ಸುದ್ದಿ

ಬೈಕ್‌ ಸೇತುವೆಗೆ ಡಿಕ್ಕಿ ಹೊಡೆದು ಸವಾರ ಮೃತ್ಯು

ಉಡುಪಿ : ಕಾಪು ಉದ್ಯಾವರ ರಾಷ್ಟ್ರೀಯ ಹೆದ್ದಾರಿ 66ರ ಸೇತುವೆಗೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ನಸುಕಿನ ವೇಳೆ 2.30ರ ಸುಮಾರಿಗೆ ಸಂಭವಿಸಿದೆ. ಮೃತ ಯುವಕನನ್ನು ಸುಬ್ರಹ್ಮಣ್ಯದ ಯುವರಾಜ್ ಎಂದು ಗುರುತಿಸಲಾಗಿದೆ. ಮಂಗಳೂರು ಕಡೆಯಿಂದ ಉಡುಪಿ ಕಡೆ ಬರುತ್ತಿದ್ದ ಬೈಕ್ ಅತಿ ವೇಗ ಹಾಗೂ ಅಜಾಗರೂಕತೆಯಿಂದಾಗಿ ನಿಯಂತ್ರಣ ತಪ್ಪಿ ಸೇತುವೆಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಸವಾರ ಯುವರಾಜ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. […]

ಬೈಕ್‌ ಸೇತುವೆಗೆ ಡಿಕ್ಕಿ ಹೊಡೆದು ಸವಾರ ಮೃತ್ಯು Read More »

ಬ್ಯಾನರ್‌ ಗಲಾಟೆಯಲ್ಲಿ ಸಿಡಿದ ಗುಂಡಿಗೆ ಕಾಂಗ್ರೆಸ್‌ ಕಾರ್ಯಕರ್ತ ಬಲಿ : ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಕೇಸ್‌

ಬ್ಯಾನರ್‌ ಕಟ್ಟುವ ವಿಚಾರದಲ್ಲಿ ರಣರಂಗವಾದ ಬಳ್ಳಾರಿ, ನಿಷೇಧಾಜ್ಞೆ ಜಾರಿ ಬಳ್ಳಾರಿ : ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾದ ಘಟನೆ ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮನೆ ಎದುರು ನಡೆದಿದೆ. ಜನವರಿ 3ರಂದು ವಾಲ್ಮೀಕಿ ಪುತ್ತಳಿ ಅನಾವರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಳ್ಳಾರಿ ನಗರದಾದ್ಯಂತ ಬ್ಯಾನರ್‌ಗಳನ್ನು ಅಳವಡಿಸಲಾಗುತ್ತಿದೆ. ಅದೇ ರೀತಿ ಅವಂಬಾವಿಯ ಜನಾರ್ದನ ರೆಡ್ಡಿ ಅವರ ನಿವಾಸದೆದುರು ಬ್ಯಾನರ್ ಅಳವಡಿಸುವುದನ್ನು ಅವರ ಬೆಂಬಲಿಗರು ವಿರೋಧಿಸಿದ್ದಾರೆ. ಈ ವೇಳೆ ಜನಾರ್ದನ ರೆಡ್ಡಿ

ಬ್ಯಾನರ್‌ ಗಲಾಟೆಯಲ್ಲಿ ಸಿಡಿದ ಗುಂಡಿಗೆ ಕಾಂಗ್ರೆಸ್‌ ಕಾರ್ಯಕರ್ತ ಬಲಿ : ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಕೇಸ್‌ Read More »

ಬೆಂಗಳೂರಿಂದ ಕನ್ಯಾಕುಮಾರಿಗೆ ಸೈಕ್ಲಿಂಗ್ ಮೂಲಕ 702 ಕಿ.ಮೀ. ಕ್ರಮಿಸಿ ಸಾಧನೆ ಮೆರೆದ ಎಸ್. ಸುರೇಶ್ ಕುಮಾರ್

ಬೆಂಗಳೂರು: ನಗರದಿಂದ ಕನ್ಯಾಕುಮಾರಿಯ ವರೆಗೆ ಸುಮಾರು 702 ಕಿ.ಮೀ. ಗಳಷ್ಟು ದೂರವನ್ನು ಬರೋಬ್ಬರಿ 5 ದಿನಗಳಲ್ಲಿ ಸೈಕಲ್ ಮೂಲಕ ಸವಾರಿ ನಡೆಸಿ ಮಾಜಿ ಸಚಿವ, ರಾಜಾಜಿನಗರದ ‌ಶಾಸಕ ಎಸ್. ಸುರೇಶ್ ಕುಮಾರ್ (70) ಸಾರ್ವಜನಿಕರು ಹುಬ್ಬೇರಿಸುವಂತೆ ಸಾಧನೆ ಮೆರೆದಿದ್ದಾರೆ. ಸುರೇಶ್ ಕುಮಾರ್ ಅವರು ಕಳೆದ ವರ್ಷ ಅಪರೂಪದ ನರದ ಸಮಸ್ಯೆಗೆ ತುತ್ತಾಗಿ ಚಿಕಿತ್ಸೆ ಪಡೆದವರು. ಅವರಿಗೆ ತಮ್ಮ ಕೈ ಬೆರಳುಗಳನ್ನು ಅಲುಗಾಡಿಸಲೂ ಸಾಧ್ಯವಿಲ್ಲದೆ ಹಾಸಿಗೆ ಹಿಡಿಯುವ ಸ್ಥಿತಿ ಬಂದಿತ್ತು. ಆದರೆ ಸೂಕ್ತ ಚಿಕಿತ್ಸೆ ಮತ್ತು ತಾನು ಮೊದಲಿನಂತಾಗಬೇಕು

ಬೆಂಗಳೂರಿಂದ ಕನ್ಯಾಕುಮಾರಿಗೆ ಸೈಕ್ಲಿಂಗ್ ಮೂಲಕ 702 ಕಿ.ಮೀ. ಕ್ರಮಿಸಿ ಸಾಧನೆ ಮೆರೆದ ಎಸ್. ಸುರೇಶ್ ಕುಮಾರ್ Read More »

ಬೇರ್ಪಟ್ಟ ತಂದೆ – ತಾಯಿ: ನೊಂದ ಬಾಲಕಿ ಆತ್ಮಹತ್ಯೆ

ಬೆಂಗಳೂರು: ಅಪ್ಪ ಮತ್ತು ಅಮ್ಮ ಜೊತೆಯಾಗಿಲ್ಲ, ಬೇರ್ಪಟ್ಟಿದ್ದಾರೆ ಎಂದು ಮನನೊಂದು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ. ಮೃತಳನ್ನು ಲೇಖನಾ (17) ಎಂದು ಗುರುತಿಸಲಾಗಿದೆ. ಹತ್ತನೇ ತರಗತಿಯಲ್ಲಿ ಫೇಲ್ ಆಗಿದ್ದ ಲೋಕ ನಾ ತನ್ನ ತಾಖಿಯ ಜೊತೆ ವಾಸಿಸುತ್ತಿದ್ದಳು. ಕೌಟುಂಬಿಕ ಕಲಹದಿಂದ ತಂದೆ ಮತ್ತು ತಾಯಿ ಬೇರೆ ಬೇರೆ ವಾಸ ಮಾಡುತ್ತಿದ್ದರು. ಇದರಿಂದ ಬಾಲಕಿ ಮನ ನೊಂದಿದ್ದಳು. ಲೇಖನಾ ಆತ್ಮಹತ್ಯೆಗೂ ಮೊದಲು ಡೆತ್ ನೋಟ್ ಬರೆದಿಟ್ಟಿದ್ದು, ನನಗೆ ತಂದೆ – ತಾಯಿಯ ಪ್ರೀತಿ ಸಿಗುತ್ತಿಲ್ಲ. ನಾನು

ಬೇರ್ಪಟ್ಟ ತಂದೆ – ತಾಯಿ: ನೊಂದ ಬಾಲಕಿ ಆತ್ಮಹತ್ಯೆ Read More »

ನಿಶ್ಚಿತಾರ್ಥವಾಗಿದ್ದ ಯುವತಿಗೆ ಇನ್ಸ್ಟಾಗ್ರಾಮ್‌ನಲ್ಲಿ ಮೆಸೇಜ್: ಯುವಕನ ಹತ್ಯೆ

ಚಿಕ್ಕಮಗಳೂರು: ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಗೆ ಇನ್ಸ್ಟಾ‌ಗ್ರಾಮ್‌ನಲ್ಲಿ ಯುವಕನೊಬ್ಬ ಮೆಸೇಜ್ ಮಾಡುವ ಮೂಲಕ ಕಾಟ ಕೊಟ್ಟಿದ್ದು, ಆತನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತರೀಕೆರೆಯ ಅತ್ತಿಗನಾಳು ಗ್ರಾಮದ ಬಳಿ ನಡೆದಿದೆ. ಮಂಜುನಾಥ್ (21) ಎಂಬವನೇ ಕೊಲೆಯಾದ ಯುವಕ. ಹತ್ಯೆ ಮಾಡಿದ ಆರೋಪಿಯನ್ನು ವೇಣು ಎಂದು ಗುರುತಿಸಲಾಗಿದೆ. ಮಂಜುನಾಥ್‌ಗೆ ಯುವತಿಯೊಬ್ಬಳ ಪರಿಚಯವಾಗಿತ್ತು. ಆಕೆಗೆ ವೇಣು ಎಂಬಾತನ ಜೊತೆ ವಿವಾಹ ನಿಶ್ಚಯವಾಗಿತ್ತು. ಹಾಗಿದ್ದರೂ ಮಂಜುನಾಥ್ ಪದೇ ಪದೇ ಆಕೆಗೆ ಮೆಸೇಜ್ ಮಾಡಿ ಕಿರಿಕಿರಿ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಮೆಸೇಜ್

ನಿಶ್ಚಿತಾರ್ಥವಾಗಿದ್ದ ಯುವತಿಗೆ ಇನ್ಸ್ಟಾಗ್ರಾಮ್‌ನಲ್ಲಿ ಮೆಸೇಜ್: ಯುವಕನ ಹತ್ಯೆ Read More »

ವಿಟ್ಲ: ಭೀಕರ ಅಗ್ನಿ ಅವಘಡದಲ್ಲಿ ಆರಕ್ಕೂ ಅಧಿಕ ಅಂಗಡಿಗಳು ಭಸ್ಮ

ಇಲೆಕ್ಟ್ರಾನಿಕ್ಸ್‌ ಅಂಗಡಿಯಿಂದ ವ್ಯಾಪಿಸಿದ ಬೆಂಕಿಯಿಂದ ಅಪಾರ ನಾಶ ನಷ್ಟ ವಿಟ್ಲ : ನಗರದ ಮಂಗಳೂರು ರಸ್ತೆಯಲ್ಲಿರುವ ಇಲೆಕ್ಟ್ರಾನಿಕ್ಸ್ ಅಂಗಡಿಯೊಂದರಲ್ಲಿ ಬುಧವಾರ ತಡರಾತ್ರಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಆರು ಅಂಗಡಿಗಳು ಸುಟ್ಟುಹೋಗಿವೆ. ಕ್ಷಣಾರ್ಧದಲ್ಲಿ ಐದಾರು ಮಳಿಗೆಗಳಿಗೆಬೆಂಕಿ ಹಬ್ಬಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ. ಸಂತೋಷ್ ಕುಮಾರ್ ಕೊಡಂಗೆ ಎಂಬವರ ಮಾಲಕತ್ವದ ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಅಂಗಡಿಯೊಳಗಿದ್ದ ಇಲೆಕ್ಟ್ರಾನಿಕ್ ಉಪಕರಣಗಳು ಮತ್ತು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ವಸ್ತುಗಳಿದ್ದ ಕಾರಣ ಜ್ವಾಲೆಯ ತೀವ್ರತೆ ಏಕಾಏಕಿ ಹೆಚ್ಚಾಗಿದೆ.

ವಿಟ್ಲ: ಭೀಕರ ಅಗ್ನಿ ಅವಘಡದಲ್ಲಿ ಆರಕ್ಕೂ ಅಧಿಕ ಅಂಗಡಿಗಳು ಭಸ್ಮ Read More »

ಫೆ.1ರಿಂದ ಬೀಡಿ, ಸಿಗರೇಟು, ತಂಬಾಕು ಬಹಳ ದುಬಾರಿ

ಹೊಸ ಸೆಸ್ ವಿಧಿಸಿ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ನವದೆಹಲಿ: ಮುಂಬರುವ ಫೆಬ್ರವರಿ 1ರಿಂದ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಪಾನ್ ಮಸಾಲಾ ಮೇಲೆ ಹೊಸ ಸೆಸ್ ವಿಧಿಸಲಾಗುವುದು ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ವರದಿಯ ಪ್ರಕಾರ ಒಂದು ಫೆ.1ರಿಂದ ಸಿಗರೇಟಿನ ಬೆಲೆ 70 ರೂಪಾಯಿಗೂ ಅಧಿಕವಿರಲಿದೆ. ತಂಬಾಕು ಮತ್ತು ಪಾನ್ ಮಸಾಲಾ ಮೇಲಿನ ಹೊಸ ಸುಂಕಗಳು ಜಿಎಸ್‌ಟಿ ದರಕ್ಕಿಂತ ಹೆಚ್ಚಿರುತ್ತವೆ. ಸರಕುಗಳ ಮೇಲೆ ಪ್ರಸ್ತುತ ವಿಧಿಸಲಾಗುತ್ತಿರುವ ಪರಿಹಾರ ಸೆಸ್ ಅನ್ನು

ಫೆ.1ರಿಂದ ಬೀಡಿ, ಸಿಗರೇಟು, ತಂಬಾಕು ಬಹಳ ದುಬಾರಿ Read More »

ಅನಾರೋಗ್ಯದಿಂದ ಹೂವಿನ ವ್ಯಾಪಾರಿ ನಿಧನ

ಪುತ್ತೂರು: ಉಳ್ಳಾಲ್ತಿ ಫ್ಲವರ್ ಸ್ಟಾಲ್ ಮಾಲಕ, ಪಂಗ್ಲಾಯಿ ನಿವಾಸಿ ಹರೀಶ್ ಯಾನೆ ಹರ್ಷ (47) ಅವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಡಿ. 31 ರಂದು ನಿಧನರಾದರು. ಮೃತರು ತಂದೆ, ತಾಯಿ, ಪತ್ನಿ, ಪುತ್ರಿ, ಸಹೋದರ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಅನಾರೋಗ್ಯದಿಂದ ಹೂವಿನ ವ್ಯಾಪಾರಿ ನಿಧನ Read More »

ಗ್ಯಾಸ್‌ ಸಿಲಿಂಡರ್‌ ಬೆಲೆ 111 ರೂ. ಏರಿಕೆ

ಹೊಸ ವರ್ಷದ ಮೊದಲ ದಿನವೇ ಬೆಲೆ ಏರಿಕೆಯ ಶಾಕ್‌ ನವದೆಹಲಿ : ಹೊಸ ವರ್ಷದ ಮೊದಲ ದಿನವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಕೆ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಪ್ರತಿ ತಿಂಗಳಿನಂತೆ ಈ ಬಾರಿಯೂ ಗೃಹ ಮತ್ತು ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯನ್ನು ನವೀಕರಿಸಲಾಗಿದೆ. ಕಳೆದ ವರ್ಷವಿಡೀ ಬೆಲೆ ಇಳಿಕೆಯಾಗಿತ್ತು. ಇದೀಗ ದರ ಏರಿಕೆಯಾಗಿದೆ. ಇಂಡಿಯನ್ ಆಯಿಲ್ ಪ್ರಕಾರ, ದೆಹಲಿಯಲ್ಲಿ ಇಂದಿನಿಂದ 19 ಕೆಜಿ ಎಲ್‌ಪಿಜಿ ಸಿಲಿಂಡರ್ 1580.50 ರೂ.ಗಳ ಬದಲಿಗೆ 1691.50 ರೂ.ಗಳಿಗೆ ಲಭ್ಯವಾಗಲಿದೆ.

ಗ್ಯಾಸ್‌ ಸಿಲಿಂಡರ್‌ ಬೆಲೆ 111 ರೂ. ಏರಿಕೆ Read More »

ಭಾರತಕ್ಕೂ ಬಂದರಾ ಅನಾಮಿಕ ಶೂಟರ್ಸ್‌? : ಪುಣೆಯಲ್ಲಿ ಬಾಂಬ್‌ ಸ್ಫೋಟ ಆರೋಪಿಯ ಹತ್ಯೆ

ಬೈಕಿನಲ್ಲಿ ಬಂದು ಗುಂಡಿಕ್ಕಿ ಪಲಾಯನ ಮಾಡಿದ ಅಜ್ಞಾತ ದುಷ್ಕರ್ಮಿಗಳು ಪುಣೆ: 2012ರಲ್ಲಿ ಪುಣೆಯಲ್ಲಿ ಸಂಭವಿಸಿದ ಸ್ಫೋಟ ಆರೋಪಿಯನ್ನು ಮಹಾರಾಷ್ಟ್ರದಲ್ಲಿ ಅನಾಮಿಕರು ಗುಂಡಿಕ್ಕಿ ಕೊಂದು ಹಾಕಿದ್ದಾರೆ ಎಂದು ವರದಿಯಾಗಿದೆ. 2012ರ ಪುಣೆ ಸರಣಿ ಸ್ಫೋಟ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಬಂಟಿ ಜಹಗೀರ್ದಾರ್ ಎಂಬಾತನನ್ನು ಬುಧವಾರ ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ಶ್ರೀರಾಂಪುರ ಪಟ್ಟಣದಲ್ಲಿ ಅನಾಮಿಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 50 ವರ್ಷದ ಜಹಗೀರ್ದಾರ್ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೊರಾವಕೆ ಕಾಲೇಜು ರಸ್ತೆಯಲ್ಲಿರುವ ಸ್ಮಶಾನದಿಂದ ದ್ವಿಚಕ್ರ ವಾಹನದಲ್ಲಿ

ಭಾರತಕ್ಕೂ ಬಂದರಾ ಅನಾಮಿಕ ಶೂಟರ್ಸ್‌? : ಪುಣೆಯಲ್ಲಿ ಬಾಂಬ್‌ ಸ್ಫೋಟ ಆರೋಪಿಯ ಹತ್ಯೆ Read More »

error: Content is protected !!
Scroll to Top