ಸುದ್ದಿ

ವೆನ್ಲಾಕ್‌ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ ಡೇ ಕೇರ್‌ ಸೆಂಟರ್‌ ಸ್ಥಾಪನೆ : ಕ್ಯಾ.ಬ್ರಿಜೇಶ್‌ ಚೌಟ

ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಯೋಜನೆ ಮಂಗಳೂರು: ಕ್ಯಾನ್ಸರ್‌ ರೋಗಿಗಳ ಅನುಕೂಲ ಹಾಗೂ ಆರೈಕೆ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಡೇ ಕೇರ್ ಸೆಂಟರ್ ಸ್ಥಾಪನೆಗೆ ಅನುಮೋದನೆ ನೀಡಿದ್ದು, ಇದಕ್ಕಾಗಿ 1.49 ಕೋಟಿ ರೂ. ವರೆಗೆ ಅನುದಾನ ಮೀಸಲಿಡಲಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಕ್ಯಾನ್ಸರ್ ರೋಗಿಗಳ ಆರೈಕೆಯಲ್ಲಿ ನಗರ-ಗ್ರಾಮೀಣ ಅಸಮಾನತೆ ಕಡಿಮೆ ಮಾಡಿ, ಪರಿಣಾಮಕಾರಿ ಶುಶ್ರೂಷೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ […]

ವೆನ್ಲಾಕ್‌ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ ಡೇ ಕೇರ್‌ ಸೆಂಟರ್‌ ಸ್ಥಾಪನೆ : ಕ್ಯಾ.ಬ್ರಿಜೇಶ್‌ ಚೌಟ Read More »

ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿ

ಸಂತಾನ, ಸಂಪತ್ತು, ನೆಮ್ಮದಿ ಅನುಗ್ರಹಿಸುವ ದೇವರು ನಾಗ ಶ್ರಾವಣ ಮಾಸ… ಸಾಲು ಸಾಲು ಹಬ್ಬಗಳ ಸಂಭ್ರಮದ ತಿಂಗಳು… ಆಷಾಢ ಕಳೆದು ಶ್ರಾವಣ ಬಂದಾಗ ನಮ್ಮನ್ನು ಮೊದಲು ಸ್ವಾಗತ ಮಾಡುವ ಹಬ್ಬವೇ ಶ್ರಾವಣ ಶುಕ್ಲದಂದು ಬರುವ ನಾಗರ ಪಂಚಮಿ. ಪ್ರಕೃತಿ, ಪ್ರಾಣಿ ಪಕ್ಷಿಗಳಲ್ಲಿಯೂ ದೇವರನ್ನು ಕಾಣುವ ಗುಣ ನಮ್ಮದು. ಇದರಿಂದಾಗಿ ಕೊಂಚ ಮಟ್ಟಿಗಾದರೂ ನಮ್ಮಲ್ಲಿ ಪ್ರಕೃತಿ ಉಳಿಸಬೇಕು, ಪ್ರಾಣಿ-ಪಕ್ಷಿಗಳಿಗೆ ತೊಂದರೆ ನೀಡಬಾರದು ಎಂಬ ಪ್ರಜ್ಞೆ ಜಾಗೃತವಾಗಿದೆ ಎನ್ನಬಹುದು. ಜನರು ನಾಗದೇವರನ್ನು ಭಕ್ತಿಯಿಂದ ಪೂಜಿಸಿ, ಹಾಲೆರೆದು ಆ ಮೂಲಕ ಆಶೀರ್ವಾದ

ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿ Read More »

ಬಿಲ್ಲವ ಸಂಘಟನೆಯ ಅಭಿವೃದ್ಧಿಯಲ್ಲಿ ರಾಜಕೀಯ ಸಲ್ಲ: ಸತೀಶ್ ಕುಮಾರ್ ಕೆಡೆಂಜಿ

ಪುತ್ತೂರು ಬಿಲ್ಲವ ಸಂಘದ ವಾರ್ಷಿಕ ಮಹಾಸಭೆ ಪುತ್ತೂರು: ಬಿಲ್ಲವರು ಒಗ್ಗಟ್ಟಾಗಿ ಪ್ರದರ್ಶಿಸಬೇಕು. ನಮ್ಮಲ್ಲಿ ಸಂಘಟನೆಯ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಸಲ್ಲ. ಬಿಲ್ಲವ ಸಂಘ ಬಲವರ್ಧನೆಯಾಗಿ ರಾಜ್ಯ ಮಟ್ಟದಲ್ಲಿ ಹೆಸರು ಮಾಡಲು 55 ಗ್ರಾಮ ಸಮಿತಿಗಳೇ ಕಾರಣ ಎಂದು ಬಿಲ್ಲವ ‌ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಬಪ್ಪಳಿಗೆಯ ಬ್ರಹ್ಮಶ್ರೀ ‌ನಾರಾಯಣಗುರುಸ್ವಾಮಿ ಬಿಲ್ಲವ ಸಂಘದ 49 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ‌ ಮಾತನಾಡಿ, ಬಿಲ್ಲವ ಸಂಘದ ಹಿರಿಯರ ತ್ಯಾಗ, ಸೇವೆಯ ಫಲ ಎಂಬಂತೆ

ಬಿಲ್ಲವ ಸಂಘಟನೆಯ ಅಭಿವೃದ್ಧಿಯಲ್ಲಿ ರಾಜಕೀಯ ಸಲ್ಲ: ಸತೀಶ್ ಕುಮಾರ್ ಕೆಡೆಂಜಿ Read More »

ಪುಂಜಾಲಕಟ್ಟೆಯಲ್ಲಿ ದಿಶಾ ತರಬೇತಿ ಸಂಪನ್ನ

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇಲ್ಲಿನ ಪ್ರಥಮ ವರ್ಷದ ಪದವಿ ತರಗತಿಯ ವಿದ್ಯಾರ್ಥಿಗಳಿಗಾಗಿ ‘ದಿಶಾ’ ತರಬೇತಿ ಕಾರ್ಯಕ್ರಮ ಜುಲೈ 28ರಂದು ನಡೆಯಿತು. ಕಾಲೇಜಿನ ಆಂತರಿಕ ಗುಣಮಟ್ಟ ಖಾತ್ರಿ ಘಟಕ (Internal Quality Assurance Cell) ಮತ್ತು ವಿದ್ಯಾರ್ಥಿ ಕ್ಷೇಮಪಾಲನ ಕಚೇರಿ (Students’ Welfare Office) ಇವುಗಳ ಜಂಟಿ ಆಶ್ರಯದಲ್ಲಿ ‘ Small steps towards big dreams start today’ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಕ್ರಮ ಏರ್ಪಾಡಾಗಿತ್ತು. ರಾಷ್ಟ್ರೀಯ ತರಬೇತುದಾರ ಮತ್ತು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್

ಪುಂಜಾಲಕಟ್ಟೆಯಲ್ಲಿ ದಿಶಾ ತರಬೇತಿ ಸಂಪನ್ನ Read More »

ಸುಳ್ಯ: ರಸ್ತೆ ದಾಟುತ್ತಿದ್ದಾಗ ಬೈಕ್ ಢಿಕ್ಕಿ ಹೊಡೆದು ಮಹಿಳೆ ಸಾವು

ಸುಳ್ಯ: ಕಲ್ಲಗುಂಡಿ ಅಂಚೆ ಕಚೇರಿ ಬಳಿ ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಮೃತರನ್ನು ಬೈಲು ನಿವಾಸಿ ಸಂಪಾಜೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕುಮಾರ್ ಚೆದ್ಮಾರ್ ಅವರ ತಾಯಿ ಕಮಲಾ ಚೆತ್ಕಾರ್(67) ಎಂದು ಗುರುತಿಸಲಾಗಿದೆ. ಕಮಲಾ ಅವರು ಸಂಪಾಜೆಗೆ ಹೋಗುವ ಬಸ್ ಹತ್ತುವುದಕ್ಕಾಗಿ ಕಲ್ಲಗುಂಡಿ ಅಂಚೆ ಕಚೇರಿ ಬಳಿ ರಸ್ತೆ ದಾಟುತ್ತಿದ್ದಾಗ, ಸುಳ್ಯದ ಕಡೆಗೆ ಬರುತ್ತಿದ್ದ ಕೇರಳ ನೋಂದಣಿಯ ಬೈಕ್ ನಿಯಂತ್ರಣ ಕಳೆದುಕೊಂಡು ಅವರಿಗೆ

ಸುಳ್ಯ: ರಸ್ತೆ ದಾಟುತ್ತಿದ್ದಾಗ ಬೈಕ್ ಢಿಕ್ಕಿ ಹೊಡೆದು ಮಹಿಳೆ ಸಾವು Read More »

ಇಂದು ಮಧ್ಯಾಹ್ನ 12 ಗಂಟೆಗೆ ಸಂಸತ್ತಿನಲ್ಲಿ ಆಪರೇಷನ್‌ ಸಿಂದೂರ ಚರ್ಚೆ

ಸುದೀರ್ಘ 16 ತಾಸುಗಳ ಚರ್ಚೆಗೆ ಸರ್ಕಾರ-ವಿಪಕ್ಷ ರೆಡಿ ನವದೆಹಲಿ: ಪಹಲ್ಗಾಮ್ ಉಗ್ರ ದಾಳಿ ಮತ್ತು ಆಪರೇಷನ್ ಸಿಂದೂರ ಕುರಿತು ಸೋಮವಾರ ಲೋಕಸಭೆಯಲ್ಲಿ ಮೂರು ದಿನಗಳ ಚರ್ಚೆ ಆರಂಭವಾಗಲಿದ್ದು, ಆಡಳಿತ ಮೈತ್ರಿಕೂಟ ಮತ್ತು ವಿರೋಧ ಪಕ್ಷಗಳು ಪರಸ್ಪರ ವಾಗ್ದಾಳಿಗೆ ಸಿದ್ಧತೆ ಮಾಡಿಕೊಂಡಿವೆ. ಕಾಂಗ್ರೆಸ್ ನಿನ್ನೆ ತನ್ನ ಸಂಸದರಿಗೆ ಲೋಕಸಭೆಯಲ್ಲಿ ಇಂದಿನಿಂದ ಕಡ್ಡಾಯವಾಗಿ ಹಾಜರಿರುವಂತೆ ವಿಪ್ ಜಾರಿ ಮಾಡಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಚರ್ಚೆ ಶುರು ಮಾಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಆಪರೇಷನ್‌ ಸಿಂದೂರ ಕುರಿತು ಲೋಕಸಭೆಯಲ್ಲಿ

ಇಂದು ಮಧ್ಯಾಹ್ನ 12 ಗಂಟೆಗೆ ಸಂಸತ್ತಿನಲ್ಲಿ ಆಪರೇಷನ್‌ ಸಿಂದೂರ ಚರ್ಚೆ Read More »

ಧರ್ಮಸ್ಥಳ : ಬಸ್‌ ತಂಗುದಾಣಕ್ಕೆ ನುಗ್ಗಿ ಬಂದ ಬೃಹತ್‌ ಕಾಡಾನೆ

ಒಂಟಿ ಸಲಗ ಕಂಡು ಬಸ್‌ಗಾಗಿ ಕಾಯುತ್ತಿದ್ದ ಶಾಲಾ ಮಕ್ಕಳು ಭಯಭೀತ ಬೆಳ್ತಂಗಡಿ : ಧರ್ಮಸ್ಥಳ ಸಮೀಪದ ಬೊಳಿಯಾರ್‌ನಲ್ಲಿ ಇಂದು ಬೆಳಗ್ಗೆ ಒಂಟಿ ಸಲಗವೊಂದು ಬಸ್‌ ತಂಗುದಾಣಕ್ಕೆ ನುಗ್ಗಿ ಬಂದು ಆತಂಕ ಸೃಷ್ಟಿಸಿದೆ. ರಸ್ತೆ ಬದಿ ಬಸ್ ತಂಗುದಾಣದಲ್ಲಿ ಶಾಲಾ ಮಕ್ಕಳು ಬಸ್‌ಗಾಗಿ ಕಾಯುತ್ತಿದ್ದ ವೇಳೆ ರಸ್ತೆಯಲ್ಲಿ ಪ್ರತ್ಯಕ್ಷವಾದ ಬೃಹತ್‌ ಗಾತ್ರದ ಒಂಟಿ ಸಲಗ ಬಸ್ ತಂಗುದಾಣದ ಕಡೆಗೆ ನುಗ್ಗಿ ಬಂದಿದೆ. ತಂಗುದಾಣದಲ್ಲಿದ್ದ ಮಕ್ಕಳು ಬೃಹತ್ ಗಾತ್ರದ ಆನೆಯನ್ನು ಕಂಡು ಭಯಭೀತರಾಗಿ ಹತ್ತಿರದಲ್ಲಿದ್ದ ಅಂಗಡಿಯೊಳಗೆ ನುಗ್ಗಿ ಪಾರಾಗಿದ್ದಾರೆ. ಬಳಿಕ

ಧರ್ಮಸ್ಥಳ : ಬಸ್‌ ತಂಗುದಾಣಕ್ಕೆ ನುಗ್ಗಿ ಬಂದ ಬೃಹತ್‌ ಕಾಡಾನೆ Read More »

ದೇವಾಲಯದಲ್ಲಿ ಕಾಲ್ತುಳಿತ: ಇಬ್ಬರು ಭಕ್ತರ ಸಾವು, 29 ಮಂದಿಗೆ ಗಾಯ

ವಿದ್ಯುತ್‌ ತಂತಿ ಕಡಿದು ಚಪ್ಪರದ ಶೀಟಿನ ಮೇಲೆ ಬಿದ್ದಾಗ ನೂಕುನುಗ್ಗಲು ಲಖನೌ: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿರುವ ದೇವಾಲಯವೊಂದರಲ್ಲಿ ಇಂದು ನಸುಕಿನ ಹೊತ್ತು ಕಾಲ್ತುಳಿತ ಸಂಭವಿಸಿ ಇಬ್ಬರು ಭಕ್ತರು ಸಾವನ್ನಪ್ಪಿದ್ದು, 29 ಮಂದಿ ಗಾಯಗೊಂಡಿದ್ದಾರೆ. ಪವಿತ್ರ ಶ್ರಾವಣ ಮಾಸದ ಹಿನ್ನೆಲೆ ಸೋಮವಾರ ಬಾರಾಬಂಕಿಯಲ್ಲಿರುವ ಪ್ರಾಚೀನ ಅವಸಾನೇಶ್ವರ ಮಹಾದೇವ ದೇವಾಲಯದಲ್ಲಿ ಭಕ್ತರು ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು. ಈ ವೇಳೆ ಕೆಲ ಕೋತಿಗಳು ಓವರ್‌ಹೆಡ್ ವಿದ್ಯುತ್ ತಂತಿಗಳ ಮೇಲೆ ಹಾರಿವೆ. ಇದರಿಂದ ವಿದ್ಯುತ್‌ ತಂತಿ ತುಂಡಾಗಿ ತಗಡಿನ ಶೆಡ್‌ ಮೇಲೆ

ದೇವಾಲಯದಲ್ಲಿ ಕಾಲ್ತುಳಿತ: ಇಬ್ಬರು ಭಕ್ತರ ಸಾವು, 29 ಮಂದಿಗೆ ಗಾಯ Read More »

ಧರ್ಮಸ್ಥಳ ಪ್ರಕರಣ : ಎರಡನೇ ದಿನವೂ ದೂರುದಾರನ ಸುದೀರ್ಘ ವಿಚಾರಣೆ

ತಲೆ ಬುರುಡೆ ರಹಸ್ಯ ಬೇಧಿಸುವ ನಿಟ್ಟಿನಲ್ಲಿ ತನಿಖೆ ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ದೂರು ನೀಡಿದ್ದ ವ್ಯಕ್ತಿಯನ್ನು ಎರಡನೇ ದಿನವೂ ಎಸ್‌ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಎರಡನೇ ದಿನವಾದ ಭಾನುವಾರ ವಿಶೇಷ ತನಿಖಾ ತಂಡದ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರೇ ಸ್ವತಃ ವಿಚಾರಣೆ ನಡೆಸಿದ್ದಾರೆ. ಶನಿವಾರ ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಐಬಿಯಲ್ಲಿ ಎಸ್‌ಐಟಿ ಅಧಿಕಾರಿ ಡಿಐಜಿ ಅನುಚೇತ್ ನೇತೃತ್ವದಲ್ಲಿ ಎಂಟು ಗಂಟೆಗಳ ಕಾಲ ನಿರಂತರ ವಿಚಾರಣೆ ನಡೆಸಲಾಗಿತ್ತು. ಈವರೆಗೆ ನಡೆದ ವಿಚಾರಣೆಯ ಮಾಹಿತಿ ಪಡೆದ ಬಳಿಕ

ಧರ್ಮಸ್ಥಳ ಪ್ರಕರಣ : ಎರಡನೇ ದಿನವೂ ದೂರುದಾರನ ಸುದೀರ್ಘ ವಿಚಾರಣೆ Read More »

ಮಂಗಳೂರು ಶೂಟೌಟ್‌ ಪ್ರಕರಣದ ಆರೋಪಿ 10 ವರ್ಷಗಳ ಬಳಿಕ ಸೆರೆ

ಭಾರತಿ ಬಿಲ್ಡರ್ಸ್‌ ಕಚೇರಿ ಮೇಲೆ ರವಿ ಪೂಜಾರಿ ಗ್ಯಾಂಗ್‌ ನಡೆಸಿದ ಶೂಟೌಟ್‌ ಪ್ರಕರಣ ಮಂಗಳೂರು : 2014ರಲ್ಲಿ ಮಂಗಳೂರಿನಲ್ಲಿ ಸಂಭವಿಸಿದ್ದ ಶೂಟೌಟ್‌ ಪ್ರಕರಣದ ಆರೋಪಿಯನ್ನು ಹತ್ತು ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಕರಾಡ್‌ನ ಗಣೇಶ್‌ ಲಕ್ಷ್ಮಣ್ ಸಕಟ್ ಎಂಬಾತನನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ. ಬಿಜೈಯ ಭಾರತಿ ಬಿಲ್ಡರ್ಸ್ ಕಚೇರಿ ಮೇಲೆ ಭೂಗತ ಪಾತಕಿ ರವಿ ಪೂಜಾರಿ ಸಹಚರರು 2014ರಲ್ಲಿ ಶೂಟೌಟ್ ನಡೆಸಿದ್ದರು. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿಯಾಗಿದ್ದ

ಮಂಗಳೂರು ಶೂಟೌಟ್‌ ಪ್ರಕರಣದ ಆರೋಪಿ 10 ವರ್ಷಗಳ ಬಳಿಕ ಸೆರೆ Read More »

error: Content is protected !!
Scroll to Top