ಸುದ್ದಿ

ಪಾಕ್‌ ಪರ ಬೇಹುಗಾರಿಕೆ : ಇನ್ನೋರ್ವ ಯೂಟ್ಯೂಬರ್‌ ಅರೆಸ್ಟ್‌

ಸೆರೆಯಾಗಿರುವ ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಳ ಸ್ನೇಹಿತ ನವದೆಹಲಿ: ಪಾಕಿಸ್ತಾನ ಪರ ಗೂಢಚಾರಿಕೆ ಮಾಡಿ ಸೆರೆಯಾಗಿರುವ ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಳ ಸ್ನೇಹಿತನನ್ನು ಕೂಡ ಪೊಲೀಸರು ಇಂದು ಇದೇ ಆರೋಪದಲ್ಲಿ ಬಂಧಿಸಿದ್ದಾರೆ. ಈತನೂ ಯೂಟ್ಯೂಬರ್‌ ಆಗಿದ್ದಾನೆ ಮತ್ತು ಜ್ಯೋತಿ ಮಲ್ಹೋತ್ರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 11 ಲಕ್ಷ ಫಾಲೋವರ್‌ಗಳನ್ನು ಹೊಂದಿರುವ ಜಾನ್‌ ಮಹಲ್‌ ಎಂಬ ಯೂ ಟ್ಯೂಬ್‌ ಚಾನೆಲ್‌ ನಡೆಸುತ್ತಿರುವ ಜಸ್ಬೀರ್‌ ಸಿಂಗ್‌ ಸೆರೆಯಾಗಿರುವ ಯೂಟ್ಯೂಬರ್‌. ಗೂಢಚಾರಿಕೆಗೆ ಸಂಬಂಧಿಸಿ ಸೆರೆಯಾಗಿರುವ ಎರಡನೇ ಯೂಟ್ಯೂಬರ್‌ ಈತ. ಗೂಢಚಾರಿಕೆಗೆ […]

ಪಾಕ್‌ ಪರ ಬೇಹುಗಾರಿಕೆ : ಇನ್ನೋರ್ವ ಯೂಟ್ಯೂಬರ್‌ ಅರೆಸ್ಟ್‌ Read More »

ನಿಗೂಢ ಪ್ರಾಣಿಯ ದಾಳಿಯಿಂದ 6 ಮಂದಿ ಸಾವು

ನೆರಳಿನಂತೆ ಬಂದು ಕಚ್ಚಿ ಕಣ್ಮರೆಯಾಗುತ್ತಿದೆ ಪ್ರಾಣಿ ಭೋಪಾಲ: ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ಎರಡು ವಾರಗಳಲ್ಲಿ ನಿಗೂಢ ಪ್ರಾಣಿಯೊಂದು 6 ಮಂದಿಯನ್ನು ಕಚ್ಚಿ ಸಾಯಿಸಿದೆ. ಪ್ರಾಣಿಯಿಂದ ದಾಳಿಗೊಳಗಾದ ಎಲ್ಲರಿಗೂ ರೇಬಿಸ್ ಚುಚ್ಚುಮದ್ದನ್ನು ನೀಡಲಾಗಿತ್ತು. ಮೇ 5ರಂದು ಬೆಳಗಿನ ಜಾವ 1 ರಿಂದ 5 ಗಂಟೆ ನಡುವೆ ಈ ಘಟನೆ ನಡೆದಿದೆ. ಗ್ರಾಮದ 17 ಮಂದಿ ಒಂದೆಡೆ ಮಲಗಿದ್ದಾಗ ನಿಗೂಢ ಪ್ರಾಣಿ ದಾಳಿ ಮಾಡಿದೆ. ಪ್ರಾಣಿ ಯಾವುದೆಂದು ಗುರುತಿಸಲು ಸಾಧ್ಯವಾಗಲಿಲ್ಲ. ಲಿಂಬೈ ಗ್ರಾಮದ ಮೂರು ಸ್ಥಳಗಳಲ್ಲಿ ಆ ಪ್ರಾಣಿ ದಾಳಿ

ನಿಗೂಢ ಪ್ರಾಣಿಯ ದಾಳಿಯಿಂದ 6 ಮಂದಿ ಸಾವು Read More »

ಪಾಕಿಸ್ತಾನದ ಇನ್ನೋರ್ವ ಉಗ್ರ ಮುಖಂಡ ಫಿನಿಷ್‌

ಭಯೋತ್ಪಾದಕರಲ್ಲಿ ನಡುಕ ಹುಟ್ಟಿಸಿದ ಉಗ್ರನ ನಿಗೂಢ ಸಾವು ಇಸ್ಲಾಮಾಬಾದ್ : ಭಾರತದ ವಿರುದ್ಧ ಸದಾ ವಿಷ ಕಾರುತ್ತಿದ್ದ ಜೈಶ್‌ ಎ ಮೊಹಮ್ಮದ್‌ ಉvಗ್ರ ಸಂಘಟನೆಯ ಕಮಾಂಡರ್‌ ಒಬ್ಬ ಪಾಕಿಸ್ತಾನದಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ಜೈಶ್-ಎ-ಮೊಹಮ್ಮದ್‌ನ ಹಿರಿಯ ಕಮಾಂಡರ್ ಮೌಲಾನಾ ಅಬ್ದುಲ್ ಅಜೀಜ್ ನಿಗೂಢವಾಗಿ ಸಾವನ್ನಪ್ಪಿರುವ ಉಗ್ರ. ಈ ನಿಗೂಢ ಸಾವು ಭಯೋತ್ಪಾದಕರಲ್ಲಿ ನಡುಕ ಹುಟ್ಟಿಸಿದೆ. ಮೌಲಾನಾ ಅಬ್ದುಲ್ ಅಜೀಜ್ ಕಳೆದ ತಿಂಗಳು ಪಾಕಿಸ್ತಾನದಲ್ಲಿ ನಡೆದ ಜೈಶ್ ಸಭೆಯಲ್ಲಿ ಭಾರತದ ವಿರುದ್ಧ ವಿಷ ಕಾರಿ, ಭಾರತಕ್ಕೂ ಯುಎಸ್ಎಸ್ಆರ್ ಗತಿಯಾಗಲಿದೆ

ಪಾಕಿಸ್ತಾನದ ಇನ್ನೋರ್ವ ಉಗ್ರ ಮುಖಂಡ ಫಿನಿಷ್‌ Read More »

ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವ ಮೆರವಣಿಗೆ

ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂ ತನಕ ಭವ್ಯ ವಿಕ್ಟರಿ ಪರೇಡ್‌ ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್‌ ಚಾಂಪಿಯನ್‌ ಆದ ಬಳಿಕ ಕರ್ನಾಟಕದಲ್ಲಿ ಸಂಭ್ರಮ ಮನೆಮಾಡಿದೆ. 18 ವರ್ಷಗಳ ಕನಸು ನನಸಾದ ಬೆನ್ನಲ್ಲೇ ಇಂದು ಸಂಜೆ ಬೆಂಗಳೂರಿನಲ್ಲಿ ಆರ್‌ಸಿಬಿಯ ಅದ್ದೂರಿ ವಿಜಯೋತ್ಸವ ಮೆರವಣಿಗೆ ನಡೆಯಲಿದೆ. ಅಧಿಕೃತವಾಗಿ ಆರ್‌ಸಿಬಿ ಈ ವಿಚಾರವನ್ನು ತಿಳಿಸಿದ್ದು ಮಧ್ಯಾಹ್ನ 3.30ಕ್ಕೆ ವಿಧಾನಸೌಧದಿಂದ ವಿಜಯೋತ್ಸವ ಮೆರವಣಿಗೆ ಆರಂಭಗೊಳ್ಳಲಿದ್ದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊನೆಯಾಗಲಿದೆ. ಈ ಬಗ್ಗೆ ಶೀಘ್ರವೇ ಮತ್ತಷ್ಟು ಮಾಹಿತಿಯನ್ನು ನೀಡಲಾಗುವುದು ಎಂದು ಆರ್‌ಸಿಬಿ ತಿಳಿಸಿದೆ.

ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವ ಮೆರವಣಿಗೆ Read More »

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ : ಇನ್ನೋರ್ವ ಆರೋಪಿ ಬಂಧನ

ಕೊಲೆಗೆ ಸಂಚು ರೂಪಿಸಿ, ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪ ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಸಿಸಿಬಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮೇ 1ರಂದು ಬಜ್ಪೆಯಲ್ಲಿ ಸುಹಾಸ್ ಶೆಟ್ಟಿ ಕೊಲೆ ಮಾಡಲಾಗಿತ್ತು. ಬಂಧಿತ ವ್ಯಕ್ತಿಯ ಮೇಲೆ ಪ್ರಮುಖ ಆರೋಪಿಗಳೊಂದಿಗೆ ಸೇರಿ ಕೊಲೆಗೆ ಸಂಚು ರೂಪಿಸಿದ ಮತ್ತು ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪವಿದೆ. ಬಂಧಿತನನ್ನು ಮಂಗಳೂರು ಬಜ್ಪೆ ಶಾಂತಿಗುಡ್ಡೆಯ ಬದ್ರಿಯಾ ಜುಮಾ ಮಸೀದಿ ಬಳಿಯ

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ : ಇನ್ನೋರ್ವ ಆರೋಪಿ ಬಂಧನ Read More »

ಸರ್ಕಾರದ ನಡವಳಿಕೆಯಿಂದಲೇ ಕರಾವಳಿಯಲ್ಲಿ ಕಾನೂನು ಹಾಳು : ಬಿ.ವೈ. ವಿಜಯೇಂದ್ರ

ಹಿಂದೂ ಕಾರ್ಯಕರ್ತರಿಗೆ ಅಪಮಾನ ಮಾಡಲು ಕುತಂತ್ರ ಎಂದು ಆರೋಪ ಬೆಂಗಳೂರು: ಸರ್ಕಾರದ ನಡವಳಿಕೆಯಿಂದ ದಕ್ಷಿಣ ಕನ್ನಡ ಮತ್ತು ಕರಾವಳಿ ಭಾಗದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹಾಳಾಗುತ್ತಿದೆ. ಇದನ್ನು ತಿದ್ದಿಕೊಳ್ಳದೆ ಪೊಲೀಸ್ ಮೂಲಕ ಗೂಂಡಾಗಿರಿ ಮಾಡಿದ್ದೇ ಆದರೆ, ಬಿಜೆಪಿ ಕೈಕಟ್ಟಿಕೊಂಡು ಕೂರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಚ್ಚರಿಸಿದ್ದಾರೆ. ರಾಜ ಮಹಾರಾಜರು ಹಿಂದೆ ನಮ್ಮ ದೇಶವನ್ನು ಆಳಿದ್ದರು. ಆಗ ಪಾಳೇಗಾರರು ಇದ್ದ ಬಗ್ಗೆ ನಾವು ಕೇಳಿದ್ದೇವೆ. ಆ ಪಾಳೇಗಾರಿಕೆಯನ್ನು ಹಂಗಿಸುವಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರ

ಸರ್ಕಾರದ ನಡವಳಿಕೆಯಿಂದಲೇ ಕರಾವಳಿಯಲ್ಲಿ ಕಾನೂನು ಹಾಳು : ಬಿ.ವೈ. ವಿಜಯೇಂದ್ರ Read More »

ಬೆಂಗಳೂರು ಮುಡಿಗೆ ಐಪಿಎಲ್‌ ಚಾಂಪಿಯನ್‌ ಕಿರೀಟ : ಎಲ್ಲೆಡೆ ಮುಗಿಲು ಮುಟ್ಟಿದ ಕನ್ನಡಿಗರ ಸಂಭ್ರಮ

18 ವರ್ಷಗಳ ಬಳಿಕ ಕಪ್‌ ಗೆದ್ದು ಬೀಗಿದ ಆರ್‌ಸಿಬಿ ಅಹಮದಾಬಾದ್‌: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ೧೮ ವರ್ಷಗಳ ಸತತ ನಿರೀಕ್ಷೆಯ ಬಳಿಕ ಕೊನೆಗೂ ಟ್ರೋಫಿ ಎತ್ತಿ ಹಿಡಿದಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಫೈನಲ್ ಕಾದಾಟದಲ್ಲಿ ಆರ್​ಸಿಬಿ 6 ರನ್​ಗಳ ಜಯ ಸಾಧಿಸಿ ಚೊಚ್ಚಲ ಐಪಿಎಲ್ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಶ್ರೇಯಸ್ ಪಡೆಗೆ ಗೆಲ್ಲಲು ಆರ್​ಸಿಬಿ 191 ರನ್​ಗಳ ಟಾರ್ಗೆಟ್ ನೀಡಿತ್ತು. ಆದರೆ ರಜತ್ ಪಡೆಯ

ಬೆಂಗಳೂರು ಮುಡಿಗೆ ಐಪಿಎಲ್‌ ಚಾಂಪಿಯನ್‌ ಕಿರೀಟ : ಎಲ್ಲೆಡೆ ಮುಗಿಲು ಮುಟ್ಟಿದ ಕನ್ನಡಿಗರ ಸಂಭ್ರಮ Read More »

ಹೇಳಿಕೆ ವಿವಾದ : ಕಮಲಹಾಸನ್‌ಗೆ ಕೋರ್ಟ್‌ ತರಾಟೆ

ಕ್ಷಮೆ ಕೇಳಲು ಆಗದಿದ್ದರೆ ಕರ್ನಾಟಕವನ್ನು ಬಿಟ್ಟುಬಿಡಿ ಭಾಷೆಯ ಬಗ್ಗೆ ಮಾತನಾಡಲು ನೀವು ಭಾಷಾ ತಜ್ಞರೆ? ಬೆಂಗಳೂರು: ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿ ಕನ್ನಡಿಗರನ್ನು ಕೆಣಕಿರುವ ನಟ ಕಮಲಹಾಸನ್‌ ಅವರನ್ನು ನ್ಯಾಯಾಲಯ ಇಂದು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿದೆ. ತನ್ನ ಥಗ್‌ಲೈಫ್‌ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಭದ್ರತೆ ಒದಗಿಸಬೇಕೆಂದು ಆಗ್ರಹಿಸಿ ಕಮಲಹಾಸನ್‌ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೊಳಪಡಿಸಿದ ಹೈಕೋರ್ಟ್‌ ನ್ಯಾಯಾಧೀಶ ನಾಗಪ್ರಸನ್ನ ಅವರ ಪೀಠ ಭಾಷೆ ಹುಟ್ಟಿದರ ಬಗ್ಗೆ ಮಾತನಾಡುವುದಕ್ಕೆ ನೀವು ಭಾಷಾ ತಜ್ಞರೇ? ಇಲ್ಲ ಇತಿಹಾಸಕಾರರೇ ಎಂದು

ಹೇಳಿಕೆ ವಿವಾದ : ಕಮಲಹಾಸನ್‌ಗೆ ಕೋರ್ಟ್‌ ತರಾಟೆ Read More »

ಆಪರೇಷನ್‌ ಸಿಂದೂರ ಮಾಹಿತಿ ರವಾನಿಸಿದ್ದ ಪಾಕ್‌ ಗೂಢಚಾರ ಸೆರೆ

ಕಾರ್ಯಾಚರಣೆ ನಡೆಯುತ್ತಿರುವಾಗಲೇ ಮಾಹಿತಿ ರವಾನಿಸುತ್ತಿದ್ದ ಗೂಢಚಾರ ನವದೆಹಲಿ: ಇನ್ನೋರ್ವ ಪಾಕಿಸ್ತಾನಿ ಗೂಢಚಾರ ಸೆರೆಯಾಗಿದ್ದಾನೆ. ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಯುತ್ತಿರುವಾಗ ಪಾಕಿಸ್ತಾನದ ಐಎಸ್​ಐ ಜತೆ ಸೇನೆಯ ಚಲನವಲನದ ಹಂಚಿಕೊಂಡಿದ್ದ ಗೂಢಚಾರನನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಐಎಸ್‌ಐ ಜೊತೆ ಬಲವಾದ ಸಂಪರ್ಕ ಹೊಂದಿರುವ ಆರೋಪದ ಮೇಲೆ ಗೂಢಚಾರ ಗಗನ್‌ದೀಪ್ ಸಿಂಗ್​​ನನ್ನು ಬಂಧಿಸಲಾಗಿದೆ. ಆತ ಖಲಿಸ್ತಾನಿ ಉಗ್ರ ಗೋಪಾಲ್ ಸಿಂಗ್ ಚಾವ್ಲಾನೊಂದಿಗೂ ಸಂಬಂಧ ಹೊಂದಿದ್ದಾನೆ. ಆರೋಪಿಯು ಆಪರೇಷನ್ ಸಿಂದೂರ ಸೇರಿದಂತೆ ಗಡಿಯಾಚೆಗಿನ ಏಜೆಂಟರೊಂದಿಗೆ ಸೇನಾ ಚಲನವಲನಗಳ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾನೆ

ಆಪರೇಷನ್‌ ಸಿಂದೂರ ಮಾಹಿತಿ ರವಾನಿಸಿದ್ದ ಪಾಕ್‌ ಗೂಢಚಾರ ಸೆರೆ Read More »

ಗ್ಯಾರಂಟಿಗಳನ್ನು ಸರಿಯಾಗಿ ಕೊಡದಿದ್ದರೂ ಅನುಷ್ಠಾನ ಸಮಿತಿಯಲ್ಲಿರುವವರಿಗೆ ಮುಂಗಡ ಹಣ ಬಿಡುಗಡೆ

ಸರ್ಕಾರದ ನಡೆಗೆ ತೀವ್ರ ಟೀಕೆ ಬೆಂಗಳೂರು: ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್‌ ಜನರಿಗೆ ಸಮರ್ಪಕವಾಗಿ ಗ್ಯಾರಂಟಿ ಯೋಜನೆಗಳನ್ನು ಕೊಡದಿದ್ದರೂ ಗ್ಯಾರಂಟಿ ಅನುಷ್ಠಾನ ಸಮಿತಿಯಲ್ಲಿರುವ ಕಾಂಗ್ರೆಸ್‌ನ ಕಾರ್ಯಕರ್ತರಿಗೆ ಕ್ಲಪ್ತವಾಗಿ 7.65 ಕೋಟಿ ರೂ. ಹಣ ಬಿಡುಗಡೆ ಮಾಡಿರುವುದು ತೀವ್ರ ಟೀಕೆಗೆ ಗುರಿಯಾಗಿದೆ. ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಹಣ ಪ್ರತಿ ತಿಂಗಳು ಮಹಿಳೆಯರ ಖಾತೆಗೆ ಜಮೆ ಆಗುತ್ತಿಲ್ಲ. ಶಕ್ತಿ ಯೋಜನೆಯಿಂದಾಗಿ ಸಾರಿಗೆ ಇಲಾಖೆ ಸಂಕಷ್ಟಕ್ಕೆ ಸಿಲುಕಿದ್ದು, ಟಿಕೆಟ್ ದರ ಏರಿಕೆ ಮಾಡಿ ಬರೆ

ಗ್ಯಾರಂಟಿಗಳನ್ನು ಸರಿಯಾಗಿ ಕೊಡದಿದ್ದರೂ ಅನುಷ್ಠಾನ ಸಮಿತಿಯಲ್ಲಿರುವವರಿಗೆ ಮುಂಗಡ ಹಣ ಬಿಡುಗಡೆ Read More »

error: Content is protected !!
Scroll to Top