ದೇವಸ್ಥಾನಗಳ ಸೇವೆಗಳ ದರ ಏರಿಕೆಯಲ್ಲಿ ಸರಕಾರದ ಪಾತ್ರವಿಲ್ಲ| ದೇವಸ್ಥಾನದ ಹಣ ಮುಸ್ಲಿಂಮರ ಕಲ್ಯಾಣ ನಿಧಿಗೆ ಹೋಗುವುದಾಗಿ ಅಪಪ್ರಚಾರ ಮಾಡುವವರು ಬಹಿರಂಗ ಚರ್ಚೆಗೆ ಬರಲಿ – ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ
ಪುತ್ತೂರು: ಎ ಗ್ರೇಡ್ ದೇವಸ್ಥಾನಗಳಲ್ಲಿ ಸೇವೆಗಳ ಶುಲ್ಕ ಪರಿಷ್ಕರಣೆಯನ್ನು ಅಲ್ಲಿನ ಆಡಳಿತ ಸಮಿತಿಯವರು ಮಾಡಿದ್ದಾರೆ. ಇದರಲ್ಲಿ ಸರಕಾರದ ಪಾತ್ರವಿಲ್ಲ. ದೇವಸ್ಥಾನದ ಹಣ ಮುಸ್ಲಿಂಮರ ಕಲ್ಯಾಣ ನಿಧಿಗೆ ಹೋಗುತ್ತದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅಪಪ್ರಚಾರ ಮಾಡುವವರಲ್ಲಿ ದೇವಸ್ಥಾನದ ಹಣ ಸರಕಾರಕ್ಕೆ ಹೋಗುವ ಬಗ್ಗೆ ದಾಖಲೆಗಳಿದ್ದರೆ ಬಹಿರಂಗ ಚರ್ಚೆಗೆ ಬರಲಿ. ಅವರು ದಾಖಲೆ ಸಹಿತ ಸಾಬೀತು ಮಾಡಲಿ. ಚರ್ಚೆಗೆ ನಾವು ಸಿದ್ದ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ್ ರೈ ಮೇಗಿನಗುತ್ತು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎ […]










