ಸುದ್ದಿ

ಮೂಡುಬಿದಿರೆ : ಇಂದಿನಿಂದ ಆಳ್ವಾಸ್‌ ವಿರಾಸತ್‌ ವೈಭವ

30ನೇ ವರ್ಷದವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರುಗು, ಮೇಳಗಳ ಬೆರಗು ಮೂಡುಬಿದಿರೆ: ಮೋಹನ್‌ ಆಳ್ವ ನೇತೃತ್ವದ ವಿರಾಸತ್‌ ಸಾಂಸ್ಕೃತಿಕ ವೈಭವಕ್ಕೆ 30ನೇ ವರ್ಷದ ಸಂಭ್ರಮ. ಈ ವರ್ಷದ ವಿರಾಸತ್‌ ಇಂದಿನಿಂದ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಅನಾವರಣಗೊಳ್ಳಲಿದೆ. ಈ ರಾಷ್ಟ್ರೀಯ ಸಾಂಸ್ಕೃತಿಕ ಹಬ್ಬಕ್ಕಾಗಿ ವಿದ್ಯಾಗಿರಿ ಸರ್ವಾಲಂಕಾರಗೊಂಡು ಸಜ್ಜಾಗಿದೆ. ಇಂದಿನಿಂದ ಭಾನುವಾರದವರೆಗೆ ಆರು ದಿನಗಳ ಮಹಾಮೇಳಗಳ ಜೊತೆ ಸಾಂಸ್ಕೃತಿಕ ರಸದೌತಣ ವಿದ್ಯಾಗಿರಿಯಲ್ಲಿ ಸಿಗಲಿದೆ.ಈ ಬಾರಿ ಡಿ.10ರಿಂದ 14ರವರೆಗೆ ಮೇಳಗಳ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿದ್ದರೆ, ಡಿ.15ರ ಭಾನುವಾರದ ಪೂರ್ಣ ದಿನವನ್ನು ಜನ ಮೇಳಗಳಲ್ಲಿ […]

ಮೂಡುಬಿದಿರೆ : ಇಂದಿನಿಂದ ಆಳ್ವಾಸ್‌ ವಿರಾಸತ್‌ ವೈಭವ Read More »

ಆ ಒಂದು ಪತ್ರವನ್ನು ಹಾರ್ಡಿ ಸರ್ ತೆರೆಯದೇ ಇದ್ದಿದ್ದರೆ…!

ರಾಮಾನುಜನ್ ಬದುಕಿನಲ್ಲಿ ತಿರುವು ಕೊಟ್ಟ ಆ ಘಟನೆ ಯಾವುದು? 1913ನೇ ಇಸವಿಯ ಡಿಸೆಂಬರ್ ತಿಂಗಳ ಮೈ ಕೊರೆಯುವ ಚಳಿಯ ಒಂದು ದಿನ. ಆಕ್ಸಫರ್ಡ್ ವಿವಿಯ ತನ್ನ ಕೊಠಡಿಯಲ್ಲಿ ಕುಳಿತು ಗಣಿತದ ಪ್ರಸಿದ್ಧ ಪ್ರೊಫೆಸರ್ ಹಾರ್ಡಿ ಸರ್ ಅವರು ಸಿಗಾರ್ ಎಳೆಯುತ್ತಿದ್ದರು. ಅವರ ಟೇಬಲ್ ಮೇಲೆ ಅಂಚೆಚೀಟಿ ಹೊತ್ತ ಕಂದು ಬಣ್ಣದ ಒಂದು ಕವರ್ ಬಂದು ಕೂತಿತ್ತು. ಅದು ಭಾರತದಿಂದ ಹಡಗಿನಲ್ಲಿ ಕೂತು ಇಂಗ್ಲೆಂಡಿಗೆ ಬಂದಿತ್ತು. ಹಾರ್ಡಿ ಸರ್ ಅದನ್ನು ಮೇಲೆ ಮೇಲೆ ಒಮ್ಮೆ ನೋಡಿ ಬದಿಗೆ ಸರಿಸಿದರು.

ಆ ಒಂದು ಪತ್ರವನ್ನು ಹಾರ್ಡಿ ಸರ್ ತೆರೆಯದೇ ಇದ್ದಿದ್ದರೆ…! Read More »

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಇನ್ನಿಲ್ಲ

ರಾಜ್ಯಪಾಲರಾಗಿ, ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದ ಮುತ್ಸದ್ದಿ ರಾಜಕಾರಣಿ ಬೆಂಗಳೂರು : ಕರ್ನಾಟಕ ರಾಜಕಾರಣ ಕಂಡ ಮುತ್ಸದ್ದಿ ರಾಜಕಾರಣಿ, ಮಾಜಿ ವಿದೇಶಾಂಗ ಸಚಿವ, ಮಾಜಿ ಮುಖ್ಯಮಂತ್ರಿ ಎಸ್​.ಎಂ ಕೃಷ್ಣ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಇಂದು (ಡಿಸೆಂಬರ್​ 10) ನಸುಕಿನ ಜಾವ 2.30ರ ಸುಮಾರಿಗೆ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್​​.ಎಂ ಕೃಷ್ಣರನ್ನು ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲಾಗಿತ್ತು. ಶ್ವಾಸಕೋಶದ ಸೋಂಕಿನ ಕಾರಣಕ್ಕೆ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಇನ್ನಿಲ್ಲ Read More »

ಡಿವೈಡರ್‌ಗೆ  ಕಾರು ಡಿಕ್ಕಿ | ಐವರು ಸೇರಿ 7 ಮಂದಿ ವಿದ್ಯಾರ್ಥಿಗಳ ದಾರುಣ ಸಾವು

ಗುಜರಾತ್‍ : ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಐವರು ವಿದ್ಯಾರ್ಥಿಗಳು ಸೇರಿ 7 ಮಂದಿ ಸಾವನ್ನಪ್ಪಿದ  ಘಟನೆ ಗುಜರಾತ್‌ನ ಜುನಾಗಢದಲ್ಲಿ ನಡೆದಿದೆ. ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದ ಹಿನ್ನಲೆ ಐವರು ಕಾಲೇಜು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ವೇಗವಾಗಿ ಬಂದ ವಿದ್ಯಾರ್ಥಿಗಳ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆಯ ಇನ್ನೊಂದು ಬದಿಗೆ ಪಲ್ಟಿಯಾಗಿದೆ. ಅದೇ ಸಮಯದಲ್ಲಿ ಅಭಿಮುಖವಾಗಿ ವೇಗವಾಗಿ ಬಂದ ಎರಡನೇ ಕಾರಿಗೆ ಡಿಕ್ಕಿ ಹೊಡೆದಿದೆ . ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ

ಡಿವೈಡರ್‌ಗೆ  ಕಾರು ಡಿಕ್ಕಿ | ಐವರು ಸೇರಿ 7 ಮಂದಿ ವಿದ್ಯಾರ್ಥಿಗಳ ದಾರುಣ ಸಾವು Read More »

ರಾಷ್ಟ್ರ ರಾಜಕಾರಣದಲ್ಲಿ ಚರ್ಚೆಗೆ ಕಾರಣವಾದ ಸೋನಿಯಾ – ಸೊರೊಸ್‌ ಕಂಪನಿ ನಂಟಿನ ಆರೋಪ

ಭಾರತದ ವಿರುದ್ಧ ಪಿತೂರಿ ಮಾಡುತ್ತಿರುವ ವಿಚಾರದ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ಪಟ್ಟು ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಗೌತಮ್‌ ಅದಾನಿ ನಂಟಿನ ಆರೋಪ ಮಾಡುತ್ತಿರುವ ಕಾಂಗ್ರೆಸ್‌ಗೆ ಬಿಜೆಪಿ ಸೋನಿಯಾ ಗಾಂಧಿ ಮತ್ತು ಅಮೆರಿಕದ ವಿವಾದಾತ್ಮಕ ಉದ್ಯಮಿ ಜಾರ್ಜ್ ಸೊರೊಸ್ ಒಡೆತನದ ಸಂಸ್ಥೆಗಳ ಜೊತೆಗಿರುವ ನಂಟನ್ನು ಬಹಿರಂಗಗೊಳಿಸಿ ತಿರುಗೇಟು ನೀಡಿದ್ದು, ಈ ವಿಚಾರ ಈಗ ರಾಷ್ಟ್ರ ರಾಜಕಾರಣದಲ್ಲಿ ಬಹಳ ಚರ್ಚೆಗೀಡಾಗುತ್ತಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ನಂಟು ಬಹಳ ಗಂಭೀರ ವಿಚಾರ ಎಂದು

ರಾಷ್ಟ್ರ ರಾಜಕಾರಣದಲ್ಲಿ ಚರ್ಚೆಗೆ ಕಾರಣವಾದ ಸೋನಿಯಾ – ಸೊರೊಸ್‌ ಕಂಪನಿ ನಂಟಿನ ಆರೋಪ Read More »

40ಕ್ಕೂ ಅಧಿಕ ಶಾಲೆಗಳಿಗೆ ಬಾಂಬ್‌ ಬೆದರಿಕೆ : ಬೆಚ್ಚಿಬಿದ್ದ ರಾಜಧಾನಿ

ಹುಸಿ ಬೆದರಿಕೆ ಕಳುಹಿಸಿ ಕಾಟ ಕೊಡುತ್ತಿರುವವರಿಗೆ ಶೋಧ ಹೊಸದಿಲ್ಲಿ: ದಿಲ್ಲಿಯ 40ಕ್ಕೂ ಅಧಿಕ ಖಾಸಗಿ ಶಾಲೆಗಳಿಗೆ ಇಂದು ಬೆಳ್ಳಂಬೆಳಗ್ಗೆ ಇ-ಮೇಲ್‌ ಮೂಲಕ ಬಾಂಬಿಟ್ಟಿರುವ ಕುರಿತು ಬಂದಿದ್ದ ಬೆದರಿಕೆ ಸಂದೇಶ ತಾಸುಗಳಷ್ಟು ಹೊತ್ತು ಆತಂಕಕ್ಕೆ ಕಾರಣವಾಯಿತು. ಪೊಲೀಸರು ಬಾಂಬ್‌ ನಿಷ್ಕ್ರಿಯ ತಂಡದೊಂದಿಗೆ ಶಾಲೆಯಿಂದ ಶಾಲೆಗೆ ಅಲೆದಾಡಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಹೇಳಿದ ಬಳಿಕ ಪರಿಸ್ಥಿತಿ ನಿರಾಳವಾಯಿತು.40ಕ್ಕೂ ಹೆಚ್ಚು ಶಾಲೆಗಳಿಗೆ ಇ-ಮೇಲ್ ಮೂಲಕ ಬೆದರಿಕೆಗಳನ್ನು ಕಳುಹಿಸಲಾಗಿದೆ. ಇನ್ನು ಮುಂದೆ ಬೆದರಿಕೆ ಬರಬಾರದು ಎಂದಾದರೆ 30 ಸಾವಿರ ಡಾಲರ್

40ಕ್ಕೂ ಅಧಿಕ ಶಾಲೆಗಳಿಗೆ ಬಾಂಬ್‌ ಬೆದರಿಕೆ : ಬೆಚ್ಚಿಬಿದ್ದ ರಾಜಧಾನಿ Read More »

ಹುಷಾರ್‌! ಇಡೀ ಮೊಬೈಲನ್ನೇ ಹ್ಯಾಕ್‌ ಮಾಡಿ ಹಣ ಎಗರಿಸುತ್ತಾರೆ

ಎಪಿಕೆ ಮಾದರಿಯ ಫೈಲ್ ಕಳುಹಿಸಿ ಮಂಗಳೂರಿನ ವ್ಯಕ್ತಿಗೆ ವಂಚನೆ ಮಂಗಳೂರು : ಪೊಲೀಸರು ಚಾಪೆ ಕೆಳಗೆ ತೂರಿದರೆ ಸೈಬರ್‌ ವಂಚಕರು ರಂಗೋಲಿ ಕೆಳಗೆ ತೂರುವ ಕಲೆಯನ್ನು ಕರಗತಮಾಡಿಕೊಳ್ಳುತ್ತಿದ್ದಾರೆ. ಇಷ್ಟರ ತನಕ ಮೊಬೈಲ್‌ನಲ್ಲಿರುವ ಕೆಲವು appಗಳನ್ನು ಹ್ಯಾಕ್‌ ಮಾಡಿ ಬ್ಯಾಂಕ್‌ ಖಾತೆಗಳಲ್ಲಿರುವ ಹಣ ಲಪಟಾಯಿಸುತ್ತಿದ್ದ ವಂಚಕರು ಈಗ ಇಡೀ ಮೊಬೈಲನ್ನೇ ಹ್ಯಾಕ್‌ ಮಾಡುವ ಹೊಸ ತಂತ್ರವನ್ನು ಕಂಡುಕೊಂಡಿದ್ದಾರೆ. ಮಂಗಳೂರಿನಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಇಂಥ ಪ್ರಕರಣವೊಂದು ನಡೆದಿದ್ದು, ವ್ಯಕ್ತಿಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ವಾಟ್ಸಪ್‌ಗೆ ನಕಲಿ ಎಪಿಕೆ ಮಾದರಿಯ

ಹುಷಾರ್‌! ಇಡೀ ಮೊಬೈಲನ್ನೇ ಹ್ಯಾಕ್‌ ಮಾಡಿ ಹಣ ಎಗರಿಸುತ್ತಾರೆ Read More »

ಇಂದಿನಿಂದ ಚಳಿಗಾಲದ ಅಧಿವೇಶನ : ವಿಪಕ್ಷದ ಬತ್ತಳಿಕೆಯಲ್ಲಿದೆ ಹಲವು ಅಸ್ತ್ರ

ಮೊದಲ ದಿನವೇ ಕೋಲಾಹಲದ ನಿರೀಕ್ಷೆ ಬೆಳಗಾವಿ: ಇಂದಿನಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಹುಮ್ಮಸ್ಸಿನಲ್ಲಿರುವ ರಾಜ್ಯ ಸರ್ಕಾರವನ್ನು ಕಟ್ಟಿಹಾಕಲು ವಿಪಕ್ಷಗಳು ಸಿದ್ದಗೊಂಡಿವೆ. ಮುಡಾ, ವಾಲ್ಮೀಕಿ ನಿಗಮ, ವಕ್ಫ್‌ನಿಂದ ರೈತರ ಭೂ ಕಬಳಿಕೆ ವಿವಾದ, ಬಾಣಂತಿಯರ ಸಾವು ಪ್ರಕರಣ ಹೀಗೆ ಹಲವು ಅಸ್ತ್ರಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಮೇಲೆ ಮುಗಿಬೀಳಲು ವಿರೋಧ ಪಕ್ಷದವರು ಸಜ್ಜಾಗಿದ್ದಾರೆ. ಬಿಜೆಪಿ ಅಸ್ತ್ರಗಳಿಗೆ ಕಾಂಗ್ರೆಸ್ ಕೊರೊನ ಅಸ್ತ್ರ ಜೊತೆಗೆ ಯತ್ನಾಳ್ ಬಣ ಬಡಿದಾಟವನ್ನು ತಿರುಗುಬಾಣವಾಗಿ ಬಿಡಲು ಸಜ್ಜಾಗಿದೆ. ಬಿಜೆಪಿ ವಕ್ಫ್

ಇಂದಿನಿಂದ ಚಳಿಗಾಲದ ಅಧಿವೇಶನ : ವಿಪಕ್ಷದ ಬತ್ತಳಿಕೆಯಲ್ಲಿದೆ ಹಲವು ಅಸ್ತ್ರ Read More »

ಕಿರಿಕ್ ಪಾರ್ಟಿಯ ಸಾನ್ವಿ ಇದೀಗ ಇಡೀ ಭಾರತದ ಕೃಶ್‌

ರಶ್ಮಿಕಾ ಮಂದಣ್ಣ ಬೆಳೆದು ಬಂದ ದಾರಿ ನಿಜಕ್ಕೂ ವಿಸ್ಮಯ ಇಂದು ಇಡೀ ಭಾರತದ ಸಿನೆಮಾ ಇಂಡಸ್ಟ್ರಿ ಆಕೆಯ ಸೌಂದರ್ಯ ಮತ್ತು ಪ್ರತಿಭೆಗೆ ಬೆರಗಾಗಿದೆ. ಆಕೆಯನ್ನು ಸಿನೆಮಾ ಪಂಡಿತರು ಭಾರತದ ಕೃಶ್‌ ಎಂದು ಕರೆಯಲು ಆರಂಭಿಸಿದ್ದಾರೆ. ಆಕೆ ಇಂದು ದಕ್ಷಿಣ ಭಾರತದ ಅತ್ಯಂತ ಹೆಚ್ಚು ಸಂಭಾವನೆ ಪಡೆವ ನಟಿ ಎಂದು ಕರೆಯಲ್ಪಟ್ಟಿದ್ದಾರೆ. ಭಾರತದ ಹೆಚ್ಚಿನ ಸೂಪರ್‌ಸ್ಟಾರ್ ನಟರ ಜೊತೆ ಆಕೆ ನಟಿಸಿ ಆಗಿದೆ. ದಕ್ಷಿಣ ಭಾರತದ ಒಬ್ಬ ನಟಿ ಅಮಿತಾಬ್, ಸಲ್ಮಾನ್ ಖಾನ್ ಮೊದಲಾದ ಮಹಾನ್ ನಟರ ಸಿನೆಮಾದಲ್ಲಿ

ಕಿರಿಕ್ ಪಾರ್ಟಿಯ ಸಾನ್ವಿ ಇದೀಗ ಇಡೀ ಭಾರತದ ಕೃಶ್‌ Read More »

ಉಳ್ಳಾಲ : ಮನೆಯಲ್ಲಿ ಸಿಲಿಂಡರ್‌ ಸ್ಫೋಟ; ತಾಯಿ ಮೂವರು ಮಕ್ಕಳು ಗಂಭೀರ

ಗ್ಯಾಸ್‌ ಸೋರಿಕೆಯಾಗಿ ಸ್ಫೋಟಿಸಿದ ಸಿಲಿಂಡರ್‌, ಹಾರಿಹೋದ ಛಾವಣಿ ಮಂಗಳೂರು : ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಕಂಡಿಕ ಎಂಬಲ್ಲಿ ಶನಿವಾರ ಮಧ್ಯರಾತ್ರಿ ಮನೆಯೊಳಗೆ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ತಾಯಿ ಮತ್ತು ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಗ್ಯಾಸ್ ಸೋರಿಕೆಯಿಂದ ಸಿಲಿಂಡರ್‌ ಸ್ಫೋಟಗೊಂಡಿದೆ ಎನ್ನಲಾಗಿದೆ. ಸ್ಫೋಟದ ಬಿರುಸಿಗೆ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಮಲಗಿದ್ದ ಮಂಚ ಸುಟ್ಟು ಕರಕಲಾಗಿದೆ.ತಾಯಿ ಖುಬ್ರಾ (40) ಹಾಗೂ ಮೂವರು ಮಕ್ಕಳಾದ ಮೆಹದಿ (15), ಮಝಿಯಾ (13), ಮಾಯಿದಾ (11) ಘಟನೆಯಲ್ಲಿ ತೀವ್ರ ಗಾಯಗೊಂಡವರು.

ಉಳ್ಳಾಲ : ಮನೆಯಲ್ಲಿ ಸಿಲಿಂಡರ್‌ ಸ್ಫೋಟ; ತಾಯಿ ಮೂವರು ಮಕ್ಕಳು ಗಂಭೀರ Read More »

error: Content is protected !!
Scroll to Top