ಮಾ.8 : ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ‘ವಿವೇಕ ಚೇತನ್-2025’ ಅಂತರ್ ಕಾಲೇಜು ಪ್ರತಿಭಾ ಸ್ಪರ್ಧೆ
ಪುತ್ತೂರು: ಮಾರ್ಚ್ 8 ಶನಿವಾರ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ಯುವ ಪ್ರತಿಭಾ ಸಂಗಮವಾಗಲಿದ್ದು, ಅಂದು ‘ವಿವೇಕ ಚೇತನ್- 2025’ ಶಿರೋನಾಮೆಯಲ್ಲಿ ಅಂತರ್ ಕಾಲೇಜು ಮಟ್ಟದ ವಿವಿಧ ಹನ್ನೆರಡು ಸ್ಪರ್ಧೆಗಳು ನಡೆಯಲಿವೆ. ಛಾಯಾಗ್ರಹಣ, ಕಿರುಚಿತ್ರ ತಯಾರಿ, ಚರ್ಚೆ, ಪೋಸ್ಟರ್ ವಿನ್ಯಾಸಗಳು ಸೇರಿದಂತೆ ವಿವಿಧ ಆಕರ್ಷಕ ಚಿಂತನಾಶೀಲ ಸ್ಪರ್ಧೆಗಳು ನಡೆಯಲಿದ್ದು, ನೂರಾರು ಪ್ರತಿಭೆಗಳು ಅನಾವರಣಗೊಳ್ಳಲಿವೆ. ಹೆಚ್ಚಿನ ಮಾಹಿತಿಗಾಗಿ ಅಸಿಸ್ಟೆಂಟ್ ಪ್ರೊಫೆಸರ್’ಗಳಾದ ಹವ್ಯಶ್ರೀ ಪಿ. ಕೆ. (9482306026) ಮತ್ತು ಸುತನ್ ಕೇವಳ (9141142201) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ […]