ಸುದ್ದಿ

ಚಲಿಸುತ್ತಿದ್ದ ಬಸ್‌ ಬೆಂಕಿಗಾಹುತಿ : 20 ಪ್ರಯಾಣಿಕರು ಜೀವಂತ ಸುಟ್ಟು ಕರಕಲು

ಖರೀದಿಸಿ ಐದು ದಿನವಷ್ಟೇ ಆಗಿದ್ದ ಬಸ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಅವಘಡ ಜೈಪುರ : ರಾಜಸ್ಥಾನದ ಜೈಸಲ್ಮೇರ್ ಬಳಿ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ 20 ಜನರು ಜೀವಂತ ಸುಟ್ಟು ಕರಕಲಾದ ದಾರುಣ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ. ಹೊಸದಾಗಿ ಖರೀದಿ ಮಾಡಿದ್ದ ಬಸ್‌ ಕೆಲವೇ ಟ್ರಿಪ್‌ಗಳನ್ನಷ್ಟೇ ಮಾಡಿತ್ತು ಎಂದು ತಿಳಿದುಬಂದಿದೆ. ಸಂಜೆ 4 ಗಂಟೆಗೆ ಪ್ರಯಾಣ ಆರಂಭಿಸಿದ ಬಸ್‌ ಹೆದ್ದಾರಿಯಲ್ಲಿ ಚಲಿಸುತ್ತಿರುವಾಗ ಹಿಂಬದಿಯಿಂದ ಹೊಗೆ ಬರಲಾರಂಭಿಸಿದೆ. ಚಾಲಕ ಬಸ್ಸನ್ನು ರಸ್ತೆ […]

ಚಲಿಸುತ್ತಿದ್ದ ಬಸ್‌ ಬೆಂಕಿಗಾಹುತಿ : 20 ಪ್ರಯಾಣಿಕರು ಜೀವಂತ ಸುಟ್ಟು ಕರಕಲು Read More »

ಕುಪ್ವಾರದಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ ಭದ್ರತಾ ಪಡೆ

ನವದೆಹಲಿ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಕುಪ್ವಾರದ ಗಡಿ ನಿಯಂತ್ರಣ ರೇಖೆಯ ಬಳಿ ಒಳನುಸುಳಲು ಪ್ರಯತ್ನ ನಡೆಸುತ್ತಿದ್ದ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದಾರೆ. ಸೋಮವಾರ ರಾತ್ರಿ ಕುಪ್ವಾರದ ಗಡಿ ನಿಯಂತ್ರಣಾ ಕೇಂದ್ರದ ಬಳಿ ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಿದ ಭದ್ರತಾ ಪಡೆ ದಾಳಿ ನಡೆಸಿದ್ದು, ಈ ವೇಳೆ ಗುಂಡಿನ ಚಕಮಕಿ ನಡೆದಿದೆ. ಗಡಿ ಭಾಗದಲ್ಲಿ ಒಳ ನುಸುಳುವಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇಲೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಕುಪ್ವಾರದಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ ಭದ್ರತಾ ಪಡೆ Read More »

ಬೆಂಗಳೂರು ನಗರದ ಅವ್ಯವಸ್ಥೆ: ಕಿರಣ್ ಮಜುಂದಾರ್ ಶಾ ಕಿಡಿ

ಬೆಂಗಳೂರು: ನಗರದಲ್ಲಿನ ಕಸದ ಸಮಸ್ಯೆ, ರಸ್ತೆ ಗುಂಡಿಗಳ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಉದ್ಯಮಿ ಕಿರಣ್ ಮಜುಂದಾರ್ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಅವ್ಯವಸ್ಥೆಗಳ ಬಗ್ಗೆ ಚೀನಾದ ಉದ್ಯಮಿಯೊಬ್ಬರ ಪ್ರಶ್ನೆಯನ್ನು ಉಲ್ಲೇಖ ಮಾಡಿ ಎಕ್ಸ್ ಖಾತೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿರುವುದಾಗಿದೆ‌. ಚೀನಾದ ಉದ್ಯಮಿಯೊಬ್ಬರು ಬಯೇಕಾನ್ ಪಾರ್ಕ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬೆಂಗಳೂರು ನಗರದ ಅವ್ಯವಸ್ಥೆ ಬಗ್ಗೆ ಪ್ರಶ್ನೆ ಕೇಳಿದ್ದರು. ಹೂಡಿಕೆಯನ್ನು ಬೆಂಬಲಿಸಲು ರಾಜ್ಯ ಸರ್ಕಾರ ಸಿದ್ಧವಿಲ್ಲವೇ? ಈ ವಿರುದ್ಧ ಉತ್ತಮ ಗಾಳಿ ಉಳ್ಳ ಭಾರತ

ಬೆಂಗಳೂರು ನಗರದ ಅವ್ಯವಸ್ಥೆ: ಕಿರಣ್ ಮಜುಂದಾರ್ ಶಾ ಕಿಡಿ Read More »

ಪಕ್ಷದ ಶಾಸಕರು ಅಭಿಪ್ರಾಯದ ಮೇಲೆ ಹೈಕಮಾಂಡ್ ತೀರ್ಮಾನ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಪಕ್ಷದ ಶಾಸಕರು ಅಭಿಪ್ರಾಯಗಳನ್ನು ಇಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳುತ್ತದೆ. ಕೆಲವು ಬಾರಿ ಶಾಸರಕ ಅಭಿಪ್ರಾಯ ಕಡಿಮೆ ಅಥವಾ ಹೆಚ್ಚಾದ ಸಮಯದಲ್ಲಿ ಬುದ್ಧಿವಂತಿಕೆಯಿಂಗ ನಿರ್ಣಯಗಳನ್ನು ಪ್ರಕಟ ಮಾಡುತ್ತದೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. RSS ತನ್ನ ಕಾರ್ಯ ಚಟುವಟಿಕೆಗಳನ್ನು ಸರ್ಕಾರಿ ಮತ್ತು ಅನುದಾನಿತ ಶಾಲಾ ವಠಾರಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ನಡೆಸುತ್ತಿರುವುದಕ್ಕೆ ಸಂಬಂಧಿಸಿದ ಹಾಗೆ ಕೇಂದ್ರೀಕೃತ ಮನವಿ ಸಲ್ಲಿಸಿ ಅವರು ಸುದ್ದಿಗಾರರ ಜೊತೆ ಮಾತನಾಡಿದ್ದಾರೆ. ಪಕ್ಷದ ಸಾಮರಸ್ಯಕ್ಕಾಗಿ ಹೈಕಮಾಂಡ್ ನಿರ್ಧಾರಗಳನ್ನು ಅತ್ಯಂತ ಮುಖ್ಯ ಎಂದು

ಪಕ್ಷದ ಶಾಸಕರು ಅಭಿಪ್ರಾಯದ ಮೇಲೆ ಹೈಕಮಾಂಡ್ ತೀರ್ಮಾನ: ಪ್ರಿಯಾಂಕ್ ಖರ್ಗೆ Read More »

ಸುಳ್ಯದ ಯುವಕ ಮಾರಿಷಸ್‌ನಲ್ಲಿ ಮೃತ್ಯು: ಜಲಪಾತ ವೀಕ್ಷಣೆಗೆ ತೆರಳಿದ್ದಾಗ ಕಾಲು ಜಾರಿ ಅವಘಡ

ಸುಳ್ಯ: ಮಾರಿಷಸ್‌ನಲ್ಲಿ ವಿದ್ಯಾರ್ಥಿ ವಿಸಾದಲ್ಲಿದ್ದ ಸುಳ್ಯದ ಯುವಕನೊಬ್ಬ ಜಲಪಾತ ವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತ ಯುವಕನನ್ನು ನಂದನ್ ಎಸ್. ಭಟ್(25) ಎಂದು ಗುರುತಿಸಲಾಗಿದೆ. ಅವರು ಮಾರಿಷಸ್‌ನಲ್ಲಿ ಡಿಪ್ಲೊಮಾ ಇನ್ ಹಾಸ್ಪಿಟಾಲಿಟಿ ಆ್ಯಂಡ್ ಟೂರಿಸಂ ಅಧ್ಯಯನ ಮಾಡುತ್ತಿದ್ದರು. ನಿನ್ನೆ ಜಲಪಾತ ವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮೃತದೇಹವನ್ನು ಅಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಅಲ್ಲಿನ ಸರ್ಕಾರ ಮತ್ತು ಭಾರತ‌ ಸರ್ಕಾರದ ಸಹಾಯದಿಂದ ಸ್ವಗ್ರಾಮಕ್ಕೆ ತರಲು ಅನುಕೂಲ

ಸುಳ್ಯದ ಯುವಕ ಮಾರಿಷಸ್‌ನಲ್ಲಿ ಮೃತ್ಯು: ಜಲಪಾತ ವೀಕ್ಷಣೆಗೆ ತೆರಳಿದ್ದಾಗ ಕಾಲು ಜಾರಿ ಅವಘಡ Read More »

ಬಿಜಿಪಿ ಯಡಿಯೂರಪ್ಪ ಅವರಿಂದ ಮುಕ್ತವಾದರೆ ಮಾತ್ರ ಭವಿಷ್ಯವಿದೆ: ಯತ್ನಾಳ್

ಬೆಂಗಳೂರು: ಬಿಜೆಪಿಯು ಯಡಿಯೂರಪ್ಪ ಅವರ ಹಿಡಿತದಿಂದ ಮುಕ್ತವಾದಲ್ಲಿ ಮಾತ್ರ ಅದಕ್ಕೆ ಭವಿಷ್ಯ ಇದೆ. ನಾನು ಬಿ ಎಸ್‌ ವೈ ಬಗೆಗಿನ ಧೋರಣೆಯಲ್ಲಿ ಮೆತ್ತಗಾಗಿಲ್ಲ. ಹಾಗೆಯೇ, ಅವರ ಜೊತೆಗೆ ರಾಜಿಯೂ ಆಗಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಯಡಿಯೂರಪ್ಪ ಜೊತೆಗೆ ಸಾಫ್ಟ್ ಎನ್ನುವ ಶಬ್ಧ ನನ್ನ ಶಬ್ದ ಕೋಶದಲ್ಲೇ ಇಲ್ಲ. ವರಿಷ್ಠರು ಯಡಿಯೂರಪ್ಪ ಜೊತೆಗೆ ಕ್ಷಮೆ ತೋರುವಂತೆ ಹೇಳಿದರೂ ಕೇಳಲಾರೆ. ಬಿಜೆಪಿಗೆ ಹಿಂದುತ್ವ ಮತ್ತು ಭವಿಷ್ಯ ಬೇಕಾದಲ್ಲಿ ಯಡಿಯೂರಪ್ಪ ಅವರನ್ನು ಕೈ ಬಿಡಲಿ ಎಂದು ಆಗ್ರಹಿಸಿದ್ದಾರೆ.

ಬಿಜಿಪಿ ಯಡಿಯೂರಪ್ಪ ಅವರಿಂದ ಮುಕ್ತವಾದರೆ ಮಾತ್ರ ಭವಿಷ್ಯವಿದೆ: ಯತ್ನಾಳ್ Read More »

ಕಾಂಗ್ರೆಸ್ ಯಾವ ದೇಶಭಕ್ತ ಸಂಘಟನೆಯಲ್ಲಿ ಸೇವೆ ಸಲ್ಲಿಸಿದೆ?: ಬಿ. ವೈ. ವಿಜಯೇಂದ್ರ

ಬೆಂಗಳೂರು: ಅಧಿಕಾರ ಸೃಷ್ಟಿಯ ರಾಜಕಾರಣ ಹೊರತು ಪಡಿಸಿ ಕಾಂಗ್ರೆಸ್ ನಾಯಕರು ಈ ವರೆಗೆ ಯಾವ ದೇಶ ಭಕ್ತ ಸಂಘಟನೆಗಳಲ್ಲಿ ಕಾರ್ಯ ನಿರ್ವಹಿಸಿದ್ದೀರಿ ಎಂದು ಆಧಾರ ಸಹಿತ ತಿಳಿಸುವಂತೆ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ‌ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ‌ಸವಾಲೊಡ್ಡಿದ್ದಾರೆ. ಹಿಂದೂ ಸಂಘಟನೆಗಳ ಮೇಲೆ ವಿರೋಧ ವ್ಯಕ್ತಪಡಿಸುವ ನೀವು ಯಾವಾಗಲಾದರೂ ಕೋಮುವಾದಿ ಸಂಘಟನೆಗಳ ಬಗ್ಗೆ, ಉಗ್ರ ಸಂಘಟನೆಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದೀರಾ?, ಟೀಕೆ ಮಾಡಿದ್ದೀರಾ?. ನಿಮಗೆ ರಾಷ್ಟ್ರ ಭಕ್ತ ಸಂಘಟನೆಗಳ ಸೇವೆ, ಇತಿಹಾಸ ತಿಳಿಯಲು ಹೇಗೆ

ಕಾಂಗ್ರೆಸ್ ಯಾವ ದೇಶಭಕ್ತ ಸಂಘಟನೆಯಲ್ಲಿ ಸೇವೆ ಸಲ್ಲಿಸಿದೆ?: ಬಿ. ವೈ. ವಿಜಯೇಂದ್ರ Read More »

RSS ನಿಷೇಧ ಸರಿಯಾದ ತೀರ್ಮಾನ ಅಲ್ಲ: ಪೇಜಾವರ ಶ್ರೀ

ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧ ಮಾಡುವುದು ಸರಿಯಲ್ಲ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. RSS ನಿಷ್ಪಕ್ಷಪಾತವಾಗಿ ದೇಶ ಸೇವೆ ಮಾಡುತ್ತಿದೆ. ಪ್ರಾಕೃತಿಕ ವಿ ಕೋಪ ಗಳ ಸಂದರ್ಭದಲ್ಲಿ RSS ನೀಡುವ ಸೇವೆಯನ್ನು ಯಾರೂ ಅಲ್ಲಗಳೆಯುವುದು ಅಸಾಧ್ಯ. ಯಾವುದೇ ರೀತಿಯ ನಿರ್ಣಯಗಳನ್ನು ತೆಗೆದುಕೊಳ್ಳುವ ಮೊದಲು ಸರ್ಕಾರ ಅದರ ಲಾಭ ನಷ್ಟಗಳನ್ನು, ಸಾಧಕ ಬಾಧಕಗಳನ್ನು ಆಲೋಚನೆ ಮಾಡಬೇಕು. ಯಾವ ಸಚಿವರೇ ತಮ್ಮ ಅಭಿಪ್ರಾಯ ಮಂಡನೆ ಮಾಡಲಿ. ಆದರೆ ಅಂತಿಮವಾಗಿ ಸಿ

RSS ನಿಷೇಧ ಸರಿಯಾದ ತೀರ್ಮಾನ ಅಲ್ಲ: ಪೇಜಾವರ ಶ್ರೀ Read More »

ಉಡುಪಿ ಸಹಿತ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ

ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್‌ ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ತಮ್ಮ ಕಾರ್ಯಾಚರಣೆ ಚುರುಕುಗೊಳಿಸಿದ್ದು, ಮಂಗಳವಾರ ಬೆಳ್ಳಂಬೆಳಗ್ಗೆ ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯದ ಹಲವು ಸರ್ಕಾರಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಉಡುಪಿ ಸೇರಿದಂತೆ ಬೆಂಗಳೂರು, ದಾವಣಗೆರೆ, ಹಾವೇರಿ, ಹಲವು ಜಿಲ್ಲೆಗಳಲ್ಲಿ ಒಟ್ಟು 12 ಅಧಿಕಾರಿಗಳಿಗೆ ಸೇರಿದ ಸ್ಥಳಗಳಲ್ಲಿ ಅಧಿಕಾರಿಗಳಿಂದ ಶೋಧ ಕಾರ್ಯ ನಡೆಯುತ್ತಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ), ಉಡುಪಿ ಸಾರಿಗೆ

ಉಡುಪಿ ಸಹಿತ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ Read More »

ಖಾಸಗಿ ಬಸ್‌ಗಳ ಟಿಕೆಟ್‌ ದರ ಏರಿಕೆ : ಪ್ರಯಾಣಿಕರಿಗೆ ಬರೆ

ದೀಪಾವಳಿ ರಜೆಯ ಹಿನ್ನೆಲೆಯಲ್ಲಿ ಟಿಕೆಟ್‌ ದರ ಏರಿಸಿಕೊಂಡ ಖಾಸಗಿ ಬಸ್‌ಗಳು ಬೆಂಗಳೂರು: ದೀಪಾವಳಿ ಹಬ್ಬವನ್ನು ಕುಟುಂಬದೊಂದಿಗೆ ಆಚರಿಸಲು ಜನ ಬೆಂಗಳೂರಿನಿಂದ ತಮ್ಮ ಊರುಗಳಿಗೆ ಹೊರಡುತ್ತಿದ್ದು, ಹಬ್ಬದ ಸಂದರ್ಭ ಖಾಸಗಿ ಬಸ್‌ಗಳು ಟಿಕೆಟ್‌ ದರ ದುಪ್ಪಟ್ಟು ಮಾಡಿಕೊಂಡಿವೆ. ಅ.18 ಶನಿವಾರ ಬರುತ್ತದೆ. ಮರುದಿನ ಭಾನುವಾರ ಹೇಗೋ ರಜೆ ಇದೆ. ನಂತರ ಮೂರು ದಿನ ದೀಪಾವಳಿ ಹಬ್ಬವಿದೆ. ಹೀಗೆ ಸಾಲಾಗಿ ರಜೆಗಳು ಬಂದಿರುವುದರಿಂದ ದೂರದ ಊರುಗಳಲ್ಲಿ ದುಡಿಯುತ್ತಿರುವ ಜನ ಅ.17ರ ಶುಕ್ರವಾರ ರಾತ್ರಿಯಿಂದಲೇ ಊರಿಗೆ ಹೊರಡುವ ಪ್ಲಾನ್‌ ಮಾಡಿದ್ದಾರೆ. ಇದೇ

ಖಾಸಗಿ ಬಸ್‌ಗಳ ಟಿಕೆಟ್‌ ದರ ಏರಿಕೆ : ಪ್ರಯಾಣಿಕರಿಗೆ ಬರೆ Read More »

error: Content is protected !!
Scroll to Top