ಸುದ್ದಿ

ಅಪಾರ್ಟ್‌ಮೆಂಟ್‌ ನಿಂದ ಜಿಗಿದು ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು : ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿನಿಯೊಬ್ಬಳು ಅಪಾರ್ಟ್‌ಮೆಂಟ್‌ನ 20ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. ಬೆಂಗಳೂರಿನ ಕಾಡುಗೋಡಿಯಲ್ಲಿ ಈ ಘಟನೆ ನಡೆದಿದ್ದು 15 ವರ್ಷದ ಅವಂತಿಕಾ ಚೌರಾಸಿಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಾಡುಗೋಡಿಯ ಅಸೆಟ್ಸ್ ಮಾರ್ಕ್ ಅಪಾರ್ಟ್‌ ಮೆಂಟ್‌ನಲ್ಲಿ ವಾಸವಿದ್ದ ಅವಂತಿಕಾ ಚೌರಾಸಿಯಾಗೆ ತಾಯಿ SSLC ಪರೀಕ್ಷೆ ಹತ್ತಿರ ಬರುತ್ತಾ ಇದೆ. ಹೀಗಾಗಿ ಮೊಬೈಲ್ ಬಿಟ್ಟು ಪರೀಕ್ಷೆಗೆ ಓದು ಎಂದು ಬೈದಿದ್ದಾರೆ. ಇದರಿಂದ ದುಡುಕಿದ ಅವಂತಿಕಾ ಅಪಾರ್ಟ್‌ಮೆಂಟ್‌ನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಎನ್ನಲಾಗಿದೆ. […]

ಅಪಾರ್ಟ್‌ಮೆಂಟ್‌ ನಿಂದ ಜಿಗಿದು ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿನಿ ಆತ್ಮಹತ್ಯೆ Read More »

ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮಗೌಡ ನಿಧನ

ಕಾರವಾರ: ಹಾಡುಹಕ್ಕಿ, ಪದ್ಮಶ್ರೀ‌ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಅನಾರೋಗ್ಯದಿಂದಾಗಿ (88) ಇಂದು ಮುಂಜಾನೆ 3.30ಕ್ಕೆ ಕೊನೆಯುಸಿರೆಳೆದಿದ್ದಾರೆ. ಸುಕ್ರಜ್ಜಿ ಎಂದೇ ಖ್ಯಾತಿ ಪಡೆದಿದ್ದ ಅವರು ಕೆಲವು ತಿಂಗಳುಗಳಿಂದ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದರು. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ‌ ತಾಲೂಕಿನ ಬಡಿಗೇರಿ ಗ್ರಾಮದ ನಿವಾಸಿ ಹಾಲಕ್ಕಿ ಒಕ್ಕಲಿಗ ಬುಡಕಟ್ಟು ಜನಾಂಗದಲ್ಲಿ ಜನಿಸಿದ್ದ ಸುಕ್ರಿ ಬೊಮ್ಮ ಗೌಡ ಅವರನ್ನು ಜಾನಪದ ಕೋಗಿಲೆ ಎಂದೂ ಕರೆಯಲಾಗುತ್ತಿತ್ತು. ಸುಕ್ರಿ ಬೊಮ್ಮಗೌಡ ಬಾಲ್ಯದಲ್ಲಿ ತಾಯಿ ಮೂಲಕ ಜಾನಪದ ಹಾಡುಗಳನ್ನು ಕಲಿತಿದ್ದರು. ಜಾನಪದ ಹಾಡು, ಹಾಲಕ್ಕಿ

ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮಗೌಡ ನಿಧನ Read More »

ವಿಟ್ಲ: ಹಿರಿಯರ ಸೇವಾ ಪ್ರತಿಷ್ಠಾನದ ಸಭೆ

ವಿಟ್ಲ:  ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಬಂಟ್ವಾಳ ಇದರ ಫೆಬ್ರವರಿ ತಿಂಗಳ ಕೇಂದ್ರ ಸಮಿತಿಯ ಸಭೆಯು ವಿಟ್ಲ ಮಂಗಿಲ ಪದವು ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಜರಗಿತು.  ಡಾ. ವಾರಿಜಾ  ನೀರ್ಬೈಲು ಕಾರ್ಯಕ್ರಮವನ್ನು ಉದ್ಘಾಟಿಸಿ ಹಿರಿಯರ ಸೇವಾ ಪ್ರತಿಷ್ಠಾನದ ಕಾರ್ಯಕ್ರಮಗಳು ಉತ್ತಮವಾಗಿದ್ದು ತಾಲೂಕು ಘಟಕಗಳು ಹೆಚ್ಚು ಸಕ್ರಿಯವಾಗಿ ತಳಮಟ್ಟದಲ್ಲಿ ಕಾರ್ಯನಿರ್ವಹಿಸಿದಾಗ ಪ್ರತಿಷ್ಠಾನದ ಕಾರ್ಯಕ್ರಮಗಳು ಪರಿಣಾಮಕಾರಿಯಾಗುವುದೆಂದು ತಿಳಿಸಿದರು . ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು  ನಾರಾಯಣ ಭಟ್ ಮಾತನಾಡಿ ಗೋ ಸಂರಕ್ಷಣಾ 

ವಿಟ್ಲ: ಹಿರಿಯರ ಸೇವಾ ಪ್ರತಿಷ್ಠಾನದ ಸಭೆ Read More »

ಪಾದಚಾರಿಗಳಿಗೆ ಕಾರು ಡಿಕ್ಕಿ | ಇಬ್ಬರ  ದುರ್ಮರಣ | ಕಾರನ್ನು ವಶಕ್ಕೆ ಪಡೆದ ಸುಳ್ಯ ಪೋಲಿಸರು

ಸುಳ್ಯ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಕಾರು ಹರಿದುಕೊಂಡು ಹೋಗಿರುವ ಘಟನೆ ಮಾಣಿ-ಮೈಸೂರು ಹೆದ್ದಾರಿಯ ಸುಳ್ಯ ತಾಲೂಕಿನ ಕನಕಮಜಲುವಿನಲ್ಲಿ ನಡೆದಿದೆ.  ಕಾರು ಅಪಘಾತದಲ್ಲಿ ಪಾದಚಾರಿಗಳಿಬ್ಬರು  ಸಾವನ್ನಪ್ಪಿದ್ದಾರೆ. ಸಾವಿಗೆ ಕಾರಣವಾದ ಕಾರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪುತ್ತೂರು ಬೆಟ್ಟಂಪಾಡಿಯ ರಾಮಯ್ಯ ರೈ ಮತ್ತು ಕನಕಮಜಲಿನ ಜನಾರ್ದನ ರೈ ಅವರು ಫೆ. 8ರಂದು ರಾತ್ರಿ ನಡೆದ ಕಾರು ಡಿಕ್ಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಫೆ. 9ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಅಪಘಾತ ಎಸಗಿದ ಕಾರು ಚಾಲಕ ಘಟನ ಸ್ಥಳದಲ್ಲಿ

ಪಾದಚಾರಿಗಳಿಗೆ ಕಾರು ಡಿಕ್ಕಿ | ಇಬ್ಬರ  ದುರ್ಮರಣ | ಕಾರನ್ನು ವಶಕ್ಕೆ ಪಡೆದ ಸುಳ್ಯ ಪೋಲಿಸರು Read More »

ಯಕ್ಷಭಾರತಿ ದಶಮಾನೋತ್ಸವ: ಭಾರತ ಮಾತಾಪೂಜನ, “ದಶಪರ್ವ ಸ್ಮರಣ ಸಂಚಿಕೆ” ಬಿಡುಗಡೆ

ಬೆಳ್ತಂಗಡಿ : ಯಕ್ಷ ಭಾರತಿ ರಿ.ಬೆಳ್ತಂಗಡಿ ಇದರ ದಶವರ್ಷದ ಪ್ರಯುಕ್ತ ಉಜಿರೆ  ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಭಾರತ ಮಾತಾ ಪೂಜನ  ಕಾರ್ಯಕ್ರಮವು ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯರ ಅಧ್ಯಕ್ಷತೆಯಲ್ಲಿ ಜರುಗಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ ದಶಪರ್ವ ಸಂಚಿಕೆ ಬಿಡುಗಡೆಗೊಳಿಸಿ ಯಕ್ಷಗಾನದೊಂದಿಗೆ ಸಂಸ್ಕಾರ ಶಿಕ್ಸಣ ಮತ್ತು ಅರೋಗ್ಯ ಸೇವಾಕಾರ್ಯಗಳನ್ನು ಯಕ್ಷ ಭಾರತಿ ನಡೆಸಿರುವುದು ಅಪೂರ್ವವಾಗಿದೆ. ಉಳಿದ ಸಂಘ ಸಂಸ್ಥೆಗಳಿಗೆ ಮಾದರಿಯಾಗಿರುವ ಯಕ್ಷಭಾರತಿ ಸಂಸ್ಥೆಗೆ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ

ಯಕ್ಷಭಾರತಿ ದಶಮಾನೋತ್ಸವ: ಭಾರತ ಮಾತಾಪೂಜನ, “ದಶಪರ್ವ ಸ್ಮರಣ ಸಂಚಿಕೆ” ಬಿಡುಗಡೆ Read More »

ವಿಟ್ಲ (ಫೆ.13 ರಿಂದ ಫೆ.17) :ಶ್ರೀ ಮಹಾವೀರ ಸ್ವಾಮಿ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠೆ| ಶೌರ್ಯ ವಿಪತ್ತು ನಿರ್ವಹಣಾ  ಘಟಕ  ತಂಡ ಸದಸ್ಯರಿಂದ ಶ್ರಮದಾನ

ವಿಟ್ಲ : ಭ/ಶ್ರೀ1008 ಚಂದ್ರನಾಥ ಸ್ವಾಮಿ ಬಸದಿ ತೀರ್ಥಂಕರರ ಮತ್ತು ಭ/1008 ಶ್ರೀ ಮಹಾವೀರ ಸ್ವಾಮಿ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠೆ ಹಾಗೂ ಶ್ರೀ ಯಕ್ಷಿ ಪದ್ಮಾವತಿ ಅಮ್ಮನವರ ಮತ್ತು ಶ್ರೀ ಯಕ್ಷಿ ಜ್ವಾಲಾಮಾಲಿನಿ ಅಮ್ಮನವರ ಪ್ರತಿಷ್ಠಾ ಮಹೋತ್ಸವವು ಫೆ.13ರಿಂದ ಫೆ.17ರವರೆಗೆ ಮೆಗಿನಪೇಟೆ ಜೈನ ಬಸದಿಯಲ್ಲಿ ನಡೆಯಲಿದೆ. ಇದಕ್ಕೆ  ಪೂರಕವಾಗಿ ಭಗವಾನ್ ಚಂದ್ರನಾಥಸ್ವಾಮಿ ನೂತನ ಬಿಂಬವನ್ನು ಆರ್ಕುಳ ದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ, ಇದರ ಕೆದಿಲ ಹಾಗೂ ವಿಟ್ಲ

ವಿಟ್ಲ (ಫೆ.13 ರಿಂದ ಫೆ.17) :ಶ್ರೀ ಮಹಾವೀರ ಸ್ವಾಮಿ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠೆ| ಶೌರ್ಯ ವಿಪತ್ತು ನಿರ್ವಹಣಾ  ಘಟಕ  ತಂಡ ಸದಸ್ಯರಿಂದ ಶ್ರಮದಾನ Read More »

ಪುತ್ತೂರು (ಫೆ.11) ನೆಹರು ನಗರ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವದ ವಾರ್ಷಿಕ ಜಾತ್ರೋತ್ಸವ

ಪುತ್ತೂರು: ನೆಹರು ನಗರ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವದ ವಾರ್ಷಿಕ ಜಾತ್ರೋತ್ಸವ ಫೆ. 11ರಂದು ನಡೆಯಿತು. ಬೆಳಗ್ಗೆ ಕಾರ್ಜಾಲು ಗುತ್ತಿನಲ್ಲಿ ಸ್ಥಳ ಶುದ್ಧಿ ಹೋಮ ಮತ್ತು ಕಲಶ ಪ್ರತಿಷ್ಠೆ ನಡೆಯಿತು. ಬೆಳಗ್ಗೆ11-30ಕ್ಕೆ ಕಲ್ಲೇಗ ದೈವಸ್ಥಾನದಲ್ಲಿ ಗಣಹೋಮ ಹಾಗೂ ಶ್ರೀ ದೈವಗಳ ತಂಬಿಲ ಮತ್ತು ನಾಗತಂಬಿಲ, ಮಧ್ಯಾಹ್ನ 12.30 ರಿಂದ ಕಲ್ಲೇಗ ದೈವಸ್ಥಾನದಲ್ಲಿ ಅನ್ನಸಂತರ್ಪಣಾ ಕಾರ್ಯಕ್ರಮ ನೆರವೇರಿತು. ರಾತ್ರಿ ಗಂಟೆ 7.30ಕ್ಕೆ ಸರಿಯಾಗಿ ಶ್ರೀದೈವಗಳ ಮೂಲನೆಲೆ ಕಾರ್ಜಾಲು ಗುತ್ತಿನಿಂದ ಭಂಡಾರ ಹೊರಡಲಿದ್ದು. ರಾತ್ರಿ ಗಂಟೆ 9:30ಕ್ಕೆ ಗೊಂದೊಳು

ಪುತ್ತೂರು (ಫೆ.11) ನೆಹರು ನಗರ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವದ ವಾರ್ಷಿಕ ಜಾತ್ರೋತ್ಸವ Read More »

ಆನಡ್ಕ – ಪುತ್ತೂರು  ಬಸ್‍ ಮತ್ತೆ ಸ್ಥಗಿತ | ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ತಯರಾದ ಪ್ರಯಾಣಿಕರು

ಪುತ್ತೂರು :  ಆನಡ್ಕದಿಂದ ಪುತ್ತೂರಿಗೆ ಹಲವು ಸಮಯಗಳಿಂದ ಬಾರದೆ ಇದ್ದ ಬಸ್ಸಿನ ಸಂಚಾರವನ್ನು ಗ್ರಾಮಸ್ಥರ ಪ್ರತಿಭಟನೆಯ ಎಚ್ಚರಿಕೆಗೆ ಮಣಿದು ಆರಂಭಗೊಳಿಸಿದರಾದರೂ ಇದೀಗ ಮತ್ತೆ ಬಸ್ ಸಂಚಾರ ಸ್ಥಗಿತಗೊಂಡಿರುವ ಬಗೆ ಪ್ರಯಾಣಿಕರು ದಿಗ್ಭ್ರಮೆ ವ್ಯಕ್ತ ಪಡಿಸಿದ್ದು, ಪ್ರತಿಭಟನೆಗೆ ಸಿದ್ದತೆ ನಡೆಯುತ್ತಿದೆ ಎಂದು ಕೇಳಿಬಂದಿದೆ.   ಆನಡ್ಕ – ಪುತ್ತೂರು  ಭಾಗಕ್ಕೆ ಬೆಳಗ್ಗೆ 8:00 ಗಂಟೆಗೆ ಹೊರಡುವ ಬಸ್‍ ಇಲ್ಲ ಎಂಬ ಮಾಹಿತಿ ಒಂದು ವಾರದ ಹಿಂದೆ ಕೇಳಿದ್ದೇವೆ. ಇದರಿಂದ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಿಗೆ ತೆರಳಲು ಸಮಸ್ಯೆಗಳಾಗಿವೆ. ಈ ಕಾರಣ ಬಸ್‍

ಆನಡ್ಕ – ಪುತ್ತೂರು  ಬಸ್‍ ಮತ್ತೆ ಸ್ಥಗಿತ | ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ತಯರಾದ ಪ್ರಯಾಣಿಕರು Read More »

ರಾಮಕ್ಕೆ ರೈ ನಿಧನ

ಪುತ್ತೂರು: ಪುಣ್ಯಪ್ಪಾಡಿ ಗ್ರಾಮದ ಸೂಡಿಮುಳ್ಳು ನಿವಾಸಿ ರಾಮಕ್ಕೆ ರೈ( 90 ಪ)ನಿನ್ನೆ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಇಂದು ಬೆಳಿಗ್ಗೆ ನಡೆಯಿತು. ಮೃತರು ಮಕ್ಕಳಾದ ಗಣೇಶ್ ರೈ ಸೂಡಿಮುಳ್ಳು, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾಯದರ್ಶಿ ಸುರೇಶ್ ರೈ ಸೂಡಿಮುಳ್ಳು ಮತ್ತು ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್

ರಾಮಕ್ಕೆ ರೈ ನಿಧನ Read More »

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಐದನೇ ವಾರ್ಷಿಕ ಪ್ರತಿಷ್ಠಾ ದಿನೋತ್ಸವ 

ಉಪ್ಪಿನಂಗಡಿ : ಇಲ್ಲಿನ  ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಐದನೇ ವಾರ್ಷಿಕ ಪ್ರತಿಷ್ಠಾ ದಿನೋತ್ಸವವು   ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಎರಡು ದಿನಗಳಲ್ಲಿ ಜರಗಿತು. ಫೆಬ್ರವರಿ 6ರಂದು ಸುತ್ತಮುತ್ತಲಿನ ಗ್ರಾಮಗಳಿಂದ ಹೊರೆಕಾಣಿಕೆ, ‌ಮಹಾಪೂಜೆ, ಅನ್ನಸಂತರ್ಪಣೆ, ಭಜನೆ ಮಹಾರಂಗಪೂಜೆ ಬಳಿಕ ನಾಗ ಮಾಣಿಕ್ಯ ನಾಟಕ ನಡೆಯಿತು.  ಮರುದಿನ ಕೆಮ್ಮಿಂಜೆ ಬ್ರಹ್ಮ ಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಗಣಹೋಮ, ಪಂಚ ವಿಂಶತಿ ಕಲಶಾಭಿಶೇಕ, ಪರಿವಾರ ದೈವಗಳಿಗೆ ಕಲಶ ತಂಬಿಲ, ಶ್ರೀ ಆಂಜನೇಯ ಯಕ್ಷಗಾನ ಮಹಿಳಾ ಸಂಘ ಬೊಳುವಾರು ಪುತ್ತೂರು ಇವರಿಂದ ಶ್ಯಮಂತಕ

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಐದನೇ ವಾರ್ಷಿಕ ಪ್ರತಿಷ್ಠಾ ದಿನೋತ್ಸವ  Read More »

error: Content is protected !!
Scroll to Top