ಸುದ್ದಿ

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸರಕಾರದಿಂದ ಗ್ಯಾರಂಟಿ ವಾಪಸ್‌ ಪಡೆಯುವ ಅಭಿಯಾನ

ಉಚಿತ ವಿದ್ಯುತ್‌ ಗ್ಯಾರಂಟಿ ಕೈ ಬಿಡುವಂತೆ ಜನರಿಗೆ ಮನವಿ ಶಿಮ್ಲಾ: ಕರ್ನಾಟಕದಂತೆ ಉಚಿತ ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿರುವ ಹಿಮಾಚಲ ಪ್ರದೇಶದ ಕಾಂಗ್ರೆಸ್‌ ಸರಕಾರ ಈಗ ದಿವಾಳಿಯಂಚಿಗೆ ತಲುಪಿದ್ದು, ಆರ್ಥಿಕ ಸ್ಥಿತಿಯ ಚೇತರಿಕೆಗಾಗಿ ಗ್ಯಾರಂಟಿಗಳನ್ನು ಹಿಂದೆಗೆದುಕೊಳ್ಳಲು ಪ್ರಾರಂಭಿಸಿದೆ. ಮೊದಲ ಹಂತವಾಗಿ ರಾಜ್ಯದಲ್ಲಿ ವಿದ್ಯುತ್ ಸಬ್ಸಿಡಿ ವಾಪಸ್ ಅಭಿಯಾನ ಶುರುವಾಗಿದೆ. ಮುಖ್ಯಮಂತ್ರಿ ಸುಖ್ವೀಂದರ್ ಸಿಂಗ್ ಸುಖು ಸ್ವತಃ ತನ್ನ ಐದು ವಿದ್ಯುತ್‌ ಸಂಪರ್ಕಗಳ ಸಬ್ಸಿಡಿಯನ್ನು ವಾಪಸು ನೀಡಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಹಣ ಉಳಿಸುವ […]

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸರಕಾರದಿಂದ ಗ್ಯಾರಂಟಿ ವಾಪಸ್‌ ಪಡೆಯುವ ಅಭಿಯಾನ Read More »

ನೇತ್ರಾವತಿ ಉಪನದಿಯಲ್ಲಿ ಗೋಮಾಂಸ ತ್ಯಾಜ್ಯ : ಧಾರ್ಮಿಕ ಭಾವನೆ ಕೆಡಿಸುವ ಹುನ್ನಾರದ ಆರೋಪ

ಧರ್ಮಸ್ಥಳದಲ್ಲಿ ನೇತ್ರಾವತಿ ಸೇರುವ ಉಪನದಿಯನ್ನು ಮಲಿನಗೊಳಿಸಿದ ದುಷ್ಕರ್ಮಿಗಳು ಧರ್ಮಸ್ಥಳ : ನೇತ್ರಾವತಿಯನ್ನು ಸೇರುವ ಮೃತ್ಯುಂಜಯ ನದಿಗೆ ಗೋಮಾಂಸ ತ್ಯಾಜ್ಯ ಎಸೆದಿರುವ ಕೃತ್ಯದ ಹಿಂದೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹುನ್ನಾರ ಇದೆ ಎಂದು ಆರೋಪಿಸಿರುವ ಹಿಂದು ಸಂಘಟನೆಗಳು ಒಂದು ವಾರದೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿವೆ.ಧರ್ಮಸ್ಥಳದ ಪುಣ್ಯನದಿಯಾಗಿರುವ ನೇತ್ರಾವತಿಯನ್ನು ಗೋ ಹಂತಕರು ಗೋಮಾಂಸ ತ್ಯಾಜ್ಯ ಎಸೆದು ಮಲಿನ ಮಾಡಿದ್ದಾರೆ. ಇದರ ಹಿಂದೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಸ್ಪಷ್ಟ ಉದ್ದೇಶ ಇದೆ ಎಂದು

ನೇತ್ರಾವತಿ ಉಪನದಿಯಲ್ಲಿ ಗೋಮಾಂಸ ತ್ಯಾಜ್ಯ : ಧಾರ್ಮಿಕ ಭಾವನೆ ಕೆಡಿಸುವ ಹುನ್ನಾರದ ಆರೋಪ Read More »

ರೇಷನ್‌ ಕಾರ್ಡ್‌ ತಿದ್ದುಪಡಿ ಅಂತಿಮ ಗಡು ಒಂದು ತಿಂಗಳು ವಿಸ್ತರಣೆ

ಜ.31ರ ತನಕ ಗ್ರಾಮ ಒನ್‌ ಕೇಂದ್ರಗಳಲ್ಲಿ ತಿದ್ದುಪಡಿಗೆ ಅವಕಾಶ ಬೆಂಗಳೂರು : ರೇ‌ಷನ್ ಕಾರ್ಡ್‌ ತಿದ್ದುಪಡಿ ಅಂತಿಮ ಗಡುವನ್ನು ಸರಕಾರ ಒಂದು ತಿಂಗಳು ವಿಸ್ತರಣೆ ಮಾಡಿದೆ. ರೇಷನ್ ಕಾರ್ಡ್‌ ತಿದ್ದುಪಡಿ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದು, ಇನ್ನೂ ಅನೇಕ ಕಾರ್ಡ್‌ಗಳ ತಿದ್ದುಪಡಿ ಬಾಕಿ ಇರುವುದರಿಂದ ಜ.31ರ ತನಕ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈ ಮೊದಲು ರೇಷನ್‌ ಕಾರ್ಡ್‌ ತಿದ್ದುಪಡಿಗೆ ಡಿ.31 ಅಂತಿಮ ಗಡುವು ನೀಡಿತ್ತು. ಆದರೆ ತಿದ್ದಪಡಿಯಲ್ಲೇ ಸಾಕಷ್ಟು

ರೇಷನ್‌ ಕಾರ್ಡ್‌ ತಿದ್ದುಪಡಿ ಅಂತಿಮ ಗಡು ಒಂದು ತಿಂಗಳು ವಿಸ್ತರಣೆ Read More »

ಪುತ್ತೂರು: ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ | ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ

ಮಂಗಳೂರು : ಆಧುನಿಕ ವಿದ್ಯೆಗೆ ಕೊರತೆ ಇಲ್ಲಾ, ನೂರು ವರ್ಷಗಳ ಹಿಂದೆ ದೇಶದಲ್ಲಿ ಸಾಕ್ಷರತೆ ಪ್ರಮಾಣ ಶೇ.5 ಇದ್ದು, ಇದೀಗ ಪ್ರಸ್ತುತ ದಿನಗಳಲ್ಲಿ ಶೇ.80 ಕ್ಕಿಂತಲೂ ಸಾಕ್ಷರತೆ ಸಿಗುತ್ತಿದೆ. ಆಧುನಿಕ ವಿದ್ಯೆಯ ಭರದಲ್ಲಿ ಸಿಲುಕಿ, ಆಧ್ಯಾತ್ಮಿಕ ವಿದ್ಯೆಯನ್ನು ಮರೆಯುತ್ತಿದ್ದೇವೆ ಎಂಬ ಭಯದ ಕಾಲಘಟ್ಟದಲ್ಲಿದ್ದೇವೆ ಎಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಪರಮಪೂಜ್ಯ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು. ಅವರು ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದ ಅಂಗವಾಗಿ ಮಂಗಳೂರಿನ

ಪುತ್ತೂರು: ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ | ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ Read More »

ಬೆಂಕಿ ಅವಘಡ : 60 ಬೈಕ್‌ಗಳು ಸುಟ್ಟು ಕರಕಲು

ಶೋರೂಮ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅನಾಹುತ ಬೆಂಗಳೂರು: ಯಮಹಾ ಬೈಕ್ ಶೋರೂಂ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿ 60ಕ್ಕೂ ಹೆಚ್ಚು ಬೈಕ್‍ಗಳು ಸುಟ್ಟು ಭಸ್ಮವಾದ ಘಟನೆ ಬೆಂಗಳೂರಿನ ಮಹದೇವಪುರದ ಬಿ.ನಾರಾಯಣಪುರದಲ್ಲಿ ನಡೆದಿದೆ. ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. 7 ಗಂಟೆಗೆ ಶೋರೂಂನ ಸಿಬ್ಬಂದಿ ಮನೆಗೆ ತೆರಳಿದ್ದರು. ಅವಘಡದಿಂದ ಶೋರೂಂನಲ್ಲಿದ್ದ ಸುಮಾರು 60ಕ್ಕೂ ಹೆಚ್ಚು ಬೈಕ್ ಸುಟ್ಟು ಭಸ್ಮವಾಗಿವೆ. ಅಲ್ಲದೇ ಶೋ ರೂಂ ಹಿಂಬದಿಯಲ್ಲಿರುವ ಸರ್ವೀಸ್ ಸೆಂಟರ್‌ಗೆ ಸಹ ಬೆಂಕಿ ತಗುಲಿದೆ. ತಕ್ಷಣ

ಬೆಂಕಿ ಅವಘಡ : 60 ಬೈಕ್‌ಗಳು ಸುಟ್ಟು ಕರಕಲು Read More »

ಸಂಕ್ರಾಂತಿ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್‌ ದರ ಹೆಚ್ಚಳ

ನಷ್ಟದಲ್ಲಿರುವ ಸಾರಿಗೆ ಸಂಸ್ಥೆಯನ್ನು ಉಳಿಸಲು ಟಿಕೆಟ್‌ ದರ ಏರಿಕೆ ಅನಿವಾರ್ಯ ಬೆಂಗಳೂರು : ಸಂಕ್ರಾಂತಿ ಹಬ್ಬದ ನಂತರ ಕೆಎಸ್‌ಆರ್‌ಟಿಸಿ ಬಸ್‌ಗಳ ಟಿಕೆಟ್‌ ದರ ಹೆಚ್ಚಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆಗೆ ಸಾರಿಗೆ ಮುಖಂಡರ ‌ಸಭೆ ನಡೆಯಲಿದ್ದು, ಈ ಸಭೆಯಲ್ಲಿ ನಾಲ್ಕು ನಿಗಮಗಳಡಿಯಲ್ಲಿರುವ ಬಸ್​ಗಳ ಟಿಕೆಟ್ ದರ ಏರಿಕೆಗೆ ಅನುಮತಿ ನೀಡುವಂತೆ ಸಾರಿಗೆ ನೌಕರರು ಮನವಿ ಮಾಡಲು ಈಗಾಗಲೇ ‌ಅಂಕಿಅಂಶಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಎಂಟಿಸಿ ಟಿಕೆಟ್ ದರ ಏರಿಕೆ ಮಾಡಿ 10 ವರ್ಷಗಳಾಗಿವೆ. ಕೆಎಸ್ಆರ್​ಟಿಸಿ ಟಿಕೆಟ್

ಸಂಕ್ರಾಂತಿ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್‌ ದರ ಹೆಚ್ಚಳ Read More »

ಜನಜಂಗುಳಿಯ ಮೇಲೆ ಪಿಕಪ್‌ ಟ್ರಕ್‌ ನುಗ್ಗಿಸಿ 15 ಜನರ ಹತ್ಯೆ

ಹೊಸವರ್ಷಾಚರಣೆ ಸಂಭ್ರಮದಲ್ಲಿದ್ದ ಜನರ ಹತ್ಯಾಕಾಂಡ ವಾಷಿಂಗ್ಟನ್‌ : ಹೊಸ ವರ್ಷದ ದಿನದಂದು ದಕ್ಷಿಣ ಅಮೆರಿಕದ ನ್ಯೂ ಓರ್ಲಿಯನ್ಸ್‌ ನಗರದಲ್ಲಿ ಜನಸಂದಣಿ ಮೇಲೆ ಪಿಕಪ್‌ ಟ್ರಕ್ ನುಗ್ಗಿಸಿ ಕನಿಷ್ಠ 15 ಮಂದಿಯನ್ನು ಸಾಯಿಸಲಾಗಿದೆ. ಈ ಘಟನೆಯಲ್ಲಿ 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇತ್ತೀಚೆಗಷ್ಟೇ ಜರ್ಮನಿಯ ಕ್ರಿಸ್‌ಮಸ್‌ ಮಾರುಕಟ್ಟೆಯಲ್ಲಿ ಜನರ ಗುಂಪಿನ ಮೇಲೆ ಕಾರು ಹರಿದು ಇಬ್ಬರು ಮೃತಪಟ್ಟಿದ್ದ ಘಟನೆ ನಡೆದಿತ್ತು. ಇದೀಗ ಅದೇ ಮಾದರಿಯ ಘಟನೆ ಅಮೆರಿಕದಲ್ಲೂ ನಡೆದಿದೆ. ಅತಿ ವೇಗವಾಗಿ ಪಿಕಪ್‌ ಟ್ರಕ್‌ ಚಲಾಯಿಸಿಕೊಂಡು ಬಂದು ಜನಜಂಗುಳಿಯ

ಜನಜಂಗುಳಿಯ ಮೇಲೆ ಪಿಕಪ್‌ ಟ್ರಕ್‌ ನುಗ್ಗಿಸಿ 15 ಜನರ ಹತ್ಯೆ Read More »

ಪ್ರೀತಿಸಿದ ಪ್ರೇಮಿಯನ್ನೇ ಚಾಕುವಿನಿಂದ ಇರಿದ ಯುವತಿ

ಹಾಸನ : ಮನಸಾರೆ ಪ್ರೀತಿಸಿದ ಪ್ರಿಯಕನನ್ನು ಚಾಕುವಿನಿಂದ ಇರಿದ ಘಟನೆ ಹಾಸನ ನಗರದ ಬಿ.ಎಂ ರಸ್ತೆಯಲ್ಲಿರುವ ಖಾಸಗಿ ಹೋಟೆಲ್​ನಲ್ಲಿ ನಡೆದಿದೆ. ಚಾಕುವಿನಿಂದ ಇರಿತಕ್ಕೊಳಗಾದವ 25 ವರ್ಷದ ಮನು ಕುಮಾರ್ ಸ್ಥಿತಿ ಗಂಭೀರವಾಗಿದೆ. ಹಾಸನದ ತಾಲೂಕಿನ ಎ ಗುಡುಗನ ಹಳ್ಳಿ ಗ್ರಾಮದ ಮನುಕುಮಾರ್ ಮತ್ತು ಭವಾನಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಕೆಲ ದಿನಗಳ ಹಿಂದೆ ಮನಸ್ತಾಪ ಮೂಡಿದ್ದರಿಂದ ಪ್ರೀತಿಯಲ್ಲಿ ಬಿರುಕು ಮೂಡಿತ್ತು. ಹೊಸ ವರ್ಷದ ಸಂಭ್ರಮಾಚರಣೆಯ ಸಲುವಾಗಿ ಹೋಟೆಲ್‍ ಹೋಗಿದ್ದ ಮನುವಿಗೆ ಭವಾನಿ ಪದೇ ಪದೇ ಫೋನ್‍ ಮಾಡುತ್ತಿದ್ದಳು.

ಪ್ರೀತಿಸಿದ ಪ್ರೇಮಿಯನ್ನೇ ಚಾಕುವಿನಿಂದ ಇರಿದ ಯುವತಿ Read More »

ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ | ಸ್ಥಳದಲ್ಲೇ ಸಾವನ್ನಪ್ಪಿದ ಸವಾರ

ಉಳ್ಳಾಲ : ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ  ಹಿನ್ನಲೆ ದ್ವಿಚಕ್ರ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಸಂಕೋಲಿಗೆ ಬಳಿ ಮಂಗಳವಾರ ತಡರಾತ್ರಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ದೇರಳಕಟ್ಟೆ ಸಮೀಪದ ಪನೀರ್ ನಿವಾಸಿ ಅಝರ್ ಎಂದು ಗುರುತಿಸಲಾಗಿದೆ. ಮೃತ ಅಝರ್‍ ಸ್ಕೂಟರ್‍ನಲ್ಲಿ ಬರುತ್ತಿದ್ದ ವೇಳೆ ಕೇರಳ ಕಡೆಗೆ ಚಲಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದಿದರಿಂದ ರಸ್ತೆಗೆ ಎಸೆದು ಬಿದ್ದಿದರಿಂದ ದ್ವಿಚಕ್ರ ವಾಹನ ಸವಾರನ ಮೇಲೆ ಲಾರಿ ಚಲಿಸಿದೆ ಎಂದು ತಿಳಿದು ಬಂದಿದೆ.  ಅಝರ್‍ ಮೃತ

ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ | ಸ್ಥಳದಲ್ಲೇ ಸಾವನ್ನಪ್ಪಿದ ಸವಾರ Read More »

ಪ್ರವಾಸಕ್ಕೆಂದು ತೆರಳಿದ ಬಸ್ ಅಪಘಾತದಲ್ಲಿ ಚಿಕಿತ್ಸೆ ಫಲಿಸಿದೆ ಮಹಿಳೆ ಮೃತ್ಯು

ಬಂಟ್ವಾಳ : ಜೋಗ ಜಲಪಾತ ಪ್ರವಾಸಕ್ಕೆಂದು ತೆರಳಿದ್ದ ಬಸ್‍ ಅಪಘಾತಕ್ಕೀಡಾಗಿತ್ತು, ಅಪಘಾತದಲ್ಲಿ ಗಾಯಗೊಂಡ ಪ್ರವಾಸಿಗರು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿದ್ದ ಮಹಿಳೆಯೋರ್ವರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಮೃತಪಟ್ಟ ಮಹಿಳೆ ಶಂಭೂರು ಮುಂಡಜೋರ ನಿವಾಸಿ ಭಾರತಿ (55) ಎಂದು ಗುರುತಿಸಲಾಗಿದೆ. ಡಿ.15 ರಂದು ಬಂಟ್ವಾಳ ತಾಲೂಕಿನ ಶಂಭೂರು ಶ್ರೀ ಸಾಯಿ ಮಂದಿರದಿಂದ ಸುಮಾರು 55 ಮಂದಿ ಖಾಸಗಿ ಬಸ್ ನಲ್ಲಿ ಪ್ರವಾಸಕ್ಕೆಂದು ಜೋಗಜಲಪಾತಕ್ಕೆ ತೆರಳಿದ್ದರು. ಶಂಭೂರು, ಬಿಸಿರೋಡು,ಪಾಣೆಮಂಗಳೂರು ಹಾಗೂ ಮಂಗಳೂರಿನಿಂದ ಬಸ್ ಮೂಲಕ

ಪ್ರವಾಸಕ್ಕೆಂದು ತೆರಳಿದ ಬಸ್ ಅಪಘಾತದಲ್ಲಿ ಚಿಕಿತ್ಸೆ ಫಲಿಸಿದೆ ಮಹಿಳೆ ಮೃತ್ಯು Read More »

error: Content is protected !!
Scroll to Top