ಸುದ್ದಿ

ಹಿಂದೂಗಳ ಧ್ವನಿ ಅಡಗಿಸಲು ಹೊರಟಿದೆ ಹಿಂದೂ ದ್ವೇಷಿ ಕಾಂಗ್ರೆಸ್ ಸರ್ಕಾರ : ಆರ್‌. ಅಶೋಕ್‌

ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದಕ್ಕೆ ಆಕ್ರೋಶ ಬೆಂಗಳೂರು: ಪ್ರಚೋದನಕಾರಿ ಹೇಳಿಕೆ ನೀಡಿರುವ ಆರೋಪದ ಮೇಲೆ ಆರ್​ಎಸ್​ಎಸ್​ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್ಐಆರ್ ದಾಖಲಿಸಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಹಿಂದೂಗಳ ಧ್ವನಿ ಅಡಗಿಸಲು ಹೊರಟಿದೆ ಹಿಂದೂ ದ್ವೇಷಿ ಕಾಂಗ್ರೆಸ್ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ. ಸರ್ಕಾರಕ್ಕೆ ಸರಣಿ ಪ್ರಶ್ನೆ ಮಾಡಿರುವ ಅವರು, […]

ಹಿಂದೂಗಳ ಧ್ವನಿ ಅಡಗಿಸಲು ಹೊರಟಿದೆ ಹಿಂದೂ ದ್ವೇಷಿ ಕಾಂಗ್ರೆಸ್ ಸರ್ಕಾರ : ಆರ್‌. ಅಶೋಕ್‌ Read More »

ದಕ್ಷಿಣ ಕನ್ನಡದಲ್ಲಿ ಪೊಲೀಸರಿಂದ ಆಪರೇಷನ್‌ ಗಡಿಪಾರು ಅಸ್ತ್ರ ಪ್ರಯೋಗ

36 ಮಂದಿಯ ಗಡಿಪಾರು ಪ್ರಕ್ರಿಯೆ ಶುರು; ಬಿಜೆಪಿಯಿಂದ ಹೋರಾಟದ ಎಚ್ಚರಿಕೆ ಮಂಗಳೂರು : ಸರಣಿ ಹತ್ಯೆಗಳು ಮತ್ತು ಪ್ರಚೋದನಕಾರಿ ಭಾಷಣಗಳಿಂದ ಪ್ರಕ್ಷುಬ್ಧಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಹಜ ಸ್ಥಿತಿಗೆ ತರಲು ಪೊಲೀಸರು ಆಪರೇಷನ್‌ ಗಡಿಪಾರು ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಹಿಂದು ಮುಖಂಡ ಅರುಣ್‌ ಪುತ್ತಿಲ ಅವರಿಗೆ ಗಡಿಪಾರು ನೋಟಿಸ್‌ ಕೊಟ್ಟ ಬೆನ್ನಲ್ಲೇ ಇದೇ ಮಾದರಿಯಲ್ಲಿ ಇನ್ನೂ 36 ಜನರಿಗೆ ನೋಟಿಸ್‌ ನೀಡಲಾಗಿದೆ. ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿ 36 ಜನರ ಗಡಿಪಾರು ಪ್ರಕ್ರಿಯೆ ಪ್ರಾರಂಭಿಸಲಾಗಿದೆ.

ದಕ್ಷಿಣ ಕನ್ನಡದಲ್ಲಿ ಪೊಲೀಸರಿಂದ ಆಪರೇಷನ್‌ ಗಡಿಪಾರು ಅಸ್ತ್ರ ಪ್ರಯೋಗ Read More »

ಕಲ್ಲಡ್ಕ ಪ್ರಭಾಕರ ಭಟ್‌ ಬಂಧಿಸದಂತೆ ಹೈಕೋರ್ಟ್‌ ಆದೇಶ

ದುರುದ್ದೇಶದಿಂದ ಎಫ್​ಐಆರ್​ ದಾಖಲಿಸಲಾಗಿದೆ ಎಂದು ವಾದ ಮಂಗಳೂರು: ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ಬಂಧನ ಸಹಿತ ಯಾವುದೇ ಒತ್ತಡದ ಕ್ರಮ ಕೈಗೊಳ್ಳದಂತೆ ನ್ಯಾ‌.ಕೃಷ್ಣಕುಮಾರ್ ಅವರಿದ್ದ ಹೈಕೋರ್ಟ್​ನ ಏಕಸದಸ್ಯ ಪೀಠ ಆದೇಶ ಹೊರಡಿಸಿ ಜೂನ್ 10ಕ್ಕೆ ವಿಚಾರಣೆ ಮುಂದೂಡಿದೆ. ಕಲ್ಲಡ್ಕ ಪ್ರಭಾಕರ ಭಟ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು. ಎಫ್‌ಐಆರ್‌ ದಾಖಲಾದ ಬಳಿಕ ಪ್ರಕರಣ ರದ್ದು ಕೋರಿ ಕಲ್ಲಡ್ಕ ಪ್ರಭಾಕರ ಭಟ್ ನಿನ್ನೆಯೇ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಭಾಷಣ ಮಾಡಿದ ಹಲವು

ಕಲ್ಲಡ್ಕ ಪ್ರಭಾಕರ ಭಟ್‌ ಬಂಧಿಸದಂತೆ ಹೈಕೋರ್ಟ್‌ ಆದೇಶ Read More »

ಕೆನರಾ ಬ್ಯಾಂಕ್‌ನಿಂದ 59 ಕೆಜಿ ಚಿನ್ನ ಕಳ್ಳತನ

ಪೊಲೀಸರಿಗೆ ಸವಾಲಾಗಿ ಪರಿಣಮಿಸಿರುವ ಭಾರಿ ದೊಡ್ಡ ಕಳ್ಳತನ ಕೃತ್ಯ ಬೆಂಗಳೂರು: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಕೆನರಾ ಬ್ಯಾಂಕ್ ಶಾಖೆಯಿಂದ ಕಳ್ಳರು ಕಳೆದ ಮೇ 25ರಂದು ಬರೋಬ್ಬರಿ 58.975 ಕಿಲೋ ಚಿನ್ನ ಮತ್ತು 5.20 ಲ.ರೂ. ನಗದು ಕಳ್ಳತನ ಮಾಡಿದ್ದು, ಈ ಕಳ್ಳತನ ಪ್ರಕರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಸಿನಿಮೀಯ ರೀತಿಯಲ್ಲಿ, ಮಾಸ್ಟರ್ ಪ್ಲ್ಯಾನ್ ಮಾಡಿ ಕಳ್ಳರು ಕೋಟಿ ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದಿದ್ದಾರೆ. ಖದೀಮರ ಪತ್ತೆಗೆ ಪೊಲೀಸ್​ ಇಲಾಖೆ ಎಂಟು ವಿಶೇಷ ತಂಡಗಳನ್ನು ರಚಿಸಿದೆ. ಬ್ಯಾಂಕ್​ನಲ್ಲಿದ್ದ 58

ಕೆನರಾ ಬ್ಯಾಂಕ್‌ನಿಂದ 59 ಕೆಜಿ ಚಿನ್ನ ಕಳ್ಳತನ Read More »

ಐಪಿಎಲ್‌ ಫೈನಲ್‌ಗೆ ಕ್ಷಣಗಣನೆ : ಮಳೆಯ ಆತಂಕದ ನಡುವೆಯೇ ಅಭಿಮಾನಿಗಳ ಹಾರೈಕೆ

ಮಳೆ ಬಂದರೆ ಫಲಿತಾಂಶ ಏನಾಗಬಹುದು? ಅಹಮದಾಬಾದ್‌ : ಐಪಿಎಲ್‌ ಫೈನಲ್‌ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದ್ದು, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಕಾದಾಟವನ್ನು ನೋಡಲು ಅಭಿಮಾನಿಗಳು ಕಾತರದಿಂದ ಇದ್ದಾರೆ. ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳ ಮಧ್ಯೆ ಹಣಾಹಣಿ ನಡೆಯಲಿದ್ದು, ಯಾರು ಗೆದ್ದರೂ ಐಪಿಎಲ್‌ಗೆ ಹೊಸ ಚಾಂಪಿಯನ್‌ ಸಿಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಫೈನಲ್​ಗೆ ಅರ್ಹತೆ ಪಡೆದರೆ, ಪಂಜಾಬ್ ಕಿಂಗ್ಸ್

ಐಪಿಎಲ್‌ ಫೈನಲ್‌ಗೆ ಕ್ಷಣಗಣನೆ : ಮಳೆಯ ಆತಂಕದ ನಡುವೆಯೇ ಅಭಿಮಾನಿಗಳ ಹಾರೈಕೆ Read More »

ಕಡಬ: ಕೊಯಿಲ ಕೆಸಿ ಫಾರ್ಮ್‌ ಸರಕಾರಿ ಶಾಲೆಯಲ್ಲಿ ಎಲ್ಕೆಜಿ ಪ್ರಾರಂಭೋತ್ಸವ

ಕಡಬ: (ಜೂ. 1); ಶಾಲಾ ಅಭಿವೃದ್ಧಿಯನ್ನು ಶಾಲಾ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಮಾಡಬೇಕು ಎಂದು ಶಾಲಾಭಿವೃದ್ಧಿ ಅಧ್ಯಕ್ಷ ವಿಶ್ವಾನಾಥ ಪುತ್ಯೆ ಹೇಳಿದರು. ಅವರು ಕೊಯಿಲ ಕೆಸಿ ಫ್ರಾಮ್ ಸರಕಾರಿ ಶಾಲೆಯಲ್ಲಿ ಎಲ್ ಕೆಜಿ ಪ್ರಾರಂಭ ಉತ್ಸವದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ Lkg, ukg ಪ್ರಾರಂಭದ ಕುರಿತಾಗಿ ಮುಖ್ಯ ಶಿಕ್ಷಕಿ ಸುಜಾತ ಎಂ. ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಶಿಕ್ಷಕಿ ಅನುಪಮಾ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕ ಲಂಕೇಶ್ ಬದಲಾವಣೆಯ ಶಿಕ್ಷಣ ಭವಿಷ್ಯದ ನಿರ್ಮಾಣ ಎಂಬ ಧ್ಯೇಯ ವಾಕ್ಯವನ್ನು ವಿದ್ಯಾರ್ಥಿಗಳಿಗೆ ಹೇಳುತ್ತಾ

ಕಡಬ: ಕೊಯಿಲ ಕೆಸಿ ಫಾರ್ಮ್‌ ಸರಕಾರಿ ಶಾಲೆಯಲ್ಲಿ ಎಲ್ಕೆಜಿ ಪ್ರಾರಂಭೋತ್ಸವ Read More »

ಕುತ್ಯಾರು ಸೂರ್ಯ ಚೈತನ್ಯ ಹೈಸ್ಕೂಲ್‌ನಲ್ಲಿ ಶಾಲಾ ಆರಂಭೋತ್ಸವ

ಆನೆಗುಂದಿ ಶ್ರೀ ಸರಸ್ವತಿ ಪೀಠ ಕುತ್ಯಾರು ಸೂರ್ಯಚೈತನ್ಯ ಸಂಸ್ಥೆಯಲ್ಲಿ ಶಾಲಾ ಆರಂಭೋತ್ಸವವು ನೂತನವಾಗಿ ದಾಖಲಾದ ವಿದ್ಯಾರ್ಥಿಗಳ, ಪೋಷಕರ ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳ ಜಾಥದೊಂದಿಗೆ ಆರಂಭವಾಯಿತು. ಆಡಳಿತ ಮಂಡಳಿ ಅಸ್ಸೆಟ್ ಗೌರವಾಧ್ಯಕ್ಷರಾದ ಮೋಹನ್ ಕುಮಾರ್ ಬೆಳ್ಳೂರು ಮತ್ತು ಅಧ್ಯಕ್ಷರಾದ ಸೂರ್ಯಕುಮಾರ ಹಳೆಯಂಗಡಿ ಜಾಥಕ್ಕೆ ಚಾಲನೆ ನೀಡಿದರು. ಶಾಲಾ ಅವರಣದಲ್ಲಿ ವಿದ್ಯಾರ್ಥಿಗಳನ್ನು ಆರತಿ ಮಾಡಿ ಪುಷ್ಪವೃಷ್ಠಿಯೊಂದಿಗೆ ಶ್ರೀ ಸರಸ್ವತಿ ಪೀಠ ಮಾತೃ ಮಂಡಳಿ ಅಧ್ಯಕ್ಷ ಸಂಧ್ಯಾ ಲಕ್ಷ್ಮಣ ಆಚಾರ್ಯ, ಉಷಾ ಸುಬ್ರಮಣ್ಯ, ಆಶಾ ನಾಗರಾಜ್, ಪ್ರಶಾಂತಿ ರಾಘವೇಂದ್ರ ಆಚಾರ್ಯ

ಕುತ್ಯಾರು ಸೂರ್ಯ ಚೈತನ್ಯ ಹೈಸ್ಕೂಲ್‌ನಲ್ಲಿ ಶಾಲಾ ಆರಂಭೋತ್ಸವ Read More »

ವೀಣಾ ಬನ್ನಂಜೆಯವರ ಶ್ರೀಮದ್ಭಾಗವತ ಪ್ರವಚನ ಸಪ್ತಾಹ ಉದ್ಘಾಟನೆ

ಪುತ್ತೂರು: ನಮ್ಮ ನಿತ್ಯ ಜೀವನದ ವ್ಯವಹಾರಗಳು ಹಾಗೂ ವೈಯಕ್ತಿಕ ಬದುಕನ್ನು ಎತ್ತರಕ್ಕೆ ಏರಿಸುವಲ್ಲಿ ಆಧ್ಯಾತ್ಮಿಕ ಜ್ಞಾನದ ಅಗತ್ಯವಿದೆ. ಆದ್ದರಿಂದ ಭಾಗವತ ಪ್ರವಚನ ಎಂಬುದು ಒಂದು ಸದಭಿರುಚಿಯ ಹಾಗೂ ನಮ್ಮ ಜ್ಞಾನವನ್ನು ವಿಸ್ತರಿಸುವ ಕಾರ್ಯಕ್ರಮ. ಇಂತಹ ಕಾರ್ಯಕ್ರಮಕ್ಕೆ ಪುತ್ತೂರಿನ ಮಂದಿ ಸಾಕಷ್ಟು ಸ್ಪಂದಿಸುತ್ತಾರೆ ಎಂದು ಜಿ.ಎಲ್.ಆಚಾರ್ಯ ಜ್ಯುವೆಲ್ಸ್ನ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ಹೇಳಿದರು. ಅವರು ಭಾನುವಾರ ಸಂಜೆ ನಗರದ ದರ್ಶನ ಕಲಾ ಮಂದಿರದಲ್ಲಿ ಬಹುವಚನಂ ಪುತ್ತೂರು, ದಿ.ಜಿ.ಎಲ್.ಆಚಾಐ ಜನ್ಮಶತಾಬ್ಧಿ ಸಮಿತಿ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ

ವೀಣಾ ಬನ್ನಂಜೆಯವರ ಶ್ರೀಮದ್ಭಾಗವತ ಪ್ರವಚನ ಸಪ್ತಾಹ ಉದ್ಘಾಟನೆ Read More »

ನಳಿಲು ಸಂತೋಷ್ ಕುಮಾರ್ ರೈಯವರಿಗೆ ಸನ್ಮಾನ

ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಭದ್ರತಾ ಕೋಶವನ್ನು ಸೇವಾ ರೂಪದಲ್ಲಿ ಅರ್ಪಿಸಲು ದೊರೆತ ಅವಕಾಶ ನನ್ನ ಭಾಗ್ಯವೆಂದು  ನಳಿಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸಂತೋಷ ಕುಮಾರ್ ರೈ ತಿಳಿಸಿ ದೇವಾಲಯದ ಭಕ್ತರ ಸಹಕಾರದಿಂದ ಇನ್ನಷ್ಟು ಕೊಡುಗೆಗಳು ಕ್ಷೇತ್ರಕ್ಕೆ ಒದಗಿ ಬರಲಿಯೆಂದು ಹಾರೈಸಿದರು. ಶ್ರೀ ನಳಿಲು ಕ್ಷೇತ್ರದಲ್ಲಿ    ಬಾರ್ಯ ದೇವಾಲಯದ ಆಡಳಿತ ಸೇವಾ ಟ್ರಸ್ಟ್ ವತಿಯಿಂದ  ಅವರನ್ನು ಈ ಕೊಡುಗೆಗಾಗಿ ಸನ್ಮಾನಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.   ಟ್ರಸ್ಟ್ ಅಧ್ಯಕ್ಷ  ಭಾಸ್ಕರ ಬಾರ್ಯ ಪುತ್ತೂರು ಮತ್ತು ಶ್ರೀ

ನಳಿಲು ಸಂತೋಷ್ ಕುಮಾರ್ ರೈಯವರಿಗೆ ಸನ್ಮಾನ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆ ಬಿ.ಸಿ ಟ್ರಸ್ಟ್  (ರಿ ) ವಿಟ್ಲ ತಾಲೂಕಿನ  ಅಳಿಕೆ ವಲಯದ   ಕಣ್ಣಿನ ತಪಾಸಣಾ ಶಿಬಿರ

ವಿಟ್ಲ :  ತಾಲೂಕಿನ  ಅಳಿಕೆ ವಲಯದ   ನಿರ್ಕಜೆ   ಕಾರ್ಯ ಕ್ಷೇತ್ರದಲ್ಲಿ  ಉಚಿತ ಕಣ್ಣಿನ ತಪಾಸಣಾ ಶಿಬಿರ ಕಾರ್ಯಕ್ರಮ ನಡೆಯಿತು. ಅಳಿಕೆ ಒಕ್ಕೂಟದ   ನಿಕಟ ಪೂರ್ವ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿಯವರ ನೇತೃತ್ವದಲ್ಲಿ  ವಲಯ ಮಟ್ಟದಲ್ಲಿ  ಆಯೋಜನೆ  ಮಾಡಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಪು ಪಂಚಾಯತ್ ಅಧ್ಯಕ್ಷರು ರಾಘವ ಸಾರಡ್ಕ  ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು   ದಕ್ಷಿಣ ಕನ್ನಡ- 2 ಜಿಲ್ಲಾ ನಿರ್ದೇಶಕರಾದ  ಬಾಬು ನಾಯ್ಕ್  ನೆರವೇರಿಸಿದರು.  ಕಾರ್ಯಕ್ರಮದಲ್ಲಿ  ಗೋಕುಲ ದಾಸ್ ಭಕ್ತ, ಸತ್ಯನಾರಾಯಣ ಭಟ್, ಡಾ. ಶಾಂತರಾಜ್, ಡಾ. ಅಶ್ವಿನಿ ಸಾಗರ್,

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆ ಬಿ.ಸಿ ಟ್ರಸ್ಟ್  (ರಿ ) ವಿಟ್ಲ ತಾಲೂಕಿನ  ಅಳಿಕೆ ವಲಯದ   ಕಣ್ಣಿನ ತಪಾಸಣಾ ಶಿಬಿರ Read More »

error: Content is protected !!
Scroll to Top