ಸುದ್ದಿ

ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸೇತುವೆ ಇಂದು ಮೋದಿಯಿಂದ ಉದ್ಘಾಟನೆ

ತಮಿಳುನಾಡಿನ ರಾಮೇಶ್ವರಂನಲ್ಲಿ ನಿರ್ಮಿಸಿದ ಪಂಬನ್‌ ಸೇತುವೆ ನವದೆಹಲಿ: ರಾಮನವಮಿ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಭಾರತದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯನ್ನು ತಮಿಳುನಾಡಿನ ರಾಮೇಶ್ವರಂನಲ್ಲಿ ಉದ್ಘಾಟಿಸಲಿದ್ದಾರೆ. ಪಂಬನ್ ಎಂದು ಕರೆಯಲ್ಪಡುವ ಈ ರೈಲು ಸೇತುವೆಯನ್ನು 550 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.‌ಮಧ್ಯಾಹ್ನ 12 ಗಂಟೆಗೆ ಪಂಬನ್ ಮತ್ತು ರಾಮೇಶ್ವರಂ ನಡುವಿನ ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯನ್ನು ಮೋದಿ ಉದ್ಘಾಟಿಸಲಿದ್ದಾರೆ. ಆ ಮೂಲಕ ಅವರು ರಸ್ತೆ ಸೇತುವೆಯಿಂದ ರೈಲು ಮತ್ತು ಹಡಗು ಸಂಚಾರಕ್ಕೆ […]

ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸೇತುವೆ ಇಂದು ಮೋದಿಯಿಂದ ಉದ್ಘಾಟನೆ Read More »

ವಕ್ಫ್‌ ಮಸೂದೆಗಿನ್ನು ಸುಪ್ರೀಂ ಕೋರ್ಟ್‌ ಅಗ್ನಿಪರೀಕ್ಷೆ

ಅಂಕಿತ ಹಾಕಿದ ರಾಷ್ಟ್ರಪತಿ ದ್ರೌಪದಿ ಮುರ್ಮು ನವದೆಹಲಿ : ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಬೀಳೂವುದರೊಂದಿಗೆ ಅದು ಈಗ ಕಾಯಿದೆಯಾಗಿ ಮಾರ್ಪಟ್ಟಿದೆ. ರಾಷ್ಟ್ರಪತಿಗಳ ಅಂಕಿತ ಪಡೆಯುವ ಮೊದಲು ವಕ್ಫ್ ಮಸೂದೆಯನ್ನು ಎರಡೂ ಸದನಗಳು ಅಂಗೀಕರಿಸಿದ್ದವು. ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಬಿಸಿ ವಾಗ್ವಾದ ನಡೆದ ಸುದೀರ್ಘ ಚರ್ಚೆಯ ನಂತರ ಶುಕ್ರವಾರ ಬೆಳಗ್ಗೆ ರಾಜ್ಯಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲಾಯಿತು. ರಾಜ್ಯಸಭೆಯಲ್ಲಿ ಸುಮಾರು 14 ಗಂಟೆಗಳ ಕಾಲ ಈ ಮಸೂದೆಯ ಬಗ್ಗೆ ಚರ್ಚೆ

ವಕ್ಫ್‌ ಮಸೂದೆಗಿನ್ನು ಸುಪ್ರೀಂ ಕೋರ್ಟ್‌ ಅಗ್ನಿಪರೀಕ್ಷೆ Read More »

ಟಾರ್ಗೆಟ್‌ ರೀಚ್‌ ಮಾಡದ ನೌಕರನಿಗೆ ನಾಯಿಯಂತೆ ನಡೆಯುವ ಶಿಕ್ಷೆ

ಖಾಸಗಿ ಕಂಪನಿ ನೀಡಿದ ಶಿಕ್ಷೆಯ ವೀಡಿಯೊ ವೈರಲ್‌ ಕೊಚ್ಚಿ: ಟಾರ್ಗೆಟ್‌ ರೀಚ್‌ ಮಾಡಲು ಸಾಧ್ಯವಾಗದ ಉದ್ಯೋಗಿಗಳನ್ನು ಕತ್ತಿಗೆ ಸರಪಳಿ ಬಿಗಿದು ನಾಯಿಯಂತೆ ನಡೆಸಿಕೊಂಡು ಹೋದ ಘಟನೆಯೊಂದು ಕೇರಳದಲ್ಲಿ ಸಂಭವಿಸಿದ್ದು, ಕೃತ್ಯದ ವೀಡಿಯೊ ಭಾರಿ ವೈರಲ್‌ ಆಗಿ ಆಕ್ರೋಶಕ್ಕೆ ಗುರಿಯಾಗಿದೆ.ಕೊಚ್ಚಿಯಲ್ಲಿರುವ ಮಾರ್ಕೆಟಿಂಗ್‌ ಕಂಪನಿಯೊಂದು ತನ್ನ ನೌಕರರಿಗೆ ಈ ಶಿಕ್ಷೆ ನೀಡಿದೆ ಎನ್ನಲಾಗಿದೆ. ಕಂಪನಿಯ ಮಾಜಿ ಮ್ಯಾನೇಜರ್‌ ಈ ವೀಡಿಯೊವನ್ನು ಬಹಿರಂಗಪಡಿಸಿದ ಬಳಿಕ ಸರಕಾರದ ಗಮನಕ್ಕೂ ಬಂದಿದೆ. ಟಾರ್ಗೆಟ್‌ ರೀಚ್‌ ಮಾಡಲಾಗದ ನೌಕರರಿಗೆ ಈ ಕಂಪನಿಯ ಮಾಲೀಕ ಈ ರೀತಿಯ

ಟಾರ್ಗೆಟ್‌ ರೀಚ್‌ ಮಾಡದ ನೌಕರನಿಗೆ ನಾಯಿಯಂತೆ ನಡೆಯುವ ಶಿಕ್ಷೆ Read More »

ಯುವತಿ ಮೇಲೆ ಅತ್ಯಾಚಾರ ಎಸಗಿದ ಜೈನ ಮುನಿಗೆ 10 ವರ್ಷ ಜೈಲು

ಗುರು ಎಂದು ಭಾವಿಸಿದಾತನೇ ಎಸಗಿದ ಘೋರ ಕೃತ್ಯ ಅಹಮದಾಬಾದ್: ಎಂಟು ವರ್ಷದ ಹಿಂದೆ 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೈನ ದಿಗಂಬರ ಪಂಥದ ಸನ್ಯಾಸಿ ಶಾಂತಿಸಾಗರ್‌ ಮಹಾರಾಜ್‌ ಎಂಬಾತನಿಗೆ ಸೂರತ್‌ನ ಸೆಶನ್ಸ್ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ 25,000 ರೂ. ದಂಡ ವಿಧಿಸಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಎ.ಕೆ. ಶಾ ಅವರು ಅತ್ಯಾಚಾರ ಎಸಗಿದ ಆರೋಪದ ಮೇಲೆ 56 ವರ್ಷದ ದಿಗಂಬರ ಜೈನಮುನಿ ತಪ್ಪಿತಸ್ಥರೆಂದು ತೀರ್ಪು

ಯುವತಿ ಮೇಲೆ ಅತ್ಯಾಚಾರ ಎಸಗಿದ ಜೈನ ಮುನಿಗೆ 10 ವರ್ಷ ಜೈಲು Read More »

ಆಟೋ – ಕಾರು ಡಿಕ್ಕಿ | ಆಟೋ ಚಾಲಕ ಗಂಭೀರ ಗಾಯ

ಬೆಳ್ತಂಗಡಿ : ಆಟೋ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿ  ಆಟೋ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ವೇಣೂರು ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ನೌಶದ್ ಗಂಭೀರವಾಗಿ ಗಾಯಗೊಂಡ ಆಟೋ ಚಾಲಕ ಎನ್ನಲಾಗಿದೆ. ಕಾರು ಚಾಲಕ ಲಾರಿಯೊಂದನ್ನು ಓವರ್ ಟೇಕ್ ಮಾಡಲು ಹೋಗಿ ಈ ದುರ್ಘಟನೆ ನಡೆದಿದೆ. ಅತಿ ವೇಗದಿಂದ ಕಾರನ್ನು ಚಲಾಯಿಸಿದ ಪರಿಣಾಮ ಎದುರಿನಿಂದ ಬರುತ್ತಿದ್ದ ಆಟೋಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಚಾಲಕನ ನಿಯಂತ್ರಣ ತಪ್ಪಿ ಕಾರು ಮಗುಚಿ ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿರುವ ಆಟೋ ಚಾಲಕನನ್ನು ಮಂಗಳೂರಿನ

ಆಟೋ – ಕಾರು ಡಿಕ್ಕಿ | ಆಟೋ ಚಾಲಕ ಗಂಭೀರ ಗಾಯ Read More »

7 ನೇ ವಾರ “ಭಾವ ತೀರ ಯಾನ’ ಸಿನಿಮಾ | ನಾಳೆ ಸಂಜೆ 3:30 ಕ್ಕೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 6ನೇ ವಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ನಾಳೆ ಏ.6 ಭಾನುವಾರದಂದು ಸಂಜೆ 3:30ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ.

7 ನೇ ವಾರ “ಭಾವ ತೀರ ಯಾನ’ ಸಿನಿಮಾ | ನಾಳೆ ಸಂಜೆ 3:30 ಕ್ಕೆ ಚಿತ್ರ ಪ್ರದರ್ಶನ Read More »

ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಸರಕಾರಿ ಗುತ್ತಿಗೆಯಲ್ಲಿ 4 % ಮೀಸಲಾತಿ | ರದ್ದುಪಡಿಸುವಂತೆ ಹಿಂದೂ ಜನಜಾಗೃತಿ ಸಮಿತಿಯಿಂದ ರಾಜ್ಯಪಾಲರಿಗೆ ಮನವಿ

ಪುತ್ತೂರು: ಕರ್ನಾಟಕ ಸರಕಾರ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಸರಕಾರಿ ಗುತ್ತಿಗೆಯಲ್ಲಿ 4% ಮೀಸಲಾತಿ ನೀಡಿದ್ದನ್ನು ರದ್ದು ಮಾಡುವಂತೆ ಹಿಂದೂ ಜನಜಾಗೃತಿ ಸಮಿತಿ ಆಯುಕ್ತರ ಸಹಾಯಕ ಪೂವಪ್ಪ ಅವರ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿದೆ. ಸರಕಾರದ ಟೆಂಡರ್ ಗಳಲ್ಲಿ ಅಲ್ಪಸಂಖ್ಯಾತರಿಗೆ 4% ಮೀಸಲಾತಿ ನೀಡುವ ಮಸೂದೆಯನ್ನು ಸಹ ಮಂಡಿಸಲಾಗಿದೆ. ಭಾರತದ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲದಿರುವಾಗಲೂ ಸರಕಾರ ಸಂವಿಧಾನಕ್ಕೆ ವಿರುದ್ಧವಾಗಿ ಸಂವಿಧಾನಬಾಹಿರ ಮೀಸಲಾತಿಯನ್ನು ನೀಡಿದೆ. ಇದನ್ನು ರದ್ದುಮಾಡುವಂತೆ ಮನವಿಯಲ್ಲಿ ಸಮಿತಿ ಉಲ್ಲೇಖಿಸಿದೆ. ಕರ್ನಾಟಕ ಸರಕಾರ ಇತ್ತಿಚೇಗೆ ತನ್ನ ಬಜೆಟ್

ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಸರಕಾರಿ ಗುತ್ತಿಗೆಯಲ್ಲಿ 4 % ಮೀಸಲಾತಿ | ರದ್ದುಪಡಿಸುವಂತೆ ಹಿಂದೂ ಜನಜಾಗೃತಿ ಸಮಿತಿಯಿಂದ ರಾಜ್ಯಪಾಲರಿಗೆ ಮನವಿ Read More »

ಯುವತಿಗೆ ಅಶ್ಲೀಲ ಮೆಸೇಜ್ : ಭೇಟಿಯಾಗಲು ಬಂದು ಯುವಕ  ಸ್ಥಳೀಯರ ವಶಕ್ಕೆ  

ವಿಟ್ಲ: ಯುವತಿಯರ ಮೊಬೈಲ್ ನಂಬರ್ ತೆಗೆದುಕೊಂಡು ಅಶ್ಲೀಲ ಮೆಸೇಜ್ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು, ಪೊಲೀಸರಿಗೆ ಒಪ್ಪಿಸಿದ ಘಟನೆ ಕೊಳ್ಳಾಡು ಗ್ರಾಮದ ಕುಡ್ತಮುಗೇರು ಜಂಕ್ಷನ್ ಬಳಿ ನಡೆದಿದೆ. ಯುವತಿರೋರ್ವಳ ನಂಬರ್ ಕೇಳಿದ್ದ ಈತನಿಗೆ ಆಕೆ ಪರಿಚಯದ ಸ್ನೇಹಿತನ ನಂಬರ್‍ ಕೊಟ್ಟಿದ್ದಳು. ಯುವತಿಯ ನಂಬರ್ ಎಂದು ಬಾವಿಸಿ ಯುವಕನಿಗೆ ರಾತ್ರಿಯಿಡಿ ಅಶ್ಲೀಲವಾಗಿ ಮೆಸೆಜ್‍ ಮಾಡಿದ್ದಾನೆ. ಬಳಿಕ ಹುಡುಗಿ ಎಂದು ಭೇಟಿಯಾಗಲು ಬಂದಾಗ ಸ್ಥಳೀಯರು ಆತನನ್ನ ಹಿಡಿದು ಪೊಲೀಸರಿಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ

ಯುವತಿಗೆ ಅಶ್ಲೀಲ ಮೆಸೇಜ್ : ಭೇಟಿಯಾಗಲು ಬಂದು ಯುವಕ  ಸ್ಥಳೀಯರ ವಶಕ್ಕೆ   Read More »

ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ ರಾಂ 118ನೇ ಜಯಂತಿ

ಪುತ್ತೂರು: ಧೀಮಂತ ನಾಯಕ, ರಾಜಕೀಯ, ಸಾಮಾಜಿಕವಾಗಿ ಎಲ್ಲಾ ಅರ್ಹತೆಗಳನ್ನು ಹೊಂದಿ ಬದುಕಿದ ಬಾಬು ಜಗಜ್ಜೀವನ್ ರಾಮ್‍ ಅವರು ಒಂದರ್ಥದಲ್ಲಿ ಸಮಾಜ ಶಕ್ತಿಯಾಗಿದ್ದರು ಎಂದು ಪುತ್ತೂರು ಸರಕಾರಿ ಪ್ರಥಮದರ್ಜೆ ಕಾಲೇಜು ಪ್ರಿನ್ಸಿಪಾಲ್‍ ಸುಬ್ಬಪ್ಪ ಕೈಕಂಬ ಹೇಳಿದರು. ಅವರು ಶನಿವಾರ ಪುತ್ತೂರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಂ ಅವರ 118ನೇ ಜನ್ಮ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು. ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸುವ

ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ ರಾಂ 118ನೇ ಜಯಂತಿ Read More »

ಪಕ್ಷ ವಿರೋಧಿ ಚಟುವಟಿಕೆ ಆರೋಪ | ಮೂವರು ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ. ಸದಸ್ಯರ ಉಚ್ಚಾಟನೆ

ವಿಟ್ಲ :  ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ಬಂಟ್ವಾಳ ತಾಲೂಕಿನ ಕೊಳ್ಳಾಡು ಗ್ರಾಮ ಪಂಚಾಯತ್ ನ ಮೂವರು ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಮುಂದಿನ ಆರು ವರ್ಷದವರೆಗೆ ಉಚ್ಚಾಟನೆ ನಡೆಸಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್ ರವರು ಆದೇಶಿಸಿದ್ದಾರೆ. ಬಂಟ್ವಾಳ ತಾಲೂಕು ಕೊಳ್ಳಾಡು ಗ್ರಾಮ ಪಂಚಾಯತ್ ಸದಸ್ಯರಾದ ಮಹಮ್ಮದ್ ಮಂಚಿ, ರಾಜೇಶ್ ಬಾರಬೆಟ್ಟು, ಎ.ಬಿ.ಅಬ್ದುಲ್ಲಾ ರವರನ್ನು ಪಕ್ಷ ವಿರೋಧಿ ಚಟುವಟಿಕೆಯ ಆರೋಪದಲ್ಲಿ ಉಚ್ಚಾಟಿಸಲ್ಪಟ್ಟವರಾಗಿದ್ದಾರೆ. ಇವರು ನಿರಂತರವಾಗಿ ಪಕ್ಷದ ಹೆಸರನ್ನು ಹೇಳಿಕೊಂಡು ಗ್ರಾಮ

ಪಕ್ಷ ವಿರೋಧಿ ಚಟುವಟಿಕೆ ಆರೋಪ | ಮೂವರು ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ. ಸದಸ್ಯರ ಉಚ್ಚಾಟನೆ Read More »

error: Content is protected !!
Scroll to Top