ನಿಧನ

ಮಹಿಳೆ ನೇಣು ಬಿಗಿದು ಆತ್ಮಹತ್ಯೆ

ಪಡಂಗಡಿ : ನವವಿವಾಹಿತೆ ನೇಣುಬಿಗಿದುಕೊಂಡಿರುವ ಘಟನೆ ಮಾ.1ರಂದು ಬೆಂಗಳೂರಿನಲ್ಲಿರುವ ಸಂಬಂದಿಕರ ಮನೆಯಲ್ಲಿ ನಡೆದಿದೆ. ನೇಣುಬಿಗಿದು ಆತ್ಮೆಹತ್ಯೆ ಮಾಡಿಕೊಂಡವರು ಪಡಂಗಡಿ ಗ್ರಾಮದ ಬದ್ಯಾರು ಬರಾಯ ಮನೆ ನಿವಾಸಿ ಪ್ರಕಾಶ್ ರವರ ಪತ್ನಿ ಪೂಜಾಶ್ರೀ ಎನ್ನಲಾಗಿದೆ. ಕೆಲಸ ಹುಡುಕುತ್ತಿದ್ದ ಪೂಜಾಶ್ರೀಯರನ್ನು ಪತಿ ಪ್ರಕಾಶ್ ರವರು ಬೆಂಗಳೂರಿನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಕಳುಹಿಸಿದ್ದರು. ಪ್ರಕಾಶ್‌ ಬದ್ಯಾರು ಗ್ರಾಮದ ಬರಾಯದ ತಮ್ಮ ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದರು.  ಪೂಜಾ ಮೂಲತಃ ಕಣಿಯೂರು ಗ್ರಾಮದ ನೆಲ್ಲಿ ಬಾಕಿಮಾರು ಮನೆಯ ವಾರಿಜ ಹಾಗೂ ಸೇಸಪ್ಪ ಪೂಜಾರಿ […]

ಮಹಿಳೆ ನೇಣು ಬಿಗಿದು ಆತ್ಮಹತ್ಯೆ Read More »

ಸೋಜಾ ಮೆಟಲ್ಸ್ ಮಾಲಕ ಅಲೆಕ್ಸ್ ಮಿನೇಜಸ್ ನಿಧನ

ಪುತ್ತೂರು: ಸೋಜಾ ಮೆಟಲ್ಸ್ ಮಾಲಕ ಅಲೆಕ್ಸ್ ಮಿನೇಜಸ್ ಅನಾರೋಗ್ಯದಿಂದ ಶುಕ್ರವಾರ ಬೆಳಿಗ್ಗೆ ಇಂದು ನಿಧನರಾಗಿದ್ದಾರೆ. ಅಲ್ಪಕಾಲದ ಅನಾರೋಗ್ಯದಿಂದ ಇಂದು ಬೆಳಿಗ್ಗೆ ನಿಧನರಾದರು. ಮೃತರು ಪತ್ನಿ ಹಾಗೂ ಮೂರು ಮಕ್ಕಳನ್ನು ಅಗಲಿದ್ದಾರೆ.

ಸೋಜಾ ಮೆಟಲ್ಸ್ ಮಾಲಕ ಅಲೆಕ್ಸ್ ಮಿನೇಜಸ್ ನಿಧನ Read More »

ಕೆರೆಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆ

ಉಪ್ಪಿನಂಗಡಿ: ತನ್ನದೇ ಮನೆಯ ತೋಟದ ಕೆರೆಗೆ ಹಾರಿ ಯುವಕನೋರ್ವ  ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಉಪ್ಪಿನಂಗಡಿ ಸಮೀಪದ ಪೆರಿಯಡ್ಕದಲ್ಲಿ ನಡೆದಿದೆ. ಕಿಂಡೋವು ಜಿನ್ನಪ್ಪ ಗೌಡ ಎಂಬವರ ಪುತ್ರ ಶ್ರೀನಿವಾಸ ಆತ್ಮಹತ್ಯೆ ಮಾಡಿಕೊಂಡ ಯುವಕ. ಕೂಲಿ ಕಾರ್ಮಿಕನಾಗಿದ್ದ ಶ್ರೀನಿವಾಸ ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದು, ಮಂಗಳವಾರ ಮುಂಜಾನೆ ಆತನ ಶವ ತೋಟದಲ್ಲಿನ ಕೆರೆಯಲ್ಲಿ ಪತ್ತೆಯಾಗಿತ್ತು. ಈತನ ಸಾವಿಗೆ ಕಾರಣ ತಿಳಿದುಬಂದಿಲ್ಲ. ಉಪ್ಪಿನಂಗಡಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಕೆರೆಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆ Read More »

ಡಾ. ಸುರೇಶ್‍ ಪುತ್ತೂರಾಯರಿಗೆ ಮಾತೃವಿಯೋಗ

ಪುತ್ತೂರು: ಮಹಾವೀರ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ.ಸುರೇಶ್ ಪುತ್ತೂರಾಯರವರ ತಾಯಿ ಸುನಂದಾ ಪುತ್ತೂರಾಯ (82 ವ.) ಅವರು ಮುಂಬಯಿಯಲ್ಲಿರುವ ಹಿರಿಯ ಪುತ್ರನ ಮನೆಯಲ್ಲಿ ಫೆ.25ರಂದು ಸಂಜೆ ನಿಧನರಾದರು. ಸುನಂದಾರವರು ಕಿರಿಯ ಪುತ್ರ ಡಾ.ಸುರೇಶ್ ಪುತ್ತೂರಾಯ ರವರ ಮನೆಯಲ್ಲಿ ವಾಸವಿದ್ದು, ಕೆಲ ತಿಂಗಳ ಹಿಂದೆ ಮುಂಬಯಿಯಲ್ಲಿ ಇಂಜಿನಿಯರ್ ಆಗಿರುವ ಹಿರಿಯ ಪುತ್ರ ಗೋಪಾಲಕೃಷ್ಣರವರ ಮನೆಗೆ ತೆರಳಿದ್ದರು. ಮೃತರು ಪುತ್ರರಾದ ಗೋಪಾಲಕೃಷ್ಣಪುತ್ತೂರಾಯ. ಡಾ.ಸುರೇಶ್ ಪುತ್ತೂರಾಯ, ಪುತ್ರಿಯರಾದ ಶಶಿಕಲಾ ಸಾಮಗ ಉಡುಪಿ, ಧರ್ಮಸ್ಥಳ ಎಸ್‌.ಡಿ.ಎಂ ಕಾಲೇಜಿನ ಸಹ ಪ್ರಾಧ್ಯಾಪಕಿ ಹರಿಣಿ ಪುತ್ತೂರಾಯ,

ಡಾ. ಸುರೇಶ್‍ ಪುತ್ತೂರಾಯರಿಗೆ ಮಾತೃವಿಯೋಗ Read More »

ಮಹಡಿಯಿಂದ ಬಿದ್ದು ವ್ಯಕ್ತಿ ಮೃತ್ಯು

ಉಡುಪಿ: ಅಪಾರ್ಟ್‌ಮೆಂಟ್ ನ 14ನೇ ಮಹಡಿಯಿಂದ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಮಂಗಳವಾರ ಬ್ರಹ್ಮಗಿರಿಯಲ್ಲಿ ಮಧ್ಯಾಹ್ನ ನಡೆದಿದೆ. ಮೃತಪಟ್ಟವರು ಲೇಖಿರಾಜ್ (29) ಎನ್ನಲಾಗಿದೆ. ಮೃತರು ಲೇಖಿರಾಜ್ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷ ವೈ.ಸುಧೀರ್ ಅವರ ಪುತ್ರ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು ತಿಳಿದು ಬಂದಿದೆ. ಘಟನೆಗೆ ಸಂಬಂಧ ಪಟ್ಟಂತೆ ನಿಖರ ಕಾರಣ ತಿಳಿದುಬರಬೇಕಿದೆ. ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸ್‌ ಠಾಣೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪೊಲೀಸರು ಈ ನಿಟ್ಟಿನಲ್ಲಿ ತನಿಖೆಯನ್ನು ಮುಂದುವರಿಸಿದ್ದಾರೆ.

ಮಹಡಿಯಿಂದ ಬಿದ್ದು ವ್ಯಕ್ತಿ ಮೃತ್ಯು Read More »

ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ್ ಶಾಂತಿವನ ನಿಧನ

ಪುತ್ತೂರು: ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ್ ಶಾಂತಿವನ (53) ಅಲ್ಪಕಾಲದ ಅಸೌಖ್ಯದಿಂದಾಗಿ ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಒಳಮೊಗ್ರು ಗ್ರಾಮದ ಶಾಂತಿವನ ನಾರಾಯಣ ಎಂ.ಎಸ್ ಮತ್ತು ಪ್ರೇಮ ಅವರ ಪುತ್ರರಾಗಿರುವ ಚಂದ್ರಕಾಂತ್ ಶಾಂತಿವನರವರು ಧಾರ್ಮಿಕ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ಮೃತರು ತಂದೆ, ತಾಯಿ, ಪತ್ನಿ, ಪುತ್ರರನ್ನು ಅಗಲಿದ್ದಾರೆ.

ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ್ ಶಾಂತಿವನ ನಿಧನ Read More »

ಆ್ಯಕ್ಟಿವಾ-ಕಾರು ಅಪಘಾತ | ಆ್ಯಕ್ಟಿವಾ ಸವಾರ ಜನಾರ್ದನ ಪೂಜಾರಿ ಮೃತ್ಯು

ಪುತ್ತೂರು: ಕಾರು ಹಾಗೂ ಆ್ಯಕ್ಟಿವಾ ಡಿಕ್ಕಿ ಹೊಡೆದುಕೊಂಡ ಪರಿಣಾಮ ಆ್ಯಕ್ಟಿವಾ ಸವಾರ ಮೃತಪಟ್ಟ ಘಟನೆ ಇಂದು ಕಬಕದಲ್ಲಿ ನಡೆದಿದೆ. ಕುಂಡಡ್ಕ ಕಂಪ ನಿವಾಸಿ ಜನಾರ್ದನ ಪೂಜಾರಿ (40) ಮೃತಪಟ್ಟ ಆ್ಯಕ್ಟಿವಾ ಸವಾರ. ಕಬಕದಿಂದ ವಿದ್ಯಾಪುರಕ್ಕೆ ಹೋಗುತ್ತಿರುವ ಆಕ್ಟಿವಾ ಮತ್ತು ಪುತ್ತೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರು ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ತೀವ್ರ ಗಂಭೀರ ಗಾಯಗೊಂಡಿದ್ದ ಆಕ್ಟಿವಾ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜನಾರ್ದನ ಪೂಜಾರಿಯವರು ಇಡ್ತಿದು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿದ್ದರು. ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣೆ

ಆ್ಯಕ್ಟಿವಾ-ಕಾರು ಅಪಘಾತ | ಆ್ಯಕ್ಟಿವಾ ಸವಾರ ಜನಾರ್ದನ ಪೂಜಾರಿ ಮೃತ್ಯು Read More »

ಶ್ರೀಮತಿ  ಯಮುನಾ ರಾಮಣ್ಣ ಗೌಡ ಹೇಮಳ ನಿಧನ |ಕೆಮ್ಮಲೆ  ನಾಗ ಬ್ರಹ್ಮ ದೇವಸ್ಥಾನಕ್ಕೆ ಜಾಗ ವನ್ನು ದಾನವಾಗಿ ನೀಡಿದ ಕೊಡುಗೈ ದಾನಿ

ಎಣ್ಮೂರು ಗ್ರಾಮದ ಹೇಮಳ ಭ್ರಮರಾಂಭಿಕಾ ನಿಲಯದ ದಿ. ರಾಮಣ್ಣ ಗೌಡರ ಪತ್ನಿ ಶ್ರೀಮತಿ ಯಮುನಾ ಫೆ. 18ರಂದು ಸ್ವಗೃಹದಲ್ಲಿ ನಿಧನರಾದರು. ಇವರು ಕೆಮ್ಮಲೆ ನಾಗಬ್ರಹ್ಮ ದೇವಸ್ಥಾನಕ್ಕೆ ಜಾಗವನ್ನು ದಾನವಾಗಿ ನೀಡಿದ ಕೊಡುಗೈ ದಾನಿ  ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಕೆ ಹೇಮಳರ ಮನೆಯಲ್ಲಿ ವಾಸವಾಗಿದ್ದರು. ಮೃತರು ಪುತ್ರಿ ಕಾವ್ಯ ಬಾಲಕೃಷ್ಣ ಗೌಡ ಕುರ್ಮಕೋಡಿ ಶ್ರೀ ರಾಮ್ ಇಂಡಸ್ತ್ರಿ ಬೆಳ್ಳಾರೆ, ಮೊಮ್ಮಕಳು ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ಶ್ರೀಮತಿ  ಯಮುನಾ ರಾಮಣ್ಣ ಗೌಡ ಹೇಮಳ ನಿಧನ |ಕೆಮ್ಮಲೆ  ನಾಗ ಬ್ರಹ್ಮ ದೇವಸ್ಥಾನಕ್ಕೆ ಜಾಗ ವನ್ನು ದಾನವಾಗಿ ನೀಡಿದ ಕೊಡುಗೈ ದಾನಿ Read More »

ಅಲ್ಯೂಮೀನಿಯಂ ದೋಟಿಗೆ ವಿದ್ಯುತ್ ತಂತಿ ಸ್ಪರ್ಶ | ಕಾರ್ಮಿಕನೋರ್ವ ಮೃತ್ಯು..!

ಉಪ್ಪಿನಂಗಡಿ : ತೋಟದಲ್ಲಿ ಎಳನೀರನ್ನು ಕೀಳುತ್ತಿರುವಾಗ ಅಲ್ಯೂಮೀನಿಯಂ ದೋಟಿಗೆ ವಿದ್ಯುತ್ ತಂತಿ ಸ್ಪರ್ಶಗೊಂಡಿದೆ. ಈ ವೇಳೆ  ತೋಟದ ಕಾರ್ಮಿಕ ದಾವಣಗೆರೆ ಮೂಲದ ವೀರಭದ್ರರವರು ಆಘಾತಕ್ಕೊಳಗಾಗಿ ಸಾವನ್ನಪ್ಪಿದ ಘಟನೆ ಬುಧವಾರದಂದು ಬಜತ್ತೂರು ಗ್ರಾಮದ ಕುವೆಚ್ಚಾರ್ ನಲ್ಲಿ ನಡೆದಿದೆ. ಕುವೆಚ್ಚಾರ್ ತೋಟದಲ್ಲಿ ಕರ್ತವ್ಯ ನಿರ್ವಸುತ್ತಿದ್ದ ವೇಳೆ ತೋಟದಲ್ಲಿದ್ದ ತೆಂಗಿನ ಮರದಿಂದ ಸೀಯಾಳವೊಂದನ್ನು ಕೀಳಲೆಂದು ದೋಟಿ ಬಳಸಲು ಮುಂದಾದಾಗ ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ದೋಟಿಗೆ ಸ್ಪರ್ಶವಾಗಿ ವೀರಭದ್ರ ವಿದ್ಯುತ್ ಸ್ಪರ್ಶಿಸಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿ ವೀರಭದ್ರ

ಅಲ್ಯೂಮೀನಿಯಂ ದೋಟಿಗೆ ವಿದ್ಯುತ್ ತಂತಿ ಸ್ಪರ್ಶ | ಕಾರ್ಮಿಕನೋರ್ವ ಮೃತ್ಯು..! Read More »

ನೇಣು ಬಿಗಿದು ಬಾಲಕ ಆತ್ಮಹತ್ಯೆ

ಉಪ್ಪಿನಂಗಡಿ: 7 ನೇ ತರಗತಿಯ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಉಪ್ಪಿನಂಗಡಿಯ ಖಾಸಗಿ ಶಾಲಾ ವಿದ್ಯಾರ್ಥಿ ಬೆಳ್ತಂಗಡಿ ತಾಲೂಕಿನ ತಣ್ಣೀರುವಂತ ಗ್ರಾಮದ ನಿವಾಸಿ ಶ್ರವಣ್ (13) ಮೃತ ವಿದ್ಯಾರ್ಥಿ. ನಿನ್ನೆ ರಾತ್ರಿ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಕಾರಣ ಇನ್ನಷ್ಟೇ ತಿಳಿಯಬೇಕಿದೆ.

ನೇಣು ಬಿಗಿದು ಬಾಲಕ ಆತ್ಮಹತ್ಯೆ Read More »

error: Content is protected !!
Scroll to Top