ಸುದ್ದಿ

ಕೊಂಬೆಟ್ಟು ರಸ್ತೆಯಲ್ಲಿ ಧರೆಗುರುಳಿದ ಮರ: ವಿದ್ಯುತ್ ಸಂಪರ್ಕ ಕಡಿತ

ಪುತ್ತೂರು: ಇಲ್ಲಿನ ಕೊಂಬೆಟ್ಟು ರಸ್ತೆಯಲ್ಲಿ ಮರವೊಂದು ರಸ್ತೆಗಡ್ಡವಾಗಿ ಧರೆಗುರುಳಿದ್ದು, ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಇದರಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮರ ರಸ್ತೆಗಡ್ಡವಾಗಿ ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಪ್ರಮಾದವಶಾತ್, ಯಾವುದೇ ಅಪಾಯ ಸಂಭವಿಸಿಲ್ಲ. ಈ ಭಾಗದ ಅನೇಕ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ವಿದ್ಯುತ್ ತಂತಿ ಕಡಿದು ಬಿದ್ದಿದೆ. ಇದರಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಕೊಂಬೆಟ್ಟು ರಸ್ತೆಯಲ್ಲಿ ಧರೆಗುರುಳಿದ ಮರ: ವಿದ್ಯುತ್ ಸಂಪರ್ಕ ಕಡಿತ Read More »

ಬೈಕ್‌ನಲ್ಲಿ ಕದ್ರಿ ದೇವಳಕ್ಕೆ ನುಗ್ಗಿದ ನಾಲ್ವರು ಯುವಕರು | ಯುವಕರ ಉದ್ದೇಶದ ಬಗ್ಗೆ ಹಲವು ಅನುಮಾನ

ಮಂಗಳೂರು: ಮಂಗಳೂರಿನ‌ ಪುರಾಣ ಪ್ರಸಿದ್ಧ ಐತಿಹಾಸಿಕ ಕದ್ರಿ ದೇಗುಲಕ್ಕೆ ಅಪರಿಚಿತರು ಬೈಕ್‌ನೊಂದಿಗೆ ನುಗ್ಗಿರುವ ಘಟನೆ ನಡೆದಿದೆ. ಮೂವರು ಯುವಕರು ಬೈಕ್​ನೊಂದಿಗೆಯೇ ದೇವಾಲಯದ ಆವರಣ ಪ್ರವೇಶಿಸಿದ್ದಾರೆ. ಅನುಮಾನಾಸ್ಪದವಾಗಿ ದೇಗುಲ ಪ್ರವೇಶಿಸಿದವರನ್ನು ಸ್ಥಳೀಯರು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಸೈಗೋಳಿ ನಿವಾಸಿಗಳಾದ ಹಸನ್ ಶಾಹಿನ್‌, ಜಾಫರ್‌, ಫಾರೂಕ್‌ನನ್ನು ಕದ್ರಿ ಪೊಲೀಸರಿಗೆ ಒಪ್ಪಿಸಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕದ್ರಿ ಠಾಣೆಯಲ್ಲಿ ವಶಕ್ಕೆ ಪಡೆದಿರುವವರ ತೀವ್ರ ವಿಚಾರಣೆ ನಡೆಯುತ್ತಿದೆ. ಈ ಹಿಂದೆ ಶಂಕಿತ ಉಗ್ರ

ಬೈಕ್‌ನಲ್ಲಿ ಕದ್ರಿ ದೇವಳಕ್ಕೆ ನುಗ್ಗಿದ ನಾಲ್ವರು ಯುವಕರು | ಯುವಕರ ಉದ್ದೇಶದ ಬಗ್ಗೆ ಹಲವು ಅನುಮಾನ Read More »

ಕುಟುಂಬಕ್ಕೆ ಆಧಾರವಾಗಿದ್ದ ಸಹೋದರರಿಗೆ ಅಪಘಾತ | ಚಿಕಿತ್ಸಾ ವೆಚ್ಚ ಭರಿಸಲು ಆರ್ಥಿಕ ಸಹಾಯಕ್ಕೆ ಮೊರೆ

ಪುತ್ತೂರು: ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಟಿಪ್ಪರ್ ಅಪ್ಪಳಿಸಿತ್ತು. ಅಷ್ಟೇ, ಬೈಕಿನಲ್ಲಿದ್ದ ಸಹೋದರರಿಬ್ಬರಿಗೂ ತೀವ್ರ ಸ್ವರೂಪದ ಗಾಯವಾಗಿದ್ದು, ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸೇರಿಸಲಾಯಿತು. ನೆರವಿಗೆ ನಿಲ್ಲಬೇಕಿದ್ದ ತಂದೆ ವಿಕಲಚೇತನ. ಸಹಾಯಕ್ಕೆ ನಿಲ್ಲುವವರಾರು? ಕುಟುಂಬದ ಜವಾಬ್ದಾರಿಗೆ ಹೆಗಲು ಕೊಡುವವರಾರು? ಇಂತಹ ದೈನವೀ ಸ್ಥಿತಿಯಲ್ಲಿ ಸಹೋದರರಿಗೆ ನೆರವಾಗುವಂತೆ ತಾಯಿ ಮನವಿ ಮಾಡಿಕೊಂಡಿದ್ದಾರೆ. ಇದು ಕುಟುಂಬವೊಂದರ ಹೃದಯ ವಿದ್ರಾವಕ ಸ್ಥಿತಿ. ಕಡಬ ತಾಲೂಕಿನ ಕುದ್ಮಾರು ಗ್ರಾಮದ ಪದ್ಮಯ್ಯ ಗೌಡ ಪುಷ್ಪಲತಾ ದಂಪತಿ ಪುತ್ರರಾದ ಮಿಥುನ್ ಹಾಗೂ ಚಿಂತನ್ ಅಪಘಾತಕ್ಕೀಡಾದವರು.

ಕುಟುಂಬಕ್ಕೆ ಆಧಾರವಾಗಿದ್ದ ಸಹೋದರರಿಗೆ ಅಪಘಾತ | ಚಿಕಿತ್ಸಾ ವೆಚ್ಚ ಭರಿಸಲು ಆರ್ಥಿಕ ಸಹಾಯಕ್ಕೆ ಮೊರೆ Read More »

ಮತ ಎಣಿಕೆಯಂದು ಬೆಳಿಗ್ಗೆ 5 ಗಂಟೆಯಿಂದ ಮಧ್ಯರಾತ್ರಿವರೆಗೆ 144 ಸೆಕ್ಷನ್

ಪುತ್ತೂರು: ಮತ ಎಣಿಕೆ ಕಾರ್ಯ ನಡೆಯುವ ಮೇ 13ರಂದು ಬೆಳಿಗ್ಗೆ 5 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ದ.ಕ. ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ದ.ಕ. ಜಿಲ್ಲಾಧಿಕಾರಿ ಎಂ.ಆರ್. ರವಿ ಕುಮಾರ್ ಆದೇಶಿಸಿದ್ದಾರೆ. ಮೇ 13ರ ಬೆಳಗ್ಗೆ 5 ರಿಂದ ರಾತ್ರಿ 12 ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ. ಶವ ಸಂಸ್ಕಾರ, ಮದುವೆ ಅಥವಾ ಧಾರ್ಮಿಕ ಮೆರವಣಿಗೆಗಳಿಗೆ ಹಾಗೂ ಕೋವಿಡ್‌ 19 ಕಾರ್ಯಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು

ಮತ ಎಣಿಕೆಯಂದು ಬೆಳಿಗ್ಗೆ 5 ಗಂಟೆಯಿಂದ ಮಧ್ಯರಾತ್ರಿವರೆಗೆ 144 ಸೆಕ್ಷನ್ Read More »

ತಾಯಿಯಿಂದ ಬೇರ್ಪಟ್ಟಿದ್ದ ಮರಿಯಾನೆ ಆನೆ ಶಿಬಿರದಲ್ಲಿ ಸಾವು

ಸುಳ್ಯ: ಕೆರೆಗೆ ಬಿದ್ದು ತಾಯಿಯಿಂದ ಬೇರ್ಪಟ್ಟಿದ್ದ ಮರಿಯಾನೆ ದುಬಾರೆಯ ಆನೆ ಶಿಬಿರದಲ್ಲಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಸುಳ್ಯದ ಅಜ್ಜಾವರದಲ್ಲಿ ಏಪ್ರಿಲ್ 13ರಂದು ನಾಲ್ಕು ಆನೆಗಳು ಕೆರೆಗೆ ಬಿದ್ದಿದ್ದವು. ಇದರಲ್ಲಿ ಮೂರು ಆನೆಗಳನ್ನು ಮೆಲಕ್ಕೆತ್ತಲಾಗಿತ್ತು. ಮರಿಯಾನೆ ಮಾತ್ರ ಕೆರೆಯಲ್ಲೇ ಬಾಕಿಯಾಗಿದ್ದು, ಸ್ಥಳೀಯರು ರಕ್ಷಿಸಿದ್ದರು. ಆ ವೇಳೆ ಆನೆಗಳ ಹಿಂಡು ಮುಂದಕ್ಕೆ ಸಾಗಿದ್ದರಿಂದ, ಮರಿಯಾನೆ ಬಾಕಿಯಾಗಿತ್ತು. ಮರಿಯಾನೆಯನ್ನು ತನ್ನ ಗುಂಪಿಗೂ ಆನೆಗಳು ಸೇರಿಸಿಕೊಳ್ಳಲಿಲ್ಲ. ತಜ್ಞರ ಅಭಿಪ್ರಾಯದಂತೆ, ಮರಿಯಾನೆಯನ್ನು ದುಬಾರೆ ಆನೆ ಶಿಬಿರಕ್ಕೆ ಕಳುಹಿಸಿಕೊಡಲಾಗಿತ್ತು. ಶಿಬಿರದಲ್ಲಿ ಮರಿಯಾನೆ ಚುರುಕಾಗಿಯೇ ಇತ್ತು. ಆದರೆ

ತಾಯಿಯಿಂದ ಬೇರ್ಪಟ್ಟಿದ್ದ ಮರಿಯಾನೆ ಆನೆ ಶಿಬಿರದಲ್ಲಿ ಸಾವು Read More »

ಇಂದು ರಾಜ್ಯಕ್ಕೆ ಯೋಗಿ ಆದಿತ್ಯನಾಥ್‌ ಭೇಟಿ

ಚುನಾವಣಾ ಪ್ರಚಾರದಲ್ಲಿ ಕೇಂದ್ರದ ನಾಯಕರು ಭಾಗಿ ಬೆಂಗಳೂರು: ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಕೇಂದ್ರ ಸಚಿವರು ಮತ್ತು ಬಿಜೆಪಿಯ ಪ್ರಮುಖ ನಾಯಕರ ದಂಡೇ ರಾಜ್ಯಕ್ಕೆ ಆಗಮಿಸುತ್ತಿದೆ. ವಿವಿಧ ರಾಜ್ಯಗಳ ಸಿಎಂ, ಡಿಸಿಎಂ ಮತ್ತು ಕೇಂದ್ರ ಸಚಿವರು ಆಗಮಿಸುತ್ತಿದ್ದಾರೆ. ಇಂದು ಮಂಡ್ಯ ಮತ್ತು ವಿಜಯಪುರ ಜಿಲ್ಲೆಗೆ ಹಿಂದೂ ಫಯರ್​ ಬ್ರ್ಯಾಂಡ್​ ಲೀಡರ್‌ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಆಗಮಿಸಲಿದ್ದಾರೆ.ಲಖನೌನಿಂದ ಮೈಸೂರಿಗೆ ಆಗಮಿಸುವ ಯೋಗಿ ಆದಿತ್ಯನಾಥ್​​ 11 ಗಂಟೆಗೆ ಮಂಡ್ಯದಲ್ಲಿ ನಡೆಯುವ ರೋಡ್​​ ಶೋ ಮತ್ತು ಪ್ರಚಾರ ಸಭೆಯಲ್ಲಿ ಭಾಗಿಯಾಗುತ್ತಾರೆ.

ಇಂದು ರಾಜ್ಯಕ್ಕೆ ಯೋಗಿ ಆದಿತ್ಯನಾಥ್‌ ಭೇಟಿ Read More »

ಕೋರ್ಟ್ ವಿಚಾರಣೆ ಪೂರ್ಣವಾಗುವವರೆಗೆ ಮುಸ್ಲಿಂ ಮೀಸಲಾತಿ ಬಗ್ಗೆ ನಿರ್ಧಾರ ಇಲ್ಲ : ಸಿಎಂ ಬೊಮ್ಮಾಯಿ

ಬೆಂಗಳೂರು: ಸುಪ್ರೀಂ ಕೋರ್ಟ್ ವಿಚಾರಣೆ ಪೂರ್ಣವಾಗುವವರೆಗೆ ಮುಸ್ಲಿಂ ಮೀಸಲಾತಿ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮುಸ್ಲಿಮರ ಮೀಸಲಾತಿ ಕುರಿತು ಈಗಾಗಲೇ ಸರ್ವೋಚ್ಚ ನ್ಯಾಯಾಲಯದ ಪ್ರಕರಣದ ವಿಚಾರಣೆ ಪೂರ್ಣವಾಗುವವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯವು ಮೇ 9ಕ್ಕೆ ದಿನಾಂಕ ಮುಂದೂಡಿದ್ದು, ಕೋರ್ಟ್‌ನಿಂದ ಯಾವುದೇ ತಡೆಯಾಜ್ಞೆ ಸಿಕ್ಕಿಲ್ಲ ಎಂದರು.ಮುಸ್ಲಿಮರಿಗೆ ವಿರುದ್ಧವಾಗಿ ಈ ಮೀಸಲಾತಿ ಹಂಚಿಕೆ ಇಲ್ಲ. ಈ ಬಗ್ಗೆ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಮುಸ್ಲಿಮರಲ್ಲಿ ಸುಮಾರು 17

ಕೋರ್ಟ್ ವಿಚಾರಣೆ ಪೂರ್ಣವಾಗುವವರೆಗೆ ಮುಸ್ಲಿಂ ಮೀಸಲಾತಿ ಬಗ್ಗೆ ನಿರ್ಧಾರ ಇಲ್ಲ : ಸಿಎಂ ಬೊಮ್ಮಾಯಿ Read More »

ಪಂಜಾಬ್‌ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ನಿಧನ

ಚಂಡೀಗಢ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ, ಶಿರೋಮಣಿ ಅಖಾಲಿದಳದ ನಾಯಕ ಪ್ರಕಾಶ್ ಸಿಂಗ್ ಬಾದಲ್ (95) ನಿನ್ನೆ ರಾತ್ರಿ ನಿಧನರಾಗಿದ್ದಾರೆ.ಮೊಹಾಲಿಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಪ್ರಕಾಶ್ ಸಿಂಗ್ ಬಾದಲ್ ಚಿಕಿತ್ಸೆಗೆ ದಾಖಲಾಗಿದ್ದರು. ಪ್ರಕಾಶ್ ಸಿಂಗ್ ಬಾದಲ್ ನಿಧನ ಸುದ್ದಿಯನ್ನು ಅವರ ಆಪ್ತ ಸಹಾಯಕರು ಹಾಗೂ ಪುತ್ರರು ದೃಢಪಡಿಸಿದ್ದಾರೆ. ಪ್ರಕಾಶ್ ಸಿಂಗ್ ಬಾದಲ್ 5 ಬಾರಿ ಪಂಜಾಬ್‌ ಮುಖ್ಯಮಂತ್ರಿಯಾಗಿದ್ದರು. ಇವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅವರ ಅಂತಿಮ ಸಂಸ್ಕಾರ ಭಟಿಂಡದ ಬಾದಲ್ ಗ್ರಾಮದಲ್ಲಿ ನಡೆಯಲಿದೆ. ಬುಧವಾರ ಬೆಳಗ್ಗೆ ಅವರ ಪಾರ್ಥಿವ

ಪಂಜಾಬ್‌ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ನಿಧನ Read More »

ಮೇ 3 : ಮೂಲ್ಕಿಯಲ್ಲಿ ಮೋದಿ ಬೃಹತ್‌ ಸಾರ್ವಜನಿಕ ಸಭೆ

ಏ. 29 ರಂದು ಮಂಗಳೂರಿನಲ್ಲಿ ಅಮಿತ್‌ ಶಾ ರೋಡ್‌ ಶೋ ಉಡುಪಿ : ಪ್ರಧಾನಿ ನರೇಂದ್ರ ಮೋದಿ ಮೇ 3ರಂದು ಕರಾವಳಿಗೆ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಲಿದ್ದಾರೆ. ಮೂಲ್ಕಿಯಲ್ಲಿ ಪ್ರಧಾನಿಯ ಬೃಹತ್‌ ಸಾರ್ವಜನಿಕ ಸಮಾವೇಶ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ ಶೆಣವ ಹೇಳಿದ್ದಾರೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸೇರಿಸಿ ಒಂದೇ ಸಾರ್ವಜನಿಕ ಸಭೆ ನಡೆಯಲಿದೆ. ಹೀಗಾಗಿ ಮಧ್ಯದಲ್ಲಿರುವ ಮೂಲ್ಕಿಯನ್ನು ಆಯ್ಕೆ ಮಾಡಲಾಗಿದೆ. ಈ ಸಭೆಯಲ್ಲಿ ಸುಮಾರು 2 ಲಕ್ಷ ಜನ ಸೇರುವ ನಿರೀಕ್ಷೆಯಿದೆ

ಮೇ 3 : ಮೂಲ್ಕಿಯಲ್ಲಿ ಮೋದಿ ಬೃಹತ್‌ ಸಾರ್ವಜನಿಕ ಸಭೆ Read More »

ಮೇ, ಜೂನ್​​ನಲ್ಲಿ ತಿರುಪತಿ ದರ್ಶನಕ್ಕೆ ಬರುವ ಭಕ್ತರಿಗೆ ವಿಶೇಷ ಪ್ರವೇಶ ಟಿಕೆಟ್‌ ಬಿಡುಗಡೆ

ತಿರುಪತಿ : ತಿರುಮಲ ತಿರುಪತಿ ದೇವಸ್ಥಾನ (TTD) ಇಂದು ಬೆಳಿಗ್ಗೆ 10:00 ಗಂಟೆಯಿಂದ ಮೇ ಮತ್ತು ಜೂನ್ ತಿಂಗಳಲ್ಲಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ವಿಶೇಷ ಪ್ರವೇಶ ಟಿಕೆಟ್‌ಗಳನ್ನು ಬಿಡುಗಡೆ ಮಾಡಿದೆ. ಟಿಟಿಡಿಯು ವೆಬ್​​ಸೈಟ್​​ನಲ್ಲಿ ತಿಳಿಸಿರುವ ತಿಂಗಳಿನಲ್ಲಿ ತಿರುಮಲದಲ್ಲಿ ವಿಶೇಷ ಮತ್ತು ಹೆಚ್ಚುವರಿ ವಸತಿ ಕೊಠಡಿಗಳನ್ನು ಬಿಡುಗಡೆ ಮಾಡಲಿದೆ. ಮೇ ಮತ್ತು ಜೂನ್‌ನಲ್ಲಿ ತಿರುಮಲಗೆ ಭೇಟಿ ನೀಡಬೇಕಾದರೆ ಟೋಕನ್ ಪಡೆಯಲು ಭಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಕಲ್ಯಾಣೋತ್ಸವ, ಉಂಜಲ್ ಸೇವೆ, ಆರ್ಜಿತ ಬ್ರಹ್ಮೋತ್ಸವಂ

ಮೇ, ಜೂನ್​​ನಲ್ಲಿ ತಿರುಪತಿ ದರ್ಶನಕ್ಕೆ ಬರುವ ಭಕ್ತರಿಗೆ ವಿಶೇಷ ಪ್ರವೇಶ ಟಿಕೆಟ್‌ ಬಿಡುಗಡೆ Read More »

error: Content is protected !!
Scroll to Top