ಸುದ್ದಿ

ಶಾರುಕ್‌ ಖಾನ್‌, ದೀಪಿಕಾ ಪಡುಕೋಣೆ ವಿರುದ್ಧ ವಂಚನೆ ದೂರು

ಹೇಗೆಲ್ಲ ಮೋಸ ಮಾಡುತ್ತಾರೆ ಈ ತಾರೆಯರು ಗೊತ್ತಾ? ನವದೆಹಲಿ: ಬಾಲಿವುಡ್‌ನ ಜನಪ್ರಿಯ ತಾರೆಯರಾದ ಶಾರುಕ್‌ ಖಾನ್‌ ಮತ್ತು ದೀಪಿಕಾ ಪಡುಕೋಣೆ ವಿರುದ್ಧ ವಂಚನೆ ದೂರು ದಾಖಲಾಗಿದೆ. ಉತ್ಪಾದನಾ ದೋಷಗಳನ್ನು ಹೊಂದಿರುವ ಹ್ಯುಂಡೈ ಕಾರು ಖರೀದಿಸಿದ್ದ ರಾಜಸ್ಥಾನದ ಭರತ್‌ಪುರದ ವ್ಯಕ್ತಿಯೊಬ್ಬರು ಆ ಕಾರಿನ ರಾಯಭಾರಿಗಳಾಗಿದ್ದ ಬಾಲಿವುಡ್ ನಟರಾದ ಶಾರುಕ್‌ ಖಾನ್ ಹಾಗೂ ದೀಪಿಕಾ ಪಡುಕೋಣೆ ಸೇರಿದಂತೆ ಒಟ್ಟು ಆರು ಮಂದಿಯ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. ರಾಜಸ್ಥಾನದ ಭರತ್‌ಪುರ ನಿವಾಸಿ ಕೀರ್ತಿ ಸಿಂಗ್ ದೂರು ದಾಖಲಿಸಿದವರು. ಹ್ಯುಂಡೈ ಕಾರನ್ನು […]

ಶಾರುಕ್‌ ಖಾನ್‌, ದೀಪಿಕಾ ಪಡುಕೋಣೆ ವಿರುದ್ಧ ವಂಚನೆ ದೂರು Read More »

ವೈಷ್ಣೋದೇವಿ ಮಾರ್ಗದಲ್ಲಿ ಭೀಕರ ಭೂಕುಸಿತ : 30ಕ್ಕೂ ಅಧಿಕ ಮಂದಿ ಸಾವು

ಕಣಿವೆ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಹಲವು ಅನಾಹುತ ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕತ್ರಾದಲ್ಲಿರುವ ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಮತ್ತೆ ಭೀಕರ ಭೂಕುಸಿತ ಸಂಭವಿಸಿ 30ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ನಿರಂತರ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಸ್ಥಳೀಯ ಪೊಲೀಸ್ ಹಾಗೂ ಎನ್‌ಡಿಆರ್‌ಎಫ್ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಚರಣೆ ನಡೆಸಿದೆ. ಭೂಕುಸಿತದಿಂದ 30ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, 23 ಜನರು ಗಾಯಗೊಂಡಿದ್ದಾರೆ. ಅವಶೇಷಗಳಡಿಯಲ್ಲಿ ಹಲವರು ಸಿಲುಕಿಕೊಂಡಿದ್ದು, ಸಿಆರ್‌ಪಿಎಫ್‌ನ 6ನೇ ಬೆಟಾಲಿಯನ್ ಸೈನಿಕರು ಹಾಗೂ ರಕ್ಷಣಾ ತಂಡಗಳು

ವೈಷ್ಣೋದೇವಿ ಮಾರ್ಗದಲ್ಲಿ ಭೀಕರ ಭೂಕುಸಿತ : 30ಕ್ಕೂ ಅಧಿಕ ಮಂದಿ ಸಾವು Read More »

ಆರ್‌ಎಸ್‌ಎಸ್‌ ಗೀತೆ ವಿವಾದ : ಕ್ಷಮೆ ಕೇಳಿದ ಡಿಕೆಶಿ

ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಇಂಡಿ ಒಕ್ಕೂಟದ ನಾಯಕರಿಂದ ಬಹಿರಂಗ ಕ್ಷಮೆಯಾಚನೆ ಬೆಂಗಳೂರು : ಕರ್ನಾಟಕ ವಿಧಾನಸಭೆಯಲ್ಲಿ ಆರ್​ಎಸ್​ಎಸ್ ಗೀತೆ ಹಾಡಿ ವಿವಾದಕ್ಕೊಳಗಾಗಿದ್ದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಂದು ಕ್ಷಮೆ ಯಾಚಿಸುವ ಮೂಲಕ ಈ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ವಿರೋಧ ಪಕ್ಷದ ಸಿದ್ಧಾಂತದ ಅರಿವಿದೆ ಎಂಬುದನ್ನು ನಿರೂಪಿಸಿವುದಕ್ಕಾಗಿ ಹಾಗೆ ಹೇಳಿದೆ ಅಷ್ಟೆ. ಆದರೂ ಒಂದು ವೇಳೆ ತಪ್ಪು ಮಾಡಿದ್ದೇನೆ ಎಂದು ನೀವು ಭಾವಿಸುವುದೇ ಆದರೆ, ಎಲ್ಲ ಕಾಂಗ್ರೆಸ್ ನಾಯಕರ-ಕಾರ್ಯಕರ್ತರ, ಇಂಡಿ ಒಕ್ಕೂಟದ

ಆರ್‌ಎಸ್‌ಎಸ್‌ ಗೀತೆ ವಿವಾದ : ಕ್ಷಮೆ ಕೇಳಿದ ಡಿಕೆಶಿ Read More »

ತಿಮರೋಡಿ ಮನೆಯಲ್ಲಿ ಚಿನ್ನಯ್ಯನ ಮೊಬೈಲ್‌, ಬಟ್ಟೆ ಪತ್ತೆ

ಸಿಸಿಟಿವಿ ಹಾರ್ಸ್‌ ಡಿಸ್ಕ್‌ ವಶಪಡಿಸಿಕೊಂಡು ಸ್ಥಳ ಮಹಜರು ಮಾಡಿದ ಎಸ್‌ಐಟಿ ತಂಡ ಉಜಿರೆ: ಮಹೇಶ್‌ ಶೆಟ್ಟಿ ತಿಮರೋಡಿ ಮನೆಯಲ್ಲಿ ಎಸ್‌ಐಟಿ ಶೋಧದ ವೇಳೆ ಸಿಸಿಟಿವಿ ಮತ್ತು ಚಿನ್ನಯ್ಯ ಬಳಸುತ್ತಿದ್ದ ಮೊಬೈಲ್‌ ಫೋನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬುರುಡೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚಿನ್ನಯ್ಯನ್ನು ಎಸ್‌ಐಟಿ ಪೊಲೀಸರು ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿದ್ದಾರೆ. ಎಸ್‌ಐಟಿ ಉತ್ಖನನ ನಡೆಸಿದ ಬಳಿಕ ತಾನು ತಿಮರೋಡಿಯ ನಿವಾಸಕ್ಕೆ ಹೋಗುತ್ತಿದ್ದೆ. ಅಲ್ಲಿ ನನಗೆ ಒಂದು ಕೊಠಡಿಯನ್ನು ನೀಡಲಾಗಿತ್ತು. ಅಲ್ಲಿ ನಾನು ಬಟ್ಟೆ, ಬ್ಯಾಗ್ ಇಟ್ಟಿದ್ದೇನೆ.

ತಿಮರೋಡಿ ಮನೆಯಲ್ಲಿ ಚಿನ್ನಯ್ಯನ ಮೊಬೈಲ್‌, ಬಟ್ಟೆ ಪತ್ತೆ Read More »

ಧರ್ಮಸ್ಥಳ ಕೇಸ್‌ : ತಿಮರೋಡಿ ಮನೆಯಲ್ಲಿ ಎಸ್‌ಐಟಿ ಶೋಧ

ಸರ್ಚ್‌ ವಾರಂಟ್‌ನೊಂದಿಗೆ ಹೋಗಿ ಮನೆ ಶೋಧಿಸುತ್ತಿರುವ ಎಸ್‌ಐಟಿ ತಂಡ ಬೆಳ್ತಂಗಡಿ: ಧರ್ಮಸ್ಥಳ ಕೇಸಿನ ಬುರುಡೆಮ್ಯಾನ್‌ ಸಿ.ಎನ್‌.ಚಿನ್ನಯ್ಯ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಮನೆಯಲ್ಲಿ ಕೆಲದಿನ ತಂಗಿದ್ದ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡ ತಿಮರೋಡಿ ಮತ್ತು ಅವರ ಸಹೋದರನ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಧರ್ಮಸ್ಥಳದಲ್ಲಿ ಸಾಮೂಹಿಕವಾಗಿ ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿಕೊಂಡಿದ್ದ ಚಿನ್ನಯ್ಯ ಈಗ ಎಸ್‌ಐಟಿ ಬಂಧನದಲ್ಲಿದ್ದು, ವಿಚಾರಣೆ ವೇಳೆ ತಾನು ಉಜಿರೆಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಆಶ್ರಯ ಪಡೆದಿದ್ದೆ ಎಂದು ಹೇಳಿಕೆ ನೀಡಿದ್ದ. ಈ

ಧರ್ಮಸ್ಥಳ ಕೇಸ್‌ : ತಿಮರೋಡಿ ಮನೆಯಲ್ಲಿ ಎಸ್‌ಐಟಿ ಶೋಧ Read More »

ಲ್ಯಾಂಡಿಂಗ್‌ ಸಮಸ್ಯೆ : ಬೆಂಗಳೂರಿಗೆ ಹೋದ ಮಂಗಳೂರಿನಲ್ಲಿ ಇಳಿಯಬೇಕಾದ ವಿಮಾನ

ತಾಂತ್ರಿಕ ದೋಷದಿಂದ ಮಂಗಳೂರಿನಲ್ಲಿ ಇಳಿಯಲು ಸಾಧ್ಯವಾಗದೆ ಪ್ರಯಾಣಿಕರು ಹೈರಾಣ ಮಂಗಳೂರು: ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಬೆಂಗಳೂರಲ್ಲಿ ಲ್ಯಾಂಡ್‌ ಆದ ಘಟನೆ ಸೋಮವಾರ ಸಂಭವಿಸಿದೆ. ಮಂಗಳೂರಿನಲ್ಲಿ ಮೂರು ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಪಟ್ಟರೂ ವಿಫಲವಾದ ಬಳಿಕ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ. ವಿಮಾನದಲ್ಲಿ 157 ಮಂದಿ ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು. ದುಬೈನಿಂದ ಮಂಗಳೂರಿಗೆ ಭಾನುವಾರ ರಾತ್ರಿ ಹೊರಟಿತ್ತು.

ಲ್ಯಾಂಡಿಂಗ್‌ ಸಮಸ್ಯೆ : ಬೆಂಗಳೂರಿಗೆ ಹೋದ ಮಂಗಳೂರಿನಲ್ಲಿ ಇಳಿಯಬೇಕಾದ ವಿಮಾನ Read More »

ಬೆಳಕು ಹರಿಯುವ ಮೊದಲೇ ಎಸ್‌ಐಟಿ ಕಚೇರಿಯಲ್ಲಿ ಹಾಜರಾದ ಸುಜಾತ ಭಟ್‌

ಧರ್ಮಸ್ಥಳ ಪ್ರಕರಣದಲ್ಲಿ ಮತ್ತೊಂದು ಶಾಕ್‌ ನೀಡಿದ ಅಜ್ಜಿ ಧರ್ಮಸ್ಥಳ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ದಿನಕ್ಕೊಂದು ತಿರುವು ನೀಡುತ್ತಿರುವ ವೃದ್ಧೆ ಸುಜಾತ ಭಟ್‌ ಎಸ್‌ಐಟಿ ವಿಚಾರಣೆಗೆ ಹಾಜರಾಗುವ ವಿಚಾರದಲ್ಲೂ ಶಾಕ್‌ ನೀಡಿದ್ದಾರೆ. ಅನನ್ಯಾ ಭಟ್‌ ನಾಪತ್ತೆ ಪ್ರಕರಣದ ಸೃಷ್ಟಿಕರ್ತೆಯಾದ ಸುಜಾತ ಭಟ್‌ ಮಂಗಳವಾರ ಬೆಳ್ಳಂಬೆಳಗ್ಗೆ ವಿಶೇಷ ತನಿಖಾ ತಂಡದ ಕಚೇರಿಗೆ ಆಗಮಿಸಿ ಎಸ್‌ಐಟಿ ಅಧಿಕಾರಿಗಳೇ ಚಕಿತರಾಗುವಂತೆ ಮಾಡಿದ್ದಾರೆ. ಅನನ್ಯಾ ಭಟ್‌ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಪೊಲೀಸರು ಆ.29ರಂದು ವಿಚಾರಣೆಗೆ ಹಾಜರಾಗುವಂತೆ ಸುಜಾತ ಭಟ್‌ಗೆ ನೋಟಿಸ್‌ ನೀಡಿದ್ದರು. ಶುಕ್ರವಾರ

ಬೆಳಕು ಹರಿಯುವ ಮೊದಲೇ ಎಸ್‌ಐಟಿ ಕಚೇರಿಯಲ್ಲಿ ಹಾಜರಾದ ಸುಜಾತ ಭಟ್‌ Read More »

ಕಾರ್ಕಳ: ಬಡ್ಡಿ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯ ಇರಿದು ಕೊಲೆ

ಕಾರ್ಕಳದಲ್ಲಿ ವಾಸವಾಗಿದ್ದ ಮಂಗಳೂರು ಮೂಲದ ವ್ಯಕ್ತಿ ಕಾರ್ಕಳ : ಕಾರ್ಕಳ ನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯ ಕುಂಟಲ್ಪಾಡಿ ಎಂಬಲ್ಲಿ ವಾಸವಾಗಿದ್ದ ಮಂಗಳೂರು ಮೂಲದ ವ್ಯಕ್ತಿಯೊಬ್ಬರನ್ನು ಇರಿದು ಭೀಕರವಾಗಿ ಕೊಲೆ ಮಾಡಿದ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಕೊಲೆಯಾದ ವ್ಯಕ್ತಿಯನ್ನು ನವೀನ್‌ ಪೂಜಾರಿ (50) ಎಂದು ಗುರುತಿಸಲಾಗಿದೆ. ನವೀನ್‌ ಪೂಜಾರಿ ಕಾರ್ಕಳದಲ್ಲಿ ಹಣಕಾಸು ವ್ಯವಹಾರ ನಡೆಸುತ್ತಿದ್ದರು. ಸ್ಥಳೀಯವಾಗಿ ಅವರು ಬಡ್ಡಿ ನವೀನ ಎಂದು ಪರಿಚಿತರಾಗಿದ್ದರು. ಬಹಳ ಸಮಯದಿಂದ ಕಾರ್ಕಳದಲ್ಲೇ ವಾಸವಾಗಿದ್ದರು. ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ

ಕಾರ್ಕಳ: ಬಡ್ಡಿ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯ ಇರಿದು ಕೊಲೆ Read More »

ಮಂಗಳೂರು : ಕೆಎಸ್‌ಆರ್‌ಪಿ ಹೆಡ್‌ಕಾನ್‌ಸ್ಟೆಬಲ್‌ ಆತ್ಮಹತ್ಯೆ

ಮಂಗಳೂರು: ಕೊಣಾಜೆಯ ಅಸೈಗೋಳಿಯಲ್ಲಿ ಕರ್ನಾಟಕ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ) ಹೆಡ್‌ಕಾನ್‌ಸ್ಟೆಬಲ್‌ ಒಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಮೂಲತಃ ಉತ್ತರ ಕರ್ನಾಟಕದ‌ ಸಂಜೀವ (38) ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ. ಪತ್ನಿ ಮತ್ತು ಮಕ್ಕಳು ಊರಿಗೆ ಹೋಗಿದ್ದಾಗ ಸೋಮವಾರ ತಾವು ವಾಸವಾಗಿದ್ದ ಕ್ವಾರ್ಟರ್ಸ್‌ನಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕೊಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಂಗಳೂರು : ಕೆಎಸ್‌ಆರ್‌ಪಿ ಹೆಡ್‌ಕಾನ್‌ಸ್ಟೆಬಲ್‌ ಆತ್ಮಹತ್ಯೆ Read More »

ಆರ್‌ಎಸ್‌ಎಸ್‌ ಶತಮಾನೋತ್ಸವ ಸಂಭ್ರಮ : ಇಂದಿನಿಂದ ಉಪನ್ಯಾಸ ಸರಣಿ

ವರ್ಷವಿಡೀ ದೇಶಾದ್ಯಂತ ನಡೆಯಲಿದೆ ವಿಶೇಷ ಕಾರ್ಯಕ್ರಮ ನವದೆಹಲಿ : ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನೋತ್ಸವದ ಸಂಭ್ರದಲ್ಲಿದ್ದು, ಇದರಂಗವಾಗಿ ದೇಶಾದ್ಯಂತ ಅನೇಕ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆಗಸ್ಟ್ 26ರಿಂದ 28 ರವರೆಗೆ ದೆಹಲಿಯಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸಲಾಗಿದೆ. “ಆರ್‌ಎಸ್‌ಎಸ್‌ನ 100 ವರ್ಷಗಳ ಪಯಣ: ಹೊಸ ದಿಗಂತಗಳು” ಎಂಬ ಶೀರ್ಷಿಕೆಯಲ್ಲಿ 3 ದಿನಗಳ ಉಪನ್ಯಾಸ ಸರಣಿ ಇಂದಿನಿಂದ 28ರ ವರೆಗೆ ದೆಹಲಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಾಧ್ಯಮ, ರಾಜತಾಂತ್ರಿಕತೆ, ಧರ್ಮ ಮತ್ತು ಶೈಕ್ಷಣಿಕ ಕ್ಷೇತ್ರಗಳಂತಹ 17 ಕ್ಷೇತ್ರಗಳ ಗಣ್ಯ ವ್ಯಕ್ತಿಗಳೊಂದಿಗೆ

ಆರ್‌ಎಸ್‌ಎಸ್‌ ಶತಮಾನೋತ್ಸವ ಸಂಭ್ರಮ : ಇಂದಿನಿಂದ ಉಪನ್ಯಾಸ ಸರಣಿ Read More »

error: Content is protected !!
Scroll to Top