ಸುದ್ದಿ

ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘಕ್ಕೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ | ಅಧ್ಯಕ್ಷರಾಗಿ ಭಾಸ್ಕರ ಎಂ.ಪೆರುವಾಯಿ, ಉಪಾಧ್ಯಕ್ಷರಾಗಿ ದಾಮೋದರ್ ಕುಲಾಲ್ ಆಯ್ಕೆ

ಪುತ್ತೂರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಭಾಸ್ಕರ ಎಂ. ಪೆರುವಾಯಿ, ಉಪಾಧ್ಯಕ್ಷರಾಗಿ ದಾಮೋದರ್ ಕುಲಾಲ್ ಆಯ್ಕೆಗೊಂಡಿದ್ದಾರೆ. ಇತ್ತೀಚೆಗೆ ಸಂಘದ ಎಲ್ಲಾ 11 ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಇದೀಗ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದೆ. ಒಟ್ಟು 11 ಸ್ಥಾನಗಳನ್ನು ಹೊಂದಿರುವ ಸಹಕಾರಿ ಸಂಘದಲ್ಲಿ ಸಾಮಾನ್ಯ ಸ್ನಾನದಿಂದ ಹಾಲಿ ಉಪಾಧ್ಯಕ್ಷ ದಾಮೋದರ ಕುಲಾಲ್, ಹಾಲಿ ನಿರ್ದೇಶಕರಾದ ನಾಗೇಶ್ ಕುಲಾಲ್, ಪದ್ಮ ಕುಮಾರ್ ಎಚ್, ಬಿ.ಎಸ್ ಕುಲಾಲ್, […]

ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘಕ್ಕೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ | ಅಧ್ಯಕ್ಷರಾಗಿ ಭಾಸ್ಕರ ಎಂ.ಪೆರುವಾಯಿ, ಉಪಾಧ್ಯಕ್ಷರಾಗಿ ದಾಮೋದರ್ ಕುಲಾಲ್ ಆಯ್ಕೆ Read More »

ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ 10 ಲ.ರೂ. ಮೌಲ್ಯದ ಚಿನ್ನಾಭರಣ ಕಳ್ಳತನ

ಬಂಟ್ವಾಳ : ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಬ್ಯಾಗ್‌ನಲ್ಲಿದ್ದ 10.08 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 3000 ರೂಪಾಯಿ ನಗದು ಕಳ್ಳತನವಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಯಲಹಂಕ ನ್ಯೂಟೌನ್ ನಿವಾಸಿ ರಾಜಗೋಪಾಲ್ ಕಾರಂತ್ (68) ಎಂಬವರು ಪತ್ನಿಯ ತವರು ಮನೆಯಾದ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆ ಮಾಡ್‌ಗೆ ಕುಟುಂಬದ ಕಾರ್ಯಕ್ರಮಕ್ಕೆಂದು ಫೆಬ್ರವರಿ 1ರಂದು ರಾತ್ರಿ ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಕೆಎಸ್‌ಆರ್‌ಟಿಸಿ ಬಸ್‌ಗೆ ಪತ್ನಿ ಮತ್ತು ಅಳಿಯನೊಂದಿಗೆ ಮನೆಯಿಂದ ಚಿನ್ನವನ್ನು ಬಾಕ್ಸ್‌ನಲ್ಲಿ

ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ 10 ಲ.ರೂ. ಮೌಲ್ಯದ ಚಿನ್ನಾಭರಣ ಕಳ್ಳತನ Read More »

ಕೆರೆಗೆ ಈಜಲು ಹೋದ ಗೆಳೆಯರು ನೀರು ಪಾಲು

ಹಾಸನ : ಈಜಲೆಂದು ಕೆರೆಗೆ ಇಳಿದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಜಿನ್ನಾಪುರ ಗ್ರಾಮದಲ್ಲಿ ನಡೆದಿದ್ದು,ಮೃತಪಟ್ಟ ಯುವಕರನ್ನು ಯಶ್ವಂತ್ ಸಿಂಗ್ ಅಲಿಯಾಸ್ ಗಣೇಶ್ (29), ರೋಹಿತ್ (28) ಎನ್ನಲಾಗಿದೆ. ಮೃತ ಗಣೇಶ್ ಮತ್ತು ರೋಹಿತ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಭಾನುವಾರ ಕೆಲಸ ಮುಗಿಸಿ ಇಬ್ಬರು ಸಂಜೆ ಕೆರೆಗೆ ಈಜಲು ತೆರಳಿದ್ದರು. ಮೊದಲು ರೋಹಿತ್ ಕೆರೆಗೆ ಇಳಿದಿದ್ದಾನೆ. ಈ ವೇಳೆ ಕೆರೆಯಲ್ಲಿ ಬೆಳೆದಿದ್ದ ಬಳ್ಳಿಗಳು ರೋಹಿತ್ ಕಾಲಿಗೆ ಸುತ್ತಿಕೊಂಡಿದೆ. ರೋಹಿತ್ ಕೆರೆಯಿಂದ ಮೇಲೆ ಬರಲಾರದೇ ಕಿರುಚಾಡಿದಾಗ

ಕೆರೆಗೆ ಈಜಲು ಹೋದ ಗೆಳೆಯರು ನೀರು ಪಾಲು Read More »

ಮಹಾಮಂಡಲೇಶ್ವರ ಪಟ್ಟದಿಂದ ಒಂದೇ ವಾರದಲ್ಲಿ ಮಮತಾ ಕುಲಕರ್ಣಿ ಕಿಕ್‌ಔಟ್‌

ಬಾಲಿವುಡ್‌ ನಟಿಯನ್ನು ಪರಮೋಚ್ಚ ಪದವಿಯಿಂದ ಕಿತ್ತು ಹಾಕಿದ್ದು ಯಾಕೆ ಗೊತ್ತಾ? ಪ್ರಯಾಗ್‌ರಾಜ್‌: ಬಾಲಿವುಡ್‌ನ ಒಂದು ಕಾಲದ ಗ್ಲಾಮರ್‌ ನಟಿ ಮಮತಾ ಕುಲಕರ್ಣಿ ಮಹಾಕುಂಭಮೇಳದಲ್ಲಿ ಕಿನ್ನರ ಅಖಾಡದ ಮಹಾಮಂಡಲೇಶ್ವರ ಆಗಿ ಪಟ್ಟಾಭಿಷಿಕ್ತರಾದ ಸುದ್ದಿ ಕಳೆದ ವಾರ ಭಾರಿ ವೈರಲ್‌ ಆಗಿತ್ತು. ಆದರೆ ಒಂದೇ ವಾರದಲ್ಲಿ ಈ ಪಟ್ಟದಿಂದ ಅವರನ್ನು ಕೆಳಗಿಳಿಸಲಾಗಿದೆ. 90ರ ದಶಕದಲ್ಲಿ ಬಾಲಿವುಡ್‌ನಲ್ಲಿ ಸಖತ್‌ ಮಿಂಚುತ್ತಿದ್ದ ಮಮತಾ ಕುಲಕರ್ಣಿ ಸೆಕ್ಸಿ ನಟಿ ಎಂದೇ ಅರಿಯಲ್ಪಡುತ್ತಿದ್ದರು. ಇಂಥ ನಟಿ ಏಕಾಏಕಿ ಸನ್ಯಾಸ ಸ್ವೀಕರಿಸಿದ್ದೂ ಅಲ್ಲದೆ ಪ್ರಮುಖ ಅಖಾಡವಾದ ಕಿನ್ನರ

ಮಹಾಮಂಡಲೇಶ್ವರ ಪಟ್ಟದಿಂದ ಒಂದೇ ವಾರದಲ್ಲಿ ಮಮತಾ ಕುಲಕರ್ಣಿ ಕಿಕ್‌ಔಟ್‌ Read More »

ಆನಡ್ಕ –ಪುತ್ತೂರು ಬಸ್‍ ಸ್ಥಗಿತ | ವಿದ್ಯಾರ್ಥಿಗಳ ಪರದಾಟ| ನಾಳೆಯೇ ಪ್ರತಿಭಟನೆ ಮಾಡುತ್ತೇವೆ : ಸಾರ್ವಜನಿಕರ ಎಚ್ಚರಿಕೆ

ಪುತ್ತೂರು : ಶಾಂತಿಗೋಡು ಗ್ರಾಮದ ಆನಡ್ಕಕ್ಕೆ ಬೆಳಿಗ್ಗಿನ ಹೊತ್ತು ಇರುವುದೊಂದೇ ಸರಕಾರಿ ಬಸ್. ದಿನದಲ್ಲಿ ಒಂದು ಸರಕಾರಿ ಬಸ್ ಒಡಾಟ. ಅದೂ ಬೆಳಗ್ಗಿನ ಹೊತ್ತು ಮಾತ್ರ. ಆದರೆ ಕೇವಲ ಒಂದೇ ಬಸ್ ಇದ್ದರೂ ಬರುವುದು ಮಾತ್ರ ವಾರಕ್ಕೊಮ್ಮೆ. ಬಂದರೆ ಬಂತು ಇಲ್ಲದಿದ್ದರೆ ಇಲ್ಲ. ಪರಿಣಾಮ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಈ ಭಾಗಕ್ಕೆ ಬೆಳಗ್ಗೆ 8:00 ಗಂಟೆಗೆ ಬಸ್ ಒಡಾಟ ನಡೆಯುತ್ತಿದೆ. ಈ ಭಾಗದಿಂದ ಸುಮಾರು 80 ರಿಂದ 100 ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ದಾರೆ.

ಆನಡ್ಕ –ಪುತ್ತೂರು ಬಸ್‍ ಸ್ಥಗಿತ | ವಿದ್ಯಾರ್ಥಿಗಳ ಪರದಾಟ| ನಾಳೆಯೇ ಪ್ರತಿಭಟನೆ ಮಾಡುತ್ತೇವೆ : ಸಾರ್ವಜನಿಕರ ಎಚ್ಚರಿಕೆ Read More »

ಉಡುಪಿಯ ಉದ್ಯಮಿಗೆ 89 ಲ.ರೂ. ವಂಚಿಸಿದಾತ ಸೆರೆ

ಡಿಜಿಟಲ್‌ ಅರೆಸ್ಟ್‌ ಮಾಡಿರುವುದಾಗಿ ಹೇಳಿ ಹಣ ಲಪಟಾಯಿಸಿದ್ದ ಖದೀಮ ಉಡುಪಿ : ಉಡುಪಿಯ ಉದ್ಯಮಿಯೊಬ್ಬರಿಗೆ ಡಿಜಿಟಲ್ ಅರೆಸ್ಟ್ ಮಾಡಿರುವುದಾಗಿ ಬೆದರಿಸಿ 89‌ ಲಕ್ಷ ರೂ. ಲಪಟಾಯಿಸಿದ ಪ್ರಕರಣದ ಆರೋಪಿಯನ್ನು ಉಡುಪಿ ಸೆನ್ ಪೊಲೀಸರು ಧಾರವಾಡದಲ್ಲಿ ಬಂಧಿಸಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ್ ನಿವಾಸಿ ಕಿರಣ್ (24) ಬಂಧಿತ ಆರೋಪಿ. ಈತನಿಂದ 7 ಲಕ್ಷ ರೂ. ನಗದು ಮತ್ತು ಮೊಬೈಲ್‌ ಫೋನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉಡುಪಿಯ ಜ್ಯುವೆಲ್ಲರಿ ಅಂಗಡಿ ಮಾಲೀಕರೊಬ್ಬರಿಗೆ ಸೆ.11ರಂದು ಕರೆ ಮಾಡಿ ಅಕ್ರಮ ಜಾಹೀರಾತು, ಸಂದೇಶ ಕಳುಹಿಸಿರುವುದಕ್ಕೆ

ಉಡುಪಿಯ ಉದ್ಯಮಿಗೆ 89 ಲ.ರೂ. ವಂಚಿಸಿದಾತ ಸೆರೆ Read More »

ಕುಂಭಮೇಳ ಕಾಲ್ತುಳಿತಕ್ಕೆ ಷಡ್ಯಂತ್ರ : 16 ಸಾವಿರ ಮೊಬೈಲ್‌ ನಂಬರ್‌ಗಳ ತನಿಖೆ

ಕೆಲವು ಮೊಬೈಲ್‌ ಫೋನ್‌ಗಳ ದಿಢೀರ್‌ ಸ್ವಿಚ್‌ ಆಫ್‌ ಆಗಿರುವುದರಿಂದ ಅನುಮಾನ ಪ್ರಯಾಗ್‌ರಾಜ್‌ : ಮಹಾಕುಂಭಮೇಳದಲ್ಲಿ ಜನವರಿ 29ರಂದು ಸಂಭವಿಸಿದ ಕಾಲ್ತುಳಿತ ದುರ್ಘಟನೆಯ ಹಿಂದೆ ಸಂಚಿನ ಅನುಮಾನ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ತನಿಖಾ ತಂಡ ಆ ದಿನ ಆ ಪ್ರದೇಶದಲ್ಲಿದ್ದ ಸುಮಾರು 16 ಸಾವಿರ ಮೊಬೈಲ್‌ ನಂಬರ್‌ಗಳನ್ನು ತನಿಖೆ ಮಾಡಲು ಮುಂದಾಗಿದೆ. ಅಂದು ಅಲ್ಲಿ ಚಾಲ್ತಿಯಲ್ಲಿದ್ದ ಕೆಲವು ನಂಬರ್‌ಗಳು ದುರ್ಘಟನೆ ಸಂಭವಿಸಿದ ಬಳಿಕ ಸ್ವಿಚ್‌ ಆಫ್‌ ಆಗಿರುವುದು ಅನುಮಾನ ಉಂಟು ಮಾಡಿದೆ. ಹೀಗಾಗಿ 16 ಸಾವಿರಕ್ಕೂ ಅಧಿಕ ಮೊಬೈಲ್‌

ಕುಂಭಮೇಳ ಕಾಲ್ತುಳಿತಕ್ಕೆ ಷಡ್ಯಂತ್ರ : 16 ಸಾವಿರ ಮೊಬೈಲ್‌ ನಂಬರ್‌ಗಳ ತನಿಖೆ Read More »

ನೇಹಾ ಹತ್ಯೆ ಕೇಸ್‌ ಮತ್ತೆ ಮುನ್ನೆಲೆಗೆ : ಸಿಬಿಐ ತನಿಖೆಗೆ ಒತ್ತಾಯ

ಶಾಸಕರು ಸೇರಿ ಕೆಲವು ಪ್ರಭಾವಿಗಳ ಕೈವಾಡವಿರುವ ಆರೋಪ ಬೆಂಗಳೂರು: ಕಳೆದ ವರ್ಷ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಹತ್ಯೆ ನಡೆದು ಒಂಬತ್ತು ತಿಂಗಳಾದರೂ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿರುವ ನೇಹಾಳ ತಂದೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ನೇಹಾಳ ಹಂತಕನಿಗೆ ಇನ್ನೂ ಶಿಕ್ಷೆಯಾಗಿಲ್ಲ. 4 ತಿಂಗಳಲ್ಲಿ ನೇಹಾಳ ಸಾವಿಗೆ ನ್ಯಾಯ ಕೊಡಿಸುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಿತ್ತು. ಆದರೆ ನ್ಯಾಯ ದೊರೆತಿಲ್ಲ. ನೇಹಾ ಕೊಲೆ ಹಿಂದೆ

ನೇಹಾ ಹತ್ಯೆ ಕೇಸ್‌ ಮತ್ತೆ ಮುನ್ನೆಲೆಗೆ : ಸಿಬಿಐ ತನಿಖೆಗೆ ಒತ್ತಾಯ Read More »

ಕುದುರೆಮುಖ ಅದಿರು ಕಾರ್ಖಾನೆ ಮುಚ್ಚಲು ಕಾಂಗ್ರೆಸ್‌ ವ್ಯವಸ್ಥಿತ ಷಡ್ಯಂತ್ರ : ಕುಮಾರಸ್ವಾಮಿ

ಬೆಂಗಳೂರು: ನನ್ನ ಮೇಲಿನ ರಾಜಕೀಯ ಹಗೆತನದಿಂದ ಕರ್ನಾಟಕದ ಪ್ರತಿಷ್ಠಿತ ಕೈಗಾರಿಕೆ, ಅಸಂಖ್ಯಾತರಿಗೆ ಉದ್ಯೋಗ ಕಲ್ಪಿಸಿದ್ದ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯ ಮಂಗಳೂರು ಕಾರ್ಖಾನೆಯನ್ನು ಮುಚ್ಚಿಸಲು ರಾಜ್ಯದ ಕಾಂಗ್ರೆಸ್ ಸರಕಾರ ಷಡ್ಯಂತ್ರ ನಡೆಸಿದೆ ಎಂದು ಕೇಂದ್ರದ ಸಚಿವ ಎಚ್. ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.ನಾನು ಕೇಂದ್ರ ಮಂತ್ರಿಯಾಗಿ ಏಳು ತಿಂಗಳಾಯಿತು. ನನ್ನ ಎರಡೂ ಇಲಾಖೆಗಳ ಎಲ್ಲ ಕಾರ್ಖಾನೆ, ಕಂಪನಿಗಳಿಗೆ ಭೇಟಿ ನೀಡಿದ್ದೇನೆ. ನನ್ನ ಮನವಿಗಳನ್ನು ಪ್ರಧಾನಿ ಮೋದಿ ಅವರು ದೊಡ್ಡ ಮನಸ್ಸಿನಿಂದ ಪುರಸ್ಕರಿದ್ದಾರೆ. ಆದರೆ ಕರ್ನಾಟಕಕ್ಕೆ ಇಂತಹದ್ದು

ಕುದುರೆಮುಖ ಅದಿರು ಕಾರ್ಖಾನೆ ಮುಚ್ಚಲು ಕಾಂಗ್ರೆಸ್‌ ವ್ಯವಸ್ಥಿತ ಷಡ್ಯಂತ್ರ : ಕುಮಾರಸ್ವಾಮಿ Read More »

ವೀರಕಂಭ: ಮನೆಯ ಅಂಗಳಕ್ಕೆ  ಅಕ್ರಮ ಪ್ರವೇಶ ಮಾಡಿ ದಾಂದಲೆ ನಡೆಸಿ ಯುವಕನ ಮೇಲೆ ಹಲ್ಲೆ | 6 ವರ್ಷದ ಮಗುವಿನ ಮೇಲೆ ಹಲ್ಲೆ ನಡೆಸಿದ ಕಿರಾತಕ ಆರೋಪಿ ಮೋಹನ್ ವಿರುದ್ಧ ಪ್ರಕರಣ ದಾಖಲು

ವೀರಕಂಭ: ಮನೆ ಬಾಗಿಲಿಗೆ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ಸದಸ್ಯರ ಮೇಲೆ ಹಲ್ಲೆ ನಡೆಸಿ  “ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಮೈರ ಎಂಬಲ್ಲಿ ನಡೆದಿದೆ. ವೀರಕಂಬ ಗ್ರಾಮದ ಮೈರ ನಿವಾಸಿ ಯತೀಶ ಎಮ್ ಸಿ ಎಂಬವರು ಜ.31  ರಂದು ರಾತ್ರಿ 8:00 ಗಂಟೆಗೆ  ಅವರ ಮನೆಯ ಅಂಗಳದಲ್ಲಿ ಮಗುವಿನ ಜೊತೆ ಆಟವಾಡುತ್ತಿರುವಾಗ ಮೋಹನ ಗೌಡ ಎಂಬಾತನು ಏಕಾ ಏಕಿಯಾಗಿ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಅವರ ಮೇಲೆ ಹಿಗ್ಗಾ ಮುಗ್ಗ ಹಲ್ಲೆ

ವೀರಕಂಭ: ಮನೆಯ ಅಂಗಳಕ್ಕೆ  ಅಕ್ರಮ ಪ್ರವೇಶ ಮಾಡಿ ದಾಂದಲೆ ನಡೆಸಿ ಯುವಕನ ಮೇಲೆ ಹಲ್ಲೆ | 6 ವರ್ಷದ ಮಗುವಿನ ಮೇಲೆ ಹಲ್ಲೆ ನಡೆಸಿದ ಕಿರಾತಕ ಆರೋಪಿ ಮೋಹನ್ ವಿರುದ್ಧ ಪ್ರಕರಣ ದಾಖಲು Read More »

error: Content is protected !!
Scroll to Top