ಮಾ.2 : ಪ್ರತಿಷ್ಠಿತ ಆಲಂಕಾರು ಸಿ.ಎ ಬ್ಯಾಂಕ್ ಆಡಳಿತ ಮಂಡಳಿಗೆ ಚುನಾವಣೆ | ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಅಧಿಕೃತ ಅಭ್ಯರ್ಥಿಗಳನ್ನೇ ಗೆಲ್ಲಿಸಿ : ವೆಂಕಟ್ ವಳಲಂಬೆ | ಆಲಂಕಾರು ಸಿಎ ಬ್ಯಾಂಕ್ ನಲ್ಲಿ ಬಂಡಾಯದ ಕರಿನೆರಳು
ಪುತ್ತೂರು: ಪ್ರತಿಷ್ಠಿತ ಆಂಕಾರು ಸಿ.ಎ. ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಗೆ ದಿನನಿಗದಿಯಾಗಿದ್ದು, ಬಿಜೆಪಿ ಬೆಂಬಲಿತ ಸಹಕಾರಿ ಭಾರತಿಯಿಂದ ಅಧಿಕೃತವಾಗಿ ಈಗಾಗಲೇ 12 ಮಂದಿಯನ್ನು ಚುನಾವಣಾ ಕಣಕ್ಕೆ ಇಳಿಸಲಾಗಿದೆ. ಈ ನಡುವೆ ಬಿಜೆಪಿಯ ಮತ್ತೊಂದು ತಂಡ ಸಹಕಾರ ಭಾರತಿಗೆ ವಿರುದ್ಧವಾಗಿ 12 ಮಂದಿಯನ್ನು ಬಂಡಾಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದು, ಸಹಕಾರ ಭಾರತಿಯ ಅಧಿಕೃತ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಾಗಿ ಸುಳ್ಯ ಬಿಜೆಪಿ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಳ್ಯ ಹಾಗೂ ಕಡಬ ವ್ಯಾಪ್ತಿಯನ್ನೊಳಗೊಂಡಿರುವ ಕಡಬ ತಾಲೂಕಿನ […]










