ಸುದ್ದಿ

ಕೋಲ್ಕತ್ತಾ, ಲಖನೌ ತನಕವೂ ಹರಡಿತ್ತು ರೋಶನ್‌ ಸಲ್ಡಾನನ ವಂಚನಾ ಜಾಲ

ಈತನ ಭವ್ಯ ಬಂಗಲೆ, ವಿದೇಶಿ ಹುಡುಗಿಯರು, ಶರಾಬು ಬಾಟಲಿಗಳನ್ನು ನೋಡಿಯೇ ಬಲೆಗೆ ಬೀಳುತ್ತಿದ್ದರು ಉದ್ಯಮಿಗಳು ಮಂಗಳೂರು: ಸಾಲ, ಜಾಗ ಕೊಡಿಸುವುದಾಗಿ ನಂಬಿಸಿ ಉದ್ಯಮಿಗಳಿಗೆ ಕೋಟಿಗಟ್ಟಲೆ ವಂಚಿಸಿರುವ ಮಂಗಳೂರಿನ ರೋಷನ್ ಸಲ್ಡಾನನ (43) ವಂಚನಾ ಜಾಲ ಮುಂಬಯಿ, ಗೋವಾ, ಬೆಂಗಳೂರು, ಪುಣೆ, ವಿಜಯಪುರ, ತುಮಕೂರು, ಕೋಲ್ಕತ್ತಾ, ಸಾಂಗ್ಲಿ, ಲಖನೌ, ಬಾಗಲಕೋಟೆ ಮತ್ತಿತರೆಡೆ ಹರಡಿರುವುದು ತನಿಖೆ ವೇಳೆ ತಿಳಿದುಬಂದಿದೆ. ಚಿತ್ರದುರ್ಗ ಮತ್ತು ಮುಂಬೈಯಲ್ಲಿ ಅವನ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಆರೋಪಿ ರೋಷನ್ ಸಲ್ಡಾನ ತಾನು ಉದ್ಯಮಿಯೆಂದು ಬಿಂಬಿಸಿ ಹೊರರಾಜ್ಯ, ಹೊರಜಿಲ್ಲೆಯಲ್ಲಿರುವ […]

ಕೋಲ್ಕತ್ತಾ, ಲಖನೌ ತನಕವೂ ಹರಡಿತ್ತು ರೋಶನ್‌ ಸಲ್ಡಾನನ ವಂಚನಾ ಜಾಲ Read More »

ಆ.11ರಿಂದ 22ರ ತನಕ ವಿಧಾನ ಮಂಡಲದ ಮುಂಗಾರು ಅಧಿವೇಶನ

ಬೆಂಗಳೂರು : ಕರ್ನಾಟಕ ವಿಧಾನ ಮಂಡಲದ ಮುಂಗಾರು ಅಧಿವೇಶನ ಆಗಸ್ಟ್ 11ರಿಂದ ಆರಂಭವಾಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಜಿ.ಶ್ರೀಧರ್ ಅಧಿಸೂಚನೆ ಹೊರಡಿಸಿದ್ದು, ಆಗಸ್ಟ್ 11ರಿಂದ ಆ.22ರ ವರೆಗೆ ಕರ್ನಾಟಕ ವಿಧಾನ ಮಂಡಲದ ಮುಂಗಾರು ಅಧಿವೇಶನ ನಡೆಯಲಿದೆ. ಆಗಸ್ಟ್ 11ರಂದು ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಲಿದ್ದು, ಒಟ್ಟು 12 ದಿನಗಳ ಪೈಕಿ 8 ದಿನ ಮಾತ್ರ ಅಧಿವೇಶನ ನಡೆಯಲಿದೆ. ವಿಧಾನಮಂಡಲದ ಅಧಿವೇಶನದ ತಾತ್ಕಾಲಿಕ ಕಾರ್ಯಕ್ರಮಗಳ ಪಟ್ಟಿಯನ್ನು ಬಿಡುಗಡೆ

ಆ.11ರಿಂದ 22ರ ತನಕ ವಿಧಾನ ಮಂಡಲದ ಮುಂಗಾರು ಅಧಿವೇಶನ Read More »

ಹೆಬ್ಬಾವು ಮಾರಾಟ ಜಾಲ ಪತ್ತೆ : ಕಾಲೇಜು ವಿದ್ಯಾರ್ಥಿ ಸೇರಿ ನಾಲ್ವರು ಸೆರೆ

ಮಂಗಳೂರು ನಗರದೊಳಗೆ ನಡೆಯುತ್ತಿತ್ತು ಪ್ರಾಣಿಗಳ ಅಕ್ರಮ ದಂಧೆ ಮಂಗಳೂರು: ಹೆಬ್ಬಾವು ಮಾರಾಟ ಜಾಲವೊಂದನ್ನು ಭೇದಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಅಪ್ರಾಪ್ತ ವಯಸ್ಸಿನ ಓರ್ವ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಂಗಳೂರಿನ ಬಡಗ ಉಳಿಪ್ಪಾಡಿ ನಿವಾಸಿ ವಿಹಾಲ್ ಎಚ್. ಶೆಟ್ಟಿ (18), ಉಳ್ಳಾಲ ಮುನ್ನೂರಿನ ಸಾಕುಪ್ರಾಣಿ ಅಂಗಡಿ ಮಾಲೀಕ ಇಬ್ರಾಹಿಂ ಶಕೀಲ್ ಇಸ್ಮಾಯಿಲ್ (35), ಉಳ್ಳಾಲ ಹರೇಕಳ ಅಂಗಡಿಯ ಉದ್ಯೋಗಿ ಮೊಹಮ್ಮದ್ ಮುಸ್ತಫಾ (22) ಮತ್ತು ಮಂಗಳೂರಿನ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿರುವ ವಿದ್ಯಾರ್ಥಿ 16 ವರ್ಷದ ಬಾಲಕ

ಹೆಬ್ಬಾವು ಮಾರಾಟ ಜಾಲ ಪತ್ತೆ : ಕಾಲೇಜು ವಿದ್ಯಾರ್ಥಿ ಸೇರಿ ನಾಲ್ವರು ಸೆರೆ Read More »

ಪಹಲ್ಗಾಮ್‌ ದಾಳಿ ನಡೆಸಿದ ಉಗ್ರ ಸಂಘಟನೆ ಭಯೋತ್ಪಾದಕ ಪಟ್ಟಿಗೆ ಸೇರ್ಪಡೆ

ದಿ ರೆಸಿಸ್ಟೆನ್ಸ್ ಫ್ರಂಟ್ ಜಾಗತಿಕ ಉಗ್ರ ಸಂಘಟನೆ ಅಮೆರಿಕದಿಂದ ಪಟ್ಟಿಗೆ ಸೇರ್ಪಡೆ ನವದೆಹಲಿ: ಏಪ್ರಿಲ್ 22ರ ಪಹಲ್ಗಾಮ್ ಉಗ್ರ ದಾಳಿ ಎಸಗಿದ ಪಾಕಿಸ್ತಾನ ಮೂಲದ ದಿ ರೆಸಿಸ್ಟೆನ್ಸ್ ಫ್ರಂಟ್ ಉಗ್ರ ಸಂಘಟನೆಯನ್ನು ಅಮೆರಿಕದ ವಿದೇಶಾಂಗ ಇಲಾಖೆ ಭಯೋತ್ಪಾದಕ ಸಂಘಟನೆ ಪಟ್ಟಿಗೆ ಸೇರಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರ ಪ್ರಾಣ ಬಲಿ ಪಡೆದ ಘಟನೆಯ ಹೊಣೆಗಾರಿಕೆಯನ್ನು ಈ ಸಂಘಟನೆ ವಹಿಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ

ಪಹಲ್ಗಾಮ್‌ ದಾಳಿ ನಡೆಸಿದ ಉಗ್ರ ಸಂಘಟನೆ ಭಯೋತ್ಪಾದಕ ಪಟ್ಟಿಗೆ ಸೇರ್ಪಡೆ Read More »

ಸಾರಿಗೆ ನೌಕರರ ಮುಷ್ಕರಕ್ಕೆ ಸರ್ಕಾರದಿಂದ ತಡೆ : ಎಸ್ಮಾ ಜಾರಿ

ಜುಲೈ 1ರಿಂದ ಡಿಸೆಂಬರ್​ 12ರವರೆಗೆ ಮುಷ್ಕರ ನಿರ್ಬಂಧಿಸಿ ಕೆಎಸ್ಆರ್​ಟಿಸಿ ಅಧಿಸೂಚನೆ ಬೆಂಗಳೂರು : ಆಗಸ್ಟ್​ 5ರಂದು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿರುವ ಕೆಎಸ್ಆರ್​​ಟಿಸಿ ಸಾರಿಗೆ ನೌಕರರ ವಿರುದ್ಧ ಸರ್ಕಾರ ಕರ್ನಾಟಕ ಅಗತ್ಯ ಸೇವಾ ನಿರ್ವಹಣಾ ಕಾಯಿದೆ 2013 ಅಡಿ (ಎಸ್ಮಾ) ಕಾಯಿದೆ ಜಾರಿ ಮಾಡಿ ಎಚ್ಚರಿಕೆ ನೀಡಿದೆ. ಈ ಕಾಯಿದೆಯಡಿ ಆರು ತಿಂಗಳು ನೌಕರರು ಯಾವುದೇ ಮುಷ್ಕರದಲ್ಲಿ ಭಾಗಿಯಾಗುವಂತಿಲ್ಲ. ಜುಲೈ 1ರಿಂದ ಡಿಸೆಂಬರ್​ 12ರವರೆಗೆ ನಿಗಮದಲ್ಲಿ‌ ಮುಷ್ಕರ ನಿರ್ಬಂಧಿಸಿ ಕೆಎಸ್ಆರ್​ಟಿಸಿ ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸಿದೆ. ತಮ್ಮ ಬೇಡಿಕೆ

ಸಾರಿಗೆ ನೌಕರರ ಮುಷ್ಕರಕ್ಕೆ ಸರ್ಕಾರದಿಂದ ತಡೆ : ಎಸ್ಮಾ ಜಾರಿ Read More »

ಮಂಗಳೂರು : ಉದ್ಯಮಿಗಳಿಗೆ 200 ಕೋಟಿ ರೂ.ಗೂ ಅಧಿಕ ಮೊತ್ತ ವಂಚಿಸಿದಾತ ಸೆರೆ

ಬಂಗಲೆಯಲ್ಲಿದ್ದ ವಿದೇಶಿ ಯುವತಿಯೂ ಪೊಲೀಸರ ವಶ ಯಾವುದೇ ಬಾಲಿವುಡ್‌ ಸಿನೆಮಾ ಸೆಟ್‌ಗಿಂತಲೂ ಅದ್ದೂರಿಯಾಗಿದೆ ಮಂಗಳೂರಿನ ಈ ವಂಚಕನ ಬಂಗಲೆ ಮಂಗಳೂರು : ಮನೆಯೆಂದರೆ ಅದು ಮನೆಯಲ್ಲ ಭವ್ಯವಾದ ಬಂಗಲೆ. ಒಳಗಿದೆ ಯಾವುದೇ ಫೈವ್‌ಸ್ಟಾರ್‌ ಹೋಟೆಲನ್ನು ನಾಚಿಸುವಂಥ ಐಷಾರಾಮಿ ವ್ಯವಸ್ಥೆ. ಎರಡು ಮೂರು ಅಡಗುತಾಣಗಳು, ಅಲ್ಲಲ್ಲಿ ಸಿಸಿ ಕ್ಯಾಮೆರಗಳು. ರೂಮ್‌ಗಳಲ್ಲಿ ಗೋಡೆಗಳಿದ್ದರೂ ಅವುಗಳು ಕೆಲವೊಮ್ಮೆ ರಹಸ್ಯ ಕೋಣೆಗಳ ಬಾಗಿಲುಗಳೂ ಆಗುತ್ತವೆ.ಕಬೋರ್ಡ್‌ಗಳ ರೀತಿ ಕಾಣುವುದನ್ನು ತಟ್ಟಿದರೆ ಅದು ಇನ್ನೊಂದು ನಿಗೂಢ ಕೋಣೆಯತ್ತ ಸಾಗುವ ಮೆಟ್ಟಿಲುಗಳನ್ನು ತೋರಿಸುತ್ತವೆ. ಮನೆಯ ಗೇಟ್‌ ತೆರೆದುಕೊಳ್ಳುವ

ಮಂಗಳೂರು : ಉದ್ಯಮಿಗಳಿಗೆ 200 ಕೋಟಿ ರೂ.ಗೂ ಅಧಿಕ ಮೊತ್ತ ವಂಚಿಸಿದಾತ ಸೆರೆ Read More »

ಅವರನ್ನು ನೋಡಲು ಹೋದಾಗಲೆಲ್ಲ ಐದು ನಿಮಿಷದ ಮೇಲೆ ಇರಲು ಬಿಡುತ್ತಿರಲಿಲ್ಲ…

ಅಗಲಿದ ತಂದೆಯನ್ನು ಸ್ಮರಿಸಿಕೊಂಡು ಭಾವುಕ ಲೇಖನ ಬರೆದ ಸುನಿಲ್‌ ಕುಮಾರ್‌ ಉಡುಪಿ: ಅಗಲಿದ ತಂದೆಯ ಬಗ್ಗೆ ಕಾರ್ಕಳ ಬಿಜೆಪಿ ಶಾಸಕ ಸುನಿಲ್‌ ಕುಮಾರ್‌ ಅವರು ಭಾವುಕ ಪತ್ರವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅನೇಕರು ಈ ಪತ್ರಕ್ಕೆ ಪ್ರತಿಕ್ರಿಯಿಸಿದ್ದು, ತಂದೆಗೆ ಸಲ್ಲಿಸಿದ ಅತ್ಯುತ್ತಮ ಶ್ರದ್ದಾಂಜಲಿ ಎಂದು ಪ್ರತಿಕ್ರಿಯಿಸಿದ್ದಾರೆ. ಪತ್ರದಲ್ಲೇನಿದೆ? ಅಪ್ಪ…! ಅವರಿನ್ನು ನನಗೆ ನೆನಪು ಮಾತ್ರ. ಅಪ್ಪ ನನಗೆ ಕೊಟ್ಟಿದ್ದೇನು? ಅವರು ನನಗೆ ಎಲ್ಲವನ್ನೂ ಕೊಟ್ಟರು. ಅವರು ಶಿಕ್ಷಣವನ್ನು ಕೊಟ್ಟರು, ಸಂಸ್ಕಾರವನ್ನು ಕೊಟ್ಟರು, ಬದುಕಿಗೊಂದು ಆದರ್ಶವನ್ನು ಕೊಟ್ಟರು. ಅವರ

ಅವರನ್ನು ನೋಡಲು ಹೋದಾಗಲೆಲ್ಲ ಐದು ನಿಮಿಷದ ಮೇಲೆ ಇರಲು ಬಿಡುತ್ತಿರಲಿಲ್ಲ… Read More »

ಮೃತ ವ್ಯಕ್ತಿಯ ಅಂಗಾಂಗ ದಾನ ಮಾಡಿ ಮಾದರಿಯಾದ ಕುಟುಂಬ

ಕಾರ್ಕಳ: ಮೃತನ ಕಿಡ್ನಿ, ಹೃದಯ, ಕಣ್ಣುಗಳನ್ನು ದಾನ ಮಾಡುವ ಮೂಲಕ ನಂದಳಿಕೆಯ ಕುಟುಂಬವೊಂದು ಸಾವಿನ ನೋವಿನಲ್ಲೂ ಮತ್ತೊಂದಷ್ಟು ಜನರಿಗೆ ಸಾಂತ್ವನವಾಗುವ ಮೂಲಕ ಮಾದರಿಯಾಗಿದ್ದಾರೆ. ಬೆಂಗಳೂರು ಮೂಲದ ಕಂಪನಿಯೊಂದರಲ್ಲಿ ಬಾಂಗ್ಲಾದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೆಳ್ಮಣ್ಣಿನ ನಂದಳಿಕೆಯ ನಿತೀಶ್ ಎನ್(46) ಮೃತಪಟ್ಚಿದ್ದರು. ಇವರ ಪತ್ನಿ ಮತ್ತು ತಾಯಿ ಮೃತರ ಕಣ್ಣು, ಕಿಡ್ನಿ, ಹೃದಯವನ್ನು ದಾನ ಮಾಡುವಂತೆ ವಿನಂತಿಸಿಕೊಂಡಿದ್ದಾರೆ. ನಿತೀಶ್ ಅವರು ಒಂದು ಕಣ್ಣಿನ ದೃಷ್ಟಿಯ ತೊಂದರೆ ಅನುಭವಿ ಸುತ್ತ ಬಿದ್ದು, ತಪಾಸಣೆಗಾಗಿ ಬೆಂಗಳೂರಿಗೆ ಬಂದಿದ್ದರು. ತಪಾಸಣೆಯ ಸಂದರ್ಭದಲ್ಲಿ ತೊಂದರೆಯಾಗಿ ಆ್ಯಂಜಿಯೋಪ್ಲಾಸ್ಟ್

ಮೃತ ವ್ಯಕ್ತಿಯ ಅಂಗಾಂಗ ದಾನ ಮಾಡಿ ಮಾದರಿಯಾದ ಕುಟುಂಬ Read More »

ಮಾಲ್‌ನಲ್ಲಿ ಭೀಕರ ಬೆಂಕಿ ಅವಘಡ : 50 ಮಂದಿ ಸಾವು

ಧಗಧಗಿಸಿ ಉರಿದ 5 ಮಹಡಿಯ ವಾಣಿಜ್ಯ ಕಟ್ಟಡ ಬಾಗ್ದಾದ್: ಇರಾಕ್‌ನ ಪೂರ್ವಕ್ಕಿರುವ ಕುಟ್ ನಗರದ ಹೈಪರ್‌ ಶಾಪಿಂಗ್ ಮಾಲ್‌ನಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಕನಿಷ್ಠ 50 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಐದು ಮಹಡಿಯ ಕಟ್ಟಡ ಹೊತ್ತಿ ಉರಿಯುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಾಲ್‌ನಲ್ಲಿ ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ವಾಸಿಟ್ ಪ್ರಾಂತ್ಯದ ಗವರ್ನರ್ ತಿಳಿಸಿದ್ದಾರೆ. ಪ್ರಾಂತ್ಯದಲ್ಲಿ

ಮಾಲ್‌ನಲ್ಲಿ ಭೀಕರ ಬೆಂಕಿ ಅವಘಡ : 50 ಮಂದಿ ಸಾವು Read More »

ಸುರ್ಜೆವಾಲಾ ಕರ್ನಾಟಕದ ಸೂಪರ್‌ ಸಿಎಂ: ಬಿಜೆಪಿ-ಜೆಡಿಎಸ್‌ ಟೀಕೆ

ಶಾಸಕರು ಈಗ ಕ್ಷೇತ್ರದ ಅಭಿವೃದ್ಧಿಗೆ ಸುರ್ಜೇವಾಲ ಅವರನ್ನು ಸುತ್ತುತ್ತಿದ್ದಾರೆ ಎಂದು ವ್ಯಂಗ್ಯ ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೆವಾಲಾ ಪದೇ ಪದೆ ಬಂದು ಶಾಸಕರ, ಸಚಿವರ ಸಭೆ ನಡೆಸುತ್ತಿರುವುದನ್ನು ಬಿಜೆಪಿ ಮತ್ತು ಜೆಡಿಎಸ್‌ ಟೀಕಿಸಿವೆ. ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ಸುರ್ಜೆವಾಲಾ ಸೂಪರ್‌ ಸಿಎಂ ಆಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಕರ್ನಾಟಕದ ಸೂಪರ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ಶ್ರೀ @rssurjewala ಅವರಿಗೆ ಅಭಿನಂದನೆಗಳು, ಚುನಾಯಿತ ಮುಖ್ಯಮಂತ್ರಿಗಳು ಸರ್ಕಾರ ನಡೆಸಲು

ಸುರ್ಜೆವಾಲಾ ಕರ್ನಾಟಕದ ಸೂಪರ್‌ ಸಿಎಂ: ಬಿಜೆಪಿ-ಜೆಡಿಎಸ್‌ ಟೀಕೆ Read More »

error: Content is protected !!
Scroll to Top