ಸುದ್ದಿ

ಆಸ್ಟ್ರೇಲಿಯಾದಲ್ಲಿ ಹಿಂದೂ ವಿರೋಧಿ‌ಗಳಿಂದ ದೇವಾಲಯದ ಗೋಡೆ ವಿರೂಪ

ಕ್ಯಾನ್‌ಬೆರಾ: ಹಿಂದೂ ವಿರೋಧಿ ಮನಸ್ಥಿತಿಗಳ ಅಟ್ಟಹಾಸ ಆಸ್ಟ್ರೇಲಿಯಾದಲ್ಲೂ ನಡೆದಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ ಬೊರೋನಿಯಾದಲ್ಲಿರುವ ಸ್ವಾಮಿ ನಾರಾಯಣ ಹಿಂದೂ ದೇವಾಲಯದ ಗೋಡೆಯನ್ನು ವಿರೂಪಗೊಳಿಸಲಾಗಿದೆ. ಜೊತೆಗೆ 2 ರೆಸ್ಟೋರೆಂಟ್ ಮೇಲೆ ಕೆಂಪು ಬಣ್ಣ ಬಳಸಿ ಜನಾಂಗೀಯ ಬರಹಗಳನ್ನು ಬರೆದು ವಿಕೃತಿ ಮೆರೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ವಿಕ್ಟೋರಿಯಾದ ಪ್ರಧಾನಿ ಜಸಿಂತಾ ಆಲನ್ ಪ್ರತಿಕ್ರಿಯೆ ನೀಡಿದ್ದು, ಇದು ಹಿಂದೂ ಸಮುದಾಯವನ್ನು ಹೆದರಿಸುವುದಕ್ಕಾಗಿಯೇ ಮಾಡಿರುವ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಹಿಂದೂ ವಿರೋಧಿ‌ಗಳಿಂದ ದೇವಾಲಯದ ಗೋಡೆ ವಿರೂಪ Read More »

ಕೆಂಪು ಕಲ್ಲಿಗೂ ‌ಸ್ಯಾಂಡ್ ಬಜಾರ್ ಮಾದರಿಯಲ್ಲಿ ಆ್ಯಪ್: ಯು.ಟಿ. ಖಾದರ್

ಮಂಗಳೂರು: ಕೆಂಪು ಕಲ್ಲುಗಳಿಗೆ ‌ಸ್ಯಾಂಡ್ ಬಜಾರ್ ರೀತಿಯಲ್ಲೇ ಆ್ಯಪ್ ಆರಂಭಿಸಿ ಕಡಿಮೆ ಬೆಲೆಗೆ ನಿಗದಿತ ಸಮಯದಲ್ಲಿ ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಸ್ಪೀಕರ್ ಯು. ಟಿ. ಖಾದರ್ ತಿಳಿಸಿದ್ದಾರೆ. ಸಾಂಪ್ರದಾಯಿಕ ರೀತಿಯಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಸಂಪ್ರದಾಯ ಬದಲಾವಣೆ ಮಾಡಲಾಗದು. ಆದರೆ ಕಾನೂನು ಬದಲಾಯಿಸಬಹುದು. ಕೆಲವು ನಿಯಮಗಳನ್ನು ಆಚರಣೆಗೆ ತರುವ ಮೂಲಕ ಜನಸಾಮಾನ್ಯರಿಗೆ ಸುಲಭವಾಗಿ ಕೆಂಪು ಕಲ್ಲು ದೊರೆಯುವಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ಹೇಳಿದ್ದಾರೆ. ಕರಾವಳಿಯಲ್ಲಿ ಮಳೆ ಹೆಚ್ಚು. ಉಪ್ಪಿನ ಅಂಶ ಜಾಸ್ತಿ. ಹೀಗಾಗಿ

ಕೆಂಪು ಕಲ್ಲಿಗೂ ‌ಸ್ಯಾಂಡ್ ಬಜಾರ್ ಮಾದರಿಯಲ್ಲಿ ಆ್ಯಪ್: ಯು.ಟಿ. ಖಾದರ್ Read More »

ಅಡಿಕೆ ಹಾಳೆ ತಟ್ಟೆಯಲ್ಲೂ ಇದೆಯಂತೆ ಕ್ಯಾನ್ಸರ್‌ಕಾರಕ ಅಂಶ!

ಅಮೆರಿಕ ವರದಿಯಿಂದ ಅಡಿಕೆ ಬೆಳೆಗಾರರಿಗೆ ಹೊಸ ಸಂಕಷ್ಟ ಸಾವಿರಾರು ಜನರಿಗೆ ಉದ್ಯೋಗ, ಆರ್ಥಿಕ ಬಲ ಕೊಟ್ಟಿರುವ ಉದ್ಯಮಕ್ಕೆ ಹೊಡೆತ ಶಿವಮೊಗ್ಗ : ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಳಕೆಯಲ್ಲಿದ್ದ ಅಡಿಕೆ ಹಾಳೆಯ ತಟ್ಟೆಗಳಿಗೂ ಈಗ ಕಂಟಕ ಎದುರಾಗಿದೆ. ಅಮೆರಿಕದ ಸಂಶೋಧನಾ ವರದಿಯೊಂದು ಹಾಳೆ ತಟ್ಟೆಯಲ್ಲೂ ಕ್ಯಾನ್ಸರ್‌ಗೆ ಕಾರಣವಾಗುವ ಅಂಶ ಇದೆ ಎಂದು ಹೇಳಿರುವುದು ಅಡಿಕೆ ಬೆಳೆಗಾರರಿಗೆ ಹೊಸ ಸಂಕಷ್ಟು ತಂದೊಡ್ಡಿದೆ. ಅಡಿಕೆ ಹಾಳೆಯ ತಟ್ಟೆಗಳಲ್ಲಿ ಅಲ್ಕಲೈಡ್ ಎಂಬ ಕ್ಯಾನ್ಸರ್‌ಗೆ ಕಾರಣವಾಗುವಂತಹ ಅಂಶ ಪತ್ತೆಯಾಗಿದೆ ಎಂದಿದೆ ಅಮೆರಿಕದ ಸಂಶೋಧನಾ ವರದಿ. ಈ

ಅಡಿಕೆ ಹಾಳೆ ತಟ್ಟೆಯಲ್ಲೂ ಇದೆಯಂತೆ ಕ್ಯಾನ್ಸರ್‌ಕಾರಕ ಅಂಶ! Read More »

ಕೇಂದ್ರ ಸರ್ಕಾರಿ ನೌಕರರಿಗೆ ವೃದ್ಧ ಪೋಷಕರ ಆರೈಕೆಗೆ ವಿಶೇಷ ರಜೆ?

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ವೃದ್ಧ ಪೋಷಕರನ್ನು ‌ನೋಡಿಕೊಳ್ಳುವ ಸಲುವಾಗಿ ಅರ್ಹ ರಜೆಗಳು ಜೊತೆಗೆ ಸೂಕ್ತ ಕಾರಣಗಳನ್ನು ನೀಡಿ ಮತ್ತೆ 30 ದಿನಗ‌ಳ ರಜೆಯನ್ನು ಪಡೆಯುವ ಅವಕಾಶವನ್ನು ನೀಡಲಾಗಿದೆ. ಕೇಂದ್ರ ಸರ್ಕಾರಿ ನೌಕಕರು ವೃದ್ಧ ಪೋಷಕರನ್ನು ನೋಡಿಕೊಳ್ಳುವ ಸಲುವಾಗಿ ವಿಶೇಷ ರಜೆಗಳನ್ನು ಪಡೆಯಲು ಅವಕಾಶ ಇದೆಯೇ ಎಂಬ ಲಿಖಿತ ಪ್ರಶ್ನೆಯೊಂದಕ್ಕೆ ಕೇಂದ್ರ ಸರ್ಕಾರ ರಾಜ್ಯ ಸಭೆಗೆ ಮಾಹಿತಿ ನೀಡಿದೆ. ಕೇಂದ್ರ ನಾಗರಿಕ ಸೇವೆಗಳ ನಿಯಮಾವಳಿ -1972 ಪ್ರಕಾರ ವಯಸ್ಸಾದ ಪೋಷಕರನ್ನು ಆರೈಕೆ ಮಾಡುವ ಸಲುವಾಗಿ ರಜೆ ಪಡೆಯಲು

ಕೇಂದ್ರ ಸರ್ಕಾರಿ ನೌಕರರಿಗೆ ವೃದ್ಧ ಪೋಷಕರ ಆರೈಕೆಗೆ ವಿಶೇಷ ರಜೆ? Read More »

ಅಧಿಕಾರಿಗಳನ್ನು ಕರೆಸಿ ಸುರ್ಜೇವಾಲಾ ಸಭೆ : ಹೊಸ ವಿವಾದ ಸೃಷ್ಟಿ

ಕರ್ನಾಟಕದ ಸ್ವಾಭಿಮಾನ ಅಡವಿಟ್ಟ ಡಮ್ಮಿ ಸಿಎಂ, ಡಮ್ಮಿ ಡಿಸಿಎಂ ಎಂದು ಜೆಡಿಎಸ್‌ ಟೀಕೆ ಬೆಂಗಳೂರು: ಇತ್ತೀಚಿಗಷ್ಟೇ ಬೆಂಗಳೂರಿಗೆ ಬಂದು ಕಾಂಗ್ರೆಸ್ ಶಾಸಕರ ಮತ್ತು ಸಚಿವರ ಜೊತೆ ಸಭೆ ನಡೆಸಿದ್ದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಇದೇ ವೇಳೆ ಕೆಲವು ಮಂದಿ ಸರ್ಕಾರಿ ಅಧಿಕಾರಿಗಳಿಗೂ ಬುಲಾವ್ ನೀಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ವಿಚಾರವಾಗಿ ಸಹಕಾರ ಸಚಿವ ಕೆಎನ್ ರಾಜಣ್ಣ ಅವರೇ ತೀವ್ರ ವಾಗದಾಳಿ ನಡೆಸಿದ್ದಾರೆ. ಇದರೊಂದಿಗೆ ಜೆಡಿಎಸ್ ಕೂಡ ಕಾಂಗ್ರೆಸ್ಸನ್ನು ಟೀಕಿಸಿದೆ. ಸುರ್ಜೇವಾಲ ಸರ್ಕಾರಿ

ಅಧಿಕಾರಿಗಳನ್ನು ಕರೆಸಿ ಸುರ್ಜೇವಾಲಾ ಸಭೆ : ಹೊಸ ವಿವಾದ ಸೃಷ್ಟಿ Read More »

ಡಿಜಿಟಲ್‌ ಅರೆಸ್ಟ್‌ಗೆ ಒಳಗಾಗಿ 50 ಲ.ರೂ. ಕಳೆದುಕೊಂಡ ಬ್ಯಾಂಕ್‌ ಮ್ಯಾನೇಜರ್‌

ಸಿಬಿಐ ಅಧಿಕಾರಿಗಳ ಸೋಗುಹಾಕಿ ಕರೆ ಮಾಡಿದ ವಂಚಕರ ಬೆದರಿಕೆಯನ್ನು ನಿಜವೆಂದು ನಂಬಿದ ಮ್ಯಾನೇಜರ್‌ ಬೆಂಗಳೂರು : ಆನ್‌ಲೈನ್‌ ಸೈಬರ್‌ ವಂಚನೆಯ ಬಗ್ಗೆ ಜಾಗೃತಿ ಮೂಡಿಸಬೇಕಾದ ಬ್ಯಾಂಕ್‌ ಮ್ಯಾನೇಜರ್‌ ಕೂಡ ಡಿಜಿಟಲ್‌ ಅರೆಸ್ಟ್‌ ಆಗಿ 50 ಲ.ರೂ. ಕಳೆದುಕೊಂದ ಘಟನೆ ಮಂಡ್ಯದಲ್ಲಿ ಸಂಭವಿಸಿದೆ. ಮಂಡ್ಯದ ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್​ ಭವ್ಯಾ ವಂಚನೆಗೊಳಗಾದವರು. ವಂಚಕರು ಭವ್ಯಾ ಅವರಿಗೆ ಸಿಬಿಐ ಅಧಿಕಾರಿಗಳ ಸೋಗುಹಾಕಿ ಫೋನ್‌ ಮಾಡಿ ನೀವು ಮನಿ ಲಾಂಡರಿಂಗ್ ವ್ಯವಹಾರದಲ್ಲಿ ಶಾಮೀಲಾಗಿದ್ದೀರಿ, ಬೆದರಿಕೆ ಕರೆ ಮಾಡಿದ್ದೀರಿ ಎಂದು ಹೆದರಿಸಿದ್ದಾರೆ.

ಡಿಜಿಟಲ್‌ ಅರೆಸ್ಟ್‌ಗೆ ಒಳಗಾಗಿ 50 ಲ.ರೂ. ಕಳೆದುಕೊಂಡ ಬ್ಯಾಂಕ್‌ ಮ್ಯಾನೇಜರ್‌ Read More »

ಮದುವೆಯಾದ ಎರಡು ತಿಂಗಳಲ್ಲೇ ವರದಕ್ಷಿಣೆಗಾಗಿ ಕಿರುಕುಳ : ಪತಿ ಬಂಧನ

ಉಜಿರೆಗೆ ಹನಿಮೂನ್‌ಗೆಂದು ಬಂದು ಹೋಟೆಲ್‌ನಲ್ಲಿ ಪತ್ನಿಯನ್ನು ಸಾಯಿಸಲು ಯತ್ನಿಸಿದ್ದ ಪತಿ ಬೆಳ್ತಂಗಡಿ : ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾದ ದಂಪತಿ ಹನಿಮೂನ್‌ಗೆ ಬಂದು ಉಜಿರೆಯ ಹೊಟೇಲ್‌ನಲ್ಲಿ ಉಳಿದುಕೊಂಡ ವೇಳೆ ರಾತ್ರಿ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆಗೆ ಯತ್ನಿಸಿದ ಪ್ರಕರಣದ ಪತಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ರಾಮನಗರ ಜಿಲ್ಲೆಯ ಬಿಡದಿ ತಾಲೂಕಿನ ನಂದಗೋಕುಲ ನಿವಾಸಿ ವಿಶ್ವನಾಥ (24) ಮತ್ತು 22 ವರ್ಷದ ಯುವತಿ 2025ರ ಮೇ 22ರಂದು ಮದುವೆಯಾಗಿದ್ದು, ಜುಲೈ 22ರಂದು ರಾತ್ರಿ ಉಜಿರೆಯ ಹೊಟೇಲಿಗೆ

ಮದುವೆಯಾದ ಎರಡು ತಿಂಗಳಲ್ಲೇ ವರದಕ್ಷಿಣೆಗಾಗಿ ಕಿರುಕುಳ : ಪತಿ ಬಂಧನ Read More »

ಶಿವನ ಒಂದು ದೇವಾಲಯಕ್ಕಾಗಿ ಥಾಯ್ಲೆಂಡ್‌-ಕಾಂಬೋಡಿಯ ಮಧ್ಯೆ ಯುದ್ಧ

ಗಡಿಯಲ್ಲಿರುವ ಪುರಾತನ ದೇಗುಲ ಯಾರಿಗೆ ಸೇರಿದ್ದು ಎನ್ನುವುದೇ ವಿವಾದ ಬ್ಯಾಂಕಾಕ್‌: ಒಂದೆಡೆ ರಷ್ಯಾ ಮತ್ತು ಉಕ್ರೇನ್‌ ವರ್ಷಾನುಗಟ್ಟಲೆ ಕಾದಾಡುತ್ತಿವೆ, ಇನ್ನೊಂದೆಡೆ ಇಸ್ರೇಲ್‌ ತನ್ನ ಶತ್ರು ದೇಶಗಳ ಮೇಲೆಲ್ಲ ದಾಳಿ ಮಾಡುತ್ತಿದೆ. ಇದರ ನಡುವೆ ಇಷ್ಟರತನಕ ತಣ್ಣಗೆ ತಮ್ಮ ಪಾಡಿಗೆ ತಾವಿದ್ದ ಥಾಯ್ಲೆಂಡ್ ಮತ್ತು ಕಾಂಬೋಡಿಯ ಮಧ್ಯೆ ಯುದ್ಧ ಶುರುವಾಗಿದೆ. ಎರಡೂ ದೇಶಗಳು ಕ್ಷಿಪಣಿ, ಡ್ರೋನ್‌ ಹಾರಿಸಿಕೊಂಡಿವೆ. ಈಗಾಗಲೇ 13 ಮಂದಿ ಈ ಯುದ್ಧಕ್ಕೆ ಬಲಿಯಾಗಿದ್ದಾರೆ. ಈ ಎರಡು ದೇಶಗಳ ನಡುವೆ ಯುದ್ಧ ನಡೆಯುತ್ತಿರುವುದು ಒಂದು ಪುರಾತನ ಶಿವ

ಶಿವನ ಒಂದು ದೇವಾಲಯಕ್ಕಾಗಿ ಥಾಯ್ಲೆಂಡ್‌-ಕಾಂಬೋಡಿಯ ಮಧ್ಯೆ ಯುದ್ಧ Read More »

ಬಿ.ಸಿ.ರೋಡ್‌-ಸುರತ್ಕಲ್‌ ಹೆದ್ದಾರಿ ಹೊಂಡಗುಂಡಿ ಸಮಸ್ಯೆಗೆ ಶಾಶ್ವತ ಪರಿಹಾರ, ಮಂಗಳೂರಿಗೆ ರಿಂಗ್‌ ರೋಡ್‌

ಕೇಂದ್ರ ಸಚಿವ ನಿತಿನ್‌ ಗಡ್ಕರಿಯವರನ್ನು ಭೇಟಿ ಮಾಡಿ ಮನವಿ ಮಾಡಿದ ಕ್ಯಾ.ಬ್ರಿಜೇಶ್‌ ಚೌಟ ಮಂಗಳೂರು: ಸಂಸತ್ತಿನ ಕಚೇರಿಯಲ್ಲಿ ಗುರುವಾರ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರನ್ನು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿಯಾಗಿ ಬಿ.ಸಿ. ರೋಡ್ – ಸುರತ್ಕಲ್‌ ನಡುವಿನ ಬಂದರು ಸಂಪರ್ಕಿಸುವ ಹೆದ್ದಾರಿಯ ಶಾಶ್ವತ ನಿರ್ವಹಣೆಗೆ ಎದುರಾಗಿರುವ ಅಡಚಣೆ, ಸಮಸ್ಯೆ – ಸವಾಲುಗಳ ಬಗ್ಗೆ ಕೇಂದ್ರ ಸಚಿವರ ಗಮನ ಸೆಳೆದಿದ್ದಾರೆ. ಈ ಪ್ರಮುಖ ರಸ್ತೆಯು ಪ್ರಸ್ತುತ NHLML ವ್ಯಾಪ್ತಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರ ನಿರ್ವಹಣೆಗೆ ಸೂಕ್ತವಾದ

ಬಿ.ಸಿ.ರೋಡ್‌-ಸುರತ್ಕಲ್‌ ಹೆದ್ದಾರಿ ಹೊಂಡಗುಂಡಿ ಸಮಸ್ಯೆಗೆ ಶಾಶ್ವತ ಪರಿಹಾರ, ಮಂಗಳೂರಿಗೆ ರಿಂಗ್‌ ರೋಡ್‌ Read More »

ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ: ಜುಲೈ 25 ರಂದು ಶಾಲಾ ಕಾಲೇಜುಗಳಿಗೆ ರಜೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವರುಣನಾರ್ಭಟ ಜೋರಾಗಿದ್ದು, ಈ ಹಿನ್ನೆಲೆಯಲ್ಲಿ ಜುಲೈ 25 ರಂದು ಜಿಲ್ಲೆಯ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಭಾರೀ ಮಳೆಯ ಹಿನ್ನೆಲೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಈ‌ ಹಿನ್ನೆಲೆ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿರುವುದಾಗಿ ತಿಳಿಸಿದೆ.

ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ: ಜುಲೈ 25 ರಂದು ಶಾಲಾ ಕಾಲೇಜುಗಳಿಗೆ ರಜೆ Read More »

error: Content is protected !!
Scroll to Top