ಸುದ್ದಿ

ಸಿದ್ದರಾಮಯ್ಯನವರಿಗೆ ಎಐಸಿಸಿ ಒಬಿಸಿ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷ ಹುದ್ದೆ

ಮುಖ್ಯಮಂತ್ರಿ ಹುದ್ದೆ ತೊರೆದು ರಾಷ್ಟ್ರ ರಾಜಕಾರಣಕ್ಕೆ ಧುಮುಕುವ ಊಹಾಪೋಹ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ ಹೈಕಮಾಂಡ್‌ ಎಐಸಿಸಿ ಒಬಿಸಿ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷರಾಗಿ ನೇಮಕ ಮಾಡಿದೆ. ರಾಜ್ಯ ರಾಜಕಾರಣದಲ್ಲಿ ಸೆಪ್ಟೆಂಬರ್ ಕ್ರಾಂತಿಯ ಕುರಿತು ಭಾರಿ ಚರ್ಚೆಯಾಗುತ್ತಿದ್ದು, ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೇಳಿಕೆ–ಪ್ರತಿ ಹೇಳಿಕೆಗಳ ಜಟಾಪಟಿ ಜೋರಾಗಿ ನಡೆಯುತ್ತಿರುವ ಹೊತ್ತಿಗೆ ಸಿದ್ದರಾಮಯ್ಯನವರಿಗೆ ರಾಷ್ಟ್ರೀಯ ಸ್ಥಾನಮಾನ ನೀಡಿರುವುದು ನಾನಾ ಊಹಾಪೋಹಗಳಿಗೆ ಕಾರಣವಾಗಿದೆ. 5 ವರ್ಷ ನಾನೇ ಸಿಎಂ ಎಂಬ ಸಂದೇಶ ನೀಡಿದ್ದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆ […]

ಸಿದ್ದರಾಮಯ್ಯನವರಿಗೆ ಎಐಸಿಸಿ ಒಬಿಸಿ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷ ಹುದ್ದೆ Read More »

ಪೊಲೀಸ್‌ ಇನ್‌ಸ್ಪೆಕ್ಟರ್‌ ಹೋಟೆಲ್‌ ಕೊಠಡಿಯಲ್ಲಿ ಆತ್ಮಹತ್ಯೆ : ನಾಲ್ಕು ದಿನಗಳ ಬಳಿಕ ಮೃತದೇಹ ಪತ್ತೆ

ಕೌಟುಂಬಿಕ ಕಲಹದಿಂದ ಬೇಸತ್ತು ಡೆತ್‌ನೋಟ್‌ ಬರೆದು ಸಾವಿಗೆ ಶರಣಾದ ಪಿಎಸ್‌ಐ ಬೆಂಗಳೂರು: ನಿವೃತ್ತಿಯ ಅಂಚಿನಲ್ಲಿದ್ದ ಪೊಲೀಸ್‌ ಇನ್‌ಸ್ಪೆಕ್ಟರ್‌ ಒಬ್ಬರ ಮೃತದೇಹ ತುಮಕೂರಿನ ಹೋಟೆಲ್‌ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಇಂದು ಬೆಳಗ್ಗೆ ಕಂಡುಬಂದಿದೆ. ದಾವಣಗೆರೆ ಪೊಲೀಸ್ ಠಾಣೆಯ ಸಬ್‌ಇನ್ಸ್​ ಪೆಕ್ಟರ್ ನಾಗರಾಜಪ್ಪ (58) ಮೃತಪಟ್ಟವರು. ತುಮಕೂರಿನ ದ್ವಾರಕಾ ಹೋಟೆಲ್ ಲಾಡ್ಜ್‌ನಲ್ಲಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದೆ. 4 ದಿನಗಳ ಹಿಂದೆ ನೇಣಿಗೆ ಶರಣಾಗಿದ್ದು, ಮೃತದೇಹ ಕೊಳೆತು ಹುಳಗಳಾಗಿದ್ದವು ಎಂದು ತಿಳಿದು ಬಂದಿದೆ. ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ

ಪೊಲೀಸ್‌ ಇನ್‌ಸ್ಪೆಕ್ಟರ್‌ ಹೋಟೆಲ್‌ ಕೊಠಡಿಯಲ್ಲಿ ಆತ್ಮಹತ್ಯೆ : ನಾಲ್ಕು ದಿನಗಳ ಬಳಿಕ ಮೃತದೇಹ ಪತ್ತೆ Read More »

ದ್ವಿಚಕ್ರ ವಾಹನ ಸವಾರರು ಬಿಎಸ್‌ಐ ಪ್ರಮಾಣೀಕೃತ ಹೆಲ್ಮೆಟ್‌ಗಳನ್ನೇ ಧರಿಸಬೇಕು

ಕಳಪೆ ಹೆಲ್ಮೆಟ್‌ ತಯಾರಿ-ಮಾರಾಟ ವಿರುದ್ಧ ಕೇಂದ್ರ ಸರ್ಕಾರ ಅಭಿಯಾನ ನವದೆಹಲಿ: ದ್ವಿಚಕ್ರ ವಾಹನ ಸವಾರರೇ ಎಚ್ಚರ! ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಕಡಿಮೆ ಕ್ರಯದ ಹೆಲ್ಮೆಟ್‌ ಖರೀದಿಸಿ ಪೊಲೀಸರ ಕಣ್ಣಿಗೆ ಮಣ್ಣೆರುತ್ತಿದ್ದೀರಾ? ನಿಮಗಿದೆ ಕೆಟ್ಟ ಸುದ್ದಿ. ಹೆಚ್ಚಿನವರು ಪೊಲೀಸರ ಕಣ್ಣಿಗೆ ಮಣ್ಣೆರಚುವ ಉದ್ದೇಶದಿಂದ ರಸ್ತೆ ಬದಿಯಲ್ಲಿ ಮಾರುವ ಕಡಿಮೆ ಕ್ರಯದ ಹೆಲ್ಮೆ ಧರಿಸುತ್ತಾರೆ. ಇಂಥ ಹೆಲ್ಮೆಟ್‌ ಅಸುರಕ್ಷಿತ ಎಂದಿರುವ ಕೇಂದ್ರ ಸರ್ಕಾರ ಕಳಪೆ ಹೆಲ್ಮೆಟ್‌ ತಯಾರಕರ ವಿರುದ್ಧ ಕಾರ್ಯಾಚರಣೆ ಪ್ರಾರಂಭಿಸಿದೆ. ದೇಶದಲ್ಲಿ ದ್ವಿಚಕ್ರ ವಾಹನ ಸವಾರರ ಸುರಕ್ಷತೆಗೆ

ದ್ವಿಚಕ್ರ ವಾಹನ ಸವಾರರು ಬಿಎಸ್‌ಐ ಪ್ರಮಾಣೀಕೃತ ಹೆಲ್ಮೆಟ್‌ಗಳನ್ನೇ ಧರಿಸಬೇಕು Read More »

ಹೃದಯಾಘಾತಕ್ಕೆ ಕೋವಿಡ್‌ ಲಸಿಕೆ ಕಾರಣವಲ್ಲ : ರಾಜ್ಯ ಸರ್ಕಾರ ರಚಿಸಿದ ಸಮಿತಿ ವರದಿ

ಸರಣಿ ಹೃದಯಾಘಾತಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಚಿಸಿದ ತಜ್ಞ ವೈದ್ಯರ ಸಮಿತಿಯಿಂದ ಅಧ್ಯಯನ ಬೆಂಗಳೂರು: ಐಸಿಎಂಆರ್‌ ಬಳಿಕ ರಾಜ್ಯ ಸರ್ಕಾರವೇ ರಚಿಸಿದ ಸಮಿತಿ ಕೂಡ ಹೃದಯಾಘಾತಗಳಿಗೆ ಕೋವಿಡ್‌ ಲಸಿಕೆ ಕಾರಣವಲ್ಲ ಎಂದು ವರದಿ ನೀಡಿದೆ. ಡಾ. ರವೀಂದ್ರನಾಥ್ ನೇತೃತ್ವದ ಸಮಿತಿ ಜುಲೈ 2ರಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಹಠಾತ್ ಹೃದಯಾಘಾತಕ್ಕೆ ಕೋವಿಡ್-19 ಲಸಿಕೆ ಅಥವಾ ಹಿಂದಿನ ಸೋಂಕು ಕಾರಣವಲ್ಲ. ಕೋವಿಡ್ ಲಸಿಕೆಗೂ ಈ ಹೃದಯಾಘಾತದ ಘಟನೆಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ

ಹೃದಯಾಘಾತಕ್ಕೆ ಕೋವಿಡ್‌ ಲಸಿಕೆ ಕಾರಣವಲ್ಲ : ರಾಜ್ಯ ಸರ್ಕಾರ ರಚಿಸಿದ ಸಮಿತಿ ವರದಿ Read More »

ಮಂಗಳೂರಿನ ಮಹಿಳೆಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ 3.16 ಕೋಟಿ ರೂ. ಲೂಟಿ

ಪತಿಯ ಹೆಸರಿನಲ್ಲಿ ಸಿಮ್‌ ಖರೀದಿಸಿ ವಂಚನೆ ಎಸಗಲಾಗಿದೆ ಎಂದು ಬೆದರಿಸಿದ್ದ ವಂಚಕರು ಮಂಗಳೂರು : ಮಂಗಳೂರಿನ ಮಹಿಳೆಯೊಬ್ಬರನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ ಬರೋಬ್ಬರಿ 3.16 ಕೋಟಿ ರೂ. ಖಾತೆಯಿಂದ ಎಗರಿಸಿದ ಕುರಿತು ದೂರು ದಾಖಲಾಗಿದೆ. ಮಹಿಳೆಯ ಪತಿಯ ಹೆಸರಿನಲ್ಲಿ ಹೊಸ ಸಿಮ್ ಖರೀದಿಸಿ ಅದರಿಂದ ವಂಚನೆಯ ಕರೆ ಮಾಡಲಾಗಿದೆ ಮತ್ತು ಸಂಶಯಾಸ್ಪದ ಲಿಂಕ್ ಕಳುಹಿಸಲಾಗಿದೆ ಎಂದು ನಂಬಿಸಿದ ಸೈಬರ್ ವಂಚಕರು 3,16,52,142 ರೂ. ಲೂಟಿ ಮಾಡಿದ್ದಾರೆ. ಜೂನ್ 5ರಂದು ಮುಂಬೈ ಸಹಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅನುಶರ್ಮ

ಮಂಗಳೂರಿನ ಮಹಿಳೆಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ 3.16 ಕೋಟಿ ರೂ. ಲೂಟಿ Read More »

ಗಣಪತಿ, ನಾಗರ ವಿಗ್ರಹಕ್ಕೆ ಅನ್ಯಕೋಮಿನವರಿಂದ ಅಪಚಾರ : ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ

ಗಣಪತಿ ವಿಗ್ರಹಕ್ಕೆ ಒದ್ದು, ನಾಗರ ಕಲ್ಲನ್ನು ಚರಂಡಿಗೆ ಎಸೆದಿರುವ ದುಷ್ಕರ್ಮಿಗಳು ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಅನ್ಯಕೋಮಿನ ಯುವಕರು ಶನಿವಾರ ಗಣಪತಿ ವಿಗ್ರಹ ಹಾಗೂ ನಾಗರ ಕಲ್ಲಿಗೆ ಅಪಚಾರ ಮಾಡಿರುವ ಘಟನೆಯಿಂದ ಶಿವಮೊಗ್ಗದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದೆ. ಬಡಾವಣೆಯ ಮುಖ್ಯರಸ್ತೆಯಲ್ಲಿ ಇತ್ತೀಚೆಗೆ ಪ್ರತಿಷ್ಠಾಪನೆ ಮಾಡಿದ್ದ ಗಣಪತಿ ವಿಗ್ರಹಕ್ಕೆ ಒದ್ದು, ನಾಗರ ಕಲ್ಲನ್ನು ಚರಂಡಿಗೆ ಎಸೆದಿರುವ ಆರೋಪ ಕೇಳಿಬಂದಿದೆ. ಅನ್ಯಕೋಮಿನ ಯುವಕರಿಂದ ದುಷ್ಕೃತ್ಯ ನಡೆದಿದೆ ಎನ್ನಲಾಗಿದ್ದು, ಹಿಂದೂ ಮುಖಂಡರು ಕೆರಳಿದ್ದಾರೆ. ಇದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಗಣಪತಿ, ನಾಗರ ವಿಗ್ರಹಕ್ಕೆ ಅನ್ಯಕೋಮಿನವರಿಂದ ಅಪಚಾರ : ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ Read More »

ಪುತ್ತೂರು ತಾಲೂಕಿನ 18 ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್‌ ಮೀಡಿಯಂ ಕಲಿಕೆ

ದ.ಕ. ಜಿಲ್ಲೆಯ 115 ಸೇರಿ ರಾಜ್ಯದ 4,134 ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಬೋಧನೆಗೆ ಅನುಮತಿ ಮಂಗಳೂರು: ಪುತ್ತೂರಿನ 18 ಸೇರಿ ದಕ್ಷಿಣ ಕನ್ನಡ ಜಿಲ್ಲೆಯ 115 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 2025–26ನೇ ಶೈಕ್ಷಣಿಕ ವರ್ಷದಿಂದ ಇಂಗ್ಲಿಷ್‌ ಮಾಧ್ಯಮ ಶುರುವಾಗಲಿದೆ. ರಾಜ್ಯದ ಒಟ್ಟು 4,134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇತರ ಮಾಧ್ಯಮಗಳ ಜೊತೆಗೆ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಹೊಸದಾಗಿ ಪ್ರಾರಂಭಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ 115 ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು

ಪುತ್ತೂರು ತಾಲೂಕಿನ 18 ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್‌ ಮೀಡಿಯಂ ಕಲಿಕೆ Read More »

ಅಪಘಾತದಲ್ಲಿ ಗಾಯಗೊಂಡಿದ್ದ ಯುವ ವೈದ್ಯ ಸಾವು

ಸುಳ್ಯದ ಸೋಂಣಂಗೇರಿ ಸಮೀಪ ಸಂಭವಿಸಿದ ಅಪಘಾತ ಮಂಗಳೂರು : ಸುಳ್ಯ ಸಮೀಪ ಸೋಣಂಗೇರಿ ಸಮೀಪ ಕೆಲದಿನಗಳ ಹಿಂದೆ ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವ ವೈದ್ಯರೊಬ್ಬರು ಚಿಕಿತ್ಸೆ ಫಲನೀಡದೆ ಮೃತಪಟ್ಟಿದ್ದಾರೆ. ಕಲ್ಲುಗುಂಡಿಯ ಡಾ.ಶಮಂತ್ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಆಸ್ಪತ್ರೆಯಲ್ಲಿ ಜುಲೈ 4ರಂದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಕಾಲಿಗೆ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಾಲು ತೀವ್ರವಾಗಿ ಜಖಂಗೊಂಡಿದ್ದ

ಅಪಘಾತದಲ್ಲಿ ಗಾಯಗೊಂಡಿದ್ದ ಯುವ ವೈದ್ಯ ಸಾವು Read More »

ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ

ಪಾಟ್ನಾ : ವಿಧಾನಸಭೆ ಚುನಾವಣೆಗೆ ಅಣಿಯಾಗುತ್ತಿರುವ ಬಿಹಾರದಲ್ಲಿ ಉದ್ಯಮಿ ಹಾಗೂ ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಅವರನ್ನು ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಪಾಟ್ನಾದ ಅವರ ಮನೆಯ ಮುಂದೆಯೇ ಗುಂಡಿಕ್ಕಿ ಕೊಂದಿದ್ದಾರೆ. ಗಾಂಧಿ ಮೈದಾನ ಪೊಲೀಸ್ ಠಾಣೆ ಪ್ರದೇಶದ ಪನಾಚೆ ಎಂಬ ಹೋಟೆಲ್ ಬಳಿ ಈ ಘಟನೆ ನಡೆದಿದ್ದು, ಖೇಮ್ಕಾ ಮನೆಗೆ ತೆರಳುತ್ತಿದ್ದಾಗದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೋಟೆಲ್ ಪಕ್ಕದಲ್ಲಿರುವ ‘ಟ್ವಿನ್ ಟವರ್’ ಸೊಸೈಟಿಯಲ್ಲಿ ಗೋಪಾಲ್ ಖೇಮ್ಕಾ ವಾಸವಾಗಿದ್ದರು. ಗುಂಡಿನ ದಾಳಿಗೆ ಖೇಮ್ಕಾ ಸ್ಥಳದಲ್ಲೇ ಪ್ರಾಣ

ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ Read More »

ಮಳೆ ದಾಖಲೆಯಲ್ಲಿ ಚಿರಾಪುಂಜಿಯನ್ನು ಹಿಂದಿಕ್ಕಿದ ಉಡುಪಿ

ಒಂದು ತಿಂಗಳಲ್ಲಿ 1,140 ಮಿ.ಮೀ ಮಳೆ ಸುರಿದು ಹೊಸ ದಾಖಲೆ ಉಡುಪಿ: ಮೇಘಾಲಯದ ಚಿರಾಪುಂಜಿ ದೇಶದಲ್ಲಿ ಅತ್ಯಧಿಕ ಮಳೆಯಾಗುವ ಪ್ರದೇಶ ಎಂಬ ದಾಖಲೆ ಅನೇಕ ವರ್ಷಗಳಿಂದ ಇದೆ. ಆದರೆ ಈ ಸಲ ಉಡುಪಿ ಜಿಲ್ಲೆ ಮಳೆ ದಾಖಲೆಯಲ್ಲಿ ಚಿರಾಪುಂಜಿಯನ್ನು ಹಿಂದಿಕ್ಕಿದೆ. ಜೂನ್‌ ತಿಂಗಳಲ್ಲಿ ಉಡುಪಿಯಾದ್ಯಂತ ದಾಖಲೆಯ ಮಳೆ ಸುರಿದಿದ್ದು, ಕರ್ನಾಟಕದಲ್ಲಿ ಅತ್ಯಧಿಕ ಮಳೆಯಾಗುವ ಆಗುಂಬೆಯನ್ನೂ ಹಿಂದಿಕ್ಕಿದೆ. ಜೂನ್ ತಿಂಗಳ ಮಳೆ ಲೆಕ್ಕಾಚಾರದಲ್ಲಿ ಉಡುಪಿ ಜಿಲ್ಲೆ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಒಂದು ತಿಂಗಳಲ್ಲಿ 1,140 ಮಿ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ

ಮಳೆ ದಾಖಲೆಯಲ್ಲಿ ಚಿರಾಪುಂಜಿಯನ್ನು ಹಿಂದಿಕ್ಕಿದ ಉಡುಪಿ Read More »

error: Content is protected !!
Scroll to Top