ನಿಧನ

ಪುತ್ತೂರು ಸಂಚಾರ ಠಾಣೆಯ ಹೆಡ್‍ ಕಾನ್‍ ಸ್ಟೇಬಲ್‍ ಶಿವಪ್ರಸಾದ್ ಹೃದಯಾಘಾತದಿಂದ ನಿಧನ

ಪುತ್ತೂರು: ಸಂಚಾರ ಪೊಲೀಸ್ ಠಾಣೆ ಹೆಡ್‌ ಕಾನ್‍ ಸ್ಟೇಬಲ್ ಗೂನಡ್ಕ ನಿವಾಸಿ ಶಿವ ಪ್ರಸಾದ್ (51) ಹೃದಯಾಘಾತದಿಂದ ಇಂದು ಮುಂಜಾನೆ ನಿಧನರಾದರು. ಅವರು ಕಡಬ, ಮಂಗಳೂರು ಹಾಗೂ ಇನ್ನಿತರ ಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಮುಂದಿನ ವರ್ಷದಲ್ಲಿ ಟ್ರಾಫಿಕ್ ವಿಭಾಗದಲ್ಲಿ ಎ ಎಸ್ ಐ ಭಡ್ತಿ ಹೊಂದಲಿದ್ದರು ಎಂದು ತಿಳಿದುಬಂದಿದೆ. ಮೃತರು ಪತ್ನಿ ಸುಲೋಚನಾ, ಪುತ್ರಿಯರಾದ ರಮ್ಯಾ, ಅರ್ಚನಾ, ಪುತ್ರ ತೇಜಸ್ ಬಂಧು ಮಿತ್ರರನ್ನು ಅಗಲಿದ್ದಾರೆ.

ಪುತ್ತೂರು ಸಂಚಾರ ಠಾಣೆಯ ಹೆಡ್‍ ಕಾನ್‍ ಸ್ಟೇಬಲ್‍ ಶಿವಪ್ರಸಾದ್ ಹೃದಯಾಘಾತದಿಂದ ನಿಧನ Read More »

ಕಾಂತಾರ-1 ಚಿತ್ರದ ಇನ್ನೋರ್ವ ಕಲಾವಿದ ಸಾವು

ಕೆಲವೇ ತಿಂಗಳ ಅಂತರದಲ್ಲಿ ಚಿತ್ರದ ಮೂವರು ಕಲಾವಿದರು ಮೃತ್ಯು ಮಂಗಳೂರು: ಕರಾವಳಿಯ ದೈವಾರಾಧನೆಯ ಕಥೆಯನ್ನೊಳಗೊಂಡಿರುವ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಕಾಂತಾರ-1 ಚಿತ್ರಕ್ಕೆ ಅಪಘಾತ, ಅವಘಡ ಎಂದು ಪದೇಪದೆ ಅಪಶಕುನ ಎದುರಾಗುತ್ತಿದೆ. ಈ ಚಿತ್ರದಲ್ಲಿ ನಟಿಸುತ್ತಿದ್ದ ಇಬ್ಬರು ಕಲಾವಿದರು ಈ ಮೊದಲು ಬೇರೆ ಬೇರೆ ಕಾರಣಗಳಿಂದ ಮೃತಪಟ್ಟಿದ್ದರು. ಇದೀಗ ಇನ್ನೋರ್ವ ಕಲಾವಿದ ಮೃತ್ಯುವೀಡಾಗಿದ್ದಾರೆ. ವಿಜು ವಿ.ಕೆ ಎಂಬುವವರು ಮೃತ ದುರ್ದೈವಿ. ಇವರು ಕೇರಳದ ತ್ರಿಶ್ಶೂರ್​ನವರು. ‘ಕಾಂತಾರ-1’ ಸಿನಿಮಾ ಶೂಟ್​ಗಾಗಿ ಕರ್ನಾಟಕಕ್ಕೆ ಬಂದು ಆಗುಂಬೆಯ ಸಮೀಪದ ಹೋಂ ಸ್ಟೇನಲ್ಲಿ

ಕಾಂತಾರ-1 ಚಿತ್ರದ ಇನ್ನೋರ್ವ ಕಲಾವಿದ ಸಾವು Read More »

ಪ್ರಸಿದ್ಧ ಭಕ್ತಿ ಗಾಯಕ, ತಬಲಾ ವಾದಕ ಸಂಕೀರ್ತನ್‍ ಅಪಘಾತದಲ್ಲಿ ಮೃತ್ಯು

ಉಡುಪಿ : ಕಾರು ಚಾಲಕನ ನಿರ್ಲಕ್ಷದಿಂದ ಪ್ರಸಿದ್ಧ ಭಕ್ತಿ ಗಾಯಕ ಮತ್ತು ತಬಲಾ ವಾದಕ ಆಳ್ವಾಸ್ ಸಂಕೀರ್ತನ್ (28) ಮೃತಪಟ್ಟಿದ್ದಾರೆ ಉಡುಪಿಯ ಕಿನ್ನಿಮುಲ್ಕಿ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಘಟನೆ ಸಂಭವಿಸಿದ್ದು, ಕುಂದಾಪುರದಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಕಾರನ್ನು ಚಾಲಕ ಅಜಾಗರೂಕತೆ ಯಿಂದ ಚಲಾಯಿಸುತ್ತಿದ್ದುದರಿಂದ ಕಾರು  ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದು ಬಳಿಕ  ರಸ್ತೆ ಡಿವೈಡರ್ ಏರಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಮತ್ತೊಂದು ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ನಲ್ಲಿ ಸಂಕೀರ್ತ

ಪ್ರಸಿದ್ಧ ಭಕ್ತಿ ಗಾಯಕ, ತಬಲಾ ವಾದಕ ಸಂಕೀರ್ತನ್‍ ಅಪಘಾತದಲ್ಲಿ ಮೃತ್ಯು Read More »

ನಾಟಿ ವೈದ್ಯ, ವಾಸ್ತು ತಜ್ಞ, ಜ್ಯೋತಿಷಿ ಕಳುವಾಜೆ ಜಿನ್ನಪ್ಪ ಗೌಡರಿಗೆ ಶ್ರದ್ಧಾಂಜಲಿ | ಕಾಯಕ್ಕಿಂತ ಕಾಯಕ ಮುಖ್ಯ : ಗುಡ್ಡಪ್ಪ ಗೌಡ ಬಲ್ಯ

ಪುತ್ತೂರು: ಇತ್ತೀಚೆಗೆ ನಿಧನರಾದ ಕಳುವಾಜೆ ಜಿನ್ನಪ್ಪ ಗೌಡರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.ಮೃತರ ಕಿರಿಯ ಪುತ್ರ ಕಳುವಾಜೆ ಯಶವಂತ ಗೌಡರ ಮನೆಯಂಗಳದಲ್ಲಿ ನಡೆದ ನುಡಿನಮನದಲ್ಲಿ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನ ಆಡಳಿತಾಧಿಕಾರಿ, ನಿವೃತ್ತ ಉಪನ್ಯಾಸಕ ಗುಡ್ಡಪ್ಪ ಗೌಡ ಬಲ್ಯ ಮಾತನಾಡಿದರು. ಕಾಯಕ್ಕಿಂತ ಕಾಯಕ ಮುಖ್ಯ ನುಡಿನಮನ ಸಲ್ಲಿಸಿ ಮಾತನಾಡಿದ ಗುಡ್ಡಪ್ಪರು ಕಾಯಕ್ಕಿಂತ ಕಾಯಕ ಮುಖ್ಯ ಎಂದು ಹೇಳಿ ಅಗಲಿದ ಜಿನ್ನಪ್ಪರ ಬದುಕಿನ ಚಿತ್ರಣವನ್ನು ಮುಂದಿಟ್ಟರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಅವರು ದಂಡ ಪ್ರಮುಖರಾಗಿ ಸಲ್ಲಿಸಿದ್ದ ಸೇವೆ ಅವಿಸ್ಮರಣೀಯ

ನಾಟಿ ವೈದ್ಯ, ವಾಸ್ತು ತಜ್ಞ, ಜ್ಯೋತಿಷಿ ಕಳುವಾಜೆ ಜಿನ್ನಪ್ಪ ಗೌಡರಿಗೆ ಶ್ರದ್ಧಾಂಜಲಿ | ಕಾಯಕ್ಕಿಂತ ಕಾಯಕ ಮುಖ್ಯ : ಗುಡ್ಡಪ್ಪ ಗೌಡ ಬಲ್ಯ Read More »

ಯಕ್ಷಗಾನ ಕಲಾವಿದ ಮುಂಡಾಜೆ ಸದಾಶಿವ ಶೆಟ್ಟಿ ನಿಧನ

ಬೆಳ್ತಂಗಡಿ: ತೆಂಕುತಿಟ್ಟಿನ ಯಕ್ಷಗಾನ ವೇಷಧಾರಿ ಮುಂಡಾಜೆ ಸದಾಶಿವ ಶೆಟ್ಟಿ (67 ) ಜೂ.7ರಂದು ಮಂಗಳೂರಿನ ಕಾವೂರು ಸಮೀಪದ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಕಟೀಲು ಮೇಳದಲ್ಲಿ ಕಳೆದ 20 ವರ್ಷಗಳಿಂದ ವೇಷಧಾರಿಯಾಗಿ, 3ನೇ ಮೇಳದ ಪ್ರಬಂಧಕರಾಗಿ ಸೇವೆ ಸಲ್ಲಿಸಿದ್ದರು. ಧರ್ಮಸ್ಥಳ, ಕರ್ನಾಟಕ, ಸಸಿಹಿತ್ಲು ಮೇಳಗಳಲ್ಲಿ ತುಳು – ಕನ್ನಡ ಪ್ರಸಂಗ ಗಳಲ್ಲಿ ಎಲ್ಲಾ ಸ್ವರೂಪದ ಪಾತ್ರ ಗಳನ್ನು ನಿರ್ವಹಿಸಿದ್ದರು. ಪುಂಡು ವೇಷ, ರಾಜ ವೇಷ, ನಾಟಕೀಯ ಪಾತ್ರಗಳ ನುರಿತ ಕಲಾವಿದರಾಗಿದ್ದರು. ಮೃತರು ಪತ್ನಿ ,ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು

ಯಕ್ಷಗಾನ ಕಲಾವಿದ ಮುಂಡಾಜೆ ಸದಾಶಿವ ಶೆಟ್ಟಿ ನಿಧನ Read More »

ಕೆರೆಯಲ್ಲಿ  ಮುಳುಗಿ ವಿದ್ಯಾರ್ಥಿ  ಮೃತ್ಯು

ಬಂಟ್ವಾಳ: ಸ್ನಾನಕ್ಕೆಂದು ಕೆರೆಗೆ ಇಳಿದು ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಕಾರಿಂಜದಲ್ಲಿ ನಡೆದಿದೆ. ಕಾರಿಂಜ ಕಂಗಿಹಿತ್ಲು ಗೂಡಿನ ಬಳಿಯ ನಿವಾಸಿ ಪಿಯುಸಿ ವಿದ್ಯಾರ್ಥಿ ಚೇತನ್ (17) ಎಂದು ಗುರುತಿಸಲಾಗಿದೆ. ಮೃತರು ತಂದೆ ತಾಯಿ ಸಹೋದರಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೆರೆಯಲ್ಲಿ  ಮುಳುಗಿ ವಿದ್ಯಾರ್ಥಿ  ಮೃತ್ಯು Read More »

ತೀವ್ರ ರಕ್ತಸ್ರಾವದಿಂದ ಬಾಣಂತಿ ಸಾವು

ಸುಳ್ಯ: ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ತುಂಬು ಗರ್ಭಿಣಿ, ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲಿ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿರುವ ಘಟನೆ ಸುಳ್ಯ ತಾಲೂಕಿನಲ್ಲಿ ನಡೆದಿದೆ. ಸಂಪಾಜೆ ಗ್ರಾಮದ ಬಾಬು ಮತ್ತು ಚಿನ್ನಮ್ಮ ದಂಪತಿಯ ಪುತ್ರಿ. ಬೆಳ್ತಂಗಡಿಯ ನಾರಾವಿ ಗ್ರಾಮದ ನೂಜೋಡಿ ಮಾಪಾಲ ಮನೆಯ ಶೇಖರ ಮಲೆಕುಡಿಯ ಅವರ ಧರ್ಮಪತ್ನಿ ಮಧುರಾ (29) ಅವರು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದು , ವೈದ್ಯರ ನಿರ್ಲಕ್ಷ್ಯವೇ ಈ ಘಟನೆಗೆ  ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈಗಾಗಲೇ ಮೂರೂವರೆ ವರ್ಷದ ಗಂಡು ಮಗುವಿದ್ದು

ತೀವ್ರ ರಕ್ತಸ್ರಾವದಿಂದ ಬಾಣಂತಿ ಸಾವು Read More »

ವಿವೇಕಾನಂದ ಕಾಲೇಜಿನ ನಿವೃತ್ತ ಉದ್ಯೋಗಿ ಕುಞಣ್ಣ ಗೌಡ ಸ್ವರ್ಗಸ್ಥ

ಪುತ್ತೂರು: ಪುತ್ತೂರಿನ ನೆಹರು ನಗರದ ನಿವಾಸಿಯಾಗಿದ್ದ ಕುಞಣ್ಣ ಗೌಡರು ಅಸೌಖ್ಯದಿಂದ ಇಂದು ಬೆಳಿಗ್ಗೆ ಸ್ವರ್ಗಸ್ಥರಾದರು. ಕಠಿಣ ಪರಿಶ್ರಮಿ73 ವರ್ಷ ವಯಸ್ಸಿನ ಕುಞಣ್ಣರು ಜೀವನದ ಆರಂಭದ ದಿನಗಳಲ್ಲಿ ವಿಟ್ಲದ ಆಸ್ಪತ್ರೆಯೊಂದರಲ್ಲಿ ಕಾಂಪೌಂಡರ್ ಆಗಿ, ಸಿ.ಪಿ.ಸಿ.ಆರ್.ಐ.ನಲ್ಲಿ ದಿನಗೂಲಿ ನೌಕರರಾಗಿ ದುಡಿದು ಬದುಕು ಕಟ್ಟಿಕೊಂಡಿದ್ದರು. ಬಳಿಕ ವಿವೇಕಾನಂದ ಕಾಲೇಜಿನಲ್ಲಿ ಗ್ರಂಥಾಲಯ ಸಹಾಯಕರಾಗಿ ಸೇವೆಗೆ ಸೇರಿದ್ದರು. ನಿಷ್ಠೆಗೆ ಪರ್ಯಾಯ ಪದವಾಗಿದ್ದ ಕುಞಣ್ಣರು ಬಳಿಕ ಕಚೇರಿ ಗುಮಾಸ್ತರಾಗಿ ಕೊನೆಯಲ್ಲಿ ಕಛೇರಿ ಅಧೀಕ್ಷಕರಾಗಿ ಸೇವಾ ನಿವೃತ್ತಿ ಪಡೆದಿದ್ದರು. ನಿವೃತ್ತಿ ನಂತರವೂ ಸೇವೆಸೇವಾ ನಿವೃತ್ತಿಯ ಬಳಿಕ ವಿವೇಕಾನಂದ

ವಿವೇಕಾನಂದ ಕಾಲೇಜಿನ ನಿವೃತ್ತ ಉದ್ಯೋಗಿ ಕುಞಣ್ಣ ಗೌಡ ಸ್ವರ್ಗಸ್ಥ Read More »

ನಗರಸಭಾ ಸದಸ್ಯ ರಮೇಶ್ ರೈ ಮೃತ  ದೇಹ ಪತ್ತೆ

ಪುತ್ತೂರು: ನಗರಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ ರವರು ಪಾಣೆಮಂಗಳೂರು ಹಳೆ ಸೇತುವೆಯಲ್ಲಿ ಬೈಕ್ ಮೊಬೈಲ್ ಬಿಟ್ಟುಹೋದ ಘಟನೆ ನಡೆದಿದ್ದು, ಇದೀಗ ಅವರ ಮೃತದೇಹ ಪತ್ತೆಯಾಗಿದೆ.. ರಮೇಶ್ ರೈ ಅವರು ಇತ್ತೀಚೆಗೆ ಪುತ್ತೂರು ನಗರಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಯ್ಕೆಯಾಗಿದ್ದರು. ಇಂದು ಬೆಳಿಗ್ಗೆ ಸುಮಾರು 11 ಗಂಟೆಯಿಂದ ಬೈಕ್ ಹಾಗೂ ಸೊತ್ತುಗಳು ಇಲ್ಲಿ ಅನಾಥವಾಗಿ ಕಂಡು ಬಂದಿದೆ ಎಂದು ಸ್ಥಳೀಯರು ಪೋಲೀಸರಿಗೆ ತಿಳಿಸಿದ್ದು, ಸ್ಥಳದಲ್ಲಿ ಸಿಕ್ಕಿದ ಮೊಬೈಲ್ ನಿಂದ  ಪೋನ್ ಮಾಡಿದಾಗ ಇದು ಪುತ್ತೂರು ರಮೇಶ್

ನಗರಸಭಾ ಸದಸ್ಯ ರಮೇಶ್ ರೈ ಮೃತ  ದೇಹ ಪತ್ತೆ Read More »

ಹಾವು ಕಡಿದು ಯುವಕ ಮೃತ್ಯು

ಬಂಟ್ವಾಳ: ಹಾವು ಕಡಿದು ಯುವಕನೊಬ್ಬ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಪಾದೆಮನೆ ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ದಿವಂಗತ ಇಸ್ಮಾಯಿಲ್ ಎಂಬುವವರ ಪುತ್ರ ಅಶ್ರಫ್ (28) ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡುತ್ತಿದ್ದ ಇವರು  ಪಾಂಡವರಕಲ್ಲಿನ ಮನೆಯೊಂದರಲ್ಲಿ ಮಧ್ಯಾಹ್ನದ ಸಮಯ ಅಡಿಕೆ ಸುಲಿಯುತ್ತಿದ್ದ ಸಂದರ್ಭ ಕಾಲಿನ ಬೆರಳಿಗೆ ಹಾವು ಕಚ್ಚಿತ್ತು ಎನ್ನಲಾಗಿದೆ. ತಕ್ಷಣ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.  ಇವರಿಗೆ

ಹಾವು ಕಡಿದು ಯುವಕ ಮೃತ್ಯು Read More »

error: Content is protected !!
Scroll to Top