ಸುದ್ದಿ

75 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ : ಇಬ್ಬರು ವಿದೇಶಿ ಮಹಿಳೆಯರ ಬಂಧನ

ಬೆಂಗಳೂರಿನಲ್ಲಿ ಮಂಗಳೂರು ಪೊಲೀಸರ ಕಾರ್ಯಾಚರಣೆ ಮಂಗಳೂರು : ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ 75 ಕೋಟಿ ರೂ. ಮೌಲ್ಯದ 37.87 ಕೆಜಿ ಡ್ರಗ್ಸ್​ ವಶಪಡಿಸಿಕೊಂಡು ಇಬ್ಬರು ವಿದೇಶಿ ಮಹಿಳೆಯರನ್ನು ಬಂಧಿಸಿದ್ದಾರೆ. ಇದು ಕರ್ನಾಟಕದ ಇತಿಹಾಸದಲ್ಲಿ ಅತಿದೊಡ್ಡ ಡ್ರಗ್ಸ್ ವಶ ಕಾರ್ಯಾಚರಣೆ ಎನ್ನಲಾಗಿದೆ. ಸಿಸಿಬಿ ಪೊಲೀಸರು ಕಳೆದ ಐದು ತಿಂಗಳಿಂದ ಈ ಡ್ರಗ್ಸ್‌ ಜಾಲದ ಬೆನ್ನುಹತ್ತಿದ್ದರು.ಎಂಡಿಎಂಎ ಡ್ರಗ್ಸ್ ದೆಹಲಿಯ ಲ್ಯಾಬ್​ನಲ್ಲಿ ನಿತ್ಯ ತಯಾರಾಗುತ್ತಿತ್ತು. ವಾರಕ್ಕೊಮ್ಮೆ ಬೆಂಗಳೂರಿಗೆ ವಿಮಾನದಲ್ಲಿ ಮೂಟೆಗಟ್ಟಲೆ ಬರುತ್ತಿತ್ತು. ವಾರಕ್ಕೆ 15-30 ಕೆಜಿ ಮತ್ತು ತಿಂಗಳಿಗೆ ಕನಿಷ್ಠ […]

75 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ : ಇಬ್ಬರು ವಿದೇಶಿ ಮಹಿಳೆಯರ ಬಂಧನ Read More »

ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಅಸ್ವಸ್ಥ : ಆಸ್ಪತ್ರೆಗೆ ದಾಖಲು

ಚೆನ್ನೈ : ಆಸ್ಕರ್ ಪ್ರಶಸ್ತಿ ವಿಜೇತ ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್‌ಗೆ ದಿಢೀರ್‌ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಎ.ಆರ್ ರೆಹಮಾನ್ ಅವರಿಗೆ ಇಂದು ಬೆಳಗ್ಗೆ ಹಠಾತ್ತನೆ ಎದೆ ನೋವು ಕಾಣಿಸಿಕೊಂಡಿದ್ದು, ಶೀಘ್ರವೇ ಅವರನ್ನು ಚೆನ್ನೈಯ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಿಗ್ಗೆ 7.30ಕ್ಕೆ ಎಆರ್ ರೆಹಮಾನ್ ಆಸ್ಪತ್ರೆಗೆ ಬಂದಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಎ.ಆರ್ ರೆಹಮಾನ್ ಅವರಿಗೆ ಇಸಿಜಿ ಸೇರಿದಂತೆ ಹಲವು ಬೇರೆ ಬೇರೆ ಪರೀಕ್ಷೆಗಳನ್ನು ಮಾಡಿಸಲಾಗಿದೆ. ಅವರ ಹೃದಯನಾಳದ ಕೆಲವೆಡೆ

ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಅಸ್ವಸ್ಥ : ಆಸ್ಪತ್ರೆಗೆ ದಾಖಲು Read More »

ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ಅಪರಾಧಿಗೆ 20 ವರ್ಷ ಜೈಲು

ಕಲಿಯಲು ಬಂದಿದ್ದ ಸ್ನೇಹಿತನ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದ ಪಾಪಿ ಮಂಗಳೂರು: ಕಾರ್ಕಳ ತಾಲೂಕಿನ ಇನ್ನಾದಲ್ಲಿ ಎರಡು ವರ್ಷದ ಹಿಂದೆ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಆಕೆ ಗರ್ಭಿಣಿಯಾಗುವಂತೆ ಮಾಡಿದ್ದ ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಪೋಕ್ಸೊ ವಿಶೇಷ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದೆ. ಮೂಲ್ಕಿ ತಾಲೂಕು ಏಳಿಂಜೆಯ ರವಿ (35) ಎಂಬಾತ ಶಿಕ್ಷೆಗೊಳಗಾದ ಅಪರಾಧಿ.ಅಪರಾಧಿ ರವಿ 2023ರ ಜೂನ್‌ನಿಂದ ಡಿಸೆಂಬರ್‌ವರೆಗೆ ಇನ್ನಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ.

ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ಅಪರಾಧಿಗೆ 20 ವರ್ಷ ಜೈಲು Read More »

ಲಷ್ಕರ್‌ನ ಮೋಸ್ಟ್‌ ವಾಂಟೆಡ್‌ ಉಗ್ರ ಅಬ್ದುಲ್‌ ಖತಲ್‌ನ ಹತ್ಯೆ

ರಾತ್ರಿ ಅಜ್ಞಾತ ವ್ಯಕ್ತಿಗಳ ಗುಂಡಿಗೆ ಬಲಿಯಾದ ಉಗ್ರ ಸಂಘಟನೆಯ ಕಮಾಂಡರ್‌ ಇಸ್ಲಾಮಾಬಾದ್‌ : ಪಾಕಿಸ್ಥಾನದ ಉಗ್ರ ಸಂಘಟನೆ ಲಷ್ಕರ್‌ ಇ ತಯ್ಯಬದ ಕಮಾಂಡರ್‌, ಮೋಸ್ಟ್‌ ವಾಂಟೆಡ್‌ ಲಿಸ್ಟ್‌ನಲ್ಲಿದ್ದ ಉಗ್ರನೊಬ್ಬನನ್ನು ಅಜ್ಞಾತ ವ್ಯಕ್ತಿಗಳು ನಿನ್ನೆ ರಾತ್ರಿ ಸಾಯಿಸಿದ್ದಾರೆ. ಕೊಲೆಯಾಗಿರುವ ಅಬ್ದುಲ್‌ ಖತಲ್‌ ಜಮ್ಮು-ಕಾಶ್ಮೀರದಲ್ಲಿ ನಡೆದ ಹಲವು ಉಗ್ರ ದಾಳಿಗಳ ರೂವಾರಿಯಾಗಿದ್ದ. ಭಾರತದ ಪಾಲಿಗೆ ಅವನು ತಲೆನೋವಾಗಿದ್ದ. ಶನಿವಾರ ರಾತ್ರಿ ಅವನನ್ನು ಅಜ್ಞಾತ ವ್ಯಕ್ತಿಗಳು ಗುಂಡಿಕ್ಕಿ ಸಾಯಿಸಿದ್ದಾರೆ ಎಂದು ವರದಿಯಾಗಿದೆ.ಲಷ್ಕರ್‌ನ ಸ್ಥಾಪಕ ಹಾಗೂ ಮುಂಬಯಿ ಮೇಲೆ ನಡೆದ ಭಯೋತ್ಪಾದಕ ದಾಳಿಯ

ಲಷ್ಕರ್‌ನ ಮೋಸ್ಟ್‌ ವಾಂಟೆಡ್‌ ಉಗ್ರ ಅಬ್ದುಲ್‌ ಖತಲ್‌ನ ಹತ್ಯೆ Read More »

ಹೋಳಿ ಗಮ್ಮತ್ತಿನಲ್ಲಿ ಹೊಡೆದಾಟ : ಮೂವರ ಹತ್ಯೆ

ನಶೆ ಏರಿದ ಬಳಿಕ ರಾಡ್‌, ದೊಣ್ಣೆಯಿಂದ ಬಡಿದಾಡಿಕೊಂಡ ಸ್ನೇಹಿತರು ಬೆಂಗಳೂರು: ಹೋಳಿ ಗಮ್ಮತ್ತಿನಲ್ಲಿ ಕಂಠಮಟ್ಟ ಶರಾಬು ಕುಡಿದು ನಶೆ ತಲೆಗೇರಿಸಿಕೊಂಡಿದ್ದ ಬಿಹಾರ ಮೂಲದ ಆರು ಕಾರ್ಮಿಕರು ಪರಸ್ಪರ ಹೊಡೆದಾಡಿಕೊಂಡ ಪರಿಣಾಮ ಮೂವರು ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಓರ್ವನಿಗೆ ಗಂಭೀರ ಗಾಯವಾಗಿದ್ದು, ಇಬ್ಬರು ಪರಾರಿ ಆಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರದ ನಿರ್ಮಾಣ ಹಂತದ ಫೋರ್‌ವಾಲ್ ಅವೆನ್ಯೂ ಅಪಾರ್ಟ್​ಮೆಂಟ್​ನ​ 3ನೇ ಮಹಡಿಯಲ್ಲಿ ಘಟನೆ ನಡೆದಿದೆ. ಕೊಲೆಯಾದ ಇಬ್ಬರನ್ನು ಅನ್ಸು(19) ಮತ್ತು ರಾಧೆ ಶ್ಯಾಮ್(20) ಎಂದು

ಹೋಳಿ ಗಮ್ಮತ್ತಿನಲ್ಲಿ ಹೊಡೆದಾಟ : ಮೂವರ ಹತ್ಯೆ Read More »

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಡಿಜಿಪಿ ರಾಮಚಂದ್ರ ರಾವ್‌ಗೆ ಕಡ್ಡಾಯ ರಜೆ ನೀಡಿದ ಸರಕಾರ

ಪ್ರಭಾವಿ ನಾಯಕರೊಬ್ಬರ ಜರ್ಮನಿ ಟೂರ್‌ ಬಗ್ಗೆ ಅನುಮಾನ ವ್ಯಕ್ತಪಡಿಸಿದ ತನಿಖಾಧಿಕಾರಿಗಳು ಬೆಂಗಳೂರು: ಕನ್ನಡ ನಟಿ ರನ್ಯಾ ರಾವ್‌ ಗೋಲ್ಡ್‌ ಸ್ಮಗ್ಲಿಂಗ್‌ ಪ್ರಕರಣದ ತನಿಖೆ ತೀವ್ರಗೊಂಡಿರುವಂತೆ ಸರಕಾರ ಆಕೆಯ ಮಲತಂದೆ ಡಿಜಿಪಿ ದರ್ಜೆಯ ಐಪಿಎಸ್‌ ಅಧಿಕಾರಿ ಡಾ.ರಾಮಚಂದ್ರ ರಾವ್‌ ಅವರನ್ನು ಕಡ್ಡಾಯ ರಜೆಯಲ್ಲಿ ಕಳಿಸಿದೆ. ಡಾ.ರಾಮಚಂದ್ರ ರಾವ್‌ ಪ್ರಸ್ತುತ ಪೊಲೀಸ್‌ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.ರನ್ಯಾ ರಾವ್‌ ಕಳೆದ ಮಾ.3ರಂದು ದುಬೈಯಿಂದ 12.56 ಕೋಟಿ ರೂ. ಮೌಲ್ಯದ 14.2 ಕೆಜಿ ಚಿನ್ನವನ್ನು ಕಳ್ಳ ಮಾರ್ಗದಿಂದ

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಡಿಜಿಪಿ ರಾಮಚಂದ್ರ ರಾವ್‌ಗೆ ಕಡ್ಡಾಯ ರಜೆ ನೀಡಿದ ಸರಕಾರ Read More »

ಬೈಕ್‍ ಗೆ ಕಾರು ಡಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ  ಆರೋಪಿಗೆ  ನ್ಯಾಯಾಂಗ  ಬಂಧನ

ಮಂಗಳೂರು: ನಗರದ ಸಮೀಪ ಹಳೆಯ ದ್ವೇಷಕ್ಕೆ ಸಂಬಂಧಿಸಿ ಬಿಜೈ ಕಾಪಿಕಾಡ್ 6ನೇ ಕ್ರಾಸ್‌ನಲ್ಲಿ ಬೈಕಿಗೆ ಕಾರು ಢಿಕ್ಕಿ ಹೊಡೆಸಿ ಬೈಕ್ ಸವಾರನನ್ನು ಕೊಲೆ ಮಾಡಲು ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಬಂಧಿತ ಆರೋಪಿ ಸತೀಶ್ ಕುಮಾರ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಪಾದಚಾರಿ ಮಹಿಳೆ ಯಲ್ಲವ್ವ ಉಪ್ನಾಳ ಮತ್ತು ಬೈಕ್ ಸವಾರ ಮುರಳಿ ಪ್ರಸಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯು ಗುರುವಾರ ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿತ್ತು ಎಂದು ತಿಳಿದು ಬಂದಿದೆ. ಪೊಲೀಸರು

ಬೈಕ್‍ ಗೆ ಕಾರು ಡಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ  ಆರೋಪಿಗೆ  ನ್ಯಾಯಾಂಗ  ಬಂಧನ Read More »

ಕೆಲಂಬೀರಿಯಲ್ಲಿ ಶ್ರೀ ಬ್ರಹ್ಮಬೈದೆರುಗಳ ನೇಮೋತ್ಸವ

ಕುದ್ಮಾರು : ಶ್ರೀ ಬ್ರಹ್ಮಬೈದೆರುಗಳ ಗರಡಿ , ಕೆಲಂಬೀರಿ ಕುದ್ಮಾರುವಿನಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ಶ್ರೀ ಕೊಡಮಣಿತ್ತಾಯ ನೇಮೋತ್ಸವ ನಡೆಯಿತು. ಬಳಿಕ ಶ್ರೀ ಬ್ರಹ್ಮಬೈದೆರುಗಳ ನೇಮೋತ್ಸವ ನಡೆಯಲಿದ್ದು, ಸಂಜೆ 4 ಗಂಟೆಗೆ  ಶ್ರೀ ಬ್ರಹ್ಮಬೈದೆರುಗಳ ಭಂಡಾರ ತೆಗೆಯುವುದು, ರಾತ್ರಿ 6 ಗಂಟೆಗೆ ಪಂಚಲಿಂಗೇಶ್ವರ ಕುಣಿತ ಭಜನಾ ಮಕ್ಕಳ ತಂಡ, ಕುದ್ಮಾರು ಇವರಿಂದ ಭಜನಾ ಕಾರ್ಯಕ್ರಮ ನೆರವೇರಲಿದೆ. ರಾತ್ರಿ 7ರಿಂದ ಗರಡಿಯಲ್ಲಿ ಗಂಧಪ್ರಸಾದ ವಿತರಣೆ, ರಾತ್ರಿ 8:30 ಅನ್ನಸಂತರ್ಪಣೆ,  ಇಂದು ರಾತ್ರಿ 9 ಗಂಟೆಗೆ ಶ್ರೀ ಬ್ರಹ್ಮಬೇದೆರುಗಳ

ಕೆಲಂಬೀರಿಯಲ್ಲಿ ಶ್ರೀ ಬ್ರಹ್ಮಬೈದೆರುಗಳ ನೇಮೋತ್ಸವ Read More »

ಪುತ್ತೂರು ತಾಲೂಕು ಕಚೇರಿಗೆ ರೈಡ್ | ಪ್ರತೀ ಕಚೇರಿಗೆ ತೆರಳಿ ಹಾಜರಾತಿ ಪರಿಶೀಲಿಸಿದ ಶಾಸಕ ಅಶೋಕ್ ರೈ

ಪುತ್ತೂರು: ತಾಲೂಕು ಕಚೇರಿಯ ಸಿಬಂದಿಗಳು ಸರಿಯಾದ ಸಮಯಕ್ಕೆ ಕಚೇರಿಗೆ ಬರುತ್ತಿಲ್ಲ, ಕೆಲವೊಂದು ಕಚೇರಿಗೆ ಹಗಲು ವೇಳೆ  ಬಾಗಿಲು ಹಾಕಿರುತ್ತಾರೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಶನಿವಾರ ಶಾಸಕ ಅಶೋಕ್ ರೈ ಅವರು ತಾಲೂಕು ಕಚೇರಿಗೆ ದಾಳಿ ನಡೆಸಿ ಹಾಜರಾತಿ ಪರಿಶೀಲನೆ ನಡೆಸಿದ್ದಾರೆ. ಮಿನಿ ವಿಧಾನ ಸೌಧದಲ್ಲಿರುವ ಪ್ರತೀ ಕಚೇರಿಗೂ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.‌ಈ ವೇಳೆ ಎಡಿಎಲ್  ಆರ್ ಕಚೇರಿಯಲ್ಲಿ ಯಾರೂ ಇರಲಿಲ್ಲ. ಅಧಿಕಾರಿಯ ಬಗ್ಗೆ ಪರಿಶೀಲನೆ ನಡೆಸಿದ ಶಾಸಕರು ಅಧಿಕಾರಿ ಇಲ್ಲದಿದ್ದರೆ ಕಚೇರಿಯನ್ನು ಯಾಕೆ

ಪುತ್ತೂರು ತಾಲೂಕು ಕಚೇರಿಗೆ ರೈಡ್ | ಪ್ರತೀ ಕಚೇರಿಗೆ ತೆರಳಿ ಹಾಜರಾತಿ ಪರಿಶೀಲಿಸಿದ ಶಾಸಕ ಅಶೋಕ್ ರೈ Read More »

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ರನ್ಯಾ ರಾವ್‌ ತಂತ್ರಗಳು ಒಂದೊಂದಾಗಿ ಬಯಲು

ಸರಕಾರಿ ಕಾರಲ್ಲೇ ಚಿನ್ನ ಕಳ್ಳ ಸಾಗಾಟ ಬೆಂಗಳೂರು : ದುಬೈಯಿಂದ ಚಿನ್ನ ಕಳ್ಳ ಸಾಗಾಟ ಮಾಡಿ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್‌ ಕಳ್ಳ ಸಾಗಾಟಕ್ಕೆ ಬಳಸಿದ ತಂತ್ರವನ್ನು ಪತ್ತೆಹಚಿದ್ದಾರೆ. ರನ್ಯಾ ಕಳ್ಳ ಮಾರ್ಗದಲ್ಲಿ ತಂದ ಚಿನ್ನವನ್ನು ವಿಮಾನ ನಿಲ್ದಾಣದಿಂದ ಸಾಗಿಸಲು ಕರ್ನಾಟಕ ಸರಕಾರದ ಕಾರನ್ನೇ ಬಳಸುತ್ತಿದ್ದಳು ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.ರನ್ಯಾ ರಾವ್‌ ಮಲತಂದೆ ರಾಮಚಂದ್ರ ರಾವ್‌ ಐಪಿಎಸ್‌ ದರ್ಜೆಯ ಪೊಲೀಸ್‌ ಅಧಿಕಾರಿಯಾಗಿದ್ದು, ಡಿಜಿಪಿ ಹುದ್ದೆಯಲ್ಲಿದ್ದರು. ತಂದೆಯ ಅಧಿಕಾರವನ್ನು ರನ್ಯಾ ರಾವ್‌ ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಂಡಿರುವುದು ಡಿಆರ್‌ಐ

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ರನ್ಯಾ ರಾವ್‌ ತಂತ್ರಗಳು ಒಂದೊಂದಾಗಿ ಬಯಲು Read More »

error: Content is protected !!
Scroll to Top