ಸುದ್ದಿ

ಉಗ್ರರಿಂದ ಹತ್ಯೆಯಾದವರ ಪಾರ್ಥಿವ ದೇಹಗಳು ಹುಟ್ಟೂರಿಗೆ

ಅಂತಿಮ ದರ್ಶನ ಪಡೆದು ಕಣ್ಣೀರಾದ ಸಿದ್ದರಾಮಯ್ಯ, ಸೋಮಣ್ಣ, ತೇಜಸ್ವಿ ಸೂರ್ಯ ಬೆಂಗಳೂರು: ಪಹಲ್ಗಾಮ್‌ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಇಬ್ಬರು ಕನ್ನಡಿಗರ ಮೃತದೇಹ ರಾಜ್ಯಕ್ಕೆ ಆಗಮಿಸಿದೆ. ದೆಹಲಿಯಿಂದ ಇಂಡಿಗೋ ವಿಮಾನದಲ್ಲಿ ಮುಂಜಾನೆ 3.30ಕ್ಕೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಶಿವಮೊಗ್ಗದ ಮಂಜುನಾಥ್, ಬೆಂಗಳೂರಿನ ಭರತ್ ಭೂಷಣ್ ಪಾರ್ಥಿವ ಶರೀರ ಆಗಮಿಸಿದಾಗ ಸಂಬಂಧಿಕರ ದುಃಖದ ಕಟ್ಟೆಯೊಡೆಯಿತು. ಈ ವಿಮಾನಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು‌ ಮೃತರ ಕುಟುಂಬಸ್ಥರು ಆಗಮಿಸಿದ್ದರು. ಕೇಂದ್ರ ಸಚಿವ ಸೋಮಣ್ಣ ಮೃತದೇಹವನ್ನು […]

ಉಗ್ರರಿಂದ ಹತ್ಯೆಯಾದವರ ಪಾರ್ಥಿವ ದೇಹಗಳು ಹುಟ್ಟೂರಿಗೆ Read More »

ರಾಜತಾಂತ್ರಿಕ ಸಂಬಂಧ ಕಟ್‌ : ಸಚಿವೆ ನೀಡಿದ ಎಚ್ಚರಿಕೆ ಏನು?

ಉತ್ತರ ನೀಡಲು ಪಾಕಿಸ್ಥಾನ ಮಾಡುತ್ತಿದೆ ಭಾರಿ ಸಿದ್ಧತೆ ಇಸ್ಲಾಮಾಬಾದ್ : ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಕೈಗೊಂಡ ದಿಟ್ಟ ದೊಡ್ಡ ಕ್ರಮಗಳಿಗೆ ತಾನು ಉತ್ತರ ನೀಡಲಿದ್ದೇನೆ ಎಂದು ಒಪಾಕಿಸ್ಥಾನ ಹೇಳಿದೆ. ಒಂದೆಡೆ ಭಾರತವು ಸಿಂಧೂ ನದಿ ನೀರು ಒಪ್ಪಂದವನ್ನು ನಿಲ್ಲಿಸುವ ಮೂಲಕ ಪಾಕಿಸ್ಥಾನಕ್ಕೆ ದೊಡ್ಡ ಸಮಸ್ಯೆಯನ್ನು ಸೃಷ್ಟಿಸಿದೆ, ಮತ್ತೊಂದೆಡೆ, ಪಾಕಿಸ್ಥಾನದ ರಾಯಭಾರ ಕಚೇರಿಯನ್ನು ಮುಚ್ಚುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪಾಕಿಸ್ಥಾನಿಗಳು 48 ಗಂಟೆಗಳ ಒಳಗೆ

ರಾಜತಾಂತ್ರಿಕ ಸಂಬಂಧ ಕಟ್‌ : ಸಚಿವೆ ನೀಡಿದ ಎಚ್ಚರಿಕೆ ಏನು? Read More »

ಕೊನೆಗೂ ಸುರತ್ಕಲ್‌-ಬಿ.ಸಿ.ರೋಡ್‌ ಹೆದ್ದಾರಿಗೆ ದುರಸ್ತಿ ಭಾಗ್ಯ

28.58 ಕೋ. ರೂ. ವೆಚ್ಚದ ದುರಸ್ತಿ ಕಾಮಗಾರಿಗೆ ಇಂದು ಸಂಸದರಿಂದ ಚಾಲನೆ ಮಂಗಳೂರು : ನವಮಂಗಳೂರು ಬಂದರು ವ್ಯಾಪ್ತಿಗೆ ಸೇರಿದ ಸುರತ್ಕಲ್‌-ಬಿ.ಸಿ.ರೋಡ್‌ವರೆಗಿನ ಹದಗೆಟ್ಟ ರಾಷ್ಟ್ರೀಯ ಹೆದ್ದಾರಿಯ ದುರಸ್ತಿಗೆ ಕೊನೆಗೂ ಕಾಲಕೂಡಿ ಬಂದಿದೆ. ಸುಮಾರು 28 ಕೋ. ರೂ. ವೆಚ್ಚದಲ್ಲಿ ಹೆದ್ದಾರಿಯ ಮರುಡಾಂಬರೀಕರಣ ಮತ್ತು ದುರಸ್ತಿ ನಡೆಯಲಿದ್ದು, ಸಂಸದ ಕ್ಯಾ.ಬ್ರಿಜೇಶ್‌ ಚೌಟ ಇಂದು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಸುರತ್ಕಲ್‌ನ ಗೋವಿಂದದಾಸ್ ಕಾಲೇಜಿನ ಸಮೀಪದ ಹೆದ್ದಾರಿ ಬಳಿ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಬಹುಬೇಡಿಕೆ ಹಾಗೂ ನಿರೀಕ್ಷೆಯ ಕಾಮಗಾರಿಗೆ ಚಾಲನೆ ದೊರೆಯಲಿದೆ.

ಕೊನೆಗೂ ಸುರತ್ಕಲ್‌-ಬಿ.ಸಿ.ರೋಡ್‌ ಹೆದ್ದಾರಿಗೆ ದುರಸ್ತಿ ಭಾಗ್ಯ Read More »

ಸಿಂಧೂ ನದಿ ಒಪ್ಪಂದ ರದ್ದು ಮಾಡುವುದರಿಂದ ಏನಾಗುತ್ತದೆ?

ಉಗ್ರ ದಾಳಿಗೆ ಕುಮ್ಮಕ್ಕು ನೀಡಿದ ಪಾಕ್‌ ಜೊತೆಗಿನ ಸಂಬಂಧಕ್ಕೆ ಎಳ್ಳುನೀರು ಬಿಟ್ಟ ಭಾರತ ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಪೈಶಾಚಿಕ ದಾಳಿಯಿಂದ ಇಡೀ ದೇಶ ಕನಲಿ ಹೋಗಿದ್ದು, ದೇಶದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸತತ 3 ಗಂಟೆಗಳ ಕಾಲ ಕೇಂದ್ರ ಸಂಪುಟ ಸಮಿತಿ ಸಭೆ ನಡೆದಿದ್ದು, ಪಾಕ್‌ ಸಂಬಂಧಕ್ಕೆ ಎಳ್ಳುನೀರು ಬಿಡಲು ತೀರ್ಮಾನಿಸಲಾಗಿದೆ. ದಾಳಿ ನಡೆಸಿದ ಟಿಆರ್​ಎಫ್​ ಪಾಕಿಸ್ಥಾನ ಮೂಲದ ನಿಷೇಧಿತ ಭಯೋತ್ಪಾದಕ

ಸಿಂಧೂ ನದಿ ಒಪ್ಪಂದ ರದ್ದು ಮಾಡುವುದರಿಂದ ಏನಾಗುತ್ತದೆ? Read More »

ಅಂಬುಲ ತರವಾಡು ಮನೆಯಲ್ಲಿ ನಡೆದ ನಾಗದೇವರ, ಧರ್ಮದೈವ ರುದ್ರಚಾಮುಂಡಿ ಮತ್ತು ಪರಿವಾರ ದೈವಗಳ ಪುನಃಪ್ರತಿಷ್ಠೆ ಕಾರ್ಯಕ್ರಮ

ಅಂಬುಲ ತರವಾಡು ಮನೆ ಇವರಿಂದ ನಾಗದೇವರ, ಧರ್ಮದೈವ ರುದ್ರಚಾಮುಂಡಿ ಮತ್ತು ಪರಿವಾರ ದೈವಗಳ ಪುನಃಪ್ರತಿಷ್ಠೆ ಕಾರ್ಯಕ್ರಮ ಏ, 20ರಿಂದ ಏ,23ರವರೆಗೆ ನಡೆಯಿತು. ಏ.20 ಭಾನುವಾರ ಸಂಜೆ 6 ಗಂಟೆಗೆ ನಾಗನ ಕಟ್ಟೆಯಲ್ಲಿ ಪ್ರಾಸಾದ ಪರಿಗ್ರಹ, ಪ್ರಾರ್ಥನೆ, ಸ್ಥಳಶುದ್ದಿ, ಪ್ರಾಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಬಿಂಬಾದಿ ವಾಸ ಕಾರ್ಯಕ್ರಮ ನೆರವೇರಿತು. ಏ.21 ಸೋಮವಾರ ಬೆಳಗ್ಗೆ 7 ಗಂಟೆಗೆ ಶ್ರೀ ಮಹಾಗಣಪತಿ ಹೋಮ, ಕಲಶ ಪೂಜೆ, ಬೆಳಗ್ಗೆ 9:30ರ ಶುಭ ಮುಹೂರ್ತದಲ್ಲಿ ನಾಗಪ್ರತಿಷ್ಠೆ, ನಾಗರಕ್ತೇಶ್ವರಿ,

ಅಂಬುಲ ತರವಾಡು ಮನೆಯಲ್ಲಿ ನಡೆದ ನಾಗದೇವರ, ಧರ್ಮದೈವ ರುದ್ರಚಾಮುಂಡಿ ಮತ್ತು ಪರಿವಾರ ದೈವಗಳ ಪುನಃಪ್ರತಿಷ್ಠೆ ಕಾರ್ಯಕ್ರಮ Read More »

ಅಪ್ಪನ ಮೃತದೇಹವನ್ನು ಕಂಡು ಕಣ್ಣೀರಿಟ್ಟ ಕಂದಮ್ಮ | ಚಾಕೊಲೇಟ್ ಇದೆ ಎಂದಾಗ ಅಪ್ಪ ಬೇಕು ಎಂದ ಕಂದಮ್ಮ

ಪಶ್ಚಿಮ ಕಾಶ್ಮೀರದ ಪಹಲ್ಗಾಮ್​ನಲ್ಲಿ ಭಯೋತ್ಪಾದಕರು ದಾಳಿ ಮಾಡಿದ್ದು, ಈ ದಾಳಿಯಲ್ಲಿ 30 ಪ್ರವಾಸಿಗರು ಸಾವನ್ನಪಿರುವ ಮಾಹಿತಿ ಈಗಾಗಲೇ ತಿಳಿದುಬಂದಿದೆ. ಹಿಂದೂಗಳನ್ನೇ ಟಾರ್ಗೆಟ್​ ಮಾಡಿ ಭಯೋತ್ಪಾದಕರು ಫೈರಿಂಗ್​ ಮಾಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎನ್ನಲಾಗ್ತಿದೆ. ಇನ್ನೂ ಹಲವು ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಇದರ ಮಧ್ಯೆ ಪುಟ್ಟ ಮಗುವೊಂದು ತನ್ನ ತಂದೆಯ ಮೃತದೇಹದ ಮೇಲೆ ಕುಳಿತು ಕಣ್ಣೀರಿಡುವ ಭಾವನಾತ್ಮಕ ದೃಶ್ಯ ಕಂಡು ಬಂದಿದೆ. ತನ್ನ ತಂದೆಯನ್ನ ಕಳೆದುಕೊಂಡು ಕಂದಮ್ಮ ಕಣ್ಣೀರು ಹಾಕಿದೆ.

ಅಪ್ಪನ ಮೃತದೇಹವನ್ನು ಕಂಡು ಕಣ್ಣೀರಿಟ್ಟ ಕಂದಮ್ಮ | ಚಾಕೊಲೇಟ್ ಇದೆ ಎಂದಾಗ ಅಪ್ಪ ಬೇಕು ಎಂದ ಕಂದಮ್ಮ Read More »

ನಾಳೆ (ಏ.24) : ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ ಸಂಗೀತ ರಸಮಂಜರಿ  ಕಾರ್ಯಕ್ರಮ

ಪುತ್ತೂರು : ಮುಳಿಯದ ನೂತನ ನವೀಕೃತ ವಿಸ್ತ್ರತ ಆಭರಣ ಮಳಿಗೆಯ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಮುಂದುವರಿದ ಭಾಗವಾಗಿ  ಇದೆ ಏಪ್ರಿಲ್ 24, ಗುರುವಾರ  ಸಂಜೆ 6:30 ಕ್ಕೆ  “ಜಿ  ಸರಿಗಮಪ ಖ್ಯಾತಿಯ ಕಲಾವಿದರಿಂದ  ಮಧುರ ನೆನಪುಗಳಿಗೆ ನಾದ ಸ್ಪರ್ಶ ನೀಡಲಿರುವ – ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಗೀತ ಪ್ರಿಯರು ಈ ವಿಶೇಷ ಸಂಗೀತ ಸಂಜೆಗೆ  ಬಂದು ಸಂತೋಷದಿಂದ  ಭಾಗವಹಿಸಬೇಕು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ. ವಿವರಣೆ   : ಗಾನ ಮಯೂರ ಮ್ಯೂಸಿಕಲ್ ಇವೆಂಟ್ಸ್ ವತಿಯಿಂದ  ಸಂಗೀತ ಪ್ರಿಯರಿಗಾಗಿ ವಿಶೇಷ

ನಾಳೆ (ಏ.24) : ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ ಸಂಗೀತ ರಸಮಂಜರಿ  ಕಾರ್ಯಕ್ರಮ Read More »

ಮಂಗಳೂರಿನ ಬಾಲಕಿಯೋರ್ವಳು  ನಾಪತ್ತೆ | ಪತ್ತೆಗಾಗಿ ಪೋಷಕರ ಮನವಿ..!

ಮಂಗಳೂರು: ಬಾಲಕಿಯೋರ್ವಳು ನಾಪತ್ತೆಯಾದ ಘಟನೆ ಪಕ್ಷಿಕೆರೆಯಲ್ಲಿ ನಡೆದಿದೆ.  ನಾಪತ್ತೆಯಾದವಳು ಸ್ವಾತಿ (17) ಎಂದು ಪತ್ತೆಹಚ್ಚಲಾಗಿದೆ. ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ಪೂರ್ವ ವಿದ್ಯಾರ್ಥಿನಿಯಾಗಿರುವ ಸ್ವಾತಿ, ರಜಾದಿನಗಳಲ್ಲಿ ಪಕ್ಷಿಕೆರೆಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಅವಳು ಸಾಮಾನ್ಯವಾಗಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಮನೆಯಿಂದ ಹೊರಟು ಸಂಜೆ 6 ಗಂಟೆಗೆ ಹಿಂತಿರುಗುತ್ತಿದ್ದಳು. ಆದಾಗ್ಯೂ, ಮಾರ್ಚ್ 25 ರಂದು, ಅಂಗಡಿ ಮಾಲೀಕರು ಬಂದಾಗ ಸ್ವಾತಿ ಕಾಣೆಯಾಗಿದ್ದಾಳೆಂದು ಕಂಡುಕೊಂಡರು. ಆಕೆಯ ಬ್ಯಾಗ್ ಮತ್ತು ಬಟ್ಟೆಗಳು ಅಂಗಡಿಯಲ್ಲಿ ಉಳಿದಿದ್ದವು. ನೆರೆಹೊರೆಯಲ್ಲಿ ವಿಚಾರಿಸಿದಾಗ,

ಮಂಗಳೂರಿನ ಬಾಲಕಿಯೋರ್ವಳು  ನಾಪತ್ತೆ | ಪತ್ತೆಗಾಗಿ ಪೋಷಕರ ಮನವಿ..! Read More »

ಪಕ್ಕಾ ಪ್ಲ್ಯಾನ್‌ ಮಾಡಿ ನಡೆಸಿದ ಉಗ್ರ ದಾಳಿ : ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದ ಮಾಹಿತಿ

ಬಾಡಿ ಕ್ಯಾಮೆರಾ ಧರಿಸಿದ್ದ ಭಯೋತ್ಪಾದಕರು; ರೇಖಾಚಿತ್ರ ಬಿಡುಗಡೆಗೊಳಿಸಿದ ಭದ್ರತಾ ಪಡೆ ಶ್ರೀನಗರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಮತ್ತೆ ನಮ್ಮ ಗುಪ್ತಚರ ವಿಭಾಗ ವಿಫಲವಾಯಿತೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ದಾಳೀಗೆ ಉಗ್ರರು ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪಾಕಿಸ್ಥಾನಿ ಮತ್ತು ಸ್ಥಳೀಯ ಕಾಶ್ಮೀರಿ ಭಯೋತ್ಪಾದಕರು ಸೇರಿ ಈ ಕೃತ್ಯ ಎಸಗಿದ್ದಾರೆ. 6-8 ಮಂದಿ ಉಗ್ರರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ದಾಳಿ ನಡೆಸುವ ಮೊದಲು ಸಂಪೂರ್ಣ

ಪಕ್ಕಾ ಪ್ಲ್ಯಾನ್‌ ಮಾಡಿ ನಡೆಸಿದ ಉಗ್ರ ದಾಳಿ : ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದ ಮಾಹಿತಿ Read More »

ಬಾಲಕನಿಗೆ ಆಟೋರಿಕ್ಷಾ ಚಲಾಯಿಸಲು ಕೊಟ್ಟಿದ್ದ ಮಾಲೀಕನಿಗೆ 1.41 ಕೋ. ರೂ. ದಂಡ!

ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವಿಗೀಡಾಗಿದ್ದ ಪ್ರಕರಣ ಬೆಂಗಳೂರು: ಬಾಲಕನಿಗೆ ಆಟೋರಿಕ್ಷಾ ನೀಡಿ ಅಪಘಾತದಲ್ಲಿ ಒಬ್ಬರ ಸಾವಿಗೆ ಕಾರಣನಾದ ಆಟೋರಿಕ್ಷಾದ ಮಾಲೀಕನಿಗೆ ನ್ಯಾಯಾಲಯ ಬರೋಬ್ಬರಿ 1.41 ಕೋಟಿ ದಂಡ ವಿಧಿಸಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮಂಗಳವಾರ ವಿಚಾರಣೆ ನಡೆಸಿದ ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಎಸ್‌.ಗಾಣಿಗೇರ ಈ ದಂಡದ ಮೊತ್ತವನ್ನು ಮೃತನ ಕುಟುಂಬಕ್ಕೆ ನೀಡುವಂತೆ ಆದೇಶಿಸಿದ್ದಾರೆ. 2021ರ ಮಾರ್ಚ್ 10ರಂದು ಯಲಬುರ್ಗಾದಲ್ಲಿ ಅಪಘಾತ ನಡೆದಿತ್ತು. ಈ ಅಪಘಾತದಲ್ಲಿ ಯಲಬುರ್ಗಾದ ಪ್ರಥಮ ದರ್ಜೆ ಕಾಲೇಜಿನ ಸಹಾಯಕ

ಬಾಲಕನಿಗೆ ಆಟೋರಿಕ್ಷಾ ಚಲಾಯಿಸಲು ಕೊಟ್ಟಿದ್ದ ಮಾಲೀಕನಿಗೆ 1.41 ಕೋ. ರೂ. ದಂಡ! Read More »

error: Content is protected !!
Scroll to Top