ಕಲಾವಿದೆಯ ಬದುಕು
ತುಳುನಾಡಿನ ರಂಗಭೂಮಿ ಕಂಡ ರಂಗನಾಯಕಿ ಜ್ಯೋತಿ ಕುಲಾಲ್ ಪುತ್ತೂರು. ರಂಗಭೂಮಿಯಲ್ಲಿ ಹೆಣ್ಣು ಕಲಾವಿದಯೊಬ್ಬಳು ಕಲಾವಿದೆಯಾಗಿ ಹೆಸರು ಮಾಡಬೇಕಾದರೆ ಸುಲಭದ ಕೆಲಸವಲ್ಲ ಬಿಡಿ. ಅದೆಷ್ಟು ಸಮಾಜದ ಮಾತುಗಳನ್ನು ಕೇಳಿ ಎಷ್ಟು ಕಲಾವಿದೆಯರು ತಮ್ಮ ಕಲಾ ಸೇವೆಯನ್ನು ಅರ್ಧಕ್ಕೆ ನಿಲ್ಲಿಸಿದ್ದು ಎಷ್ಟೋ ಉದಾಹರಣೆಗಳಿವೆ. ಆದರೆ ಈ ಕಲಾವಿದೆಯೊಬ್ಬರು ರಂಗಭೂಮಿಯಲ್ಲಿ ಸಾಧನೆ ಮಾಡಿ ಹೇಗೆ ಸಮಾಜಕ್ಕೆ ಉತ್ತರ ನೀಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಅವರೇ ರಂಗನಾಯಕಿ ನಮ್ಮ ಪುತ್ತೂರಿನ ಕಲಾವಿದೆ ಜ್ಯೋತಿ ಕುಲಾಲ್. ಹೆಚ್ಚಾಗಿ ಜ್ಯೋತಿ ಅಕ್ಕ ನಮಗೆ ಕಾನ ಸಿಗುವುದು ಹಾಸ್ಯ […]










