚೇರ್‍ ನೀಡಲಾಯಿತು. ಈ ಸಂದರ್ಭದಲ್ಲಿ ಯೋಜನೆಯ ಕೃಷಿ ಅಧಿಕಾರಿ […]

ಕಡೇಶಿವಾಲಯದ ಅಶೋಕ್‍ ರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ  ವೀಲ್ ಚೇರ್ ವಿತರಣೆ Read More »

ನೇತ್ರಾವತಿ ಗ್ರಾಮೀಣ ಬ್ಯಾಂಕ್‍ನ ಶ್ರೀಪತಿ ಹೆಬ್ಬಾರ್ ನಿವೃತ್ತಿ | ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‍ನಲ್ಲಿ ಬೀಳ್ಕೊಡುಗೆ ಸಮಾರಂಭ

ಪುತ್ತೂರು: ನೇತ್ರಾವತಿ ಗ್ರಾಮೀಣ ಬ್ಯಾಂಕ್‍ ನ ಪ್ರಧಾನ ಕಚೇರಿಯಲ್ಲಿ ಕ್ಯಾಶಿಯರ್ ಆಗಿ ಸುಮಾರು 39 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಪತಿ ಹೆಬ್ಬಾರ್ ಅವರಿಗೆ ಪುತ್ತೂರಿನ ಪ್ರಭು ಬಿಲ್ಡಿಂಗ್‍ ನಲ್ಲಿ ಕಾರ್ಯಾಚರಿಸುತ್ತಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‍ ನಲ್ಲಿ ಬೀಳ್ಕೊಡುಗೆ ಸಮಾರಂಭ ಶನಿವಾರ ಸಂಜೆ ನಡೆಯಿತು. ಸಮಾರಂಭದಲ್ಲಿ ಶ್ರೀಪತಿ ಹೆಬ್ಬಾರ್ ದಂಪತಿಯನ್ನು ಪೇಟ ತೊಡಿಸಿ, ಹಾರ ಹಾಕಿ, ಫಲಪುಷ್ಪ, ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನೇತ್ರಾವತಿ ಗ್ರಾಮೀಣ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಗಿರಿಧರ

ನೇತ್ರಾವತಿ ಗ್ರಾಮೀಣ ಬ್ಯಾಂಕ್‍ನ ಶ್ರೀಪತಿ ಹೆಬ್ಬಾರ್ ನಿವೃತ್ತಿ | ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‍ನಲ್ಲಿ ಬೀಳ್ಕೊಡುಗೆ ಸಮಾರಂಭ Read More »

ಪರಿಶೀಲಿಸದೆ ಹೇಳಿಕೆ ನೀಡಿದ ಸಿದ್ದರಾಮಯ್ಯ : ಪೇಜಾವರ ಶ್ರೀ ಸ್ಪಷ್ಟನೆ

ಸಂವಿಧಾನ ಬದಲಿಸುವ ಹೇಳಿಕೆ ನೀಡಿಲ್ಲ; ಹಿಂದೂ ಸಮಾಜವನ್ನು ಹಣಿಯುವ ಪ್ರಯತ್ನ ಎಂದ ಶ್ರೀಗಳು ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾನು ಹೇಳದೆ ಇದ್ದ ಮಾತುಗಳಿಗೆ ಪ್ರತಿಕ್ರಿಯೆ ನೀಡಿ ವಿನಾಕಾರಣ ನನ್ನನ್ನು ವಿವಾದದಲ್ಲಿ ಸಿಲುಕಿಸಿದ್ದಾರೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.ಪೇಜಾವರ ಶ್ರೀಗಳು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ ಎಂಬ ಊಹೋಪೋಹಗಳಿಗೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ಪೇಜಾವರ ಶ್ರೀ ಮನುಸ್ಮೃತಿಯ ಪ್ರತಿಪಾದಕರು. ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಿದ್ದಾರೆ, ಮೇಲು-ಕೀಳು ಭಾವನೆ ಮಾಡುತ್ತಾರೆ ಎಂದೆಲ್ಲ ಟೀಕಿಸಿದ್ದರು. ಈ ಬಗ್ಗೆ

ಪರಿಶೀಲಿಸದೆ ಹೇಳಿಕೆ ನೀಡಿದ ಸಿದ್ದರಾಮಯ್ಯ : ಪೇಜಾವರ ಶ್ರೀ ಸ್ಪಷ್ಟನೆ Read More »

ಫುಟ್‌ಬಾಲ್‌ ಪಂದ್ಯಾಟದಲ್ಲಿ ಮಾರಾಮಾರಿ : 100ಕ್ಕೂ ಅಧಿಕ ಮಂದಿ ಸಾವು

ಅಂಪಾಯರ್‌ ತೀರ್ಪಿನಿಂದ ಕೆರಳಿ ಹೊಡೆದಾಡಿಕೊಂಡ ಅಭಿಮಾನಿಗಳು ಗಿನಿಯ : ಗಿನಿಯಾದ ಎರಡನೇ ದೊಡ್ಡ ನಗರವಾದ ಝೆರೆಕೋರ್‌ ಎಂಬಲ್ಲಿ ಫುಟ್‌ಬಾಲ್‌ ಪಂದ್ಯಾಟವೊಂದರಲ್ಲಿ ಅಭಿಮಾನಿಗಳ ನಡುವೆ ನಡೆದ ಭೀಕರ ಹೊಡೆದಾಟದಲ್ಲಿ 100ಕ್ಕೂ ಅಧಿಕ ಮಂದಿ ಸಾವಿಗೀಡಾದ ಘಟನೆ ಸಂಭವಿಸಿದೆ. ರೆಫರಿಯ ವಿವಾದಾತ್ಮಕ ತೀರ್ಪೊಂದು ಎರಡು ತಂಡಗಳ ಅಭಿಮಾನಿಗಳ ನಡುವೆ ಹೊಡೆದಾಟಕ್ಕೆ ಕಾರಣವಾಯಿತು. ಸ್ಟೇಡಿಯಂಗಿಳಿದು ಅಭಿಮಾನಿಗಳು ಮಾರಾಮಾರಿ ನಡೆಸಿದ ಪರಿಣಾಮ ರಕ್ತದೋಕುಳಿಯೇ ಹರಿಯಿತು ಎಂದು ವರದಿಗಳು ತಿಳಿಸಿವೆ. ಸ್ಥಳೀಯ ಆಸ್ಪತ್ರೆಗಳಲ್ಲಿ ಶವಗಳು ರಾಶಿ ಬಿದ್ದಿದ್ದವು. ಶವಾಗಾರಗಳು ತುಂಬಿ ಶವಗಳನ್ನು ಸ್ಥಳ ಇರುವಲ್ಲೆಲ್ಲ

ಫುಟ್‌ಬಾಲ್‌ ಪಂದ್ಯಾಟದಲ್ಲಿ ಮಾರಾಮಾರಿ : 100ಕ್ಕೂ ಅಧಿಕ ಮಂದಿ ಸಾವು Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬಳಿ ಬಂದ ಕಾಡಾನೆ | ಸ್ಥಳೀಯರಿಗೆ  ಜಾಗರೂಕರಾಗಿರುವಂತೆ ಎಚ್ಚರಿಕೆ

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬಳಿಗೆ ಕಾಡಾನೆಯೊಂದು ಡಿ. 1 ರ ಸಂಜೆ 7.30 ಸುಮಾರಿಗೆ ಬಂದು ಮಠದ ಬಳಿ ಇದ್ದು ಮತ್ತೆ ಕಾಡು ಪ್ರವೇಶಿದ ಘಟನೆ ವರದಿಯಾಗಿದೆ. ದೇವರಗದ್ದೆ ಅರಣ್ಯ ಪ್ರದೇಶ ಭಾಗದಿಂದ ಬಂದ ಒಂಟಿ ಕಾಡಾನೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯಿರುವ ವ್ಯಾಸಮಂದಿರ ಬಳಿಗಾಗಿ ಬಂದು ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಹತ್ತಿರ ಬಂದಿದೆ. ಅಲ್ಲಿ ಅಲ್ಪ ಕಾಲ ಇದ್ದು ಮತ್ತೆ ಅರಣ್ಯ ಭಾಗಕ್ಕೆ ತೆರಳಿರುವುದಾಗಿ ತಿಳಿದು ಬಂದಿದೆ. ಕಾಡಾನೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬಳಿ ಬಂದ ಕಾಡಾನೆ | ಸ್ಥಳೀಯರಿಗೆ  ಜಾಗರೂಕರಾಗಿರುವಂತೆ ಎಚ್ಚರಿಕೆ Read More »

ನಿಮ್ಮ ವಿರುದ್ಧ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು? – ಯತ್ನಾಳ್‌ಗೆ ಹೈಕಮಾಂಡ್‌ ಪ್ರಶ್ನೆ

ಭಿನ್ನಮತೀಯ ಚಟುವಟಿಕೆ ನಡೆಸಿದ್ದಕ್ಕೆ ಶೋಕಾಸ್‌ ನೋಟಿಸ್‌ ಬೆಂಗಳೂರು: ಕರ್ನಾಟಕ ಬಿಜೆಪಿ ಬಣ ಜಗಳ ತಾರಕಕ್ಕೇರಿದ ಬೆನ್ನಲ್ಲೇ ಹೈಕಮಾಂಡ್ ಜಗಳ ಬಗೆಹರಿಸಲು ಮುಂದಾಗಿದೆ. ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವ ಬಂಡಾಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ಗೆ ಬಿಜೆಪಿ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ದಿಲ್ಲಿಯಲ್ಲಿ ವರಿಷ್ಠರನ್ನು ಭೇಟಿಯಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ರಾಜ್ಯಮಟ್ಟದ ಪಕ್ಷದ ನಾಯಕತ್ವದ ವಿರುದ್ಧ ನೀವು ಮಾಡುತ್ತಿರುವ ನಿರಂತರ ವಾಗ್ದಾಳಿ ಮತ್ತು ಪಕ್ಷದ ನಿರ್ದೇಶನಗಳನ್ನು

ನಿಮ್ಮ ವಿರುದ್ಧ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು? – ಯತ್ನಾಳ್‌ಗೆ ಹೈಕಮಾಂಡ್‌ ಪ್ರಶ್ನೆ Read More »

ಇನ್ನೊಂದು ದೊಡ್ಡ ಚುನಾವಣೆಗೆ ತಯಾರಾಗುತ್ತಿರುವ ಕಾಂಗ್ರೆಸ್‌

ಸೋಲು, ಒಳಜಗಳದಿಂದ ಕಳೆಗುಂದಿರುವ ಬಿಜೆಪಿ ಬೆಂಗಳೂರು: ಕಳೆದ ನಾಲ್ಕು ವರ್ಷಗಳಿಂದ ನಾನಾ ಕಾರಣಗಳಿಂದಾಗಿ ಬಾಕಿಯಿರುವ ತಾಲೂಕು ಪಂಚಾಯತ್‌ ಮತ್ತು ಜಿಲ್ಲಾ ಪಂಚಾಯತ್‌ ಚುನಾವಣೆ ಮುಂದಿನ ವರ್ಷ ನಡೆಯುವುದು ಬಹುತೇಕ ಖಚಿತ ಎನ್ನಲಾಗಿದೆ. ಸ್ವತಹ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ ಜಿಪಂ ಮತ್ತು ತಾಪಂ ಚುನಾವಣೆ ನಡೆಸುವ ಬಗ್ಗೆ ಸುಳಿವು ನೀಡಿದ್ದಾರೆ.ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ ಶಿವಕುಮಾರ್‌ ಡಿ.5ರಂದು ಹಾಸನದಲ್ಲಿ ನಡೆಯಲಿರುವ ಕಾಂಗ್ರೆಸ್‌ ಸಮಾವೇಶದ ಕುರಿತು ಮಾಹಿತಿ ನೀಡುವ ವೇಳೆ, ನಾವು ಯಾವುದೋ ಒಂದು ಉದ್ದೇಶ ಇಟ್ಟುಕೊಂಡು ವೇದಿಕೆ ಸಿದ್ಧ

ಇನ್ನೊಂದು ದೊಡ್ಡ ಚುನಾವಣೆಗೆ ತಯಾರಾಗುತ್ತಿರುವ ಕಾಂಗ್ರೆಸ್‌ Read More »

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಗಡುವು ಮತ್ತೆ ವಿಸ್ತರಣೆ

ಡಿ.31ರೊಳಗೆ ನಂಬರ್‌ ಪ್ಲೇಟ್‌ ಅಳವಡಿಸಿಕೊಳ್ಳಲು ಸೂಚನೆ ಬೆಂಗಳೂರು: ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸಲು ನೀಡಿದ್ದ ಗಡುವನ್ನು ಸರ್ಕಾರ ಮತ್ತೆ ವಿಸ್ತರಿಸಿದೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಡಿಸೆಂಬರ್ 4 ಕೊನೆ ದಿನವಾಗಿತ್ತು. ಈಗ ಡಿಸೆಂಬರ್ 31ರ ವರೆಗೆ ಅವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಸಾರಿಗೆ ಇಲಾಖೆ ಈ ವರ್ಷದ ಕೊನೆಯ ದಿನದ ವರೆಗೆ ಎಚ್‌ಎಸ್‌ಆರ್‌ಪಿ ಗಡುವು ವಿಸ್ತರಿಸಿದೆ. ರಾಜ್ಯದಲ್ಲಿ ಸುಮಾರು 2 ಕೋಟಿಯಷ್ಟು ವಾಹನಗಳು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕಿತ್ತು. ಇಷ್ಟರ

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಗಡುವು ಮತ್ತೆ ವಿಸ್ತರಣೆ Read More »

ಬಿಜೆಪಿಯಲ್ಲಿ ತೀವ್ರಗೊಂಡ ಯತ್ನಾಳ್‌ ಪರ-ವಿರೋಧ ಕಚ್ಚಾಟ

ಪಕ್ಷದಿಂದ ಉಚ್ಚಾಟಿಸಲು ವಿಜಯೇಂದ್ರ ಬಣದ ಬಿಗಿಪಟ್ಟು ಬೆಂಗಳೂರು: ಬಿಜೆಪಿಯಲ್ಲಿದ್ದುಕೊಂಡೂ ವಕ್ಫ್‌ ವಿರುದ್ಧ ತನ್ನದೇ ಪ್ರತ್ಯೇಕ ಹೋರಾಟ ನಡೆಸುತ್ತಿರುವ ವಿಜಯಪುರದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಲ್‌ ವಿರುದ್ಧ ಯಡಿಯೂರಪ್ಪ ಬಣದ ಕೂಗು ಜೋರಾಗಿದ್ದು, ಅವರನ್ನು ಪಕ್ಷದಿಂದಲೇ ಉಚ್ಚಾಟಿಸಬೇಕೆಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ.ಸದಾ ಯಡಿಯೂರಪ್ಪ ಪರಿವಾರವನ್ನು ಟೀಕಿಸುತ್ತಾ ಬಿಜೆಪಿಗೆ ತಲೆನೋವಾಗಿದ್ದ ಯತ್ನಾಳ್‌ ವಿರುದ್ಧ ಉಪಚುನಾವಣೆ ಸೋಲಿನ ಬಳಿಕ ಯಡಿಯೂರಪ್ಪ ನಿಷ್ಠರು ಸಿಡಿದೆದ್ದಾರೆ. ಸೋಲಿಗೆ ಯತ್ನಾಳ್‌ ಹೇಳಿಕೆಗಳೇ ಕಾರಣ ಎಂದು ಸೋಲನ್ನು ಅವರ ತಲೆಗೆ ಕಟ್ಟಿದ್ದು ಮಾತ್ರವಲ್ಲದೆ

ಬಿಜೆಪಿಯಲ್ಲಿ ತೀವ್ರಗೊಂಡ ಯತ್ನಾಳ್‌ ಪರ-ವಿರೋಧ ಕಚ್ಚಾಟ Read More »

ಮುಂಜಾನೆ ತಮಿಳುನಾಡಿಗೆ ಅಪ್ಪಳಿಸಿದ ಫೆಂಗಲ್‌ ಚಂಡಮಾರುತಕ್ಕೆ 4 ಮಂದಿ ಬಲಿ

ಭಾರಿ ಮಳೆಯಿಂದ ಹಲವು ಪ್ರದೇಶ ಜಲಾವೃತ, ಸಂಚಾರ ವ್ಯತ್ಯಯ ಚೆನ್ನೈ : ಫೆಂಗಲ್ ಚಂಡಮಾರುತ ಭಾನುವಾರ ಮುಂಜಾನೆ 2 ಗಂಟೆಗೆ ತಮಿಳುನಾಡು ಕರಾವಳಿಗೆ ಅಪ್ಪಳಿಸಿ ಭಾರಿ ಅನಾಹುತಗಳನ್ನು ಉಂಟುಮಾಡಿದೆ. ವಿದ್ಯುತ್‌ ಆಘಾತ ಹಾಗೂ ಭೂಕುಸಿತದಿಂದಾಗಿ ನಾಲ್ವರು ಸಾವನ್ನಪ್ಪಿದ್ದು, ಹಲವೆಡೆ ಜಲಾವೃತವಾಗಿ ಜನಜೀವನ ಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಮುಂದಿನ 48 ಗಂಟೆಗಳ ಕಾಲ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ನಿನ್ನೆ ಮುಚ್ಚಲಾಗಿದ್ದ ಚೆನ್ನಯ ಏರ್​ಪೋರ್ಟನ್ನು 16 ಗಂಟೆಗಳ ಬಳಿಕ ತೆರೆಯಲಾಗಿದ್ದು, ವಿಮಾನಗಳ ಕಾರ್ಯಾಚರಣೆ ಆರಂಭವಾಗಿದೆ. ಭಾರತೀಯ

ಮುಂಜಾನೆ ತಮಿಳುನಾಡಿಗೆ ಅಪ್ಪಳಿಸಿದ ಫೆಂಗಲ್‌ ಚಂಡಮಾರುತಕ್ಕೆ 4 ಮಂದಿ ಬಲಿ Read More »

error: Content is protected !!
Scroll to Top