ಸುದ್ದಿ

ಬಡವರ ಮಕ್ಕಳು ದೊಡ್ಡ ಕನಸು ಕಾಣುವುದು ತಪ್ಪಾ?

ಕೊಳಚೆಗೇರಿಯಲ್ಲಿ ಕೂಡ ಅದ್ಭುತವಾದ ಪ್ರತಿಭೆಗಳು ಇರುತ್ತವೆ ಜಗತ್ತಿನ ಎಲ್ಲ ಮಕ್ಕಳೂ ದೇವರ ಮಕ್ಕಳೇ. ಪ್ರತಿಭೆಗೆ ಬಡವ, ಶ್ರೀಮಂತ ಎಂಬ ಬೇಧ ಖಂಡಿತವಾಗಿ ಇಲ್ಲ ಎನ್ನುವುದು ಸತ್ಯ. ಕೆಳಗೆ ನಾನು ಬರೆದ ಪ್ರತಿ ವಾಕ್ಯಕ್ಕೂ ಅಪವಾದಗಳು ಇವೆ. ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚು ನಮ್ಮ ಹಿರಿಯರು ‘ತುಂಬಾ ಆಸೆ ಪಡಬೇಡ, ಇರೋದರಲ್ಲಿ ನೆಮ್ಮದಿಯಿಂದ ಬದುಕು’ ಎಂಬ ಆಶಯದಲ್ಲಿ ಈ ಮೇಲಿನ ಗಾದೆಯನ್ನು ಹೆಣೆದರು. ಆದರೆ ದೊಡ್ಡ ಕನಸು ಕಾಣುವುದು ಬೇಡ ಎಂದು ಯಾವತ್ತೂ ಹೇಳಲಿಲ್ಲ. ‘ಗುಡಿಸಲಲ್ಲಿ ಪ್ರತಿಭೆಗಳು […]

ಬಡವರ ಮಕ್ಕಳು ದೊಡ್ಡ ಕನಸು ಕಾಣುವುದು ತಪ್ಪಾ? Read More »

ಕುಡಿದು ಬಸ್‍ ಚಲಾಯಿಸಿದ ಚಾಲಕ | ಪೋಲಿಸರಿಗೆ ಒಪ್ಪಿಸಿದ ಸ್ಥಳೀಯರು

ಉಪ್ಪಿನಂಗಡಿ : ಕೆಎಸ್‌ಆರ್‌ಟಿಸಿ ಬಸ್ ಚಾಲಕನೋರ್ವ ಕುಡಿದು ಬಸ್ ಚಲಾಯಿಸಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಪುತ್ತೂರಿನಿಂದ ಉಪ್ಪಿನಂಗಡಿಗೆ ಹೋಗಿ, ತದ ನಂತರದಲ್ಲಿ ಆಲಂತಾಯದತ್ತ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಚಾಲಕ ಮದ್ಯಪಾನ  ಸೇವಿಸಿ ಬಸ್ಸನ್ನು ಮನ ಬಂದಂತೆ  ಚಲಾಯಿಸಿದ ಪರಿಣಾಮ ಬಸ್‌ನಲ್ಲಿದ್ದ ಪ್ರಯಾಣಿಕರು ಭಯಗೊಂಡು ಬೊಬ್ಬೆ ಹಾಕಿದ್ದಾರೆ.. ಬಸ್‌ನಲ್ಲಿದ್ದ ಪ್ರಯಾಣಿಕರ ಕೂಗು ಕೇಳಿ ಸ್ಥಳೀಯ ನಾಗರಿಕರು ಬಸ್‌ನ್ನು ನಿಲ್ಲಿಸಲು ಮುಂದಾಗಿದ್ದಾರೆ.  ಬಸ್ ನಿಲ್ಲುತ್ತಿದ್ದಂತೆಯೇ ಚಾಲಕನನ್ನು ಬಸ್‌ನಿಂದ ಕೆಳಗಿಳಿಸಿ ತರಾಟೆಗೆ ತೆಗೆದುಕೊಂಡ ಬಳಿಕ ಪೊಲೀಸರಿಗೆ ದೂರಿ ನೀಡಿ ಚಾಲಕನನ್ನು ಠಾಣೆಗೆ

ಕುಡಿದು ಬಸ್‍ ಚಲಾಯಿಸಿದ ಚಾಲಕ | ಪೋಲಿಸರಿಗೆ ಒಪ್ಪಿಸಿದ ಸ್ಥಳೀಯರು Read More »

17 ವರ್ಷದ ಬಾಲಕಿಗೆ ಮದುವೆ | ತಂದೆ, ತಾಯಿ, ಅತ್ತೆ, ಮಾವ ಹಾಗೂ ಗಂಡನಿಗೆ ಒಂದು ವರ್ಷ ಜೈಲು  ಶಿಕ್ಷೆ

ಮಂಗಳೂರು : ಕಾನೂನಿನ ವಿರುದ್ದವಾಗಿ 17 ವರ್ಷದ ಅಪ್ರಾಪ್ತ ಬಾಲಕಿಗೆ ಮದುವೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.  ಈ ಹಿನ್ನೆಲೆಯಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ದಾಖಲಾದ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ವಿಶೇಷ ಪೋಷ್ಟೋ ನ್ಯಾಯಾಲಯ ಆರೋಪಿತರಾದ ಬಾಲಕಿಯ ತಂದೆ, ತಾಯಿ, ಅತ್ತೆ, ಮಾವ ಹಾಗೂ ಗಂಡನಿಗೆ ಒಂದು ವರ್ಷ ಗಳ ಕಾಲ ಶಿಕ್ಷೆ ವಿಧಿಸಲು ನ್ಯಾಯಲಯ ತೀರ್ಪು ನೀಡಿದೆ. ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಮೊಂಟೆಪದವು ನಿವಾಸಿ ಮಹಮ್ಮದ್ ಇಂತಿಯಾಜ್

17 ವರ್ಷದ ಬಾಲಕಿಗೆ ಮದುವೆ | ತಂದೆ, ತಾಯಿ, ಅತ್ತೆ, ಮಾವ ಹಾಗೂ ಗಂಡನಿಗೆ ಒಂದು ವರ್ಷ ಜೈಲು  ಶಿಕ್ಷೆ Read More »

ಶಾರ್ಟ್ ಸರ್ಕ್ಯೂಟ್‍ನಿಂದ ಹೊತ್ತಿ ಉರಿದ ಹುಂಡೈ ಕಾರು

ಮಂಗಳೂರು: ವೈದ್ಯೆಯೊಬ್ಬರು ತಮ್ಮ ಕಾರನ್ನು ಚಲಾಯಿಸಿತ್ತಿರುವ ವೇಳೆ ಹುಂಡೈ ಕಾರು ಹೊತ್ತಿ ಉರಿದ ಘಟನೆ ಮಂಗಳೂರಿನ ಕೆ.ಎಸ್.ರಾವ್ ರಸ್ತೆಯ ಸಿಟಿ ಸೆಂಟರ್ ಬಳಿ ಸೋಮವಾರ ನಡೆದಿದೆ. ವೈದ್ಯೆಯೊಬ್ಬರು ತಮ್ಮ ಕಾರನ್ನು ಚಲಾಯಿಸಿಕೊಂಡು ಬಂದು ಅಪಾರ್ಟ್‌ಮೆಂಟ್ ಬಳಿ ತಂದು ನಿಲ್ಲಿಸಿದ್ದಾರೆ. ಈ ವೇಳೆ ಕಾರಿನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅವರು ಕಾರಿನಿಂದ ಇಳಿದಿದ್ದಾರೆ. ಅಷ್ಟರಲ್ಲಾಗಲೇ ಕಾರಿನ ಮುಂಭಾಗ ಸುಟ್ಟು ಉರಿದು ಹೋಗಿದೆ ಎಂದು ತಿಳಿದು ಬಂದಿದೆ. ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ತಗುಳಿ ಅವಘಡ ನಡೆದಿದ್ದು, ಸ್ಥಳಕ್ಕೆ ಧಾವಿಸಿದ

ಶಾರ್ಟ್ ಸರ್ಕ್ಯೂಟ್‍ನಿಂದ ಹೊತ್ತಿ ಉರಿದ ಹುಂಡೈ ಕಾರು Read More »

ನಟ ದರ್ಶನ್‌ ಗೆಳತಿ ಪವಿತ್ರಾ ಗೌಡ ಜೈಲಿನಿಂದ ಬಿಡುಗಡೆ

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪವಿತ್ರಾ ಗೌಡ ಆರು ತಿಂಗಳ ಸೆರೆವಾಸದ ಬಳಿಕ ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿದ್ದಾರೆ. ನಿನ್ನೆಯೇ ಬಿಡುಗಡೆಯಾಗಬೇಕಿದ್ದರೂ ಕಾನೂನಿನ ವಿಧಿವಿಧಾನಗಳು ಪೂರ್ಣಗೊಳ್ಳದ ಕಾರಣ ಒಂದು ದಿನ ತಡವಾಗಿ ಜೈಲಿನಿಂದ ಹೊರಬರಬೇಕಾಯಿತು. 6 ತಿಂಗಳ ಹಿಂದೆ ಜೈಲು ಸೇರಿದ್ದ ದರ್ಶನ್‌ ಗೆಳತಿ ಪವಿತ್ರಾ ಗೌಡ ಮತ್ತು ಇತರರಿಗೆ ಶುಕ್ರವಾರ ಹೈಕೋರ್ಟ್‌ನ ನ್ಯಾ. ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿತ್ತು. ಸೋಮವಾರ ಜಾಮೀನು

ನಟ ದರ್ಶನ್‌ ಗೆಳತಿ ಪವಿತ್ರಾ ಗೌಡ ಜೈಲಿನಿಂದ ಬಿಡುಗಡೆ Read More »

ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ನಾಪತ್ತೆ?

ಮೂರು ದಿನಗಳಿಂದ ಕಾಣಿಸದ ಸ್ನೇಹಮಯಿ ಕೃಷ್ಣ; ಮೊಬೈಲ್‌ ಸ್ವಿಚ್‌ ಆಫ್‌ ಬೆಂಗಳೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದು ರಾಜ್ಯಾದ್ಯಂತ ಸಂಚಲನ ಉಂಟಾಗಿದೆ. ಸ್ನೇಹಮಯಿ ಕೃಷ್ಣ ಅವರ ದೂರಿನಿಂದಾಗಿ ಮುಡಾದಲ್ಲಾಗಿರುವ ಬ್ರಹ್ಮಾಂಡ ಭ್ರಷ್ಟಾಚಾರ ಬೆಳಕಿಗೆ ಬಂದಿತ್ತು. ದಿನಕ್ಕೊಂದರಂತೆ ದಾಖಲೆಗಳನ್ನು ಬಿಡುಗಡೆ ಮಾಡಿ ಸ್ನೇಹಮಯಿ ಕೃಷ್ಣ ಬಲಿಷ್ಠ ಕಾಂಗ್ರೆಸ್‌ ಸರಕಾರದ ವಿರುದ್ಧ ಸಮರವನ್ನೇ ಸಾರಿದ್ದರು. ಆ ಬಳಿಕ

ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ನಾಪತ್ತೆ? Read More »

ತುಳಸಿ ಗೌಡ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

ಹೊಸದಿಲ್ಲಿ: ವೃಕ್ಷಮಾತೆ ತುಳಸಿ ಗೌಡ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ದಾರಿದೀಪವಾಗಿದ್ದ ತುಳಸಿ ಗೌಡ ಜೀವನ ನಮಗೆಲ್ಲ ಪ್ರೇರಣೆಯಾಗಲಿ ಎಂದು ಮೋದಿ ಸಂತಾಪ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. ಕರ್ನಾಟಕದ ಖ್ಯಾತ ಪರಿಸರವಾದಿ ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತರಾದ ತುಳಸಿಗೌಡ ನಿಧನದಿಂದ ತೀವ್ರ ದುಃಖವಾಗಿದೆ. ಪ್ರಕೃತಿಯನ್ನು ಪೋಷಿಸಲು, ಸಾವಿರಾರು ಸಸಿಗಳನ್ನು ನೆಡಲು ಮತ್ತು ನಮ್ಮ ಪರಿಸರವನ್ನು ಸಂರಕ್ಷಿಸುವುದಕ್ಕಾಗಿ ಅವರು ಜೀವನವನ್ನೇ ಮುಡಿಪಾಗಿಟ್ಟರು. ಪರಿಸರ ಸಂರಕ್ಷಣೆ ವಿಚಾರದಲ್ಲಿ ಅವರು ಇನ್ನು ಮುಂದೆಯೂ ನಮಗೆ ದಾರಿದೀಪವಾಗಿ

ತುಳಸಿ ಗೌಡ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ Read More »

ಶಬರಿಮಲೆ ಸನ್ನಿಧಾನದಲ್ಲೇ ಅಯ್ಯಪ್ಪ ವ್ರತಧಾರಿ ಆತ್ಮಹತ್ಯೆ

ಶಬರಿಮಲೆ : ಅಯ್ಯಪ್ಪ ವ್ರತಧಾರಿಯೊಬ್ಬರು ಶಬರಿಮಲೆ ಸನ್ನಿಧಾನದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ಅಯ್ಯಪ್ಪ ಭಕ್ತನನ್ನು ಕರ್ನಾಟಕದ ಕನಕಪುರ ಕುಮಾರಸ್ವಾಮಿ (40) ಎಂದು ಗುರುತಿಸಲಾಗಿದೆ. ಕುಮಾರಸ್ವಾಮಿ ಸಾವಿರಾರು ಭಕ್ತರ ಮುಂದೆಯೇ ಮಾಳಿಗೆಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ತುಪ್ಪದ ಅಭಿಷೇಕ ಕೌಂಟರ್‌ ಮಂಟಪದ ಮೇಲಿನಿಂದ ಅವರು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ವೀಡಿಯೊ ಭಕ್ತರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿ ಈಗ ವೈರಲ್‌ ಆಗಿದೆ. ಶಬರಿಮಲೆಯಲ್ಲಿ ಎಲ್ಲರೂ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಹೋಗುತ್ತಿರುವಾಗ ಕುಮಾರಸ್ವಾಮಿ ಆತ್ಮಹತ್ಯೆಗೆ

ಶಬರಿಮಲೆ ಸನ್ನಿಧಾನದಲ್ಲೇ ಅಯ್ಯಪ್ಪ ವ್ರತಧಾರಿ ಆತ್ಮಹತ್ಯೆ Read More »

ಒಂದು ದೇಶ ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಇಂದು ಮಂಡನೆ

ಹೊಸದಿಲ್ಲಿ : ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಉದ್ದೇಶ ಹೊಂದಿರುವ ಒಂದು ದೇಶ ಒಂದು ಚುನಾವಣೆ ಮಸೂದೆ ಇಂದು ಲೋಕಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಇಂದು ಲೋಕಸಭೆಯಲ್ಲಿ ಮಸೂದೆ ಮಂಡಿಸುವ ನಿರೀಕ್ಷೆಯಿದೆ. ನಂತರ ವ್ಯಾಪಕ ಸಮಾಲೋಚನೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಶಿಫಾರಸು ಮಾಡುವಂತೆ ಮೇಘವಾಲ್ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.ಪಕ್ಷಗಳ ಸಂಸದರ ಸಂಖ್ಯಾಬಲದ ಆಧಾರದ ಮೇಲೆ ಜಂಟಿ ಸದನ ಸಮಿತಿಯನ್ನು ರಚಿಸಲಾಗುತ್ತದೆ.

ಒಂದು ದೇಶ ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಇಂದು ಮಂಡನೆ Read More »

ರೆಸಾರ್ಟ್‌ನೊಳಗೆ 12 ಭಾರತೀಯರು ಶವವಾಗಿ ಪತ್ತೆ

ಕಾರ್ಬನ್‌ ಮೊನೊಕ್ಸೈಡ್‌ ಅನಿಲ ಸೋರಿಕೆಯಿಂದ ಸಾವು ಸಂಭವಿಸಿದ ಶಂಕೆ ಜಾರ್ಜಿಯಾ: ಜಾರ್ಜಿಯಾದ ಗುಡೌರಿ ಪರ್ವತದ ರೆಸಾರ್ಟ್‌ನ ರೆಸ್ಟೋರೆಂಟ್‌ನಲ್ಲಿ 12 ಭಾರತೀಯ ಪ್ರಜೆಗಳು ಶವವಾಗಿ ಪತ್ತೆಯಾಗಿದ್ದಾರೆ. ಕಾರ್ಬನ್ ಮೊನೊಕ್ಸೈಡ್ ವಿಷಾನಿಲದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಜಾರ್ಜಿಯಾ ದೇಶದ ಆಂತರಿಕ ವ್ಯವಹಾರಗಳ ಸಚಿವಾಲಯ ಹೇಳಿದೆ. ಮೃತರೆಲ್ಲ ಈ ರೆಸಾರ್ಟ್‌ನ ನೌಕರರು. ರಾತ್ರಿ ಕರೆಂಟ್‌ ಹೋದಾಗ ಕೋಣೆಯ ಮೂಲೆಯಲ್ಲಿದ್ದ ಜನರೇಟರ್‌ ಸ್ಟಾರ್ಟ್‌ ಮಾಡಿದ್ದು, ಇದರಿಂದ ಹೊರಸೂಸಿದ ಕಾರ್ಬನ್‌ ಮೊನೊಕ್ಸೈಡ್‌ ಅನಿಲ ಸೇವಿಸಿ ಅವರು ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ರೆಸಾರ್ಟ್‌ ಮಾಲಕನ ವಿರುದ್ಧ ನಿರುದ್ದೇಶದ

ರೆಸಾರ್ಟ್‌ನೊಳಗೆ 12 ಭಾರತೀಯರು ಶವವಾಗಿ ಪತ್ತೆ Read More »

error: Content is protected !!
Scroll to Top