ಸುದ್ದಿ

ಇಂದು ಸಂಜೆ ಎಸ್‌.ಎಂ ಕೃಷ್ಣ ಅಂತ್ಯಕ್ರಿಯೆ

ಸಿದ್ದರಾಮಯ್ಯ, ಪ್ರಹ್ಲಾದ್‌ ಜೋಶಿ ಸಹಿತ ಗಣ್ಯರಿಂದ ಅಂತಿಮ ನಮನ ಬೆಂಗಳೂರು : ನಿನ್ನೆ ನಿಧನರಾಗಿರುವ ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಸಂಜೆ ಹುಟ್ಟೂರು ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ ನಡೆಯಲಿದೆ. ಬೆಳಗ್ಗೆ ಕೃಷ್ಣ ಅವರ ಪಾರ್ಥಿವ ಶರೀರವನ್ನು ಮದ್ದೂರಿಗೆ ಕೊಂಡೊಯ್ಯಲಾಗುತ್ತದೆ. ಮಾರ್ಗ ಮಧ್ಯೆ ಕೆಂಗೇರಿ, ರಾಮನಗರ, ಚನ್ನಪಟ್ಟಣದಲ್ಲಿ ಕೆಲಹೊತ್ತು ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಸಂಜೆ 3 ಗಂಟೆ ಸುಮಾರಿಗೆ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, […]

ಇಂದು ಸಂಜೆ ಎಸ್‌.ಎಂ ಕೃಷ್ಣ ಅಂತ್ಯಕ್ರಿಯೆ Read More »

ಭಾರತದ ವಾಲ್ಟ್ ಡಿಸ್ನಿ ಅಂಕಲ್ ಪೈ

ಅಮರ ಚಿತ್ರಕಥಾ ಸರಣಿಗಳ ಜನಕ ಅವರು ಪ್ರತಿಯೊಬ್ಬರೂ ಬಾಲ್ಯದಲ್ಲಿ ಖಂಡಿತವಾಗಿ ಓದಿರುವ ಹಾಗೂ ಇಂದಿಗೂ ಓದಲು ಇಚ್ಛೆ ಪಡುವ ಎರಡು ಕಾಮಿಕ್ಸ್ ಪುಸ್ತಕಗಳ ಸರಣಿಗಳೆಂದರೆ ಅವು ಅಮರ ಚಿತ್ರಕಥಾ ಮತ್ತು ಟಿಂಕಲ್. ಬಣ್ಣ ಬಣ್ಣದ ಚಿತ್ರಗಳ ಜೊತೆಗೆ ಕಥೆ ಹೇಳುವ ಆಕರ್ಷಕ ಪುಸ್ತಕಗಳು ಅವು. ನಮ್ಮೆಲ್ಲರ ಮನಸ್ಸಿನಲ್ಲಿ ಅದ್ಭುತ ರಮ್ಯ ಕಲ್ಪನಾಲೋಕ ಸೃಷ್ಟಿಸಿದ ಸರಣಿ ಪುಸ್ತಕಗಳು. ಅವೆರಡೂ ಸರಣಿಗಳನ್ನು ಭಾರತದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಸಿದವರು ಅನಂತ್ ಪೈಯವರು. ತಮ್ಮನ್ನು ‘ಅಂಕಲ್ ಪೈ’ ಎಂದವರು ಪ್ರೀತಿಯಿಂದ ಕರೆದುಕೊಂಡರು.

ಭಾರತದ ವಾಲ್ಟ್ ಡಿಸ್ನಿ ಅಂಕಲ್ ಪೈ Read More »

ಮಾದಕ ವಸ್ತು ಮಾರಾಟ ಮಾಡುತ್ತಿದ್ದ  ಆರೋಪಿಯ ಬಂಧನ | 56,000 ರೂ. ಮೌಲ್ಯದ ಮಾದಕ ವಸ್ತು ವಶ

ಮಂಗಳೂರು: ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ  ಆರೋಪಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವಾಮಂಜೂರು ತಿರುವೈಲು ಮೂಡುಜೆಪ್ಪು ಅಮೃತೇಶ್ವರ ದೇವಸ್ಥಾನದ ಬಳಿಯ ನಿವಾಸಿ ನದೀಂ(34) ಎಂದು ಪತ್ತೆ ಹಚ್ಚಲಾಗಿದೆ. ಈತ ಬಂಗ್ರ ಕೂಳೂರು ಕಡೆಗೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಮಾದಕ ವಸ್ತುಗಳನ್ನಿಟ್ಟುಕೊಂಡು ಗಿರಾಕಿಗಳಿಗಾಗಿ ಕಾಯುತ್ತಿದ್ದ ಎನ್ನಲಾಗಿದ್ದು, ಈತನ ವಶದಲ್ಲಿದ್ದ ಅಂದಾಜು 56,000 ರೂ. ಬೆಲೆಬಾಳುವ ಮಾದಕ ವಸ್ತುಗಳು, ಮೊಬೈಲ್ ಫೋನ್, 7 ಡೆಬಿಟ್‌ ಕಾರ್ಡ್‌ಗಳು ಮತ್ತು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಾದಕ ವಸ್ತು ಮಾರಾಟ ಮಾಡುತ್ತಿದ್ದ  ಆರೋಪಿಯ ಬಂಧನ | 56,000 ರೂ. ಮೌಲ್ಯದ ಮಾದಕ ವಸ್ತು ವಶ Read More »

ಮರಕ್ಕೆ ಡಿಕ್ಕಿ ಹೊಡೆದ ಬಸ್‍ | ಪ್ರಯಾಣಿಕರಿಗೆ ಗಂಭೀರ ಗಾಯ

ಕೊಡಗು: ಗುಂಡಿಯನ್ನು ತಪ್ಪಿಸಲು ಹೋದ KSRTC ಬಸ್‍ ಚಾಲಕ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಕೊಡಗಿನಲ್ಲಿ ನಡೆದಿದೆ. KSRTC ಬಸ್ ಮೈಸೂರಿನಿಂದ ವಿರಾಜಪೇಟೆ ಕಡೆಗೆ ಚಲಿಸುವ ಬಸ್‍ ಆಗಿದ್ದು, ಕೊಡಗಿನ  ತಿತಿಮತಿ ಸಮೀಪದ ದೇವರಪುರದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದೆ. ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ 17ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು ಕೆಲವರ ಸ್ಥಿತಿ ಗಂಭೀರವಾಗಿದೆ. ಅಪಘಾತದಲ್ಲಿ ಬಸ್ ಸಂಪೂರ್ಣ ಜಖಂ ಗೊಂಡಿದೆ. ಬಸ್ ಚಾಲಕನ ಕಾಲು ಮುರಿದಿದ್ದು, ಗಾಯಾಳುಗಳಿಗೆ ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

ಮರಕ್ಕೆ ಡಿಕ್ಕಿ ಹೊಡೆದ ಬಸ್‍ | ಪ್ರಯಾಣಿಕರಿಗೆ ಗಂಭೀರ ಗಾಯ Read More »

ಕೃಷ್ಣ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ಕೃಷ್ಣ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ರಾಜ್ಯ ಮತ್ತು ಕೇಂದ್ರ ಸಚಿವರಾಗಿ ಹಾಗೂ ಮುಖ್ಯಮಂತ್ರಿಯಾಗಿ ಕೃಷ್ಣ ಅವರು ಸಲ್ಲಿಸಿರುವ ಸೇವೆ ಅನುಪಮವಾದುದು. ವಿಶೇಷವಾಗಿ ಮುಖ್ಯಮಂತ್ರಿಯಾಗಿ ಐಟಿ-ಬಿಟಿ ಕ್ಷೇತ್ರದ ಬೆಳವಣಿಗೆಗೆ ಅವರು ನೀಡಿರುವ ಕೊಡುಗೆಗಾಗಿ ಕರ್ನಾಟಕ ಸದಾ ಋಣಿಯಾಗಿರುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಎಕ್ಸ್‌ನಲ್ಲಿ ಶೋಕ ಸಂದೇಶ ಫೋಸ್ಟ್‌ ಮಾಡಿದ ಸಿದ್ದರಾಮಯ್ಯ, ಮುತ್ಸದ್ದಿ ರಾಜಕಾರಣಿಯಾಗಿದ್ದ ಕೃಷ್ಣ ಅಜಾತಶತ್ರುವಾದ್ದರು. ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಪ್ರಾರಂಭದ ದಿನಗಳಲ್ಲಿ‌

ಕೃಷ್ಣ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ Read More »

ಮುಂಬಯಿ : ಬ್ರೇಕ್‌ಫೇಲ್‌ ಆಗಿ ಕಟ್ಟಡಕ್ಕೆ ಗುದ್ದಿದ ಬಸ್‌, 6 ಮಂದಿ ಸಾವು, 49 ಜನರಿಗೆ ಗಾಯ

100 ಮೀಟರ್‌ ಉದ್ದಕ್ಕೂ ನಿಲ್ಲಿಸಿದ್ದ 40 ವಾಹನಗಳು ಜಖಂ ಮುಂಬಯಿ: ಬ್ರೇಕ್‌ಫೇಲ್ ಆದ ಬೆಸ್ಟ್‌ ಬಸ್ ಪಾದಚಾರಿಗಳಿಗೆ ಮತ್ತು ವಾಹನಗಳಿಗೆ ಡಿಕ್ಕಿ ಹೊಡೆದು ಆರು ಮಂದಿ ಸ್ಥಳದಲ್ಲೇ ದುರ್ಮರಣವನ್ನಪ್ಪಿ 49 ಮಂದಿ ಗಂಭೀರವಾಗಿ ಗಾಯಗೊಂಡ ಭೀಕರ ಅಪಘಾತ ಸೋಮವಾರ ತಡರಾತ್ರಿ ಮುಂಬಯಿಯ ಉಪನಗರ ಕುರ್ಲಾದಲ್ಲಿ ಸಂಭವಿಸಿದೆ. ಕುರ್ಲಾ ಪಶ್ಚಿಮದ ಎಲ್ ವಾರ್ಡ್‌ನ ಎಸ್‌ ಜಿ ಬರ್ವೆ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ. ಬ್ರೇಕ್‌ಫೇಲ್‌ ಆದ ಬಸ್‌ 100 ಮೀಟರ್‌ ಉದ್ದಕ್ಕೆ ನಿಲ್ಲಿಸಿದ್ದ ಸುಮಾರು 40 ವಾಹನಗಳಿಗೆ ಡಿಕ್ಕಿ

ಮುಂಬಯಿ : ಬ್ರೇಕ್‌ಫೇಲ್‌ ಆಗಿ ಕಟ್ಟಡಕ್ಕೆ ಗುದ್ದಿದ ಬಸ್‌, 6 ಮಂದಿ ಸಾವು, 49 ಜನರಿಗೆ ಗಾಯ Read More »

ಮೂಡುಬಿದಿರೆ : ಇಂದಿನಿಂದ ಆಳ್ವಾಸ್‌ ವಿರಾಸತ್‌ ವೈಭವ

30ನೇ ವರ್ಷದವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರುಗು, ಮೇಳಗಳ ಬೆರಗು ಮೂಡುಬಿದಿರೆ: ಮೋಹನ್‌ ಆಳ್ವ ನೇತೃತ್ವದ ವಿರಾಸತ್‌ ಸಾಂಸ್ಕೃತಿಕ ವೈಭವಕ್ಕೆ 30ನೇ ವರ್ಷದ ಸಂಭ್ರಮ. ಈ ವರ್ಷದ ವಿರಾಸತ್‌ ಇಂದಿನಿಂದ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಅನಾವರಣಗೊಳ್ಳಲಿದೆ. ಈ ರಾಷ್ಟ್ರೀಯ ಸಾಂಸ್ಕೃತಿಕ ಹಬ್ಬಕ್ಕಾಗಿ ವಿದ್ಯಾಗಿರಿ ಸರ್ವಾಲಂಕಾರಗೊಂಡು ಸಜ್ಜಾಗಿದೆ. ಇಂದಿನಿಂದ ಭಾನುವಾರದವರೆಗೆ ಆರು ದಿನಗಳ ಮಹಾಮೇಳಗಳ ಜೊತೆ ಸಾಂಸ್ಕೃತಿಕ ರಸದೌತಣ ವಿದ್ಯಾಗಿರಿಯಲ್ಲಿ ಸಿಗಲಿದೆ.ಈ ಬಾರಿ ಡಿ.10ರಿಂದ 14ರವರೆಗೆ ಮೇಳಗಳ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿದ್ದರೆ, ಡಿ.15ರ ಭಾನುವಾರದ ಪೂರ್ಣ ದಿನವನ್ನು ಜನ ಮೇಳಗಳಲ್ಲಿ

ಮೂಡುಬಿದಿರೆ : ಇಂದಿನಿಂದ ಆಳ್ವಾಸ್‌ ವಿರಾಸತ್‌ ವೈಭವ Read More »

ಆ ಒಂದು ಪತ್ರವನ್ನು ಹಾರ್ಡಿ ಸರ್ ತೆರೆಯದೇ ಇದ್ದಿದ್ದರೆ…!

ರಾಮಾನುಜನ್ ಬದುಕಿನಲ್ಲಿ ತಿರುವು ಕೊಟ್ಟ ಆ ಘಟನೆ ಯಾವುದು? 1913ನೇ ಇಸವಿಯ ಡಿಸೆಂಬರ್ ತಿಂಗಳ ಮೈ ಕೊರೆಯುವ ಚಳಿಯ ಒಂದು ದಿನ. ಆಕ್ಸಫರ್ಡ್ ವಿವಿಯ ತನ್ನ ಕೊಠಡಿಯಲ್ಲಿ ಕುಳಿತು ಗಣಿತದ ಪ್ರಸಿದ್ಧ ಪ್ರೊಫೆಸರ್ ಹಾರ್ಡಿ ಸರ್ ಅವರು ಸಿಗಾರ್ ಎಳೆಯುತ್ತಿದ್ದರು. ಅವರ ಟೇಬಲ್ ಮೇಲೆ ಅಂಚೆಚೀಟಿ ಹೊತ್ತ ಕಂದು ಬಣ್ಣದ ಒಂದು ಕವರ್ ಬಂದು ಕೂತಿತ್ತು. ಅದು ಭಾರತದಿಂದ ಹಡಗಿನಲ್ಲಿ ಕೂತು ಇಂಗ್ಲೆಂಡಿಗೆ ಬಂದಿತ್ತು. ಹಾರ್ಡಿ ಸರ್ ಅದನ್ನು ಮೇಲೆ ಮೇಲೆ ಒಮ್ಮೆ ನೋಡಿ ಬದಿಗೆ ಸರಿಸಿದರು.

ಆ ಒಂದು ಪತ್ರವನ್ನು ಹಾರ್ಡಿ ಸರ್ ತೆರೆಯದೇ ಇದ್ದಿದ್ದರೆ…! Read More »

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಇನ್ನಿಲ್ಲ

ರಾಜ್ಯಪಾಲರಾಗಿ, ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದ ಮುತ್ಸದ್ದಿ ರಾಜಕಾರಣಿ ಬೆಂಗಳೂರು : ಕರ್ನಾಟಕ ರಾಜಕಾರಣ ಕಂಡ ಮುತ್ಸದ್ದಿ ರಾಜಕಾರಣಿ, ಮಾಜಿ ವಿದೇಶಾಂಗ ಸಚಿವ, ಮಾಜಿ ಮುಖ್ಯಮಂತ್ರಿ ಎಸ್​.ಎಂ ಕೃಷ್ಣ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಇಂದು (ಡಿಸೆಂಬರ್​ 10) ನಸುಕಿನ ಜಾವ 2.30ರ ಸುಮಾರಿಗೆ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್​​.ಎಂ ಕೃಷ್ಣರನ್ನು ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲಾಗಿತ್ತು. ಶ್ವಾಸಕೋಶದ ಸೋಂಕಿನ ಕಾರಣಕ್ಕೆ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಇನ್ನಿಲ್ಲ Read More »

ಡಿವೈಡರ್‌ಗೆ  ಕಾರು ಡಿಕ್ಕಿ | ಐವರು ಸೇರಿ 7 ಮಂದಿ ವಿದ್ಯಾರ್ಥಿಗಳ ದಾರುಣ ಸಾವು

ಗುಜರಾತ್‍ : ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಐವರು ವಿದ್ಯಾರ್ಥಿಗಳು ಸೇರಿ 7 ಮಂದಿ ಸಾವನ್ನಪ್ಪಿದ  ಘಟನೆ ಗುಜರಾತ್‌ನ ಜುನಾಗಢದಲ್ಲಿ ನಡೆದಿದೆ. ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದ ಹಿನ್ನಲೆ ಐವರು ಕಾಲೇಜು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ವೇಗವಾಗಿ ಬಂದ ವಿದ್ಯಾರ್ಥಿಗಳ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆಯ ಇನ್ನೊಂದು ಬದಿಗೆ ಪಲ್ಟಿಯಾಗಿದೆ. ಅದೇ ಸಮಯದಲ್ಲಿ ಅಭಿಮುಖವಾಗಿ ವೇಗವಾಗಿ ಬಂದ ಎರಡನೇ ಕಾರಿಗೆ ಡಿಕ್ಕಿ ಹೊಡೆದಿದೆ . ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ

ಡಿವೈಡರ್‌ಗೆ  ಕಾರು ಡಿಕ್ಕಿ | ಐವರು ಸೇರಿ 7 ಮಂದಿ ವಿದ್ಯಾರ್ಥಿಗಳ ದಾರುಣ ಸಾವು Read More »

error: Content is protected !!
Scroll to Top