ನಿಧನ

ಸಮಾಜ ಸೇವಕ ವಿಶ್ವನಾಥ ಗೌಡ ನಿಧನ

ಪುತ್ತೂರು: ಸಮಾಜ ಸೇವಕ ವಿಶ್ವನಾಥ ಗೌಡ ಬಲತ್ತನೆ (45) ಅವರು ಇಂದು ನಿಧನರಾಗಿದ್ದಾರೆ. ಕುಂತೂರು ನಿವಾಸಿಯಾಗಿರುವ ವಿಶ್ವನಾಥ ಗೌಡರು ಕೃಷಿ ಕಾರ್ಯದಲ್ಲಿ ತೊಡಗಿದ್ದಾಗ ಮರಣ ಹೊಂದಿರುತ್ತಾರೆ. ಅವರು ಸಮಾಜ ಸೇವಕ, ಸಮಾಜದ ಜನತೆಯ ಒಡನಾಡಿ, ನೇರೋಳ್‍ ಪಲ್ಕೆ ಶ್ರೀ ರಾಜನ್ ದೈವಸ್ಥಾನದ ಆಡಳಿತ ಸಮಿತಿ ಸದಸ್ಯರಾಗಿ, ಕುಂತೂರು ಘಟಕ ಒಕ್ಕಲಿಗ ಗೌಡ ಸೇವಾ ಸಂಘದ ಸದಸ್ಯರಾಗಿ ಸೇವೆ ಸಲ್ಲಿಸುವುದರೊಂದಿಗೆ ಉತ್ತಮ ಕೃಷಿರಾಗಿದ್ದರು. ಮೃತರು ಪತ್ನಿ, ಎರಡು ಮಕ್ಕಳನ್ನು ಅಗಲಿದ್ದಾರೆ.

ಸಮಾಜ ಸೇವಕ ವಿಶ್ವನಾಥ ಗೌಡ ನಿಧನ Read More »

ದೀಕ್ಷಿತ್ ಮರಿಕೆ ನಿಧನ

ಪುತ್ತೂರು: ಆರ್ಯಾಪು ಗ್ರಾಮದ ಮರಿಕೆ ನಿವಾಸಿ ದಿ. ಗೋಪಾಲ ಗೌಡ ಅವರ ಪುತ್ರ, ಬಿಜೆಪಿ ಸಕ್ರೀಯ ಕಾರ್ಯಕರ್ತ, ಆರ್ಯಾಪು ಗ್ರಾಮ ಪಂಚಾಯಿತಿ ಪಂಪ್ ಆಪರೇಟರ್ ದೀಕ್ಷಿತ್ ಮರಿಕೆ (28) ಬುಧವಾರ ರಾತ್ರಿ ಅಸೌಖ್ಯದಿಂದ ನಿಧನರಾದರು. ಕೆಲ ದಿನಗಳಿಂದ ಅಸೌಖ್ಯದಿಂದ ಇದ್ದು, ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ರಾತ್ರಿ ಕೊನೆಯುಸಿರೆಳೆದರು. ಮೃತರು ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಮುಖರಾದ ಅರುಣ್

ದೀಕ್ಷಿತ್ ಮರಿಕೆ ನಿಧನ Read More »

ಸಿಡಿಲು ಬಡಿದು ಯುವಕ ಮೃತ್ಯು

ಉಡುಪಿ: ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟ ಘಟನೆ ಶಿರ್ವ ಮಾಣಿಬೆಟ್ಟು ಬಳಿ ಗುರುವಾರ ರಾತ್ರಿ ನಡೆದಿದೆ. ಶಿರ್ವ ಎಂಎಸ್‌ಆರ್‌ಎಸ್ ಕಾಲೇಜಿನ ಎರಡನೇ ವರ್ಷದ ಬಿಸಿಎ ವಿದ್ಯಾರ್ಥಿ, ಶಿರ್ವ ಮಾಣಿಬೆಟ್ಟು ತೋಟದಮನೆ ನಿವಾಸಿ ರಮೇಶ್ ಪೂಜಾರಿಯವರ ಪುತ್ರ ರಕ್ಷಿತ್ ಪೂಜಾರಿ (20) ಮೃತಪಟ್ಟವರು. ಸ್ನಾನ ಮಾಡಲೆಂದು ಬಚ್ಚಲು ಮನೆ ಬಳಿ ನಿಂತಿದ್ದ ವೇಳೆ ಸಿಡಿಲು ಬಡಿದಿದೆ. ನೆಲದಲ್ಲಿ ಬಿದ್ದಿದ್ದ ಅವರನ್ನು ಮನೆ ಮಂದಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 10 ಗಂಟೆಯ ವೇಳೆಗೆ ಕೊನೆಯುಸಿರೆಳೆದಿದ್ದಾರೆ.

ಸಿಡಿಲು ಬಡಿದು ಯುವಕ ಮೃತ್ಯು Read More »

ವಿದ್ಯುತ್ ತಗುಲಿ ವ್ಯಕ್ತಿ ಮೃತ್ಯು

ಬಂಟ್ವಾಳ: ವಿದ್ಯುತ್‌ ಪರಿವರ್ತಕದ ಬಳಿ ನಿಂತುಕೊಂಡಿದ್ದ ವ್ಯಕ್ತಿಯೋರ್ವನಿಗೆ ಸಿಡಿಲು ಬಡಿದು ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್‌ ಠಾಣಾ ವ್ಯಾಪ್ತಿಯ ಇರಾದಲ್ಲಿ ಗುರುವಾರ ನಡೆದಿದೆ. ಇರಾ ಗ್ರಾಮದ ಮುರ್ಕಾಜೆ ನಿವಾಸಿ ಸತೀಶ್‌ ಚೌಟ (43) ಮೃತಪಟ್ಟ ವ್ಯಕ್ತಿ. ಸತೀಶ್ ಅವರು ಬಾಕ್ರಬೈಲಿನಲ್ಲಿ ಮರದ ಮಿಲ್ ನಲ್ಲಿ ಕೆಲಸಗಾರನಾಗಿದ್ದು, ಗುರುವಾರ ರಸ್ತೆಯ ಬದಿಯಲ್ಲಿ ಟ್ರಾನ್ಸ್ ಫಾರ್ಮರ್ ಪಕ್ಕದಲ್ಲಿ ನಿಂತುಕೊಂಡಿರುವ ಸಮಯದಲ್ಲಿ ಆಕಸ್ಮಿಕವಾಗಿ ಸಿಡಿಲು ಬಡಿದು, ಒಮ್ಮೆಲೇ ವಿದ್ಯುತ್‌ ಪ್ರವೇಶಿಸಿ ಮೃತಪಟ್ಟ ಬಗ್ಗೆ ಬ೦ಟ್ವಾಳ ಗ್ರಾಮಾಂತರ

ವಿದ್ಯುತ್ ತಗುಲಿ ವ್ಯಕ್ತಿ ಮೃತ್ಯು Read More »

ನಿವೃತ್ತ ಶಿಕ್ಷಕ ಚಂದ್ರಶೇಖರ ಕುಂಜತ್ತಾಯ ನಿಧನ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಿವಾಸಿ, ನಿವೃತ್ತ ಶಿಕ್ಷಕ ಚಂದ್ರಶೇಖರ ಕುಂಜತ್ತಾಯ ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಸಂತ ಫಿಲೋಮಿನಾ ಕಾಲೇಜಿನಲ್ಲಿ ಗಣಿತ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಬಳಿಕ ತನ್ನ ಮನೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಮನೆ ಪಾಠ ಹೇಳಿಕೊಡುತ್ತಿದ್ದರು. ಮೃತರು ಪತ್ನಿ, ಪುತ್ರ, ನಾಲ್ವರು ಪುತ್ರಿಯರು, ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

ನಿವೃತ್ತ ಶಿಕ್ಷಕ ಚಂದ್ರಶೇಖರ ಕುಂಜತ್ತಾಯ ನಿಧನ Read More »

ಹೃದಯಾಘಾತದಿಂದ  ಮೃತ್ಯು : ಸಿಡಿಲಾಘಾತ ಶಂಕೆ

ಪುತ್ತೂರು : ಹೃದಯಾಘಾತದಿಂದ ಒಳಮೊಗ್ರು ಗ್ರಾಮದ ದರ್ಬೆತ್ತಡ್ಕ ನಿವಾಸಿ ಪಿ.ಬಾಬು (55) ಮೃತಪಟ್ಟಿದ್ದಾರೆ. ಬಾಬು ಅವರು ಮನೆಯ ಹೊರಗೆ ಮಳೆಯಲ್ಲಿ ಕೆಲಸ ಮಾಡಿ ಬಳಿಕ ಒಳ ಹೋದವರು ನೀರು ಕುಡಿದ ತಕ್ಷಣ ಹೃದಯಾಘಾತವಾಗಿ ಮೃತಪಟ್ಟರು ಎನ್ನಲಾಗಿದೆ. ಸಿಡಿಲಾಘಾತ ಶಂಕೆ : ಬಾಬು ಅವರು ಮನೆಯ ಹೊರಗೆ ಮಳೆಯಲ್ಲಿ ಕೆಲಸ ಮಾಡುತ್ತಿದ್ದು, ಸಿಡಿಲಾಘಾತದಿಂದ ಮೃತಪಟ್ಟಿದ್ದರು ಎಂದು ಮೊದಲು ಸುದ್ದಿಯಾಗಿತ್ತು. ವೈದ್ಯಕೀಯ ರಿಪೋರ್ಟ್ ಬಂದ ಬಳಿಕವಷ್ಟೇ  ತಿಳಿದುಬರಬೇಕಿದೆ ಎಂದು ತಹಶೀಲ್ದಾರ್ ಕುಂಞಿ ಅಹಮ್ಮದ್ ತಿಳಿಸಿದ್ದಾರೆ.

ಹೃದಯಾಘಾತದಿಂದ  ಮೃತ್ಯು : ಸಿಡಿಲಾಘಾತ ಶಂಕೆ Read More »

ಪತಿಯಿಂದ ಪತ್ನಿಯ ಹತ್ಯೆ

ಮೈಸೂರು: ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಟಿ. ನರಸೀಪುರದ ತುರಗನೂರು ಗ್ರಾಮದಲ್ಲಿ ನಡೆದಿದೆ. ಮೈಸೂರು  ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿದ್ಯಾ ಕೊಲೆಯಾದ ದುರ್ದೈವಿಯಾಗಿದ್ದು, ಕೌಟುಂಬಿಕ ಕಲಹ ಹಿನ್ನೆಲೆ ಗಂಡನೇ ವಿದ್ಯಾಳ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ ಮೃತ ವಿದ್ಯಾ ಅವರು ಭಜರಂಗಿ, ವಜ್ರಕಾಯ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೇ ಕಾಂಗ್ರೆಸ್‌ ಪಕ್ಷದಲ್ಲೂ ಸಕ್ರೀಯವಾಗಿದ್ದರು. ಸೋಮವಾರ ರಾತ್ರಿ ಗಂಡ ಹಾಗೂ ಪತ್ನಿ ನಡುವೆ ಜಗಳ ನಡೆದಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು

ಪತಿಯಿಂದ ಪತ್ನಿಯ ಹತ್ಯೆ Read More »

ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಮೃತ್ಯು

ಕಡಬ : ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಕಾರ್ಮಿಕ ಮೃತಪಟ್ಟಿರುವ ಘಟನೆ ಕಡಬ ತಾಲೂಕು ಕುಂತೂರು ಗ್ರಾಮದಲ್ಲಿ ನಡೆದಿದೆ. ಕೃಷ್ಣ ಕುಮಾರ್ ಎಂಬವರ ದೂರಿನಂತೆ, ಕೃಷ್ಣ ಕುಮಾರ್ ರವರ ಪತ್ನಿಯ ತಮ್ಮನಾದ ಕೋಡಿಂಬಾಳ ಗ್ರಾಮ ಕಡಬ ನಿವಾಸಿ ಶರತ್ (29), 6 ತಿಂಗಳಿನಿಂದ ಕಡಬ ತಾಲೂಕು ಕುಂತೂರು ಗ್ರಾಮದ ಉದಯಶಂಕರ್ ಭಟ್ ಎಂಬವರ ಮನೆಗೆ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗುತ್ತಿದ್ದು, ಮೇ 17 ರಂದು ಸಂಜೆ, ಉದಯಶಂಕರ್ ಭಟ್ ರವರ ಜಾಗದಲ್ಲಿರುವ ಶೆಡ್‌ನಲ್ಲಿ ಮೃತಪಟ್ಟಿರುವುದಾಗಿ ಉದಯಶಂಕರ್ ಭಟ್

ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಮೃತ್ಯು Read More »

ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ ನಿಧನ !

ಮಂಗಳೂರು : ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ (70) ಅವರು ಮೇ 17ರಂದು ಮುಂಬೈಯಲ್ಲಿ ನಿಧನ ಹೊಂದಿದರು. ರಘುನಂದನ್‌ ಅವರು 1954ರಲ್ಲಿ ಮೂಲ್ಕಿಯಲ್ಲಿ ಬಡ ಕುಟಂಬವೊಂದರಲ್ಲಿ ಜನಿಸಿದ್ದರು. ಕಾಮತ್ ಅವರ ತಂದೆ ಹಣ್ಣಿನ ವ್ಯಾಪಾರಿಯಾಗಿದ್ದರು. ಕಾಮತ್ ಅವರು ತಮ್ಮ 15ನೇ ವಯಸ್ಸಿನಲ್ಲಿ ಅಣ್ಣನ ಹೊಟೇಲ್‌ಗೆ ಕೆಲಸಕ್ಕೆಂದು ಮುಂಬೈಗೆ ತೆರಳಿದ್ದರು. ಅನಂತರ ಹೊಟೇಲ್ ಉದ್ಯಮ ಆರಂಭಿಸಿ ಹಣ್ಣುಗಳಿಂದಲೇ ಐಸ್‌ಕ್ರೀಂ ತಯಾರಿಸಿ ಜನಪ್ರಿಯರಾದರು.ಮುಂಬೈಯಲ್ಲಿ 1984ರಲ್ಲಿ ನ್ಯಾಚುರಲ್ಸ್ ಐಸ್ ಕ್ರೀಂ ಆರಂಭಿಸಿದ್ದರು. ಅದು ದೇಶಾದ್ಯಂತ ಜನಪ್ರಿಯವಾಗಿ ದೊಡ್ಡ ಉದ್ಯಮವಾಗಿ ಬೆಳೆದಿದೆ.

ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ ನಿಧನ ! Read More »

ಮರದಿಂದ ಬಿದ್ದು ಗಾಯಗೊಂಡ ವ್ಯಕ್ತಿ ಮೃತ್ಯು

ನೆಲ್ಯಾಡಿ : ಕೆಲ ದಿನದ ಹಿಂದೆ ತೆಂಗಿನಮರದಿಂದ ಬಿದ್ದು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನೆಲ್ಯಾಡಿ ಗ್ರಾಮದ ತೋಟ ನಿವಾಸಿ ಧನಂಜಯ ಗೌಡ (43) ಅವರು ಮೇ 16ರಂದು ಸಂಜೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಧನಂಜಯ ಗೌಡ ಅವರು ಮೇ.11ರಂದು ನೆರೆಮನೆಯ ಚಂದ್ರ ಬಿರುವಳಿಕೆ ಎಂಬವರ ಮನೆಗೆ ಕೃಷಿ ಕೆಲಸಕ್ಕೆ ಹೋಗಿದ್ದು ಅಲ್ಲಿ ಸಂಜೆ 6 ಗಂಟೆ ವೇಳೆಗೆ ತೆಂಗಿನ ಮರದಿಂದ ಕಾಯಿ ಕೀಳುತ್ತಿರುವಾಗ ಆಕಸ್ಮಿಕವಾಗಿ ಕೈ ಜಾರಿ ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದರು. ಅವರನ್ನು

ಮರದಿಂದ ಬಿದ್ದು ಗಾಯಗೊಂಡ ವ್ಯಕ್ತಿ ಮೃತ್ಯು Read More »

error: Content is protected !!
Scroll to Top