ನಿಧನ

ಕೂಲಿ ಕಾರ್ಮಿಕ ಜಾರಪ್ಪ ನಾಯ್ಕ ನೇಣು ಬಿಗಿದು ಆತ್ಮಹತ್ಯೆ !

ವಿಟ್ಲ: ಕೂಲಿ ಕಾರ್ಮಿಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಪಡ್ನೂರು ಗ್ರಾಮದ ಕುಂಟುಕುಡೇಲು ಎಂಬಲ್ಲಿ ಇಂದು ನಡೆದಿದೆ. ಕೂಲಿ ಕಾರ್ಮಿಕ ಜಾರಪ್ಪ ನಾಯ್ಕ(60) ಆತ್ಮಹತ್ಯೆ ಮಾಡಿಕೊಂಡವರು. ಜಾರಪ್ಪ ನಾಯ್ಕ ಅವರು ಎಂದಿನಂತೆ ಸ್ಥಳೀಯರೊಬ್ಬರ ಮನೆಯ ತೋಟದ ಕೆಲಸಕ್ಕೆ  ತೆರಳಿದ್ದರು. ಆದರೆ ಕೆಲಸಕ್ಕೆ ಎಷ್ಟು ಹೊತ್ತಾದರೂ ಬಾರದ ಹಿನ್ನಲೆಯಲ್ಲಿ ಮನೆಯವರಲ್ಲಿ ವಿಚಾರಿಸಿದ್ದರು. ಬಳಿಕ ಹುಡುಕಾಡಿದಾಗ ತೋಟದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ. ವಿಟ್ಲ ಪೋಲೀಸರು ಸ್ಥಳಕ್ಕೆ ಆಗಮಿಸಿ ಮೃತ ಶರೀರವನ್ನು […]

ಕೂಲಿ ಕಾರ್ಮಿಕ ಜಾರಪ್ಪ ನಾಯ್ಕ ನೇಣು ಬಿಗಿದು ಆತ್ಮಹತ್ಯೆ ! Read More »

ಆರೋಗ್ಯ ವ್ಯತ್ಯಯ | 6 ತಿಂಗಳ ಗರ್ಭಿಣಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಬಂಟ್ವಾಳ: ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದ 6 ತಿಂಗಳ ಗರ್ಭಿಣಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ನಡೆದಿದೆ. ತೆಂಕಕಜೆಕಾರು ನಿವಾಸಿ ವಸಂತ ಅವರ ಪತ್ನಿ ಸುಜಾತ ಮೃತಪಟ್ಟವರು. ಗರ್ಭಸ್ಥ ಶಿಶುವಿನ ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರು ಲೇಡಿಗೋಶನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಏಕಾಏಕಿ ಆರೋಗ್ಯ ಏರುಪೇರಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಶಿಶುವಿಗೆ ಹೃದಯ ಸಂಬಂಧಿ ತೊಂದರೆ ಇದೆ ಎನ್ನುವ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು 10 ವರ್ಷಗಳ ಹಿಂದೆ ವಿವಾಹವಾಗಿದ್ದು, ಬಹಳ ವರ್ಷಗಳ

ಆರೋಗ್ಯ ವ್ಯತ್ಯಯ | 6 ತಿಂಗಳ ಗರ್ಭಿಣಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು Read More »

ಪಾಂಗ್ಲಾಯಿ ನಿವಾಸಿ ಹೇಮಚಂದ್ರ ಆಚಾರ್ಯ ನಿಧನ

ಪುತ್ತೂರು: ಇಲ್ಲಿಯ ಪಾಂಗ್ಲಾಯಿ ನಿವಾಸಿ ಹೇಮಚಂದ್ರ ಆಚಾರ್ಯ ಶುಕ್ರವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಪಾಂಗ್ಲಾಯಿ ನಿವಾಸಿ ದಿ. ಮಾಣಿ ಆಚಾರ್ಯ ಅವರ ಪುತ್ರರಾದ ಹೇಮಚಂದ್ರ ಆಚಾರ್ಯ ಆಟೋ ರಿಕ್ಷಾ ಚಾಲಕರಾಗಿದ್ದು, ಕೆ. ಎಸ್‍. ಆರ್‍. ಟಿ. ಸಿ. ಯಲ್ಲೂ ಕೆಲಸ ನಿರ್ವಹಿಸಿದ್ದರು. ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಪಾಂಗ್ಲಾಯಿ ನಿವಾಸಿ ಹೇಮಚಂದ್ರ ಆಚಾರ್ಯ ನಿಧನ Read More »

ಹೃದಯಾಘಾತದಿಂದ ವಿದ್ಯಾರ್ಥಿನಿ ಮೃತ್ಯು!

ಉಪ್ಪಿನಂಗಡಿ: ಕಾಲೇಜು ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಮಲಗಿದ್ದಲ್ಲೇ ಮೃತ ಪಟ್ಟ ಘಟನೆ 34 ನೆಕ್ಕಿಲಾಡಿ ಗ್ರಾಮದ ಕರ್ವೇಲು ಬಳಿ ನಡೆದಿದೆ. ಕೆ.ಎ. ಸ್ಟೋರ್ ಮಾಲಕ ದಾವೂದು ಎಂಬವರ ಪುತ್ರಿ ಹಫೀಝ (17) ಮೃತ ಬಾಲಕಿ. ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾದ ಈಕೆ ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದು, ಫೆ.15ರಂದು ಬೆಳಗ್ಗೆ ಎದ್ದೇಳುವಾಗ ಮೃತಪಟ್ಟಿದ್ದಳು. ಮಲಗಿದಲ್ಲೇ ಹೃದಯಾಘಾತಕ್ಕೀಡಾಗಿ ಈಕೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಮೃತಳು ತಂದೆ, ತಾಯಿ ಹಾಗೂ ಮೂವರು ಸಹೋದರರನ್ನು ಅಗಲಿದ್ದಾಳೆ.

ಹೃದಯಾಘಾತದಿಂದ ವಿದ್ಯಾರ್ಥಿನಿ ಮೃತ್ಯು! Read More »

ಕರುಣಾಕರ ರೈ ಬಾಲ್ಯೊಟ್ಟುಗುತ್ತು ನಿಧನ

ಪುತ್ತೂರು: ಅಡಿಕೆ ವ್ಯಾಪಾರಿ ಕರುಣಾಕರ ರೈ ಬಾಲ್ಯೊಟ್ಟುಗುತ್ತು ಬುಧವಾರ ನಿಧನರಾಗಿದ್ದಾರೆ. ಬಾರಿಸು ಕನ್ನಡ ಡಿಂಡಿಮ ಸದಸ್ಯರಾಗಿದ್ದ ಕರುಣಾಕರ ಅವರು ರಾತ್ರಿ ಮನೆಯಲ್ಲಿ ಸ್ನಾನ ಮುಗಿಸಿ ಕುಳಿತಿದ್ದ ವೇಳೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಕರುಣಾಕರ ರೈ ಬಾಲ್ಯೊಟ್ಟುಗುತ್ತು ನಿಧನ Read More »

ಸ್ನಾನಕ್ಕೆ ತೆರಳಿದ ಮಹಿಳೆ ಲಲಿತಾ ಕುಸಿದು ಬಿದ್ದು ಮೃತ್ಯು

ಪುತ್ತೂರು: ಮಹಿಳೆಯೊಬ್ಬರು ಸ್ನಾನದ ಕೊಠಡಿಯಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಕೆಯ್ಯೂರು ಗ್ರಾಮದ ದೇವಿನಗರ ಜನತಾ ಕಾಲೋನಿಯಲ್ಲಿ ನಡೆದಿದೆ. ಕಾಲೋನಿ ನಿವಾಸಿ ಅಣ್ಣು ಎಂಬವರ ಪತ್ನಿ ಲಲಿತಾ (42) ಮೃತಪಟ್ಟವರು. ಲಲಿತಾ ಅವರು ಸ್ನಾನಕ್ಕೆ ತೆರಳಿದವರು ಹೊರಗೆ ಬಾರದೇ ಇದ್ದಾಗ ಸ್ನಾನದ ಕೊಠಡಿಯಲ್ಲಿ ನೋಡಿದಾಗ ರಕ್ತಸಿಕ್ತವಾಗಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಸ್ನಾನಕ್ಕೆ ತೆರಳಿದ ಮಹಿಳೆ ಲಲಿತಾ ಕುಸಿದು ಬಿದ್ದು ಮೃತ್ಯು Read More »

ಕೃಷ್ಣನಗರದ ಭರತ್ ನಿಧನ!

ಪುತ್ತೂರು: ಕೆಮ್ಮಾಯಿ ಕೃಷ್ಣನಗರ ಬಡಾವು ನಿವಾಸಿ ಇಲೆಕ್ಟ್ರಿಷಿಯನ್ ಭರತ್ (38) ಹೃದಯಾಘಾತದಿಂದ ನಿಧನರಾದರು. ಪುತ್ತೂರಿನ ಶಾಂತಿನಾಥ ಬಸದಿಯ ಬಳಿ ಇರುವ ಕವಿತಾ ಇಲೆಕ್ಟ್ರಿಕಲ್‌ನ ಮಾಲಕ ರುಕ್ಮಯ್ಯ ಎಂಬವರ ಪುತ್ರರಾಗಿದ್ದು, ಇಲೆಕ್ಟ್ರಿಷಿಯನ್ ವೃತ್ತಿ ನಿರ್ವಹಿಸುತ್ತಿದ್ದರು. ರಾತ್ರಿ ಮನೆಯಲ್ಲಿ ಮಲಗಿದ್ದ ಅವರು, ಆರೋಗ್ಯದಲ್ಲಿ ಏರುಪೇರಾಗಿ ಬೆಳಗ್ಗಿನ ಜಾವ ನಿಧನರಾದರು. ಮೃತರು ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.

ಕೃಷ್ಣನಗರದ ಭರತ್ ನಿಧನ! Read More »

ಸಹಕಾರ ರತ್ನ ಬಿ. ನಿರಂಜನ ಬಾವಂತಬೆಟ್ಟು ನಿಧನ

ಬೆಳ್ತಂಗಡಿ: ಸಹಕಾರ ರತ್ನ ಬಿ. ನಿರಂಜನ ಬಾವಂತಬೆಟ್ಟು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಬಿ. ನಿರಂಜನ ಅವರು ತಣ್ಣೀರುಪಂಥ ಬಾವಂತಬೆಟ್ಟು ನಿವಾಸಿಯಾಗಿದ್ದು, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ತಣ್ಣೀರುಪಂಥ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸ್ಥಾಪನೆಯಾದ ಆರಂಭದಲ್ಲಿ ಅಧ್ಯಕ್ಷರಾಗಿ ಸುದೀರ್ಘ 41 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ, ದ. ಕ. ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾಗಿ ಸಹಕಾರಿ ರಂಗದಲ್ಲಿ ಸೇವೆ ಸಲ್ಲಿಸಿದ್ದರು.  ಮರಿಪಾದೆ ಬ್ರಹ್ಮ

ಸಹಕಾರ ರತ್ನ ಬಿ. ನಿರಂಜನ ಬಾವಂತಬೆಟ್ಟು ನಿಧನ Read More »

ದೈವಗಳ ಪರಿಚಾರಕ ಮೋoಟ ಗೌಡ ನಿಧನ

ರಾಮಕುಂಜ: ಶ್ರೀರಾಮಕುಂಜೇಶ್ವರ ದೇವಸ್ಥಾನದ ಪರಿವಾರ ದೈವಗಳ ಮುಕ್ಕಾಲ್ದಿ (ಪೂಜಾರಿ) ಮೋಂಟ  ಗೌಡ ಆನ (80) ಅಲ್ಪಕಾಲದ ವಯೋಸಹಜ ಕಾಯಿಲೆಯಿಂದ ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ. ಆನ ಮನೆತನ ಶ್ರೀ ರಾಮಕುಂಜೇಶ್ವರ ದೇವಾಲಯದ ಜಾತ್ರೆ- ಉತ್ಸವ- ರಥ ಅಲಂಕಾರ -ದೈವಗಳ ಚಾಕರಿ ಹೀಗೆ ಹತ್ತು ಹಲವು ಕಾರ್ಯಗಳಲ್ಲಿ ನೇಮ ನಿಷ್ಠೆಗಳಿಂದ ಸೇವಾ ಕಾರ್ಯಗಳಲ್ಲಿ ಹಲವು ತಲೆಮಾರುಗಳಿಂದ ತೊಡಗಿಸಿಕೊಂಡು ಆದರ್ಶತೆ ಮೆರೆದ ಕುಟುಂಬ. ಕೆಲವು ವರ್ಷಗಳ ಹಿಂದಿನವರೆಗೂ ರಥ ಅಲಂಕರಿಸಲು ಬಿದಿರುಬೆತ್ತಗಳನ್ನು ಸಂಗ್ರಹಿಸಿ ರಥ ಸಿದ್ದಗೊಳಿಸುವುದೆಂದರೆ ಬಲು ಕಠಿಣವಾದ ಕೆಲಸವಾಗಿತ್ತು. ಅಂತಹ

ದೈವಗಳ ಪರಿಚಾರಕ ಮೋoಟ ಗೌಡ ನಿಧನ Read More »

ರೋಟರಿಪುರ ನಿವಾಸಿ ಚಂದ್ರಾವತಿ ನಿಧನ

ಪುತ್ತೂರು: ರೋಟರಿಪುರ ನಿವಾಸಿ, ವನಿತಾ ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲಕಿ ವನಿತಾ ಅವರ ತಾಯಿ ಚಂದ್ರಾವತಿ (70) ನಿಧನರಾಗಿದ್ದಾರೆ. ವಯೋ ಸಹಜ ಅನಾರೋಗ್ಯದಿಂದಿದ್ದ ಅವರು ಗುರುವಾರ ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ರೋಟರಿಪುರ ನಿವಾಸಿ ಚಂದ್ರಾವತಿ ನಿಧನ Read More »

error: Content is protected !!
Scroll to Top