ಸುದ್ದಿ

ಅಪ್ರಾಪ್ತೆ ಬಾಲಕಿಗೆ ಅಶ್ಲೀಲ ಚಿತ್ರ ತೋರಿಸಿ ಲೈಂಗಿಕ ಕಿರುಕಳ ನೀಡಿದ ಯುವಕ | ಆರೋಪಿ ವಿರುದ್ದ ಫೋಕ್ಸೋ ಪ್ರಕರಣ  ದಾಖಲು

ಪುತ್ತೂರು : ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳನ್ನು  9 ವರ್ಷದ ಅಪ್ರಾಪ್ತ ಬಾಲಕಿಗೆ  ತೋರಿಸಿ,  ಲೈಂಗಿಕ ಕಿರುಕುಳದ ಆರೋಪದ ಹಿನ್ನಲೆ ಯುವಕನ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ. ಮಹಮ್ಮದ್ ಇರ್ಷಾದ್(20) ಲೈಂಗಿಕ ಕಿರುಕುಳ ನೀಡಿದ ಆರೋಪಿ ಎನ್ನಲಾಗಿದೆ. ಮಹಮ್ಮದ್ ಇರ್ಷಾದ್ ವಿರುದ್ದ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿದೆ.  ಆರೋಪಿ 9 ವರ್ಷದ ಅಪ್ರಾಪ್ತಗೆ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ತೋರಿಸಿ ಲೈಂಗಿಕ ಕಿರುಕುಳ ನೀಡಿರುವ ಕುರಿತು ಫೆ.21ರಂದು ಅಪ್ರಾಪ್ತೆಯ ಪೋಷಕರು ಹಾಗೂ ಅಪ್ರಾಪ್ತೆ ಬಾಲಕಿ ದೂರು […]

ಅಪ್ರಾಪ್ತೆ ಬಾಲಕಿಗೆ ಅಶ್ಲೀಲ ಚಿತ್ರ ತೋರಿಸಿ ಲೈಂಗಿಕ ಕಿರುಕಳ ನೀಡಿದ ಯುವಕ | ಆರೋಪಿ ವಿರುದ್ದ ಫೋಕ್ಸೋ ಪ್ರಕರಣ  ದಾಖಲು Read More »

ಪುಣೆ ಸ್ವಾರ್ಗೇಟ್‌ ಬಸ್‌ ನಿಲ್ದಾಣದಲ್ಲಿ ಅತ್ಯಾಚಾರ : ದೇಶಾದ್ಯಂತ ಆಕ್ರೋಶ

ನಿಲ್ಲಿಸಿದ್ದ ಬಸ್‌ಗಳಲ್ಲಿ ರಾಶಿ ರಾಶಿ ಕಾಂಡೋಮ್‌, ಬಿಯರ್‌ ಬಾಟಲಿ, ಒಳ ಉಡುಪು ಪತ್ತೆ ಪುಣೆ : ಪುಣೆಯ ಜನನಿಬಿಡ ಸ್ವಾರ್ಗೇಟ್ ಸರಕಾರಿ ಬಸ್​ ನಿಲ್ದಾಣದಲ್ಲಿ ಮಂಗಳವಾರ ಮುಂಜಾನೆ ನಡೆದಿರುವ ಅತ್ಯಾಚಾರ ಕೃತ್ಯ ದೇಶಾದ್ಯಂತ ಆಕ್ರೋಶದ ಅಲೆಯೆಬ್ಬಿಸಿದೆ. ನಿಲ್ಲಿಸಿದ್ದ ಸ್ಟೇಷನರಿ ಬಸ್ಸಿನೊಳಗೆ 26 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ. ಹಳೆಯ ಬಳಕೆಯಾಗದ ಬಸ್​ಗಳನ್ನು ಅಲ್ಲಿ ನಿಲ್ಲಿಸಲಾಗಿದ್ದು, ಈ ಬಸ್​ಗಳಲ್ಲಿ ರಾಶಿಗಟ್ಟಲೆ ಕಾಂಡೋಮ್, ಮದ್ಯದ ಬಾಟಲಿಗಳು, ಮಹಿಳೆಯರ ಒಳಉಡುಪುಗಳು ಪತ್ತೆಯಾಗಿದ್ದು ಬಹಳ ಕಾಲದಿಂದ ಇಲ್ಲಿ ಅತ್ಯಾಚಾರ ಮತ್ತಿತರ ಅಪರಾಧ

ಪುಣೆ ಸ್ವಾರ್ಗೇಟ್‌ ಬಸ್‌ ನಿಲ್ದಾಣದಲ್ಲಿ ಅತ್ಯಾಚಾರ : ದೇಶಾದ್ಯಂತ ಆಕ್ರೋಶ Read More »

ಕಟ್ ಕನ್ವರ್ಶನ್ ಮತ್ತು ಅನಧಿಕೃತ ಕಟ್ಟಡಗಳಿಗೆ ಬಿ ಖಾತಾ ನೀಡಲು ಸರಕಾರದ ಆದೇಶ | ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸರಕಾರ

ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕಟ್‌ಕನ್ವರ್ಶನ್ ಮತ್ತು ಅನಧಿಕೃತವಾಗಿ ನಿರ್ಮಾಣ ಮಾಡಿರುವ ಮನೆ ಮತ್ತು ಕಟ್ಟಡಗಳಿಗೆ ಬಿ ಖಾತಾ ನೀಡಲು ರಾಜ್ಯ ಸರಕಾರ ಆದೇಶ ನೀಡಿದ್ದು ,ಪುತ್ತೂರು ಶಾಸಕರು ಈ ಹಿಂದೆ ನೀಡಿದ್ದ ಮನವಿಗೆ ಸರಕಾರ ಸ್ಪಂದನೆ ನೀಡಿದೆ. 2024 ಸೆಪ್ಟಂಬರ್ ತಿಂಗಳ ಮೊದಲು ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಟ್ಟಡ, ಮನೆ ಮತ್ತು ಕಟ್ ಕನ್ವರ್ಶನ್ ಆಗಿರುವ ಅರ್ಜಿದಾರರಿಗೆ ಬಿ ಖಾತೆ ನೀಡಲು ನಿರ್ಧರಿಸಿದೆ. ಈಗಾಗಲೇ ಈ ಅನಧಿಕೃತ ಮನೆಗಳ‌ ಪೈಕಿ ಕೆಲವೊಂದನ್ನು ಕೆಡವಲು ನಗರಸಭೆ

ಕಟ್ ಕನ್ವರ್ಶನ್ ಮತ್ತು ಅನಧಿಕೃತ ಕಟ್ಟಡಗಳಿಗೆ ಬಿ ಖಾತಾ ನೀಡಲು ಸರಕಾರದ ಆದೇಶ | ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸರಕಾರ Read More »

ಕರಾವಳಿಯಲ್ಲಿ ಐದು ದಿನ ಉಷ್ಣ ಅಲೆ ಸಾಧ್ಯತೆ : ಯೆಲ್ಲೊ ಅಲರ್ಟ್‌ ಘೋಷಣೆ

ಜಿಲ್ಲಾಡಳಿತಗಳಿಂದ ಮುನ್ನೆಚ್ಚರಿಕೆ ಮಾರ್ಗಸೂಚಿ ಬಿಡುಗಡೆ ಮಂಗಳೂರು : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ 4-5 ದಿನ ಉಷ್ಣ ಅಲೆ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮುಂದಿನ ಐದು ದಿನಗಳ ಕಾಲ ಉಷ್ಣ ಅಲೆ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿ ಯೆಲ್ಲೋ ಅಲರ್ಟ್​ ಘೋಷಿಸಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಬಿಸಿಲ ಝಳ ಹೆಚ್ಚಲಿದೆ, ಕರಾವಳಿಯಲ್ಲಿ ಗರಿಷ್ಠ ತಾಪಮಾನ 36-38 ಡಿಗ್ರಿ ಸೆಲ್ಶಿಯಸ್ ಆಗಬಹುದು ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತಗಳು

ಕರಾವಳಿಯಲ್ಲಿ ಐದು ದಿನ ಉಷ್ಣ ಅಲೆ ಸಾಧ್ಯತೆ : ಯೆಲ್ಲೊ ಅಲರ್ಟ್‌ ಘೋಷಣೆ Read More »

ರುದ್ರಗಿರಿಯಲ್ಲಿ ಶಿವರಾತ್ರಿ ತಾಳಮದ್ದಳೆ

ತಣ್ಣೀರುಪಂತ  ಗ್ರಾಮದ ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಶಿವರಾತ್ರಿಯ ಪ್ರಯುಕ್ತ ಶ್ರೀ ಮಹಿಷಮರ್ದಿನಿ ಕಲಾ ಪ್ರತಿಷ್ಠಾನ ಚಾರ -ಹೆಬ್ರಿ ಸಂಯೋಜನೆಯಲ್ಲಿ ಇಂದ್ರಕೀಲಕ -ಊರ್ವಶಿ ಶಾಪ ತಾಳಮದ್ದಳೆ ಜರಗಿತು. ಭಾಗವತರಾಗಿ ಸ್ನೇಹ ಆಚಾರ್ಯ ಕಾರ್ಕಳ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ ಆಳ್ವ ಬಾರ್ಯ,  ಅರ್ಥದಾರಿಗಳಾಗಿ ಜಬ್ಬಾರ್ ಸಮೋ (ಈಶ್ವರ )ನಾ. ಕಾರಂತ ಪೆರಾಜೆ(ಊರ್ವಶಿ) ದಿವಾಕರ ಆಚಾರ್ಯ ಗೇರುಕಟ್ಟೆ (ದೇವೇಂದ್ರ ), ವಿದ್ವಾನ್  ಕೇಕಣಾಜೆ ಕೇಶವ ಭಟ್(ಅರ್ಜುನ), ಚಾರ ಪ್ರದೀಪ ಹೆಬ್ಬಾರ್ (ರ್ಪಾರ್ವತಿ ಮತ್ತು ಚಿತ್ರಸೇನ )ಭಾಗವಸಿದ್ದರು. ದೇವಳದ

ರುದ್ರಗಿರಿಯಲ್ಲಿ ಶಿವರಾತ್ರಿ ತಾಳಮದ್ದಳೆ Read More »

ತೆಲುಗು ನಟ ಪೋಸಾನಿ ಕೃಷ್ಣ ಮುರಳಿ ಬಂಧನ

ಜನಪ್ರಿಯ ನಟನಿಗೆ ಮುಳುವಾದ ಹೇಳಿಕೆ ಹೈದರಾಬಾದ್‌: ತೆಲುಗು ಚಿತ್ರರಂಗದ ಹಿರಿಯ ನಟ ಹಾಗೂ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಸದಸ್ಯ ಪೋಸಾನಿ ಕೃಷ್ಣ ಮುರಳಿ ಅವರನ್ನು ನಿನ್ನೆ ರಾತ್ರಿ ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಸಮುದಾಯವೊಂದರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಕುರಿತು ಪೋಸಾನಿ ಕೃಷ್ಣ ಮುರಳಿ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ನಟನನ್ನು ಬಂಧಿಸಲಾಗಿದೆ. ಈ ಹೇಳಿಕೆಯು ಎರಡು ಗುಂಪುಗಳ ನಡುವೆ ವೈಷಮ್ಯಕ್ಕೂ ಕಾರಣವಾಗಿತ್ತು.ನಟನ ವಿರುದ್ಧ ಓಬುಲವಾರಿಪಲ್ಲಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ ಎಸ್‌ಸಿ/ಎಸ್‌ಟಿ ಕಾಯ್ದೆಯ ಅಡಿಯಲ್ಲಿ

ತೆಲುಗು ನಟ ಪೋಸಾನಿ ಕೃಷ್ಣ ಮುರಳಿ ಬಂಧನ Read More »

ಮಹಾಕುಂಭಮೇಳಕ್ಕೆ ವೈಭವದ ತೆರೆ : 66 ಕೋಟಿಗೂ ಅಧಿಕ ಜನರಿಂದ ಪುಣ್ಯಸ್ನಾನ

183 ದೇಶಗಳ ಪ್ರತಿನಿಧಿಗಳು ಭಾಗಿ; 4 ಲಕ್ಷ ಕೋಟಿ ರೂಪಾಯಿಯಷ್ಟು ವ್ಯವಹಾರ ಪ್ರಯಾಗರಾಜ್ : ಮಕರ ಸಂಕ್ರಾಂತಿಯಂದು ಶುರುವಾಗಿ ಮಹಾಶಿವರಾತ್ರಿ ತನಕ 45 ದಿನಗಳ ಕಾಲ ನಡೆದ ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಮಹಾಕುಂಭಮೇಳದಲ್ಲಿ 66 ಕೋಟಿಗೂ ಹೆಚ್ಚು ಜನ ತ್ರಿವೇಣಿ ಸಂಗಮದಲ್ಲಿ ತೀರ್ಥ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಮಹಾಶಿವರಾತ್ರಿಯ ಸ್ನಾನದೊಂದಿಗೆ ವೈಭವದ ಮಹಾಕುಂಭಮೇಳ ಮುಕ್ತಾಯಗೊಂಡಿದೆ. ಮಹಾಕುಂಭದಲ್ಲಿ 5 ಪವಿತ್ರ ಸ್ನಾನಗಳು ನಡೆದವು. ಅವುಗಳಲ್ಲಿ ಮೂರು ಅಮೃತ ಸ್ನಾನಗಳು.

ಮಹಾಕುಂಭಮೇಳಕ್ಕೆ ವೈಭವದ ತೆರೆ : 66 ಕೋಟಿಗೂ ಅಧಿಕ ಜನರಿಂದ ಪುಣ್ಯಸ್ನಾನ Read More »

ಈಶಾ ಫೌಂಡೇಷನ್‌ ಶಿವರಾತ್ರಿ ಕಾರ್ಯಕ್ರಮದಲ್ಲಿ ಅಮಿತ್‌ ಶಾ ಜೊತೆ ಭಾಗವಹಿಸಿದ ಡಿಕೆಶಿ

ಕಾಂಗ್ರೆಸ್‌ನಿಂದ ತೀವ್ರ ಆಕ್ಷೇಪ – ರಾಜಕೀಯದಲ್ಲಿ ಸಂಚಲನ ಬೆಂಗಳೂರು: ಕೊಯಮತ್ತೂರಿನ ಈಶಾ ಫೌಂಡೇಶನ್‌ನ ಶಿವರಾತ್ರಿ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವೇದಿಕೆ ಹಂಚಿಕೊಂಡಿರುವುದು ರಾಜಕೀಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದು, ಕಾಂಗ್ರೆಸ್‌ನಲ್ಲಿ ಈ ನಡೆಗೆ ತೀವ್ರ ಅಪಸ್ವರ ವ್ಯಕ್ತವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಏನೇನೋ ಹಾಕುತ್ತಾರೆ ಎಂದು ಡಿಕೆಶಿ ಹೇಳಿಕೆ ಬೆನ್ನಲ್ಲೇ ಎಐಸಿಸಿ‌ ಕಾರ್ಯದರ್ಶಿ ಕೇರಳದ ಮಾಜಿ ಉಸ್ತುವಾರಿ ಪಿ.ವಿ.ಮೋಹನ್ ಬಹಿರಂಗವಾಗಿಯೇ ಅಸಮಾಧಾನ‌ ಹೊರಹಾಕಿದ್ದಾರೆ. ಪಕ್ಷದ ತತ್ವ ಸಿದ್ಧಾಂತ ಹಾಗೂ ರಾಹುಲ್ ಗಾಂಧಿ

ಈಶಾ ಫೌಂಡೇಷನ್‌ ಶಿವರಾತ್ರಿ ಕಾರ್ಯಕ್ರಮದಲ್ಲಿ ಅಮಿತ್‌ ಶಾ ಜೊತೆ ಭಾಗವಹಿಸಿದ ಡಿಕೆಶಿ Read More »

ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ | ಜಾನುವಾರುಗಳ ಮೇವು ಸಾಗಾಟದ ಟೆಂಪೋ

ಬೆಳ್ತಂಗಡಿ: ಜಾನುವಾರುಗಳ ಮೇವು ಸಾಗಾಟದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ  ಘಟನೆ  ನಿನ್ನೆ ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಕ್ರಾಸ್ ಬಳಿ ನಡೆದಿದೆ. ಟೆಂಪೋದಲ್ಲಿದ್ದವರು ಅಲ್ಪಸ್ವಲ್ಪ ಗಾಯಗೊಂಡು ಹೆಚ್ಚಿನ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ | ಜಾನುವಾರುಗಳ ಮೇವು ಸಾಗಾಟದ ಟೆಂಪೋ Read More »

ಮಂಗನಖಾಯಿಲೆಗೆ ಓರ್ವ ಮಹಿಳೆ ಬಲಿ

ಶಿವಮೊಗ್ಗ : ತೀರ್ಥಹಳ್ಳಿ ತಾಲೂಕಿನ 55 ವರ್ಷದ ಮಹಿಳೆಯೊಬ್ಬರು ಕೆಎಫ್‌ಡಿ ಸೋಂಕಿನಿಂದ ಬಳಲುತ್ತಿದ್ದರು. ಈ ಹಿನ್ನಲೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎನ್ನುವ ವಿಚಾರ  ತಡವಾಗಿ ಬೆಳಕಿಗೆ ಬಂದಿದೆ. ಇದು ಈ ವರ್ಷದ ಮೊದಲ ಬಲಿಯಾಗಿದೆ. ತೀರ್ಥಹಳ್ಳಿ ತಾಲೂಕಿನ ಕೊನೇರಿಪುರದ 55 ವರ್ಷದ ಮಹಿಳೆಗೆ ಜ.23ರಂದು ಕೆಎಫ್‌ಡಿ ಪಾಸಿಟಿವ್ ಬಂದಿತ್ತು. ಹೀಗಾಗಿ ಅವರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಜ.23ರಂದು ಮಹಿಳೆಗೆ ಕಎಫ್‌ಡಿ ಪಾಸಿಟಿವ್ ಬಂದಿದ್ದರಿಂದ ಶಿವಮೊಗ್ಗ ಮೆಗ್ಯಾನ್ ಆಸ್ಪತ್ರೆಗೆ ದಾಖಲಿಸಿ

ಮಂಗನಖಾಯಿಲೆಗೆ ಓರ್ವ ಮಹಿಳೆ ಬಲಿ Read More »

error: Content is protected !!
Scroll to Top