ಸುದ್ದಿ

G.L. ಆಚಾರ್ಯದಲ್ಲಿ ಕರಿಮಣಿ ಮೇಳ: ಕೊನೆಯ 4 ದಿನಗಳಷ್ಟೇ ಬಾಕಿ

ಪುತ್ತೂರು: ನಗರದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜಿ. ಎಲ್. ಆಚಾರ್ಯದಲ್ಲಿ ಕರಿಮಣಿ ಮೇಳ ನಡೆಯುತ್ತಿದ್ದು, ಇನ್ನು ಕೇವಲ ನಾಲ್ಕು ದಿನಗಳ ಕಾಲ ಈ ಮೇಳ ನಡೆಯಲಿದೆ. ನ. 23 ರಂದು ಕರಿಮಣಿ ಮೇಳದ ಕೊನೆಯ ದಿನವಾಗಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ‌ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಈ ಮೇಳದಲ್ಲಿ ಹಳೆಯ ಚಿನ್ನ ಅಥವಾ ಕರಿಮಣಿಯನ್ನು ಹೊಸತರ ಜೊತೆಗೆ ಬದಲಾವಣೆ ಮಾಡುವ ಅವಕಾಶ ಇದ್ದು, 1500 ಕ್ಕೂ ಹೆಚ್ಚು ವಿನ್ಯಾಸಗಳಲ್ಲಿ ಕರಿಮಣಿ ಸರಗಳು ಲಭ್ಯವಿವೆ. ಖರೀದಿಗೆ ಉಡುಗೊರೆಗಳು ಸಹ […]

G.L. ಆಚಾರ್ಯದಲ್ಲಿ ಕರಿಮಣಿ ಮೇಳ: ಕೊನೆಯ 4 ದಿನಗಳಷ್ಟೇ ಬಾಕಿ Read More »

ನಿಷೇಧಿತ ಮಾದಕ ವಸ್ತು ಮಾರಾಟ: ಮುಸ್ತಫಾ ವಶಕ್ಕೆ

ಪುತ್ತೂರು: ಅಕ್ರಮವಾಗಿ ನಿಷೇಧಿತ ಮಾದಕ ವಸ್ತು MDMA ಯನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ನಗರದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಕಬಕದ ಮಹಮ್ಮದ್ ಮುಸ್ತಫಾ(36) ಎಂದು ಗುರುತಿಸಲಾಗಿದೆ. ಆರೋಪಿ ಮುಕ್ರಂಪಾಡಿ ಸಮೀಪದ ಬಾಡಿಗೆ ಮನೆಯೊಂದರಲ್ಲಿ 14 ಗ್ರಾಂ ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದನು. ಆರೋಪಿಯ ವಿರುದ್ಧ ಈಗಾಗಲೇ ಪೋಕ್ಸೋ ಪ್ರಕರಣ ಸಹ ದಾಖಲಾಗಿ, ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಸಹ ಮುಗಿಸಿದ್ದ ಎಂದು ತಿಳಿದು ಬಂದಿದೆ. 2024 ರಲ್ಲಿಯೂ ಈತನ ವಿರುದ್ಧ ಮಾದಕ ವಸ್ತುಗಳನ್ನು ಮಾರಾಟ

ನಿಷೇಧಿತ ಮಾದಕ ವಸ್ತು ಮಾರಾಟ: ಮುಸ್ತಫಾ ವಶಕ್ಕೆ Read More »

ಚೌಕಿಯಲ್ಲಿ ವೇಷ ಕಳಚುತ್ತಿರುವಾಗಲೇ ಯಕ್ಷಗಾನ ಕಲಾವಿದ ಕುಸಿದು ಬಿದ್ದು ಸಾವು

ಮಂದಾರ್ತಿ ಮೇಳದ ಮಹಿಷಾಸುರ ವೇಷಧಾರಿ ಈಶ್ವರ ಗೌಡ ನೆಮ್ಮಾರ್‌ ಮುಖದ ಬಣ್ಣ ತೆಗೆಯುವ ಮುನ್ನವೇ ಸೆಳೆದೊಯ್ದ ವಿಧಿ ಉಡುಪಿ: ಯಕ್ಷಗಾನ ಕಲಾವಿದರೊಬ್ಬರು ಚೌಕಿಯಲ್ಲಿ ಬಣ್ಣ ಕಳಚುತ್ತಿರುವಾಗಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ. ಮಂದಾರ್ತಿ ಮೇಳದ ಬಣ್ಣದ ವೇಷಗಾರ ಈಶ್ವರ ಗೌಡ ನೆಮ್ಮಾರ್‌ ತೀರಿಕೊಂಡಿರುವ ಕಲಾವಿದ. ಕುಂದಾಪುರ ಸಮೀಪ ಸೌಡ ಎಂಬಲ್ಲಿ ನಿನ್ನೆ ರಾತ್ರಿ ದೇವಿ ಮಹಾತ್ಮೆ ಪ್ರಸಂಗ ಯಕ್ಷಗಾನವಿತ್ತು. ಈಶ್ವರ ಗೌಡ ನೆಮ್ಮಾರ್‌ ಮಹಿಷಾಸುರನ ಪಾತ್ರ ಮಾಡಿದ್ದರು. ಪಾತ್ರ ಮುಗಿದ ಬಳಿಕ ತಡರಾತ್ರಿ ಚೌಕಿಯಲ್ಲಿ

ಚೌಕಿಯಲ್ಲಿ ವೇಷ ಕಳಚುತ್ತಿರುವಾಗಲೇ ಯಕ್ಷಗಾನ ಕಲಾವಿದ ಕುಸಿದು ಬಿದ್ದು ಸಾವು Read More »

ಸ್ಕೂಟಿಗೆ ಕಾರು ಡಿಕ್ಕಿ : ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಸಾವು

ಬೆಳ್ತಂಗಡಿ: ಇಂಜಿನಿಯರಿಂಗ್‌ ವಿದ್ಯಾರ್ಥಿನಿಯರು ಸಂಚರಿಸುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ವಿದ್ಯಾರ್ಥಿನಿ ಮೃತಪಟ್ಟು ಮತ್ತೋರ್ವ ವಿದ್ಯಾರ್ಥಿನಿ ಗಂಭೀರ ಗಾಯಗೊಂಡ ಘಟನೆ ಕಾವಳಕಟ್ಟೆ ಸಮೀಪದ ಎನ್.ಸಿ.ರೋಡ್ ಬಳಿ ಬುಧವಾರ ಸಂಭವಿಸಿದೆ. ಕಡಬ ನಿವಾಸಿ ಸುನಿಲ್ ಎಂಬವರ ಪುತ್ರಿ ಅನನ್ಯ (21) ಮೃತ ವಿದ್ಯಾರ್ಥಿನಿ. ಗುರುವಾಯನಕೆರೆ ನಿವಾಸಿ ಪೃಥ್ವಿ ರಾವ್ ಎಂಬವರು ಗಾಯಗೊಂಡಿದ್ದಾರೆ. ಗಾಯಾಳು ವಿದ್ಯಾರ್ಥಿಯನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಇವರಿಬ್ಬರೂ ಮಂಗಳೂರಿನ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಘಟನಾ

ಸ್ಕೂಟಿಗೆ ಕಾರು ಡಿಕ್ಕಿ : ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಸಾವು Read More »

ಧರ್ಮಸ್ಥಳ ಪ್ರಕರಣ : ಬರೋಬ್ಬರಿ 4 ಸಾವಿರ ಪುಟಗಳ ಚಾರ್ಜ್‌ಶೀಟ್‌ ರೆಡಿ

ಇಂದು ನ್ಯಾಯಾಲಯಕ್ಕೆ ಸಲ್ಲಿಕೆ ; ತನಿಖೆ ನಿಲ್ಲಿಸಲು ಬುರುಡೆ ಗ್ಯಾಂಗ್‌ನಿಂದ ಶತ ಪ್ರಯತ್ನ ಧರ್ಮಸ್ಥಳ: ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಬರೋಬ್ಬರಿ 4,000 ಪುಟಗಳ ಚಾರ್ಜ್‌ಶೀಟ್‌ ಸಿದ್ಧಪಡಿಸಿದೆ. ನಾಲ್ಕು ತಿಂಗಳ ಕಾಲ ತನಿಖೆ ನಡೆಸಿರುವ ಪೊಲೀಸರು ಎಲ್ಲ ಅಂಶಗಳನ್ನು ಎಲ್ಲ ಆಯಾಮದಿಂದ ಪರಿಶೀಲಿಸಿದ್ದಾರೆ. ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ ಸಂಬಂಧ ಎಸ್‌ಐಟಿ ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ. ಇಂದು ಬೆಳ್ತಂಗಡಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್

ಧರ್ಮಸ್ಥಳ ಪ್ರಕರಣ : ಬರೋಬ್ಬರಿ 4 ಸಾವಿರ ಪುಟಗಳ ಚಾರ್ಜ್‌ಶೀಟ್‌ ರೆಡಿ Read More »

ಬಂಟ್ವಾಳ : ಬುರ್ಖಾ ಧರಿಸಿಕೊಂಡು ಬಂದು ಜವುಳಿ ಅಂಗಡಿ ಮಾಲಕನ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿದ ಪತ್ನಿ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಂಗಡಿಯಲ್ಲೇ ನಡೆದ ಘಟನೆ ಬಂಟ್ವಾಳ : ಜವುಳಿ ಅಂಗಡಿಗೆ ಮಾರುವೇಷದಲ್ಲಿ ಬಂದ ಪತ್ನಿ ಗಂಡನಿಗೆ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬಿ.ಸಿ.ರೋಡಿನಲ್ಲಿ ಬುಧವಾರ ರಾತ್ರಿ ನಡೆದಿದೆ. ಜವುಳಿ ಅಂಗಡಿ ಮಾಲಕ ಕೃಷ್ಣ ಕುಮಾರ್ ಸೋಮಯಾಜಿ ಎಂಬವರಿಗೆ ಪತ್ನಿ ಜ್ಯೋತಿ ಸೋಮಯಾಜಿ ಎಂಬವರು ಕತ್ತಿಯಿಂದ ಕಡಿದು ಗಾಯಗೊಳಿಸಿದ್ದಾರೆ. ಬಿ.ಸಿ.ರೋಡಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಮೀಪ ಇರುವ ಸೋಮಯಾಜಿ ಟೆಕ್ಸ್‌ಟೈಲ್ಸ್‌ ಮಳಿಗೆಗೆ ನುಗ್ಗಿದ ಜ್ಯೋತಿ ಕ್ಯಾಶ್ ಕೌಂಟರ್‌ನಲ್ಲಿ ಕುಳಿತಿದ್ದ ಗಂಡನಿಗೆ ಪತ್ನಿ ಕತ್ತಿಯಿಂದ ಕಡಿದು

ಬಂಟ್ವಾಳ : ಬುರ್ಖಾ ಧರಿಸಿಕೊಂಡು ಬಂದು ಜವುಳಿ ಅಂಗಡಿ ಮಾಲಕನ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿದ ಪತ್ನಿ Read More »

ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಆರೋಪಿ 19 ವರ್ಷದ ಬಳಿಕ ಸೆರೆ

ಹಳೆ ಮನೆಯನ್ನು ಕೆಡವಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆರೋಪಿ ಮಂಗಳೂರು : ಸುರತ್ಕಲ್‌ನಲ್ಲಿ 2006ರಲ್ಲಿ ನಡೆದ ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಓರ್ವ ಆರೋಪಿಯನ್ನು ಪೊಲೀಸರು ಬರೋಬ್ಬರಿ 19 ವರ್ಷಗಳ ಬಳಿಕ ಸೆರೆ ಹಿಡಿದಿದ್ದಾರೆ. ಡಿಸೆಂಬರ್ 1, 2006ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಬಳಿ ಸುಖಾನಂದ ಶೆಟ್ಟಿಯನ್ನು ಕಬೀರ್ ಮತ್ತು ಆತನ ಸಹಚರರು ಕೊಲೆ ಮಾಡಿದ್ದರು. ಇದು ಕರಾವಳಿಯಲ್ಲಿ ನಡೆದ ಮೊದಲ ಕೋಮುಹತ್ಯೆ ಪ್ರಕರಣವಾಗಿತ್ತು. ಕರಾವಳಿಯಲ್ಲಿ ನಂತರ ನಡೆದ ಅನೇಕ ಕೋಮು ಹಿಂಸಾಚಾರಗಳಿಗೆ ಇದೇ

ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಆರೋಪಿ 19 ವರ್ಷದ ಬಳಿಕ ಸೆರೆ Read More »

ಅಟಲ್‌ ವಿರಾಸತ್‌ ಸಂಪನ್ನ : ವಾಜಪೇಯಿ ಪ್ರೇರಕ ಶಕ್ತಿ ಎಂದು ಬಣ್ಣಿಸಿದ ವಿಜಯೇಂದ್ರ

ಅಟಲ್‌ 100ನೇ ಜನ್ಮದಿನದಂಗವಾಗಿ ನಡೆದ ಅಟಲ್‌ ವಿರಾಸತ್‌ನಿಂದ ಪುತ್ತೂರಿನಲ್ಲಿ ಬಿಜೆಪಿಗೆ ನವಚೈತನ್ಯ ಪುತ್ತೂರು : ಅಟಲ್ ಜೀ ಎಂಬುದು ಪ್ರೇರಕ ಶಕ್ತಿ. ಅವರೊಬ್ಬ ಕವಿಹೃದಯಿ, ಬರಹಗಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು. ಪುತ್ತೂರಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೂರನೇ ಜನ್ಮದಿನದ ಅಂಗವಾಗಿ ಬುಧವಾರ ಏರ್ಪಡಿಸಿದ್ದ ‘ಅಟಲ್ ವಿರಾಸತ್’ ಬೃಹತ್ ಜಿಲ್ಲಾಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು. ಅವರು ಅಜಾತಶತ್ರು, ಮಾತ್ರವಲ್ಲ; ಅವರೊಬ್ಬ ಅಪ್ಪಟ ದೇಶಭಕ್ತ. ಅಟಲ್‍ಜೀ ಅವರು ಕಟ್ಟಿದ ಬಿಜೆಪಿ ಕಾರ್ಯಕರ್ತರಾಗಿರುವುದೇ ನಮಗೆಲ್ಲರಿಗೂ

ಅಟಲ್‌ ವಿರಾಸತ್‌ ಸಂಪನ್ನ : ವಾಜಪೇಯಿ ಪ್ರೇರಕ ಶಕ್ತಿ ಎಂದು ಬಣ್ಣಿಸಿದ ವಿಜಯೇಂದ್ರ Read More »

ಬೆಂಗಳೂರಿನಲ್ಲಿ 7.11 ಕೋ. ರೂ. ದರೋಡೆ : ಸಿಎಂಎಸ್‌ ವಾಹನ ಸಿಬ್ಬಂದಿ ತೀವ್ರ ವಿಚಾರಣೆ

ಹಾಡಹಗಲೇ ನಗರ ಮಧ್ಯದಲ್ಲಿ ನಡೆದ ದರೋಡೆ ಕೃತ್ಯದಿಂದ ಸರ್ಕಾರಕ್ಕೆಎ ತೀವ್ರ ಮುಜುಗರ ಬೆಂಗಳೂರು: ಬೆಂಗಳೂರಿನಲ್ಲಿ ಬುಧವಾರ ಹಾಡಹಗಲೇ ನಡೆದ ಸಿನಿಮೀಯ ಶೈಲಿಯ ದರೋಡೆ ಕೃತ್ಯದಲ್ಲಿ ಸಿಎಂಎಸ್‌ ವಾಹನ ಚಾಲಕ ಮತ್ತು ಸಿಬ್ಬಂದಿ ಮೇಲೆಯೇ ಅನುಮಾನ ಮೂಡಿದೆ. ಎಟಿಎಂಗೆ ಹಣ ತುಂಬುವ ಸಿಎಂಎಸ್‌ ವಾಹನವನ್ನು ಅಡ್ಡಗಟ್ಟಿ 7 ಕೋಟಿ 11 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿರುವ ಘಟನೆಯಿಂದ ಬೆಂಗಳೂರು ನಗರ ಬೆಚ್ಚಿಬಿದ್ದಿದ್ದು, ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ಸರ್ಕಾರಕ್ಕೆ ಈ ದರೋಡೆ ಕೃತ್ಯದಿಂದ ಬಹಳ ಮುಜುಗರವಾಗಿದೆ.

ಬೆಂಗಳೂರಿನಲ್ಲಿ 7.11 ಕೋ. ರೂ. ದರೋಡೆ : ಸಿಎಂಎಸ್‌ ವಾಹನ ಸಿಬ್ಬಂದಿ ತೀವ್ರ ವಿಚಾರಣೆ Read More »

ಅಕ್ಷಯ ಕಾಲೇಜಿನಲ್ಲಿ ಆಧುನಿಕ ಉಪಕರಣಗಳ ಮಾಹಿತಿ ಕಾರ್ಯಾಗಾರ

ಪುತ್ತೂರು: ಅಕ್ಷಯ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ “ಎಲೈಟ್” ಆಂತರಿಕ ವಿನ್ಯಾಸ ಸಂಘ ಹಾಗೂ ಐಕ್ಯೂಎಸಿ ಸಹಭಾಗಿತ್ವದಲ್ಲಿ ಆಂತರಿಕ ವಿನ್ಯಾಸ ವಿಭಾಗದ ವಿದ್ಯಾರ್ಥಿಗಳಿಗೆ “ಆಧುನಿಕ ಉಪಕರಣಗಳು” ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಗಾರ ನಡೆಸಲಾಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ, ಯು-ಮನೆ ಸಂಘದ ಮಾಲಕ ವಾಸ್ತುಶಿಲ್ಪಿ ಅಜೇಯಕೃಷ್ಣಉಪಾಂಗಲ ಇವರು ದೀಪಪ್ರಜ್ವಲನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ,ಆಧುನಿಕ ಉಪಕರಣಗಳ ಬಗೆಗೆ ಮಾಹಿತಿ, ಪ್ರಾಚೀನ ಮತ್ತು ಈಗಿನ ಆಂತರಿಕ ವಿನ್ಯಾಸ ಶೈಲಿ,

ಅಕ್ಷಯ ಕಾಲೇಜಿನಲ್ಲಿ ಆಧುನಿಕ ಉಪಕರಣಗಳ ಮಾಹಿತಿ ಕಾರ್ಯಾಗಾರ Read More »

error: Content is protected !!
Scroll to Top