ಸುದ್ದಿ

ಪಾಕ್‌ನ ಆರು ಡ್ರೋನ್‌ಗಳನ್ನು ಹೊಡೆದುರುಳಿಸಿ, ಪಿಸ್ತೂಲ್, ಮ್ಯಾಗಜೀನ್, ಹೆರಾಯಿನ್ ‌ವಶಪಡಿಸಿಕೊಂಡ BSF

ನವದೆಹಲಿ: ಭಾರತದೊಳಕ್ಕೆ ಅಂತರಾಷ್ಟ್ರೀಯ ಗಡಿಯ ಮೂಲಕ ಪಾಕಿಸ್ತಾನದಿಂದ ಬರುತ್ತಿದ್ದ ಆರು ಡ್ರೋನ್‌ಗಳನ್ನು BSF ಯೋಧರು ಹೊಡೆದುರುಳಿಸಿದ್ದಾರೆ. ಅಮೃತಸರ್‌ನ ಮೋಧೆ ಗ್ರಾಮದಲ್ಲಿ 5 ಡ್ರೋನ್‌ಗಳು ಮತ್ತು ಅಟ್ಟಾರಿ ‌ಗ್ರಾಮದ ಬಳಿ ಮತ್ತೊಂದು ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ. ಹೊಡೆದುರುಳಿಸಲಾದ ಡ್ರೋನ್‌ಗಳಿಂದ ಮೂರು ಪಿಸ್ತೂಲ್‌ಗಳು, ಮೂರು ಮ್ಯಾಗಜೀನ್‌ಗಳು, ಕೆಜಿಗೂ ಹೆಚ್ಚು ತೂಕದ ನಾಲ್ಕು ಪ್ಯಾಕೆಟ್ ಹೆರಾಯಿನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಗುರುವಾರ ಮುಂಜಾನೆ ಹೊಡೆದುರುಳಿಸಲಾದ ಒಂದು ಡ್ರೋನ್‌ನಿಂದ ಎರಡು ಮ್ಯಾಗಜೀನ್ ‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಪಾಕ್‌ನ ಆರು ಡ್ರೋನ್‌ಗಳನ್ನು ಹೊಡೆದುರುಳಿಸಿ, ಪಿಸ್ತೂಲ್, ಮ್ಯಾಗಜೀನ್, ಹೆರಾಯಿನ್ ‌ವಶಪಡಿಸಿಕೊಂಡ BSF Read More »

ಆಪರೇಷನ್ ಸಿಂಧೂರ್: ಲೋಕಸಭೆಯಲ್ಲಿ 16 ಗಂಟೆಗಳ ಚರ್ಚೆಗೆ ಸಮಯ ನಿಗದಿ?

ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಬಗ್ಗೆ ಸಂಸತ್ ಅಧಿವೇಶನದಲ್ಲಿ 16 ಗಂಟೆಗಳ ಕಾಲ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ. ಜುಲೈ 28 ರಂದು ಲೋಕಸಭೆ ಮತ್ತು ಜುಲೈ 29 ರಂದು ರಾಜ್ಯಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯಸಭೆಯ ಸಂಸದೀಯ ಸಲಹಾ ಸಮಿತಿ ಸಭೆ ನಡೆದಿದ್ದು ಮೇಲ್ಮನೆಯಲ್ಲಿ ಜುಲೈ 29 ರಂದು ಚರ್ಚೆ ನಡೆಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ಲೋಕಸಭೆಯಲ್ಲಿ 16 ಗಂಟೆಗಳ ಕಾಲ ಈ‌ ವಿಷಯಕ್ಕೆ ಸಂಬಂಧಿಸಿದ

ಆಪರೇಷನ್ ಸಿಂಧೂರ್: ಲೋಕಸಭೆಯಲ್ಲಿ 16 ಗಂಟೆಗಳ ಚರ್ಚೆಗೆ ಸಮಯ ನಿಗದಿ? Read More »

ಯೆಸ್‌ ಬ್ಯಾಂಕ್‌ 3 ಸಾವಿರ ಕೋ.ರೂ. ಸಾಲ ವಂಚನೆ ಪ್ರಕರಣ : ರಿಲಯನ್ಸ್‌ ಗ್ರೂಪ್‌ನ 50 ಕಂಪನಿಗಳ ಮೇಲೆ ಇ.ಡಿ ದಾಳಿ

ಅನಿಲ್‌ ಅಂಬಾನಿಗೆ ಸೇರಿದ 35 ಸ್ಥಳಗಳಲ್ಲಿ ಇ.ಡಿ. ಅಧಿಕಾರಿಗಳಿಂದ ಪರಿಶೋಧನೆ ಮುಂಬೈ: ಯೆಸ್ ಬ್ಯಾಂಕ್‌ಗೆ 3,000 ಕೋಟಿ ಸಾಲ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಪ್ರತಿಷ್ಠಿತ ಉದ್ಯಮಿ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಗ್ರೂಪ್​ಗೆ ಸೇರಿದ ಹಲವು ಕಂಪನಿಗಳ ಮೇಲೆ ಇಂದು ದಾಳಿ ಮಾಡಿದೆ. ಅನಿಲ್‌ ಅಂಬಾನಿಯ ಕಂಪನಿಗೆ ಸಂಬಂಧಪಟ್ಟ 35ಕ್ಕೂ ಹೆಚ್ಚು ಸ್ಥಳಗಳು, ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್‌ನ 50 ಕಂಪನಿಗಳ ಮೇಲೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ

ಯೆಸ್‌ ಬ್ಯಾಂಕ್‌ 3 ಸಾವಿರ ಕೋ.ರೂ. ಸಾಲ ವಂಚನೆ ಪ್ರಕರಣ : ರಿಲಯನ್ಸ್‌ ಗ್ರೂಪ್‌ನ 50 ಕಂಪನಿಗಳ ಮೇಲೆ ಇ.ಡಿ ದಾಳಿ Read More »

ಧರ್ಮಸ್ಥಳ ಪ್ರಕರಣ: ಮಾಧ್ಯಮಗಳ ನಿರ್ಬಂಧ ತೆರವಿಗೆ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರನಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ವರದಿಗಳನ್ನು ಮಾಡದಂತೆ ಮಾಧ್ಯಮಗಳಿಗೆ ಹೇರಲಾದ ನಿರ್ಬಂಧವನ್ನು ತೆರವು ಮಾಡುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಯಾವುದೇ ದೂರುಗಳಿದ್ದರೂ ಅವುಗಳನ್ನು ಹೈಕೋರ್ಟ್‌ನಲ್ಲಿಯೇ ಬಗೆಹರಿಸಿಕೊಳ್ಳುವಂತೆಯೂ ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ. ಧರ್ಮಸ್ಥಳ ಸುತ್ತಮುತ್ತಲಲ್ಲಿ ‌ನಡೆದಿದೆ ಎನ್ನವಾದ ಅಸಹಜ ಸಾವುಗಳು, ಶವಗಳನ್ನು ಅಕ್ರಮವಾಗಿ ಹೂಳಲಾಗಿದೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿದ ಹಾಗೆ ಈಗಾಗಲೇ ಬಿತ್ತರಿಸಲಾದ ಸುದ್ದಿಗಳನ್ನು ಅಳಿಸಿ ಹಾಕುವಂತೆ ಸುಮಾರು 300 ಮಾಧ್ಯಮಗಳಿಗೆ

ಧರ್ಮಸ್ಥಳ ಪ್ರಕರಣ: ಮಾಧ್ಯಮಗಳ ನಿರ್ಬಂಧ ತೆರವಿಗೆ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ Read More »

ಕರ್ನಾಟಕದಲ್ಲಿ ಚುನಾವಣಾ ಕಳ್ಳತನ: ರಾಹುಲ್ ಗಾಂಧಿ ಆರೋಪಕ್ಕೆ ‌ಸಿಎಂ ಸಿದ್ದರಾಮಯ್ಯ ಏನಂದ್ರು ಗೊತ್ತಾ?

ನವದೆಹಲಿ: ಕರ್ನಾಟಕದಲ್ಲಿ ಚುನಾವಣೆಯ ಸಂದರ್ಭದಲ್ಲಿ ಅಕ್ರಮ ನಡೆದಿದ್ದು, ಈ ಕುರಿತ ಎಲ್ಲಾ ವಿವರಗಳನ್ನು ಶೀಘ್ರವೇ ಚುನಾವಣಾ ಆಯೋಗ ಮತ್ತು ಜನತೆಯ ಮುಂದಿಡಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಸಂಬಂಧ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಭಾರತದಲ್ಲಿ ಚುನಾವಣಾ ಕಳ್ಳತನಗಳು ನಡೆಯುತ್ತಿರುವುದು ‌ಸತ್ಯ. ಮಹಾರಾಷ್ಟ್ರ ಚುನಾವಣೆಯಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್ ಬಗ್ಗೆ ವರದಿಗಳನ್ನು ನಾವು ಬಹಿರಂಗ ಮಾಡಿದ್ದೆವು. ಹೀಗೆಯೇ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ನಡೆದ ಕಳ್ಳಾಟಗಳನ್ನು ಸಹ ಶೀಘ್ರ ಬಯಲು ಮಾಡುತ್ತೇವೆ. ದೊಡ್ಡ ಮತಗಳ

ಕರ್ನಾಟಕದಲ್ಲಿ ಚುನಾವಣಾ ಕಳ್ಳತನ: ರಾಹುಲ್ ಗಾಂಧಿ ಆರೋಪಕ್ಕೆ ‌ಸಿಎಂ ಸಿದ್ದರಾಮಯ್ಯ ಏನಂದ್ರು ಗೊತ್ತಾ? Read More »

ಬ್ರಹ್ಮಪುತ್ರ ನದಿಗೆ ಚೀನಾದಿಂದ ಅಣೆಕಟ್ಟು: ನದಿ ನೀರು ಬಳಸುವ ರಾಷ್ಟ್ರಗಳಿಗೆ ತೊಂದರೆಯಾಗದಂತೆ‌ ಕ್ರಮ ವಹಿಸಲು ಭಾರತ ಸೂಚನೆ

ನವದೆಹಲಿ: ಚೀನಾ ಟಿಬೆಟ್‌ನಲ್ಲಿ ಬ್ರಹ್ಮಪುತ್ರ ನದಿಗೆ ಮೆಗಾ ಅಣೆಕಟ್ಟು ನಿರ್ಮಾಣ ‌ಮಾಡುತ್ತಿದ್ದು, ಈ ಸಂಬಂಧ ಭಾರತ ಮೌನ ಮುರಿದಿದೆ. ಈ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾಹಿತಿ ನೀಡಿದ್ದು, ಅಣೆಕಟ್ಟು ನಿರ್ಮಾಣ ವಿಷಯದಲ್ಲಿ ಕೆಳಭಾಗದಲ್ಲಿ ಬರುವ ದೇಶಗಳ ಹಿತಾಸಕ್ತಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸುವಂತೆ ಚೀನಾಗೆ‌ ಸೂಚಿಸಿದೆ. ಹಾಗೆಯೇ ನಮ್ಮ ಹಿತಾಸಕ್ತಿಯ ರಕ್ಷಣೆಯ ಹಿನ್ನೆಲೆ ಮೇಲ್ವಿಚಾರಣೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಚೀನಾದ ಈ ಬೃಹತ್ ಅಣೆಕಟ್ಟಿನಿಂದ ಅಸ್ಸಾಂ ಮತ್ತು

ಬ್ರಹ್ಮಪುತ್ರ ನದಿಗೆ ಚೀನಾದಿಂದ ಅಣೆಕಟ್ಟು: ನದಿ ನೀರು ಬಳಸುವ ರಾಷ್ಟ್ರಗಳಿಗೆ ತೊಂದರೆಯಾಗದಂತೆ‌ ಕ್ರಮ ವಹಿಸಲು ಭಾರತ ಸೂಚನೆ Read More »

ಬಸ್‌ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ : ತನಿಖೆಗೆ 6 ತಂಡ ರಚನೆ

ಬಿಎಂಟಿಸಿ ಬಸ್​ ನಿಲ್ದಾಣದ ಶೌಚಾಲಯದ ಸಮೀಪ ಸಿಕ್ಕಿದ ಸ್ಫೋಟಕಗಳಿದ್ದ ಬ್ಯಾಗ್‌ ಬೆಂಗಳೂರು: ಬೆಂಗಳೂರಿನ ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ನಿನ್ನೆ ನಸುಕಿನ ಹೊತ್ತು ಭಾರಿ ಪ್ರಮಾಣದ ಸ್ಫೋಟಕ ಪತ್ತೆಯಾಗಿರುವುದು ನಗರದಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಈ ತನಿಖೆಗೆ ಕಲಾಸಿಪಾಳ್ಯ ಠಾಣೆ ಪೊಲೀಸರು ಆರು ತಂಡ ರಚನೆ ಮಾಡಿದ್ದಾರೆ. ಸಿಸಿಬಿ, ಇಂಟೆಲಿಜೆನ್ಸ್, ಎಟಿಸಿ ತಂಡದಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜಿಲೆಟಿನ್ ಕಡ್ಡಿ ಜೊತೆಗೆ ಡಿಟೋನೆಟರ್​​ಗಳು​ ಕೂಡ ಪತ್ತೆ ಆಗಿದ್ದವು. ಈ ಬಗ್ಗೆ ಕಲಾಸಿಪಾಳ್ಯ ಪೊಲೀಸರು ಎಫ್​ಐಆರ್ ದಾಖಲಿಸಿದ್ದರು. ಕಲಾಸಿಪಾಳ್ಯ ಬಿಎಂಟಿಸಿ ಬಸ್​ ನಿಲ್ದಾಣದ

ಬಸ್‌ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ : ತನಿಖೆಗೆ 6 ತಂಡ ರಚನೆ Read More »

ಕಡಬ: ನಾಪತ್ತೆಯಾದ ಆ್ಯಂಬುಲೆನ್ಸ್ ಚಾಲಕನಿಗೆ ತೀವ್ರ ಶೋಧ

ಕಡಬ : ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆ್ಯಂಬುಲೆನ್ಸ್ ಚಾಲಕ ಹೊನ್ನಪ್ಪ ದೇವರಗದ್ದೆ (52) ಎಂಬುವರು ಜುಲೈ 22ರಂದು ನಾಪತ್ತೆಯಾಗಿದ್ದು, ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರ ಪತ್ತೆಗಾಗಿ ತೀವ್ರ ಶೋಧ ಕಾರ್ಯ ಆರಂಭಿಸಲಾಗಿದೆ. ಹೊನ್ನಪ್ಪ ಅವರು ಜುಲೈ 22ರಂದು ಬೆಳಗ್ಗೆ ಕರ್ತವ್ಯಕ್ಕೆಂದು ಮನೆಯಿಂದ ಹೊರಟವರು ಬಳಿಕ ಕಾಣೆಯಾಗಿದ್ದಾರೆ. ಅವರು ಅಗ್ರಹಾರ ದೇವಸ್ಥಾನದ ಬಳಿಯಿಂದಾಗಿ ಕುಮಾರಧಾರಾ ನದಿಯ ಕಡೆಗೆ ಹೋಗುತ್ತಿರುವುದು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಕಂಡುಬಂದಿದೆ. ಈ ಹಿನ್ನೆಲೆ ಅವರು ನದಿಗೆ ಹಾರಿರುವ

ಕಡಬ: ನಾಪತ್ತೆಯಾದ ಆ್ಯಂಬುಲೆನ್ಸ್ ಚಾಲಕನಿಗೆ ತೀವ್ರ ಶೋಧ Read More »

8 ತಿಂಗಳ ಮಗುವನ್ನು ತಲೆಕೆಳಗಾಗಿ ಹಿಡಿದು ಊರು ಸುತ್ತಿದ ಕ್ರೂರಿ ತಂದೆ

ಹೆಂಡತಿ ವರದಕ್ಷಿಣೆ ತರಲಿಲ್ಲ ಎಂಬ ಸಿಟ್ಟಿನಲ್ಲಿ ಎಸಗಿದ ಕೃತ್ಯ ಲಖನೌ: ಉತ್ತರ ಪ್ರದೇಶದ ರಾಂಪುರದಲ್ಲಿ ಕ್ರೂರಿ ತಂದೆಯೊಬ್ಬ ಹೆಂಡತಿ ಮೇಲಿನ ಸಿಟ್ಟಿಗೆ ತನ್ನ ಎಂಟು ತಿಂಗಳು ಪ್ರಾಯದ ಹಸುಗೂಸನ್ನು ತಲೆಕೆಳಗಾಗಿ ಹಿಡಿದುಕೊಂಡು ಊರಿಡೀ ಸುತ್ತುಹಾಕಿದ ಅಮಾನವೀಯ ಘಟನೆಯೊಂದು ನಡೆದಿದ್ದು, ಇದರ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗಿದೆ. ವರದಕ್ಷಿಣೆಗಾಗಿ ಪತ್ನಿ ಜತೆ ಜಗಳವಾಡಿದ ಬಳಿಕ ಈ ಪಾಪಿ ತಂದೆ ತನ್ನ ಮಗುವನ್ನು ತಲೆ ಕೆಳಗಾಗಿಸಿ ಹಿಡಿದುಕೊಂಡು ಊರಿಡೀ ತಿರುಗಾಡಿದ್ದಾನೆ. ಆರೋಪಿಯನ್ನು ಸಂಜು ಎಂದು ಗುರುತಿಸಲಾಗಿದೆ. ಸುಮನ್‌ ಎಂಬ

8 ತಿಂಗಳ ಮಗುವನ್ನು ತಲೆಕೆಳಗಾಗಿ ಹಿಡಿದು ಊರು ಸುತ್ತಿದ ಕ್ರೂರಿ ತಂದೆ Read More »

ಬೆಂಗಳೂರಿನ ಉದ್ಯಮಿ ತಂದೆ-ಮಗ ಆಂಧ್ರದಲ್ಲಿ ಭೀಕರವಾಗಿ ಕೊಲೆ

ಚೆಕ್‌ಬೌನ್ಸ್‌ ವಿಚಾರಣೆಗೆ ಹೋದ ವೇಳೆ ಹಾಡಹಗಲೇ ಅಪಹರಿಸಿ ಹತ್ಯೆ ಬೆಂಗಳೂರು: ಆಂಧ್ರಪ್ರದೇಶದ ಬಾಪಟ್ಲ ಜಿಲ್ಲೆಯಲ್ಲಿ ಬೆಂಗಳೂರು ಮೂಲದ ಇಬ್ಬರು ಉದ್ಯಮಿಗಳು ಹಾಗೂ ಬಿಜೆಪಿ ಮುಖಂಡರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಕೇಸಿಗೆ ತೆರಳಿದ್ದ ತಂದೆ ವೀರಸ್ವಾಮಿರೆಡ್ಡಿ ಹಾಗೂ ಅವರ ಪುತ್ರ ಪ್ರಶಾಂತ್ ರೆಡ್ಡಿಯನ್ನು ಅಪಹರಿಸಿದ ದುಷ್ಕರ್ಮಿಗಳು ಇಬ್ಬರ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕೊಲೆಯಾದ ತಂದೆ-ಮಗ ಬಿಜೆಪಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಆಪ್ತರಾಗಿದ್ದರು. ವೀರಸ್ವಾಮಿ ರೆಡ್ಡಿ ಮುಂಬರುವ ಬಿಬಿಎಂಪಿ

ಬೆಂಗಳೂರಿನ ಉದ್ಯಮಿ ತಂದೆ-ಮಗ ಆಂಧ್ರದಲ್ಲಿ ಭೀಕರವಾಗಿ ಕೊಲೆ Read More »

error: Content is protected !!
Scroll to Top