ಸುದ್ದಿ

ಮೂರು ಅಂತಸ್ತಿನ ಹೋಟೆಲ್‌ ಕಟ್ಟಡವೇ ಸ್ಥಳಾಂತರ

ಹೈಡ್ರಾಲಿಕ್‌ ಜಾಕ್‌ ಬಳಸಿ ಇಡೀ ಕಟ್ಟಡವನ್ನೇ ಹಿಂದಕ್ಕೆ ತಳ್ಳುವ ಸಾಹಸ ಹಿರಿಯೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಮೂರಂತಸ್ತಿನ ಕಟ್ಟಡವೊಂದನ್ನು ಸುಮಾರು 20 ಅಡಿಗಳಷ್ಟು ಹಿಂದಕ್ಕೆ ತಳ್ಳುವ ಸಾಹಸ ನಡೆಯುತ್ತಿದೆ. ಹಿರಿಯೂರು ನಗರದ ಅವಧಾನಿ ಬಡಾವಣೆ ಮುಂಭಾಗದ ಹೋಟೆಲ್ ಕಟ್ಟಡವನ್ನು ಹಿಂದಕ್ಕೆ ತಳ್ಳಿ ಯಥಾಸ್ಥಿತಿಯಲ್ಲಿಯೇ ಕೂರಿಸುವ ಕಾಮಗಾರಿಯ ಮೊದಲ ಭಾಗವಾಗಿ ಸೋಮವಾರ ಸುಮಾರು 5 ಅಡಿಯಷ್ಟು ಹಿಂದಕ್ಕೆ ಜರುಗಿಸಲಾಗಿದೆ. ನಗರದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಅಂಚಿನಲ್ಲಿದ್ದ ಕೆಲವು ಕಟ್ಟಡಗಳನ್ನು ತೆರವುಗೊಳಿಸಲು […]

ಮೂರು ಅಂತಸ್ತಿನ ಹೋಟೆಲ್‌ ಕಟ್ಟಡವೇ ಸ್ಥಳಾಂತರ Read More »

ಕಾರು, ಬೈಕ್‌ ಖರೀದಿಸುವವರಿಗೆ ಸೆಸ್‌ ಬರೆ

ಫೆ.1ರಿಂದಲೇ ಜಾರಿಗೆ ಬರಲಿದೆ ಹೊಸ ಮೇಲ್ತೆರಿಗೆ ಬೆಂಗಳೂರು : ಗ್ಯಾರಂಟಿ ಯೋಜನೆಗಳಿಂದಾಗಿ ಖಜಾನೆ ಖಾಲಿಯಾಗಿ ಪರದಾಡುತ್ತಿರುವ ಕಾಂಗ್ರೆಸ್‌ ಸರಕಾರ ಈಗ ಸಂಪನ್ಮೂಲ ಕ್ರೋಡೀಕರಣಕ್ಕೆ ವಾಹನ ಖರೀದಿಸುವವರಿಗೆ ಬರೆ ಹಾಕಲು ಮುಂದಾಗಿದೆ. ಫೆಬ್ರವರಿ 1ರಿಂದಲೇ ಹೊಸದಾಗಿ ಕಾರು ಮತ್ತು ಬೈಕ್ ಖರೀದಿ ಮಾಡುವವರಿಗೆ ಕರ್ನಾಟಕ ಸರ್ಕಾರ ಸೆಸ್‌ ಹಾಕಲಿದೆ. ಕಾರು, ಬೈಕ್ ಖರೀದಿ ಮಾಡುವವರಿಂದ ಹೆಚ್ಚುವರಿ ಸೆಸ್ ಸಂಗ್ರಹಕ್ಕೆ ಸಾರಿಗೆ ಇಲಾಖೆ ನಿರ್ಧರಿಸಿದ್ದು, ಅಧಿಕೃತ ಆದೇಶ ಹೊರಡಿಸಿದೆ. ಹೊಸ ಕಾರು ಖರೀದಿ ಮಾಡುವವರು ಒಂದು ಸಾವಿರ ರೂಪಾಯಿ, ಹೊಸದಾಗಿ

ಕಾರು, ಬೈಕ್‌ ಖರೀದಿಸುವವರಿಗೆ ಸೆಸ್‌ ಬರೆ Read More »

ಹೆದ್ದಾರಿ ಬದಿ ನಿಲ್ಲಿಸಿದ್ದ ಕಾರಿನಲ್ಲಿತ್ತು ಕಂತೆ ಕಂತೆ ನೋಟು

ನಿರ್ಜನ ಪ್ರದೇಶದಲ್ಲಿ ಉಪೇಕ್ಷಿಸಿ ಹೋದ ಕಾರಿನ ನಂಬರ್‌ ಪ್ಲೇಟ್‌ ನಕಲಿ ಕಾರವಾರ: ಅಂಕೋಲಾ ಸಮೀಪ ರಾಮನಗುಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ನಿರ್ಜನ ಪ್ರದೇಶದಲ್ಲಿ ಉಪೇಕ್ಷಿಸಿ ಹೋಗಿದ್ದ ಕ್ರೆಟಾ ಕಾರಿನೊಳಗೆ ಕಂತೆ ಕಂತೆ ಹಣ ಪತ್ತೆಯಾಗಿದೆ. ಅಂಕೋಲಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಕಾರನ್ನು ಪೊಲೀಸ್‌ ಠಾಣೆಗೆ ಒಯ್ದಿದ್ದಾರೆ. ಕಾರು ಮಂಗಳೂರು ಮೂಲದ್ದು ಎಂಬ ಸಂಶಯ ವ್ಯಕ್ತವಾಗಿದೆ.ಕಾರಿನ ನಂಬರ್‌ ಪ್ಲೇಟ್‌ ನಕಲಿಯಾಗಿದ್ದು, ಹೀಗಾಗಿ ಈ ಕಾರು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕಾರಿನೊಳಗಿದ್ದ ಬ್ಯಾಗಿನಲ್ಲಿ 1,14,99,500 ರೂಪಾಯಿ

ಹೆದ್ದಾರಿ ಬದಿ ನಿಲ್ಲಿಸಿದ್ದ ಕಾರಿನಲ್ಲಿತ್ತು ಕಂತೆ ಕಂತೆ ನೋಟು Read More »

ಕಾಂಗ್ರೆಸಿಗೂ ನರಕಕ್ಕೂ ವ್ಯತ್ಯಾಸ ಇಲ್ಲ : ಯಶ್‌ಪಾಲ್‌ ಸುವರ್ಣ

ಮಹಾಕುಂಭಮೇಳದ ಕುರಿತು ಖರ್ಗೆ ಹೇಳಿಕೆಗೆ ತಿರುಗೇಟು ಉಡುಪಿ: ಕಾಂಗ್ರೆಸ್ಸಿಗೂ ನರಕಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ದೇಶ ವಿರೋಧಿ ಹಾಗೂ ಹಿಂದೂ ವಿರೋಧಿಗಳಿಗೆ ಸ್ವರ್ಗ ಇಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ತಿರುಗೇಟು ನೀಡಿದ್ದಾರೆ.ಕುಂಭಮೇಳದಲ್ಲಿ ಸ್ನಾನ ಮಾಡಿದರೆ ದೇಶದ ಬಡತನ ನೀಗುವುದಿಲ್ಲ ಎಂಬ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ, ಕಾಂಗ್ರೆಸ್ ಈಗಾಗಲೇ ನರಕದಲ್ಲಿ ಇದೆ. ಸ್ವರ್ಗಕ್ಕೆ ಹೋಗುವಂತಹ ಅವಕಾಶವನ್ನು ದೇವರು ಅವರಿಗೆ ಕಲ್ಪಿಸುವುದಿಲ್ಲ. ದೇಶ ವಿರೋಧಿ, ಹಿಂದೂ ವಿರೋಧಿಗಳಿಗೆ ಸ್ವರ್ಗ

ಕಾಂಗ್ರೆಸಿಗೂ ನರಕಕ್ಕೂ ವ್ಯತ್ಯಾಸ ಇಲ್ಲ : ಯಶ್‌ಪಾಲ್‌ ಸುವರ್ಣ Read More »

ಮಹಾಕುಂಭಮೇಳದಲ್ಲಿ ನೂಕುನುಗ್ಗಲು : ಹಲವು ಮಂದಿಗೆ ಗಾಯ

ಮೌನಿ ಅಮವಾಸ್ಯೆ ಸ್ನಾನಕ್ಕೆ ಸೇರಿರುವ ಕೋಟಿಗಟ್ಟಲೆ ಜನ ಪ್ರಯಾಗ್‌ರಾಜ್‌ : ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಇಂದು ನಸುಕಿನ ಹೊತ್ತು ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿ ಹಲವು ಮಂದಿ ಗಾಯಗೊಂಡಿದ್ದಾರೆ. ಕೆಲವ ಸ್ಥಿತಿ ಚಿಂತಾಜನಕವಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಇಂದು ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಲಕ್ಷಾಂತರ ಮಂದಿ ಭಕ್ತರು ಆಗಮಿಸಿದ್ದು, ನೂಕುನುಗ್ಗಲು ಉಂಟಾಗಿತ್ತು. ಈ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ ಹಲವು ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಹಲವು ಮಂದಿ ಕಾಲಿನಡಿಗೆ ಬಿದ್ದು,

ಮಹಾಕುಂಭಮೇಳದಲ್ಲಿ ನೂಕುನುಗ್ಗಲು : ಹಲವು ಮಂದಿಗೆ ಗಾಯ Read More »

ಬಾವಿಗೆ ಬಿದ್ದ ಬೆಕ್ಕು | ರಕ್ಷಣೆಗೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ಕಚ್ಚಿ ಗಾಯಗೊಳಿಸಿದ ಬೆಕ್ಕು

ಪುತ್ತೂರು : ರಕ್ಷಣೆಗೆಂದು ಬಂದ ಅಗ್ನಿಶಾಮಕದಳದ ಸಿಬ್ಬಂದಿಗಳ ಮೇಲೆ ಬೆಕ್ಕೊಂದು ಅಟ್ಯಾಕ್ ಮಾಡಿರುವ ಘಟನೆ ಪುತ್ತೂರಿನ ತೆಂಕಿಲ ಕ್ರಾಸ್ ಬಳಿ ನಡೆದಿದೆ. ಅಗ್ನಿಶಾಮಕ ದಳದ ಸಿದ್ಧರೂಢ ಮತ್ತು ಮೌನೇಶ್ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಸೋಮವಾರ ತೆಂಕಿಲ ಬಳಿಯ ಲಕ್ಷ್ಮೀ ಎಂಬವರ ಮನೆಯ ಬಾವಿಗೆ ಬೆಕ್ಕೊಂದು ಬಿದ್ದಿತ್ತು. ಮಂಗಳವಾರ ಬೆಕ್ಕಿನ ರಕ್ಷಣೆಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಧಾವಿಸಿದ್ದರು. ಬೆಕ್ಕನ್ನ ಹಿಡಿಯಲು ಬಾವಿಯೊಳಗಡೆ ಸಿದ್ಧರೂಢ ಮತ್ತು ಮೌನೇಶ್ ಎಂಬವರು ಇಳಿದಿದ್ದರು. ಬಾವಿಯೊಳಗಿನ ಒಂದು ಬಿಲದೊಳಗೆ ಬೆಕ್ಕು ಅವಿತುಕೊಂಡಿತ್ತು. ಬೆಕ್ಕನ್ನ ಹಿಡಿಯಲು

ಬಾವಿಗೆ ಬಿದ್ದ ಬೆಕ್ಕು | ರಕ್ಷಣೆಗೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ಕಚ್ಚಿ ಗಾಯಗೊಳಿಸಿದ ಬೆಕ್ಕು Read More »

ಪುತ್ತೂರನ್ನು ಹೊಸ ಜಿಲ್ಲೆಯಾಗಿ ಸರಕಾರ ಘೋಷಿಸಬೇಕು : ಅನ್ವರ್ ಸಾದತ್

ಪುತ್ತೂರು: ಜಿಲ್ಲಾ ಕೇಂದ್ರವಾಗಲು ಎಲ್ಲಾ ಸೌಲಭ್ಯಗಳಿರುವ ಪುತ್ತೂರನ್ನು ಸರಕಾರ ಹೊಸ ಜಿಲ್ಲೆಯಾಗಿ ಘೋಷಿಸಬೇಕು ಎಂದು ಎಸ್‍ ಡಿಪಿಐ ಪಕ್ಷದ ಮಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅನ್ವರ್ ಸಾದತ್ ಆಗ್ರಹಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದ.ಕ.ಜಿಲ್ಲೆ ಭೌಗೋಳಿಕವಾಗಿ ವಿಶಾಲ ಪ್ರವೇಶವಾಗಿದ್ದು, ಆಡಳಿತಾತ್ಮಕ ಸುಲಭ ನಿರ್ವಹಣೆ ಮತ್ತು ಸಾವರ್ಜನಿಕರ ಅನುಕೂಲಕ್ಕಾಗಿ ಪುತ್ತೂರನ್ನು ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.ಈಗಾಗಲೇ ರಾಜ್ಯ ಸರಕಾರದ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಬಸ್‍ ಗಳ ಓಡಾಟದಲ್ಲಿ ಕಡಿತ ಕಂಡು ಬಂದಿದೆ.

ಪುತ್ತೂರನ್ನು ಹೊಸ ಜಿಲ್ಲೆಯಾಗಿ ಸರಕಾರ ಘೋಷಿಸಬೇಕು : ಅನ್ವರ್ ಸಾದತ್ Read More »

ಮೈಕ್ರೊ ಫೈನಾನ್ಸ್‌ ಕಿರುಕುಳ : ನದಿಗೆ ಹಾರಿ ಶಿಕ್ಷಕಿ ಆತ್ಮಹತ್ಯೆ

ಬರೀ ಒಂದು ಕಂತು ಬಾಕಿಯಿಟ್ಟದ್ದಕ್ಕೆ ಶಿಕ್ಷಕ ದಂಪತಿಯನ್ನು ಪೀಡಿಸಿದ್ದ ಮೈಕ್ರೊ ಫೈನಾನ್ಸ್‌ ಸಿಬ್ಬಂದಿ ಬೆಂಗಳೂರು: ಮೈಕ್ರೊ ಫೈನಾನ್ಸ್‌ನವರ ಕಿರುಕುಳ ತಾಳಲಾರದೆ ದಾವಣಗೆರೆಯ ಶಿಕ್ಷಕಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಎರಡು ದಿನಗಳ ಬಳಿ ಅವರ ಶವ ಇಂದು ಪತ್ತೆಯಾಗಿದೆ. ಮೈಕ್ರೊ ಫೈನಾನ್ಸ್ ಕಿರುಕುಳದಿಂದ ಬೇಸತ್ತು ಸರ್ಕಾರಿ ಶಾಲೆಯ ಶಿಕ್ಷಕಿ ಪುಷ್ಪಲತಾ ಎರಡು ದಿನಗ ಹಿಂದೆ ತುಂಗಭದ್ರಾ ನದಿಗೆ ಹಾರಿದ್ದರು. ಮೃತದೇಹ ಇಂದು ಬೆಳಗ್ಗೆ ನದಿಯಲ್ಲಿ ಪತ್ತೆಯಾಗಿದೆ. ಹೊನ್ನಾಳಿ ಪಟ್ಟಣದ ನಿವಾಸಿ ಪುಷ್ಪಲತಾ ಹಾಗೂ ಆಕೆಯ ಪತಿ ಶಿಕ್ಷಕ

ಮೈಕ್ರೊ ಫೈನಾನ್ಸ್‌ ಕಿರುಕುಳ : ನದಿಗೆ ಹಾರಿ ಶಿಕ್ಷಕಿ ಆತ್ಮಹತ್ಯೆ Read More »

ಹುಲಿಯ ಹೊಟ್ಟೆಯಲ್ಲಿತ್ತು ಮಹಿಳೆಯ ಕಿವಿಯೋಲೆ, ಕೂದಲು

ನರಭಕ್ಷಕ ವ್ಯಾಘ್ರ ನಿಗೂಢವಾಗಿ ಸಾವು ವಯನಾಡು : ಕೇರಳದಲ್ಲಿ ಎರಡು ದಿನಗಳ ಹಿಂದೆ ಮಹಿಳೆಯೊಬ್ಬರನ್ನು ಕೊಂದಿದ್ದ ನರಭಕ್ಷಕ ಹುಲಿ ಶವವಾಗಿ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಹುಲಿಯ ಹೊಟ್ಟೆಯಲ್ಲಿ ಮಹಿಳೆಯ ಕೂದಲು, ಬಟ್ಟೆ, ಕಿವಿಯೋಲೆ ಪತ್ತೆಯಾಗಿದೆ. ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಕಾಫಿ ಬೀಜ ಸಂಗ್ರಹಿಸಲು ತೆರಳಿದ್ದ ಮಹಿಳೆಯ ಮೇಲೆ ಹುಲಿ ದಾಳಿ ನಡೆಸಿ ಸಾಯಿಸಿತ್ತು. ನಾಲ್ಕರಿಂದ ಐದು ವರ್ಷ ವಯಸ್ಸಿನ ಹೆಣ್ಣು ಹುಲಿಯನ್ನು ಸೋಮವಾರ ಬೆಳಗ್ಗೆ ವನ್ಯಜೀವಿ ಸಿಬ್ಬಂದಿ ಗುರುತಿಸಿ ಬೆನ್ನಟ್ಟಿದ್ದರು. ಆಗ ತಪ್ಪಿಸಿಕೊಂಡಿದ್ದ ಹುಲಿ ನಂತರ ಪಿಲಕಾವು

ಹುಲಿಯ ಹೊಟ್ಟೆಯಲ್ಲಿತ್ತು ಮಹಿಳೆಯ ಕಿವಿಯೋಲೆ, ಕೂದಲು Read More »

ಯಕ್ಷ ಭಾರತಿ  ಕನ್ಯಾಡಿ ದಶಮಾನೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ : ಯಕ್ಷ ಭಾರತಿ (ರಿ ) ಕನ್ಯಾಡಿ, ಬೆಳ್ತಂಗಡಿ ಇದರ ದಶಮಾನೋತ್ಸವ ಸಮಾರಂಭವು ಫೆಬ್ರವರಿ 8ರಂದು ಉಜಿರೆಯ ಶ್ರೀ ರಾಮಕೃಷ್ಣ ಸಭಾಂಗಣದಲ್ಲಿ ನಡೆಯಲಿದೆ. ಈ ಪ್ರಯುಕ್ತ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿ ಶುಭಹಾರೈಸಿದರು.  ಈ ಸಂದರ್ಭದಲ್ಲಿ  ಯಕ್ಷಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಡಿತಾಯ ಉಜಿರೆ, ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ದಶಮಾನೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ, ಕಾರ್ಯದರ್ಶಿ ವಿದ್ಯಾಕುಮಾರ್ ಕಾಂಚೋಡು, ಟ್ರಸ್ಟಿಗಳಾದ ಹರೀಶ್

ಯಕ್ಷ ಭಾರತಿ  ಕನ್ಯಾಡಿ ದಶಮಾನೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ Read More »

error: Content is protected !!
Scroll to Top