ಸುದ್ದಿ

ಗೋಲ್ಡ್‌ ಸ್ಮಗ್ಲಿಂಗ್‌ ಆರೋಪಿ ನಟಿ ರನ್ಯಾಳಿಂದ ವಿಚ್ಚೇದನ ಕೋರಿದ ಪತಿ

ಮದುವೆಯ ಬಳಿಕ ದಾಂಪತ್ಯದಲ್ಲಿ ಒಂದಲ್ಲ ಒಂದು ಸಮಸ್ಯೆ ಎಂದು ಅರ್ಜಿ ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್​ ಕೇಸ್​ನಲ್ಲಿ ಜೈಲು ಪಾಲಾಗಿರುವ ನಟಿ ರನ್ಯಾ ರಾವ್ ಸಂಸಾರವೂ ಈಗ ಸಮಸ್ಯೆಯಲ್ಲಿ ಸಿಲುಕಿದೆ. ರನ್ಯಾಳಿಂದ ವಿಚ್ಛೇದನ ಕೋರಿ‌ ಕೋರ್ಟ್​ಗೆ ಅರ್ಜಿ ಸಲ್ಲಿಸಲು ಪತಿ ಜತಿನ್ ಹುಕ್ಕೇರಿ ಸಿದ್ಧತೆ ನಡೆಸಿದ್ದಾರೆ. ಮದುವೆಯಾದಾಗಿನಿಂದ ರನ್ಯಾ ಜೊತೆಗೆ ಒಂದಲ್ಲ ಒಂದು ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಸದ್ಯ ರನ್ಯಾಳಿಂದ ಪತಿ ಜತಿನ್ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ. 2024 ಅಕ್ಟೋಬರ್ 6ರಂದು ಬೆಂಗಳೂರಿನ ಬಾಸ್ಟಿನ್ ರೆಸ್ಟೋರೆಂಟ್​ನಲ್ಲಿ ರನ್ಯಾ ಮತ್ತು […]

ಗೋಲ್ಡ್‌ ಸ್ಮಗ್ಲಿಂಗ್‌ ಆರೋಪಿ ನಟಿ ರನ್ಯಾಳಿಂದ ವಿಚ್ಚೇದನ ಕೋರಿದ ಪತಿ Read More »

ಮಹಾತ್ಮ ಗಾಂಧಿಯವರ ಮರಿ ಮೊಮ್ಮಗಳು ನೀಲಾಂಬೆನ್ ಪಾರಿಖ್  ನಿಧನ

ಗುಜರಾತ್ : ಮಹಾತ್ಮ ಗಾಂಧಿಯವರ ಮರಿ ಮೊಮ್ಮಗಳು ನೀಲಾಂಬೆನ್ ಪಾರಿಖ್ (92) ಮಂಗಳವಾರ ಬೆಳಿಗ್ಗೆ ನವಸಾರಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ನೀಲಾಂಬೆನ್, ಹರಿಲಾಲ್ ಗಾಂಧಿ ಮತ್ತು ಅವರ ಪತ್ನಿ ಗುಲಾಬ್ ಅವರ ಐದು ಮಕ್ಕಳಲ್ಲಿ ಹಿರಿಯವರಾದ ರಾಮಿಬೆನ್ ಅವರ ಮಗಳು,  ಅವರು ತಮ್ಮ 93 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಅವರು ಮಹಾತ್ಮ ಗಾಂಧಿಯವರ ಮಗ ಹರಿದಾಸ್ ಗಾಂಧಿಯವರ ಮೊಮ್ಮಗಳು, ನೀಲಾಂಬೆನ್ ತಮ್ಮ ಮಗ ಡಾ. ಸಮೀರ್ ಪಾರಿಖ್ ಅವರೊಂದಿಗೆ ನವಸಾರಿ ಜಿಲ್ಲೆಯಲ್ಲಿ ವಾಸಿಸುತ್ತಿದ್ದರು.ಅವರ ಅಂತ್ಯಕ್ರಿಯೆಯ ಮೆರವಣಿಗೆ ಇಂದು

ಮಹಾತ್ಮ ಗಾಂಧಿಯವರ ಮರಿ ಮೊಮ್ಮಗಳು ನೀಲಾಂಬೆನ್ ಪಾರಿಖ್  ನಿಧನ Read More »

ಗೇರುಕಟ್ಟೆ: ಅಪೂರ್ವವಾಗಿ ನಡೆದ  ಮಾತೃ ವಂದನಾ ಕಾರ್ಯಕ್ರಮ

 ಗೇರುಕಟ್ಟೆ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ. ಕರ್ನಾಟಕ ಕೇಂದ್ರ ಕಚೇರಿ ತುಮಕೂರು, ನೇತ್ರಾವತಿ ವಲಯ ಮಂಗಳೂರು ವತಿಯಿಂದ ಗೇರುಕಟ್ಟೆಯ  ಕ್ಷೀರ ಸಂಗಮ ಸಭಾಭವನದಲ್ಲಿ  48 ದಿನ ನಡೆದ ಯೋಗ ತರಬೇತಿ ಶಿಬಿರದ ಸಮಾರೋಪವು ಮಾತೃ ವಂದನಾ, ಮಾತೃ ಧ್ಯಾನ, ಮಾತೃ ಭೋಜನ ಕಾರ್ಯಕ್ರಮದೊಂದಿಗೆ ಹೊಸ ವರ್ಷದ ಆರಂಭದ ದಿನವಾದ ಯುಗಾದಿಯಂದು   ಬಹಳ ಅರ್ಥಪೂರ್ಣವಾಗಿ ಜರಗಿತು. ಸನಾತನ ಧರ್ಮದಲ್ಲಿ  ಮಹಿಳೆಯರಿಗೆ ಬಹಳ ಗೌರವವಿದೆ.  ಮನೆಯಲ್ಲಿ ಮಕ್ಕಳನ್ನು ವಾತ್ಸಲ್ಯದಿಂದ ಕಾಣುವ ತಾಯಿ, ಪತಿಗೆ ಪತ್ನಿಯಾಗಿ,  ಮಗಳಾಗಿ, 

ಗೇರುಕಟ್ಟೆ: ಅಪೂರ್ವವಾಗಿ ನಡೆದ  ಮಾತೃ ವಂದನಾ ಕಾರ್ಯಕ್ರಮ Read More »

ಮಂಗಳೂರು : ಮುಡಾ ಕಮಿಷನರ್‌ಗೇ ವಾಮಾಚಾರ ಯತ್ನ

ಪೊಲೀಸ್‌ ದೂರು ದಾಖಲಿಸಿದ ಕಮಿಷನರ್‌ ನೂರ್ ಝಹರಾ ಖಾನಂ ಮಂಗಳೂರು : ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಮಿಷನರ್ ಮೇಲೆ ಬ್ರೋಕರ್‌ಗಳು ಮಾಟಮಂತ್ರ ಮಾಡಲು ಮುಂದಾದ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಕಮಿಷನರ್‌ ಇಬ್ಬರು ದಲ್ಲಾಳಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಮುಡಾ ಕಚೇರಿಯಲ್ಲಿ ಬ್ರೋಕರ್‌ಗಳ ಕಾರುಬಾರು ಜೋರಾಗಿದ್ದು, ಅವರನ್ನು ನಿಯಂತ್ರಸಲು ಮುಂದಾದ ಕಮಿಷನರ್‌ ನೂರ್ ಝಹರಾ ಖಾನಂ ಅವರಿಗೆ ಬ್ರೋಕರ್‌ಗಳು ನಾನಾ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ. ಇತ್ತೀಚೆಗೆ ಒಬ್ಬ ಬ್ರೋಕರ್‌ ಸಿಬ್ಬಂದಿ ಇಲ್ಲದ ವೇಳೆ ಮುಡಾ

ಮಂಗಳೂರು : ಮುಡಾ ಕಮಿಷನರ್‌ಗೇ ವಾಮಾಚಾರ ಯತ್ನ Read More »

ಹೆಂಡತಿ ಬಿಟ್ಟು ಹೋದ ಸಿಟ್ಟು : ಅತ್ತೆ, ನಾದಿನಿ, ಮಗಳನ್ನು ಗುಂಡಿಕ್ಕಿ ಸಾಯಿಸಿ ಆತ್ಮಹತ್ಯೆ ಮಾಡಿಕೊಂಡ ಚಾಲಕ

ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪ ಖಾಂಡ್ಯ ಹೋಬಳಿ ಮಾಗಲು ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಕುಟುಂಬದ ಮೂವರನ್ನು ಗುಂಡು ಹಾರಿಸಿ ಸಾಯಿಸಿದ್ದು, ಬಳಿಕ ತಾನೂ ಅತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಡಬಗೆರೆಯ ಶಾಲೆಯೊಂದರಲ್ಲಿ ವಾಹನ ಚಾಲಕನಾಗಿದ್ದ ರತ್ನಾಕರ ಗುಂಡು ಹಾರಿಸಿವ. ಈತನ ಹೆಂಡತಿ ಎರಡು ವರ್ಷದ ಹಿಂದೆ ಬಿಟ್ಟು ಹೋಗಿದ್ದು, ಈ ಸಿಟ್ಟಿನಲ್ಲಿ ಅತ್ತೆ ಜ್ಯೋತಿ(50), ಮಗಳು ಮೌಲ್ಯ(6) ಮತ್ತೆ ನಾದಿನಿ ಸಿಂಧು(24)

ಹೆಂಡತಿ ಬಿಟ್ಟು ಹೋದ ಸಿಟ್ಟು : ಅತ್ತೆ, ನಾದಿನಿ, ಮಗಳನ್ನು ಗುಂಡಿಕ್ಕಿ ಸಾಯಿಸಿ ಆತ್ಮಹತ್ಯೆ ಮಾಡಿಕೊಂಡ ಚಾಲಕ Read More »

ಬಜಪೆ : ಮನೆಯ ಲಾಕರ್‌ನಲ್ಲಿದ್ದ 1 ಕೆಜಿ ಚಿನ್ನಾಭರಣ ಕಳ್ಳತನ

16 ಸಿಸಿ ಕ್ಯಾಮರಾ, 8 ನಾಯಿಗಳ ಕಣ್ಣುತಪ್ಪಿಸಿ ಕಳವು ಮಾಡಿದ ಚಾಣಾಕ್ಷ ಕಳ್ಳರು ಮಂಗಳೂರು: ಮನೆಯ ಲಾಕರ್‌ನಲ್ಲಿಟ್ಟ ಸುಮಾರು 1 ಕೆಜಿ ಚಿನ್ನವನ್ನು ಕಳ್ಳರು ಕದ್ದೊಯ್ದ ಘಟನೆ ಮಂಗಳೂರು ಬಜಪೆ ಸಮೀಪದ ಪೆರ್ಮುದೆಯಲ್ಲಿ ಸಂಭವಿಸಿದೆ. ಪೆರ್ಮುದೆಯ ಜಾನ್ವಿನ್‌ ಪಿಂಟೊ ಎಂಬವರ ಮನೆಯಲ್ಲಿ ಕಳ್ಳತನವಾಗಿರುವ ವಿಚಾರ ಮಂಗಳವಾರ ಬೆಳಕಿಗೆ ಬಂದಿದೆ. ಜಾನ್ವಿನ್‌ ಪಿಂಟೊ ಮತ್ತು ಅವರ ಪುತ್ರ ಪ್ರವೀಣ್‌ ಪಿಂಟೊ ಕುವೈಟ್‌ನಲ್ಲಿದ್ದಾರೆ. ಮನೆಗೆ ಬೀಗ ಹಾಕಿದ್ದು, ಮನೆಯ ಸುತ್ತ 16 ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಆದರೆ ಕಳ್ಳರು ಸಿಸಿ

ಬಜಪೆ : ಮನೆಯ ಲಾಕರ್‌ನಲ್ಲಿದ್ದ 1 ಕೆಜಿ ಚಿನ್ನಾಭರಣ ಕಳ್ಳತನ Read More »

ಈ ತಿಂಗಳಲ್ಲೇ ಬಿಜೆಪಿಗೆ ಹೊಸ ರಾಷ್ಟ್ರೀಯ ಅಧ್ಯಕ್ಷ?

ಜೆ.ಪಿ.ನಡ್ಡಾ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ಹೊಸದಿಲ್ಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್‌ ಪ್ರಕಾಶ್‌ ನಡ್ಡಾ ಅವರ ಉತ್ತರಾಧಿಕಾರಿಯ ಆಯ್ಕೆ ಈ ತಿಂಗಳಲ್ಲೇ ನಡೆಯಲಿದೆ ಎನ್ನಲಾಗಿದೆ. ಏ.4ಕ್ಕೆ ಸಂಸತ್‌ ಅಧಿವೇಶನ ಮುಗಿಯಲಿದ್ದು, ಬಳಿಕ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಬಿಜೆಪಿ ಚುರುಕುಗೊಳಿಸಲಿದೆ. ಬಹುತೇಕ ಏಪ್ರಿಲ್‌ ಮೂರನೇ ವಾರದಲ್ಲಿ ಹೊಸ ಅಧ್ಯಕ್ಷರ ಘೋಷಣೆಯಾಗುವ ಸಾಧ್ಯತೆಯಿದೆ. ಕರ್ನಾಟಕ, ಉತ್ತರ ಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿ ಕೆಲವು ರಾಜ್ಯಗಳ ರಾಜ್ಯಾಧ್ಯಕ್ಷರ ಆಯ್ಕೆ ಬಾಕಿಯಿದ್ದು, ಅದನ್ನು ತ್ವರಿತವಾಗಿ ಮುಗಿಸಿದ ಬಳಿಕ ರಾಷ್ಟ್ರೀಯ

ಈ ತಿಂಗಳಲ್ಲೇ ಬಿಜೆಪಿಗೆ ಹೊಸ ರಾಷ್ಟ್ರೀಯ ಅಧ್ಯಕ್ಷ? Read More »

ಇಂದು ಲೋಕಸಭೆಯಲ್ಲಿ ಮಹತ್ವದ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ

ಪಕ್ಷಗಳಿಂದ ವಿಪ್‌ ಜಾರಿ-ಭಾರಿ ಕೋಲಾಹಲದ ನಿರೀಕ್ಷೆ ನವದೆಹಲಿ: ಈಗಾಗಲೇ ಭಾರಿ ಪ್ರತಿಭಟನೆಗೆ ಕಾರಣವಾಗಿರುವ ಮಹತ್ವದ ವಕ್ಫ್‌ ಮಸೂದೆಯನ್ನು ಕೇಂದ್ರ ಸರಕಾರ ಇಂದು ವಿಪಕ್ಷಗಳು ಮತ್ತು ಮುಸ್ಲಿಮರ ವಿರೋಧದ ನಡುವೆ ಲೋಕಸಭೆಯಲ್ಲಿ ಮಂಡಿಸಲಿದೆ. ಮಧ್ಯಾಹ್ನ 12.15ಕ್ಕೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ವಕ್ಫ್‌ ತಿದ್ದುಪಡಿ ಮಸೂದೆ ಮಂಡಿಸಲಿದ್ದಾರೆ. ಮುಸ್ಲಿಮರು ವಕ್ಫ್‌ ಮಸೂದೆ ತಿದ್ದುಪಡಿಯನ್ನು ವಿರೋಧಿಸುತ್ತಿದ್ದು, ದೇಶದ ಹಲವೆಡೆ ಪ್ರತಿಭಟನೆಯೂ ನಡೆದಿದೆ. ವಕ್ಫ್ ಮಸೂದೆ ಮೇಲಿನ ವಿಸ್ತೃತ ಚರ್ಚೆಗಾಗಿ 8 ಗಂಟೆ ಮೀಸಲು ಇಡಲಾಗಿದೆ. ಈ ಮಸೂದೆಯನ್ನು ಎನ್‌ಡಿಎ

ಇಂದು ಲೋಕಸಭೆಯಲ್ಲಿ ಮಹತ್ವದ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ Read More »

ಡೀಸೆಲ್‌ ಬೆಲೆ ಮತ್ತೊಮ್ಮೆ ಏರಿಕೆ : ಜನರಿಗೆ ಇನ್ನೊಂದು ಬರೆ

ಡೀಸೆಲ್‌ ಮೇಲಿನ ತೆರಿಗೆಯನ್ನು ಶೇ.21.17ಕ್ಕೆ ಹೆಚ್ಚಿಸಿದ ರಾಜ್ಯ ಸರಕಾರ ಬೆಂಗಳೂರು: ರಾಜ್ಯ ಸರ್ಕಾರ ಡೀಸೆಲ್​ ಮೇಲಿನ ತೆರಿಗೆಯನ್ನು ಶೇ.2.73ರಷ್ಟು ಹೆಚ್ಚಳ ಮಾಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಇದರಿಂದ ಡೀಸೆಲ್ ಬೆಲೆ ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಾಗಲಿದೆ. ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಿದೆ. ಈ ಹಿಂದೆ ಶೇ.18.44 ರಷ್ಟು ಇದ್ದ ತೆರಿಗೆ ಶೇ.21.17ಕ್ಕೆ ಏರಿಕೆಯಾಗಿದೆ. ಹಾಲು, ಮೊಸರು ಮತ್ತು ವಿದ್ಯುತ್ ಸಹಿತ ಹಲವು ದರ ಏರಿಕೆ ನಿನ್ನೆಯಿಂದ ಜಾರಿಗೆ ಬಂದಿದ್ದು, ಇದರ ಬೆನ್ನಿಗೆ ದಿಢೀರ್‌ ಎಂದು

ಡೀಸೆಲ್‌ ಬೆಲೆ ಮತ್ತೊಮ್ಮೆ ಏರಿಕೆ : ಜನರಿಗೆ ಇನ್ನೊಂದು ಬರೆ Read More »

ರಸ್ತೆ ದಾಟುತ್ತಿದ್ದಾಗ ಬಾಲಕನಿಗೆ ಕಾರು ಡಿಕ್ಕಿ |  ಬಾಲಕ ಮೃತ್ಯು

ಬ್ರಹ್ಮಾವರ:  ರಸ್ತೆ ದಾಟುತ್ತಿದ್ದ ಶಾಲಾ ಬಾಲಕನಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ಡಿಕ್ಕಿ ಹೊಡೆದ  ಪರಿಣಾಮ ಶಾಲಾ ಬಾಲಕ ಸ್ಥಳದಲ್ಲೇ ಸಾವನಪ್ಪಿದ್ದು, ಮೃತ ವಿದ್ಯಾರ್ಥಿಯನ್ನು ವಂಶಿ ಜಿ ಶೆಟ್ಟಿ ಎಂದು ಪತ್ತೆಹಚ್ಚಲಾಗಿದೆ. ಬಾಲಕ ರಸ್ತೆ ದಾಟುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು,  ತಕ್ಷಣ ಆತನನ್ನು ಮಹೇಶ್ ಎಂಬವರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ರಸ್ತೆ ದಾಟುತ್ತಿದ್ದಾಗ ಬಾಲಕನಿಗೆ ಕಾರು ಡಿಕ್ಕಿ |  ಬಾಲಕ ಮೃತ್ಯು Read More »

error: Content is protected !!
Scroll to Top