ಸುಳ್ಯ ಉಬರಡ್ಕ ನಿವಾಸಿ ಅವಿನಾಶ್ ನಾಪತ್ತೆ | ಪ್ರಕರಣ ದಾಖಲು
ಸುಳ್ಯ: ತಾಲೂಕಿನ ಉಬರಡ್ಕ ಗ್ರಾಮದ ಸೂಂತೋಡು ನಿವಾಸಿ ಅವಿನಾಶ್ ಭಂಡಾರ (39) ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿರುವ ಕುರಿತು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಅವಿನಾಶ್ ಅವರು ಅ.29 ರಂದು ಬೆಳಿಗ್ಗೆ ಕೆಲಸಕ್ಕೆಂದು ಮನೆಯಿಂದ ಹೋಗಿದ್ದವರು ಹಿಂತಿರುಗಿ ಬರಲಿಲ್ಲ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಅವರನ್ನು ಯಾರಾದರು ಕಂಡಲ್ಲಿ ಸುಳ್ಯ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುಳ್ಯ ಉಬರಡ್ಕ ನಿವಾಸಿ ಅವಿನಾಶ್ ನಾಪತ್ತೆ | ಪ್ರಕರಣ ದಾಖಲು Read More »