ಸುದ್ದಿ

ವಿದ್ಯುತ್ ಆಘಾತ: ಲೈನ್ ಮ್ಯಾನ್ ಮೃತ್ಯು

ಕಡಬ: ವಿದ್ಯುತ್ ಕಂಬವೇರಿದ್ದ ಲೈನ್ ಮ್ಯಾನ್  ಓರ್ವರು ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ  ಘಟನೆ ಗುರುವಾರದಂದು ಕಡಬದಲ್ಲಿ ನಡೆದಿದೆ. ಕಡಬ ಮೆಸ್ಕಾಂ ಲೈನ್ ಮ್ಯಾನ್  ಬಾಗಲಕೋಟೆ ಮೂಲದ ದ್ಯಾಮಣ್ಣ ಮೃತಪಟ್ಟವರು. ಕಡಬದ ಮುಳಿಮಜಲು ಸಮೀಪದ ಕಾಯರಡ್ಕ ಎಂಬಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯನ್ನು ಕಂಡು ಕಂಬವೇರಿದ್ದ ಲೈನ್ ಮ್ಯಾನ್ ಗೆ ವಿದ್ಯುತ್ ಶಾಕ್ ಹೊಡೆದಿದೆ. ಗಂಭೀರ ಗಾಯಗೊಂಡ ಅವರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದೊಯ್ಯಲಾಗಿತ್ತು.

ವಿದ್ಯುತ್ ಆಘಾತ: ಲೈನ್ ಮ್ಯಾನ್ ಮೃತ್ಯು Read More »

ಪುತ್ತೂರಿನ  ಒಳಿತು ಮಾಡು ಮನುಷ ತಂಡದಿಂದ ನೇತ್ರದಾನ ನೋಂದಣಿ | ಅಶಕ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

ಪುತ್ತೂರು: ಇಲ್ಲಿನ  ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ, ಜೆಸಿಐ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರು ಸಹಯೋಗದಲ್ಲಿ ನೇತ್ರದಾನ ನೋಂದಣಿ, ಮಧುಮೇಹ ಉಚಿತ ತಪಾಸಣೆ ಹಾಗೂ ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ ಹಾಗೂ ದಾನಿಗಳ ಸಹಕಾರದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅಶಕ್ತರಿಗೆ ನಿರಂತರವಾಗಿ ಆಹಾರ ಸಾಮಗ್ರಿಗಳ ಕಿಟ್ ನೀಡುವ 23ನೇ ಯೋಜನೆ ‘ಒಳಿತು ಮಾಡು ಮನುಷ’ ಕಾರ್ಯಕ್ರಮ ಪುತ್ತೂರಿನ ಸೈನಿಕ ಭವನ ರಸ್ತೆಯ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿದ್ದ ಅರುಣ್

ಪುತ್ತೂರಿನ  ಒಳಿತು ಮಾಡು ಮನುಷ ತಂಡದಿಂದ ನೇತ್ರದಾನ ನೋಂದಣಿ | ಅಶಕ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ Read More »

ಮನೆ ಮೇಲೆ ಮರಬಿದ್ದು ಅಪಾರ ಹಾನಿ

ಕಡಬ: ಸೋಮವಾರ ರಾತ್ರಿ ಬೀಸಿದ ಗಾಳಿ, ‌ಸಿಡಿಲು ಸಹಿತ ಮಳೆಗೆ ಕಡಬ ತಾಲೂಕಿನ ಕೊಡಿಂಬಾಳ ಗ್ರಾಮದ ಪೆಲತ್ತೊಡಿ ಗಣೇಶ್ ಎಂಬವರ ಮನೆಗೆ ಹಾನಿಯಾಗಿದೆ. ಮನೆ ಸಮೀಪದ ಮರವೊಂದು ಮನೆ ಮೇಲೆ ಬಿದ್ದಿದೆ. ವಿದ್ಯುತ್ ಕಂಬದ ಮೇಲೂ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬ ತುಂಡಾಗಿ ಮನೆ ಮೇಲೆ ಬಿದ್ದಿದೆ. ಮನೆ ಬಾಗಶಃ ಹಾನಿಯಾಗಿದೆ. ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ಪರಿಸರದ ವಿವಿದೆಡೆ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಹಾನಿಯಾಗಿದೆ.

ಮನೆ ಮೇಲೆ ಮರಬಿದ್ದು ಅಪಾರ ಹಾನಿ Read More »

ಮುರುಳ್ಯ: ಯಶಸ್ವಿಯಾಗಿ ನಡೆದ ಬೇಸಗೆ ಶಿಬಿರ, ಶಾಸಕಿಗೆ ಅಭಿನಂದನೆ

ಕಾಣಿಯೂರು: ಮುರುಳ್ಯ ಗ್ರಾಮ ಪಂಚಾಯಿತಿಯ ಬೇಸಗೆ ಶಿಬಿರವು ಗ್ರಾಮ ಪಂಚಾಯತ್ ಆವರಣದಲ್ಲಿ ನಡೆಯಿತು. ಶಿಬಿರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾನಕಿ ಮುರುಳ್ಯ ಉದ್ಘಾಟಿಸಿದ್ದು, ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು. ಕ್ರೀಯಾಶೀಲ ಮಕ್ಕಳಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು. ಗ್ರಾಮ ಪಂಚಾಯಿತಿಯ ಅಮೃತ ಸರೋವರ ಪೂದೆಕೆರೆ, ಸಂಜೀವಿನಿ ಸದಸ್ಯೆಯರ ಹೈನುಗಾರಿಕೆ, ಮಲ್ಲಿಗೆ ಕೃಷಿ ಹಾಗೂ ವಿಶೇಷ ಚೇತನ ನವೀನ ಕಳತ್ತಜೆ ಅವರ ಜೇನುಕೃಷಿ ಮತ್ತಿತರ ಸ್ಥಳೀಯ ಕೃಷಿ ಉದ್ಯಮಗಳ ವೀಕ್ಷಣೆಗೆ ಹೊರಸಂಚಾರ ಚಟುವಟಿಕೆಯನ್ನು ನಡೆಸಲಾಯಿತು. ಶಿಬಿರಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿದ್ದು, ಅವರನ್ನು

ಮುರುಳ್ಯ: ಯಶಸ್ವಿಯಾಗಿ ನಡೆದ ಬೇಸಗೆ ಶಿಬಿರ, ಶಾಸಕಿಗೆ ಅಭಿನಂದನೆ Read More »

ಶಿವಮಣಿ ಕಲಾವಿದರ ಹುಟ್ಟುಹಬ್ಬ ಸಂಭ್ರಮಾಚರಣೆ

ಪುತ್ತೂರು: ಇಲ್ಲಿನ ನೆಹರುನಗರದ ಶಿವನಗರ ಶಿವಮಣಿ ಕಲಾ ಸಂಘದ ವತಿಯಿಂದ ಕಲಾವಿದರ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಭಾನುವಾರ ಆಚರಿಸಲಾಯಿತು. ಶಿವಮಣಿ ಬಾಲ ಸಮಿತಿಯ ಮುಂದಿನ ಯೋಜನೆಗಳು ಹಾಗೂ ಕಾರ್ಯವೈಖರಿಯನ್ನು ಸಭೆಯ ಮುಂದಿಟ್ಟ ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲಿಯಾನ್, ಉತ್ತಮ ಸಂಘಟನೆ, ಹೊಸ ಹುರುಪು, ಆತ್ಮವಿಶ್ವಾಸ, ಪ್ರಾಮಾಣಿಕತೆ ನಮ್ಮ ಜೀವನದ ಯಶಸ್ಸಿನ ಸೂತ್ರಗಳು. ಈ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಕಲೆ, ‘ಕಲಿಕೆ’ ಹಾಗೂ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಸಂಘದ ಉಪಾಧ್ಯಕ್ಷ, ಕಲಾವಿದ ಕೃಷ್ಣಪ್ಪ ಶಿವಾಮಣಿ ಅವರು

ಶಿವಮಣಿ ಕಲಾವಿದರ ಹುಟ್ಟುಹಬ್ಬ ಸಂಭ್ರಮಾಚರಣೆ Read More »

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಸಚಿವರ ಮನೆ ಧ್ವಂಸ

ಇಂಫಾಲ: ಘರ್ಷಣೆ ಪೀಡಿತ ಮಣಿಪುರದ ಬಿಷ್ಣುಪುರ್ ಹಾಗೂ ಚುರಾಚಂದ್‌ಪುರ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಶಂಕಿತ ಉಗ್ರರು ಹಾಗೂ  ಜನರ ಗುಂಪಿನ ನಡುವೆ ನಡೆದ ಹೊಸ ಹಿಂಸಾಚಾರದಲ್ಲಿ ಓರ್ವ  ಸಾವನ್ನಪ್ಪಿದ್ದಾನೆ ಹಾಗೂ ಇನ್ನೊಬ್ಬನು ಗಾಯಗೊಂಡಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಏತನ್ಮಧ್ಯೆ, ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಸರಕಾರವು ಮತ್ತೊಂದು ಸಮುದಾಯಕ್ಕೆ ಸೇರಿದ ಉಗ್ರಗಾಮಿಗಳಿಂದ ಸ್ಥಳೀಯರನ್ನು ರಕ್ಷಿಸಲು ಸಾಕಷ್ಟು ಕೆಲಸ  ಮಾಡುತ್ತಿಲ್ಲ ಎಂದು ಆರೋಪಿಸಿ ಮಣಿಪುರದ ಪಿಡಬ್ಲ್ಯೂಡಿ ಸಚಿವ ಕೊಂತೌಜಮ್ ಗೋವಿಂದಸ್ ಅವರ ಬಿಷ್ಣುಪುರ ಜಿಲ್ಲೆಯಲ್ಲಿರುವ  ಮನೆಯನ್ನು ಬುಧವಾರ ಧ್ವಂಸಗೊಳಿಸಿದೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಸಚಿವರ ಮನೆ ಧ್ವಂಸ Read More »

ಕಡಬ ಪ್ರಾಕೃತಿಕ ವಿಕೋಪ ತಡೆ ಮುಂಜಾಗ್ರತ ಸಭೆ | ವಿಪತ್ತು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಿ, ಅಧಿಕಾರಿಗಳಿಗೆ ಎ.ಸಿ ಸೂಚನೆ

ಕಡಬ: ಮುಂಬರುವ ಮಳೆಗಾಲದಲ್ಲಿ ಉಂಟಾಗುವ ಪ್ರಾಕೃತಿಕ ವಿಕೋಪವನ್ನು ಎಲ್ಲಾ  ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಮರ್ಪಕವಾಗಿ ನಿರ್ವಹಣೆ ಮಾಡಲು ಎಲ್ಲರೂ ಸಿದದ್ರಗಬೇಕು ಎಂದು ಪುತ್ತೂರು ಸಹಯಕ ಆಯುಕ್ತ ಗಿರೀಶ್ ನಂದನ್ ಸೂಚನೆ ನೀಡಿದರು. ಅವರು ಬುಧವಾರ ಕಡಬ ಅಂಬೇಡ್ಕರ್ ಭವನದಲ್ಲಿ  ಪ್ರಾಕೃತಿಕ ವಿಕೋಪದಡಿ ಹಾನಿಯಾಗುವ ಪ್ರಕರಣಗಳ ಬಗ್ಗೆ ಮುಂಜಾಗ್ರತ ಕ್ರಮ ವಹಿಸಲು ಕಾರ್ಯತಂತ್ರ ರೂಪಿಸುವ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲರೂ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಾಗ ನೆರೆ, ಭೂ ಕುಸಿತ ಮುಂತಾದ ಪ್ರಾಕೃತಿಕ ವಿಪತ್ತುಗಳನ್ನು  ಸಮರ್ಥವಾಗಿ

ಕಡಬ ಪ್ರಾಕೃತಿಕ ವಿಕೋಪ ತಡೆ ಮುಂಜಾಗ್ರತ ಸಭೆ | ವಿಪತ್ತು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಿ, ಅಧಿಕಾರಿಗಳಿಗೆ ಎ.ಸಿ ಸೂಚನೆ Read More »

ಸಿ.ಆರ್.ಝಡ್. ಮರಳುಗಾರಿಕೆ ಇನ್ನೇನಿದ್ದರೂ ಮಳೆಗಾಲದ ನಂತರ!

ಮಂಗಳೂರು : ಸಿಆರ್‌ಝಡ್‌ ಪ್ರದೇಶದಲ್ಲಿ ಮರಳುಗಾರಿಕೆ ಮಳೆಗಾಲ ಆರಂಭವಾಗುವ ಎರಡು ತಿಂಗಳ ಮೊದಲೇ ಪೂರ್ಣಗೊಂಡಿದೆ. ಚುನಾವಣೆ ಕಾರಣದಿಂದಾಗಿ ಮತ್ತೆ ಪರಿಸರ ಇಲಾಖೆಯ ಕ್ಲಿಯರೆನ್ಸ್‌ ಪಡೆಯುವ ಪ್ರಕ್ರಿಯೆಗಳು ತಡವಾಗಿರುವ ಕಾರಣ ಈ ಬಾರಿ ಸಿಆರ್‌ಝಡ್‌ ಮರಳುಗಾರಿಕೆ ಇನ್ನೇನಿದ್ದರೂ ಮಳೆಗಾಲದ ಬಳಿಕವೇ ನಡೆಯಬೇಕಷ್ಟೆ. ಪರವಾನಿಗೆಯ ಅವಧಿ ಪೂರ್ಣ ಗೊಂಡ ಹಿನ್ನೆಲೆಯಲ್ಲಿ ಮಾ. 4ಕ್ಕೇ ಸಿಆರ್‌ಝಡ್‌ ವ್ಯಾಪ್ತಿಯ ಮರಳು ದಿಣ್ಣೆಗಳಲ್ಲಿ ಮರಳುಗಾರಿಕೆ ನಿಂತಿದೆ. ಆ ಬಳಿಕ ಇಸಿ ಮತ್ತೆ ಪಡೆಯುವುದಕ್ಕೆ ಬೇಕಾದ ಬೆಥಮೆಟ್ರಿ ಸರ್ವೇ ಪೂರ್ಣಗೊಂಡಿದೆ. ಆದರೆ ವರದಿ ಬರಲು ಬಾಕಿ

ಸಿ.ಆರ್.ಝಡ್. ಮರಳುಗಾರಿಕೆ ಇನ್ನೇನಿದ್ದರೂ ಮಳೆಗಾಲದ ನಂತರ! Read More »

ನೂಜಿಬಾಳ್ತಿಲ: ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ

ಕಡಬ: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿಯ ಗ್ರಂಥಾಲಯ ವತಿಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನೂಜಿಬಾಳ್ತಿಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ಶಿಬಿರ ಉದ್ಘಾಟಿಸಿ ಮಾತನಾಡಿ, ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಶೈಕ್ಷಣಿಕ ವರ್ಷದ ಶಾಲಾರಂಭ ಆಗಲಿದೆ. ಇದಕ್ಕೂ ಮೊದಲು ಬೇಸಿಗೆ ಶಿಬಿರಗಳನ್ನು ನಡೆಸಲಾಗುತ್ತಿರುವುದು ಮಕ್ಕಳಿಗೆ ಶಾಲಾರಂಭಕ್ಕೆ ಹೊಂದಿಕೊಳ್ಳಲು ಪೂರಕವಾಗಲಿದೆ. ಅಲ್ಲದೆ ಶಿಬಿರಗಳು ಮಕ್ಕಳಿಗೆ ವಿವಿಧ ರೀತಿಯಲ್ಲಿ ತೊಡಗಿಕೊಳ್ಳಲು ಹಾಗೂ ತಮ್ಮ ವ್ಯಕ್ತಿತ್ವ

ನೂಜಿಬಾಳ್ತಿಲ: ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ Read More »

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಪ್ರಮಾಣ ವಚನ

ಬೆಂಗಳೂರು : ರಾಜ್ಯದ 16ನೇ ವಿಧಾನಸಭೆಯ ಮೊಟ್ಟ ಮೊದಲ ವಿಶೇಷ ಅಧಿವೇಶನದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಪ್ರಮಾಣವಚನ ಸ್ವೀಕಾರ ಮಾಡಿದರು. ಮೇ 24ರಿಂದ ರಾಜ್ಯದ ವಿಧಾನಸಭೆ ಅಧಿವೇಶನ ಪ್ರಾರಂಭವಾಗಿದ್ದು, 3 ದಿನಗಳ ಕಾಲ ಅಧಿವೇಶನ ನಡೆಯಲಿದೆ. ವಿಧಾನಸಭೆ ಚುನಾವಣೆಯಲ್ಲಿ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಶಾಸಕರಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಜೊತೆಗೆ ಸಭಾಪತಿ ಅವರ ಆಯ್ಕೆಯೂ ಇದರಲ್ಲಿ ನಡೆಯಲಿದೆ. ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಕೊಡಿಂಬಾಡಿ ಅವರು ಬೆಂಗಳೂರಿನಲ್ಲಿ ನಡೆದ ಮೊದಲ

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಪ್ರಮಾಣ ವಚನ Read More »

error: Content is protected !!
Scroll to Top