ಸುದ್ದಿ

ಮಂಗಳೂರು: ಬೀಚ್‌ನಲ್ಲಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಮೂವರು ಸೆರೆ

ಮಾದಕವಸ್ತು, ಕಾರು ಸಹಿತ 9.24 ಲ.ರೂ. ಸೊತ್ತು ವಶ ಮಂಗಳೂರು ‌: ನಗರದ ಸುರತ್ಕಲ್‌ ಬೀಚ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರನ್ನು ಮಂಗಳೂರು ನಗರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಿಂದ ನಿಷೇಧಿತ ಎಂಡಿಎಂಎಯನ್ನು ತಂದು ಸುರತ್ಕಲ್ ಸುತ್ತಮುತ್ತ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರನ್ನು ಗುರಿಮಾಡಿಕೊಂಡು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಬಂಧಿತರನ್ನು ಸುರತ್ಕಲ್ ನಿವಾಸಿಗಳಾದ ಮೊಹಮ್ಮದ್ ಆಸಿಫ್ (24), ಅಸ್ಕರ್ ಅಲಿ (31) ಮತ್ತು ಹಳೆಯಂಗಡಿಯ ಮೊಹಮ್ಮದ್ ರಶೀಮ್ (24) […]

ಮಂಗಳೂರು: ಬೀಚ್‌ನಲ್ಲಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಮೂವರು ಸೆರೆ Read More »

ವಕ್ಫ್‌ ಕಾಯಿದೆ ವಿರೋಧಿಸಿ ಪ್ರತಿಭಟನೆ ವೇಳೆ ರೈಲುಗಳಿಗೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ

ಪಶ್ಚಿಮ ಬಂಗಾಳದಲ್ಲಿ ಇಡೀ ದಿನ ನಡೆದ ಹಿಂಸಾಚಾರ ಕೋಲ್ಕತ್ತಾ: ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಮುಸ್ಲಿಮರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ನಿಲ್ದಾಣದಲ್ಲಿ ನಿಂತಿದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿ ಎರಡು ರೈಲುಗಳನ್ನು ಜಖಂಗೊಳಿಸಿದ್ದಾರೆ.ಶುಕ್ರವಾರ ಮಧ್ಯಾಹ್ನ ಪ್ರತಿಭಟನೆ ನಡೆದಿತ್ತು. ರಾತ್ರಿ ಪ್ರತಿಭಟನೆ ಹಿಂಸಚಾರಕ್ಕೆ ತಿರುಗಿದೆ. ಘಟನೆಯ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರ ರದ್ದು ಮಾಡಲಾಗಿದೆ. ದಾಳಿಯಲ್ಲಿ ಕೆಲವು ಪ್ರಯಾಣಿಕರು ಮತ್ತು ಏಳರಿಂದ ಹತ್ತು ಪೊಲೀಸರು ಗಾಯಗೊಂಡಿದ್ದಾರೆ. ಹಿಂಸಾಚಾರವನ್ನು ನಿಯಂತ್ರಿಸಲು ಗಡಿ ಭದ್ರತಾ

ವಕ್ಫ್‌ ಕಾಯಿದೆ ವಿರೋಧಿಸಿ ಪ್ರತಿಭಟನೆ ವೇಳೆ ರೈಲುಗಳಿಗೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ Read More »

ಚಿನ್ನದ ಬೆಲೆ ಎರಡು ದಿನದಲ್ಲಿ 5 ಸಾವಿರ ರೂ. ಹೆಚ್ಚಳ

ನವದೆಹಲಿ: ಅಮೆರಿಕದ ಸುಂಕ ಸಮರದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾದ ತಲ್ಲಣದಿಂದಾಗಿ ಕೆಲವು ದಿನಗಳಿಂದ ಇಳಿಯುತ್ತಿದ್ದ ಚಿನ್ನದ ಬೆಲೆ ಕಳೆದೆರಡು ದಿನಗಳಿಂದ ಮತ್ತೆ ಏರಿಕೆಯಾಗತೊಡಗಿದೆ. ಶುಕ್ರವಾರ ಒಂದೇ ದಿನ 2000 ರೂ. ಏರಿಕೆಯಾಗಿದೆ. ಗುರುವಾರವೂ 2940 ರೂ. ಹೆಚ್ಚಳವಾಗಿತ್ತು. ಇದರಿಂದ ಎರಡೇ ದಿನದಲ್ಲಿ ಚಿನ್ನದ ಬೆಲೆ ಸುಮಾರು 5,000 ರೂ.ಯಷ್ಟು ಏರಿದಂತಾಗಿದೆ. ಬೆಲೆ ಇಳಿಕೆಯಿಂದ ತುಸು ಖುಷಿಯಾಗಿದ್ದ ಚಿನ್ನಪ್ರಿಯರಿಗೆ ಮತ್ತೆ ಬೆಲೆ ಏರಿಕೆಯ ಚಿಂತೆ ಕಾಡಲಾರಂಭಿಸಿದೆ.ಮುಂಬಯಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 87,450 ರೂ.ಗೆ

ಚಿನ್ನದ ಬೆಲೆ ಎರಡು ದಿನದಲ್ಲಿ 5 ಸಾವಿರ ರೂ. ಹೆಚ್ಚಳ Read More »

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‍ ಹತ್ಯೆಗೆ ಸಂಚು?

ಪ್ರತಿಭಟನೆಗೆ ಕರೆಕೊಟ್ಟ ಆಡಿಯೊದಲ್ಲಿ ಯತ್ನಾಳರನ್ನು ಮುಗಿಸುವ ಕುರಿತು ಮಾತು ವಿಜಯಪುರ: ಪ್ರವಾದಿ ಮಹಮ್ಮದ್ ಪೈಗಂಬರರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿರುವ ಬಿಜೆಪಿಯ ಉಚ್ಚಾಟಿತ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ ಹತ್ಯೆಗೆ ಸಂಚು ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ. ಮುಸ್ಲಿಂ ಯುವಕನ ಆಡಿಯೊ ತುಣುಕೊಂದು ಬಹಿರಂಗಗೊಂಡಿದ್ದು, ಇದರಲ್ಲಿರುವ ಸಂಭಾಷಣೆ ಹತ್ಯೆ ಸಂಚನ್ನು ಬಯಲುಗೊಳಿಸಿದೆ ಎನ್ನಲಾಗಿದೆ.ಏ.7ರಂದು ಹುಬ್ಬಳ್ಳಿಯಲ್ಲಿ ನಡೆದ ರಾಮನವಮಿ ಕಾರ್ಯಕ್ರಮದಲ್ಲಿ ಯತ್ನಾಳ ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‍ ಹತ್ಯೆಗೆ ಸಂಚು? Read More »

ಚಿನ್ನ ಪ್ರಿಯರಿಗೆ ಮತ್ತೆ ಶಾಕ್‍ | ಚಿನ್ನ ಬೆಲೆ ಏರಿಕೆ

ಬೆಂಗಳೂರು : ನಿನ್ನೆ ಗ್ರಾಮ ಬರೋಬ್ಬರಿ 270 ರೂನಷ್ಟು ಹೆಚ್ಚಾಗಿದ್ದ ಚಿನ್ನದ ಬೆಲೆ ಇವತ್ತು ಕೂಡ ಭರ್ಜರಿ ಹೆಚ್ಚಳ ಕಂಡಿದೆ. ಇಂದು ಶುಕ್ರವಾರ ಚಿನ್ನದ ಬೆಲೆ 185 ರೂನಷ್ಟು ಏರಿಕೆ ಆಗಿದ್ದು , ಚಿನ್ನಾಭರಣ ಪ್ರಿಯರಿಗೆ ನಿರಾಶೆಯನ್ನುಂಟು ಮಾಡಿದೆ. ಎರಡು ದಿನದಲ್ಲಿ ಚಿನ್ನದ ಬೆಲೆ 150 ರೂಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅಪರಂಜಿ ಚಿನ್ನದ ಬೆಲೆ ಇಂದು 202 ರೂಗಳನ್ನು ಹೆಚ್ಚಳವಾಗಿದೆ. ಭಾರತದಲ್ಲಿ ಮಾತ್ರವಲ್ಲ, ಎಲ್ಲಾ ದೇಶಗಳಲ್ಲೂ ಚಿನ್ನದ ಬೆಲೆ ಜಂಪ್ ಆಗಿದೆ. ಬೆಳ್ಳಿ ಬೆಲೆಯ

ಚಿನ್ನ ಪ್ರಿಯರಿಗೆ ಮತ್ತೆ ಶಾಕ್‍ | ಚಿನ್ನ ಬೆಲೆ ಏರಿಕೆ Read More »

ಅಕ್ಷಯ ಕಾಲೇಜಿನಲ್ಲಿ ‘ಅಕ್ಷಯ ವೈಭವ’ ಫ್ಯಾಶನ್ ಶೋ | ವಿದ್ಯಾರ್ಥಿಗಳಲ್ಲಿ ಉದ್ಯೋಗದ ಹೊಸತನ ಮೂಡಿಸುತ್ತಿದೆ ಅಕ್ಷಯ ಕಾಲೇಜು-ಬಲರಾಂ ಆಚಾರ್ಯ

ಪುತ್ತೂರು : ಪ್ರಸಕ್ತ ಸನ್ನಿವೇಶದಲ್ಲಿ ನಿರುದ್ಯೋಗ’ದ ಸಮಸ್ಯೆಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮನಸ್ಸಿನಲ್ಲಿಉದ್ಯೋಗ’ ಎಂಬ ಭರವಸೆಯ ಕಲ್ಪನೆಯನ್ನು ಮೂಡಿಸುತ್ತಿರುವ ಅಕ್ಷಯ ಕಾಲೇಜು ನಿಜಕ್ಕೂ ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸತನವನ್ನು ಧಾರೆ ಎರೆಯುತ್ತಿರುವುದು ಶ್ಲಾಘನೀಯ ಎಂದು ಪುತ್ತೂರು ಜಿ.ಎಲ್ ಆಚಾರ್ಯ ಸಮೂಹ ಸಂಸ್ಥೆಗಳ ಮಾಲಕರಾದ ಬಲರಾಮ ಆಚಾರ್ಯರವರು ಹೇಳಿದರು. ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಎರಡು ದಿನಗಳ ಅಕ್ಷಯ ವೈಭವ’ ಕಾರ್ಯಕ್ರಮ ಜರಗಲಿದ್ದು, ಎ.೯ ರಂದುಡಿ-ವಾಕ್’ ಹೆಸರಿನಲ್ಲಿ ಜರಗಿದ ಫ್ಯಾಶನ್ ಶೋ

ಅಕ್ಷಯ ಕಾಲೇಜಿನಲ್ಲಿ ‘ಅಕ್ಷಯ ವೈಭವ’ ಫ್ಯಾಶನ್ ಶೋ | ವಿದ್ಯಾರ್ಥಿಗಳಲ್ಲಿ ಉದ್ಯೋಗದ ಹೊಸತನ ಮೂಡಿಸುತ್ತಿದೆ ಅಕ್ಷಯ ಕಾಲೇಜು-ಬಲರಾಂ ಆಚಾರ್ಯ Read More »

ಮೂಲ್ಕಿ : ನಾಪತ್ತೆಯಾಗಿದ್ದ ಆಟೋ ಚಾಲಕನ ಮೃತದೇಹ ಬಾವಿಯಲ್ಲಿ ಪತ್ತೆ

ಗಡಿಭಾಗದ ಕುಂಜತ್ತೂರು ಪದವು ಎಂಬಲ್ಲಿ ಬಾವಿಯೊಳಗಿದೆ ಶವ- ಕೊಲೆ ಶಂಕೆ ಮೂಲ್ಕಿ‌: ಕಳೆದ ಬುಧವಾರದಿಂದ ನಾಪತ್ತೆಯಾಗಿದ್ದ ಮೂಲ್ಕಿಯ ಆಟೋ ಚಾಲಕನ ಮೃತದೇಹ ಕಾಸರಗೋಡಿನ ಮಂಜೇಶ್ವರ ಸಮೀಪದ ಕುಂಜತ್ತೂರು ಪದವು ಎಂಬಲ್ಲಿ ನಿರ್ಜನ ಪ್ರದೇಶದ ಬಾವಿಯಲ್ಲಿ ಗುರುವಾರ ರಾತ್ರಿ ಪತ್ತೆಯಾಗಿದ್ದು, ಇದು ಕೊಲೆ ಎಂದು ಶಂಕಿಸಲಾಗಿದೆ. ಮೂಲ್ಕಿ ಕೊಳ್ನಾಡಿನ ಮುಹಮ್ಮದ್ ಶರೀಫ್ (52) ಮೃತಪಟ್ಟವರು. ಬುಧವಾರ ಬೆಳಗ್ಗೆ ಎಂದಿನಂತೆ ರಿಕ್ಷಾ ಸಹಿತ ಮನೆಯಿಂದ ತೆರಳಿದ್ದ ಇವರು ಅಂದು ಮನೆಗೆ ಬಾರದೆ ನಾಪತ್ತೆಯಾಗಿದ್ದರು.ಪತ್ನಿ ಕರೆ ಮಾಡಿದಾಗ ಮೊಬೈಲ್ ಸಂಪರ್ಕಕಕ್ಕೆ ಸಿಗದ

ಮೂಲ್ಕಿ : ನಾಪತ್ತೆಯಾಗಿದ್ದ ಆಟೋ ಚಾಲಕನ ಮೃತದೇಹ ಬಾವಿಯಲ್ಲಿ ಪತ್ತೆ Read More »

ಹಾರುತ್ತಿರುವಾಗಲೇ ರೆಕ್ಕೆ ತುಂಡಾಗಿ ಹೆಲಿಕಾಪ್ಟರ್‌ ನದಿಗೆ ಪತನ : 6 ಮಂದಿ ಸಾವು

ನ್ಯೂಯಾರ್ಕ್ : ಹಾರುತ್ತಿದ್ದ ಹೆಲಿಕಾಪ್ಟರ್‌ನ ರೆಕ್ಕೆ ತುಂಡಾದ ಪರಿಣಾಮ ಅದು ನದಿಗೆ ಪತನಗೊಂಡು ಆರು ಮಂದಿ ಮೃತಪಟ್ಟ ಘಟನೆ ಅಮೆರಿಕದ ಮ್ಯಾನ್‌ಹಾಟನ್ ಬಳಿ ಸಂಭವಿಸಿದ್ದು, ಈ ಅವಘಡದ ವೀಡಿಯೊ ಜಗತ್ತಿನಾದ್ಯಂತ ಸಿಕ್ಕಾಪಟ್ಟೆ ವೈರಲ್‌ ಆಗಿದೆ.ಗುರುವಾರ ಹೆಲಿಕಾಪ್ಟರ್ ಹಡ್ಸನ್‌ ನದಿಗೆ ಬಿದ್ದಿದೆ. ಮೃತಪಟ್ಟವರಲ್ಲಿ ಸೀಮನ್ಸ್ ಕಂಪನಿಯ ಅಧ್ಯಕ್ಷ ಆಗಸ್ಟಿನ್ ಎಸ್ಕೋಬರ್, ಅವರ ಪತ್ನಿ ಹಾಗೂ ಮೂವರು ಮಕ್ಕಳು ಸೇರಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಅಮೆರಿಕದಲ್ಲಿ ವಾಯುಮಾರ್ಗ ಮಧ್ಯದಲ್ಲಿ ಸಂಭವಿಸುತ್ತಿರುವ ಅಪಘಾತಗಳ ಸರಣಿಗೆ ಇದು ಹೊಸ ಸೇರ್ಪಡೆಯಾಗಿದೆ.ಪ್ರತ್ಯಕ್ಷದರ್ಶಿಗಳು ಈ ಘಟನೆಯನ್ನು

ಹಾರುತ್ತಿರುವಾಗಲೇ ರೆಕ್ಕೆ ತುಂಡಾಗಿ ಹೆಲಿಕಾಪ್ಟರ್‌ ನದಿಗೆ ಪತನ : 6 ಮಂದಿ ಸಾವು Read More »

ಕಾಮತ್ ರೆಸ್ಟೋರೆಂಟ್‍ ನ ಮಾಲಕರ ಪತ್ನಿ ವಿನುತಾ ದಿನೇಶ್ ಕಾಮತ್ ನಿಧನ

ಪುತ್ತೂರು: ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿಯ ಕಾಮತ್ ರೆಸ್ಟೋರೆಂಟ್‍ ನ ಮಾಲಕ ದಿನೇಶ್ ಕಾಮತ್ ರವರ ಪತ್ನಿ ವಿನುತಾ ದಿನೇಶ್ ಕಾಮತ್ (47) ಅಸೌಖ್ಯದಿಂದ ಎ.11 ಇಂದು ನಿಧನರಾದರು. ಪುತ್ತೂರು ಕಲ್ಲಾರೆ ನಿವಾಸಿಯಾಗಿರುವ ವಿನುತಾ ಅವರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಪತಿ ದಿನೇಶ್ ಕಾಮತ್ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಕಾಮತ್ ರೆಸ್ಟೋರೆಂಟ್‍ ನ ಮಾಲಕರ ಪತ್ನಿ ವಿನುತಾ ದಿನೇಶ್ ಕಾಮತ್ ನಿಧನ Read More »

ಏ.12ರಿಂದ ಮಂಗಳೂರು-ಸುಬ್ರಹ್ಮಣ್ಯ ನಡುವೆ ಪ್ಯಾಸೆಂಜರ್‌ ರೈಲು ಸಂಚಾರ ಆರಂಭ

ನಿತ್ಯ ಓಡಾಡುವವರಿಗೆ ಅನುಕೂಲವಾಗುವ ವೇಳಾಪಟ್ಟಿ ಮಂಗಳೂರು: ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಿಂದ ಸುಬ್ರಹ್ಮಣ್ಯ ರೋಡ್‌ ನಡುವೆ ಪ್ಯಾಸೆಂಜರ್ ರೈಲು ಸಂಚಾರ ಏಪ್ರಿಲ್ 12ರಿಂದ ಪ್ರಾರಂಭವಾಗಲಿದೆ. ಏ.12ರಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಈ ರೈಲಿಗೆ ಚಾಲನೆ ನೀಡಲಿದ್ದಾರೆ.ಈ ಹಿಂದೆ ಕಬಕ ಪುತ್ತೂರಿನವರೆಗೆ ಮಾತ್ರ ಸಂಚರಿಸುತ್ತಿದ್ದ ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರಸ್ತೆಗೆ ವಿಸ್ತರಿಸುವುದು ಬಹಳ ಹಿಂದಿನ ಬೇಡಿಕೆಯಾಗಿತ್ತು. ಈ ರೈಲು ನಿತ್ಯ ಕೆಲಸಕ್ಕಾಗಿ ಮಂಗಳೂರಿಗೆ ಬಂದು ಹೋಗುವವರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ.

ಏ.12ರಿಂದ ಮಂಗಳೂರು-ಸುಬ್ರಹ್ಮಣ್ಯ ನಡುವೆ ಪ್ಯಾಸೆಂಜರ್‌ ರೈಲು ಸಂಚಾರ ಆರಂಭ Read More »

error: Content is protected !!
Scroll to Top