ಸುದ್ದಿ

ಈ ತಿಂಗಳಲ್ಲಿ ಸಂಭವಿಸಲಿದೆ ಎರಡು ಗ್ರಹಣ

ಮಾ.14ರಂದು ಚಂದ್ರಗ್ರಹಣ; ಮಾ.29ರಂದು ಸೂರ್ಯಗ್ರಹಣ ಮಂಗಳೂರು: ಈ ವರ್ಷದ ಮೊದಲ ಚಂದ್ರಗ್ರಹಣ ಫಾಲ್ಗುಣ ಮಾಸದ ಹುಣ್ಣಿಮೆಯಂದು ಸಂಭವಿಸಲಿದೆ. ಈ ದಿನದಂದು ಹೋಳಿ ಹಬ್ಬವನ್ನು ಸಹ ಆಚರಿಸಲಾಗುತ್ತದೆ. ಭಾರತೀಯ ಕಾಲಮಾನದ ಪ್ರಕಾರ ಈ ಚಂದ್ರಗ್ರಹಣ ಮಾರ್ಚ್ 14ರಂದು ಬೆಳಿಗ್ಗೆ 9.29ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 3.29ಕ್ಕೆ ಕೊನೆಗೊಳ್ಳಲಿದೆ. ಸುದೀರ್ಘ ಆರು ತಾಸು ಚಂದ್ರಗ್ರಹಣ ಇದ್ದರೂ ಈ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಇದೇ ತಿಂಗಳಲ್ಲಿ ಸೂರ್ಯಗ್ರಹಣ ಕೂಡ ಸಂಭವಿಸಲಿದೆ. ಖಗೋಲ ಶಾಸ್ತ್ರಜ್ಞರ ಪ್ರಕಾರ ಮಾ.29ರಂದು ಸೂರ್ಯಗ್ರಹಣ ಸಂಭವಿಸಲಿದ್ದು, ಭಾರತೀಯ ಕಾಲಮಾನದ ಪ್ರಕಾರ […]

ಈ ತಿಂಗಳಲ್ಲಿ ಸಂಭವಿಸಲಿದೆ ಎರಡು ಗ್ರಹಣ Read More »

ಅನ್ಯಧರ್ಮದ ಹುಡುಗಿಯರನ್ನು ಮದುವೆಯಾಗಿ ಹೇಳಿಕೆಗೆ ಭಾರಿ ವಿರೋಧ

ಚಕ್ರವರ್ತಿ ಸೂಲಿಬೆಲೆಗೆ ಎಸ್‌ಡಿಪಿಐಯಿಂದ ಎಚ್ಚರಿಕೆ ಮಂಗಳೂರು: ಹಿಂದೂ ಹುಡುಗರಿಗೆ ಮದುವೆಯಾಗಲು ಹುಡುಗಿ ಸಿಗದಿದ್ದರೆ ಅನ್ಯ ಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳಿ ಎಂದಿರುವ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಎಸ್‌ಡಿಪಿಐ ಸೇರಿ ಹಲವು ಸಂಘಟನೆಗಳ ನಾಯಕರು ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಚಕ್ರವರ್ತಿ ಸೂಲಿಬೆಲೆ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಹೇಳಿಕೆಗೆ ಸದಾ ಬದ್ಧನಾಗಿರುತ್ತೇನೆ ಎಂದಿದ್ದಾರೆ. ವಿಶ್ವ ಹಿಂದೂ ಪರಿಷತ್ ಭಾನುವಾರ ಮಂಗಳೂರಿನಲ್ಲಿ ನಡೆದಿದ್ದ ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ

ಅನ್ಯಧರ್ಮದ ಹುಡುಗಿಯರನ್ನು ಮದುವೆಯಾಗಿ ಹೇಳಿಕೆಗೆ ಭಾರಿ ವಿರೋಧ Read More »

ಐಪಿಎಲ್‌ ಪಂದ್ಯಗಳಲ್ಲಿ ತಂಬಾಕು, ಮದ್ಯದ ಜಾಹೀರಾತಿಗೆ ನಿಷೇಧ : ಕೇಂದ್ರ ಸೂಚನೆ

ಟಿವಿ ಚಾನೆಲ್‌ಗಳಲ್ಲಿ, ಸ್ಟೇಡಿಯಂ ಸುತ್ತಮುತ್ತ ತಂಬಾಕು, ಮದ್ಯದ ಜಾಹೀರಾತು ಹಾಕದಂತೆ ಆದೇಶ ಹೊಸದಿಲ್ಲಿ: ಐಪಿಎಲ್‌ ಪಂದ್ಯಗಳು ನಡೆಯುವ ಕ್ರೀಡಾಂಗಣದ ಆವರಣದಲ್ಲಿ ಮತ್ತು ಪ್ರಸಾರದ ಸಮಯದಲ್ಲಿ ಎಲ್ಲ ರೀತಿಯ ತಂಬಾಕು ಮತ್ತು ಮದ್ಯದ ಜಾಹೀರಾತು ಮತ್ತು ಪ್ರಚಾರಗಳನ್ನು ನಿಷೇಧಿಸಲು ಐಪಿಎಲ್‌ ಮಂಡಳಿಗೆ ಕೇಂದ್ರ ಸರ್ಕಾರ ಆದೇಶಿಸಿದೆ. ಈ ಸಂಬಂಧ ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್ ಅವರಿಗೆ ಪತ್ರ ಬರೆದಿರುವ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಪ್ರೊ.ಡಾ.ಅತುಲ್ ಗೋಯೆಲ್, ಇದು ಸಾರ್ವಜನಿಕ ಆರೋಗ್ಯವನ್ನು ಉತ್ತೇಜಿಸುವ ನಿಮ್ಮ ಸಾಮಾಜಿಕ ಮತ್ತು ನೈತಿಕ

ಐಪಿಎಲ್‌ ಪಂದ್ಯಗಳಲ್ಲಿ ತಂಬಾಕು, ಮದ್ಯದ ಜಾಹೀರಾತಿಗೆ ನಿಷೇಧ : ಕೇಂದ್ರ ಸೂಚನೆ Read More »

ಪುತ್ತೂರು ಪುರಭವನದಲ್ಲಿ ತಾಲೂಕು ಮಟ್ಟದ ಮಹಿಳಾ ದಿನಾಚರಣೆ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜನಶಿಕ್ಷಣ ಟ್ರಸ್ಟ್, ಸಾಂತ್ವನ ಕೇಂದ್ರ, ನಗರಸಭೆ, ತಾಲೂಕು ಆಡಳಿತ ಕಚೇರಿ, ತಾ.ಪಂ. ತಾಲೂಕು ಸಂಜೀವಿನಿ ಒಕ್ಕೂಟ, ಸುಗ್ರಾಮ ಜಾಗೃತಿ ವೇದಿಕೆ ಸಹಯೋಗ

ಪುತ್ತೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜನಶಿಕ್ಷಣ ಟ್ರಸ್ಟ್, ಸಾಂತ್ವನ ಕೇಂದ್ರ, ನಗರಸಭೆ, ತಾಲೂಕು ಆಡಳಿತ ಕಚೇರಿ, ತಾ.ಪಂ. ತಾಲೂಕು ಸಂಜೀವಿನಿ ಒಕ್ಕೂಟ, ಸುಗ್ರಾಮ ಜಾಗೃತಿ ವೇದಿಕೆಯ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಮಹಿಳಾ ದಿನಾಚರಣೆ ಸೋಮವಾರ ಪುರಭವನದಲ್ಲಿ ನಡೆಯಿತು. ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ರಶ್ಮಿ ಮುಖ್ಯ ಅತಿಥಿಯಾಗಿ ಮಾತನಾಡಿ, ಮನೆಯಿಂದ ಹೊರ ಬರದ ಮಹಿಳೆಯರಿಗೆ ಮಾಹಿತಿ, ಅರಿವು ಮುಡಿಸಿ ಸಮಾಜದಲ್ಲಿ ಬೆರೆತು ಸಾಧನೆ ಮಾಡಲು ಪ್ರೋತ್ಸಾಹ ನೀಡಿದಾಗ

ಪುತ್ತೂರು ಪುರಭವನದಲ್ಲಿ ತಾಲೂಕು ಮಟ್ಟದ ಮಹಿಳಾ ದಿನಾಚರಣೆ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜನಶಿಕ್ಷಣ ಟ್ರಸ್ಟ್, ಸಾಂತ್ವನ ಕೇಂದ್ರ, ನಗರಸಭೆ, ತಾಲೂಕು ಆಡಳಿತ ಕಚೇರಿ, ತಾ.ಪಂ. ತಾಲೂಕು ಸಂಜೀವಿನಿ ಒಕ್ಕೂಟ, ಸುಗ್ರಾಮ ಜಾಗೃತಿ ವೇದಿಕೆ ಸಹಯೋಗ Read More »

ದ.ಕ., ಉಡುಪಿ ಜಿಲ್ಲೆಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕವಾದ ಸ್ಥಳೀಯರ ಸಂಖ್ಯೆ ಕೇವಲ 10 ಶೇ. | ಸದನದಲ್ಲಿ ಈ ಕುರಿತು ಧ್ವನಿ ಎತ್ತಿದ ಕಿಶೋರ್ ಕುಮಾರ್ ಪುತ್ತೂರು

ಬೆಂಗಳೂರು: ಕಳೆದ ಐದು ವರ್ಷಗಳಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕವಾದ ಸ್ಥಳೀಯರ ಸಂಖ್ಯೆ ಕೇವಲ 10 ಶೇ.ವಾಗಿದ್ದು, ಇದು ಬಹಳ ದುಃಖಕರ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ತಿಳಿಸಿದ್ದಾರೆ. ಸದನದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನೇಮಕವಾಗಿರುವ ಸಿಬ್ಬಂದಿಗಳ ಬಗ್ಗೆ ಪ್ರಶ್ನಿಸಿದಾಗ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ನೇಮಕವಾಗುವಂತೆ ಪ್ರೋತ್ಸಾಹಿಸಲು ಅಗತ್ಯ ಸವಲತ್ತುಗಳನ್ನು ಒದಗಿಸುವ ಕುರಿತು ಸರಕಾರ ಕ್ರಮ ಕೈಗೊಳ್ಳಬೇಕೆಂದು

ದ.ಕ., ಉಡುಪಿ ಜಿಲ್ಲೆಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕವಾದ ಸ್ಥಳೀಯರ ಸಂಖ್ಯೆ ಕೇವಲ 10 ಶೇ. | ಸದನದಲ್ಲಿ ಈ ಕುರಿತು ಧ್ವನಿ ಎತ್ತಿದ ಕಿಶೋರ್ ಕುಮಾರ್ ಪುತ್ತೂರು Read More »

ನೇಣುಬಿಗಿದು ಯುವಕನೋರ್ವ ಆತ್ಮಹತ್ಯೆಗೆ ಶರಣು

ವಿಟ್ಲ: ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದಲ್ಲಿ ನಡೆದಿದೆ. ನೇತ್ರಕೆರೆ ಕಡಂಬು ನಿವಾಸಿ ವಿಶಾಲ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ ಎನ್ನಲಾಗಿದೆ. ಮನೆಯಲ್ಲಿ ಯಾರು ಇಲ್ಲದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತರು ತಂದೆ, ತಾಯಿ ಹಾಗು ಸಹೋದರಿಯನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿಯಬೇಕಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ನೇಣುಬಿಗಿದು ಯುವಕನೋರ್ವ ಆತ್ಮಹತ್ಯೆಗೆ ಶರಣು Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಅಳಿಕೆ ವಲಯದ ಮುಳಿಯ ಜ್ಞಾನವಿಕಾಸದ ವಾರ್ಷಿಕೋತ್ಸವ

ಅಳಿಕೆ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ ) ವಿಟ್ಲ ತಾಲೂಕಿನ  ಅಳಿಕೆ ವಲಯದ ಮುಳಿಯ ಕಾರ್ಯಕ್ಷೇತ್ರದ  ಕಲ್ಪವೃಕ್ಷ ಜ್ಞಾನವಿಕಾಸ ಕೇಂದ್ರದಲ್ಲಿ   ವಾರ್ಷಿಕೋತ್ಸವ  ಕಾರ್ಯಕ್ರಮ ನಡೆಯಿತು. ಕೇಂದ್ರದ  ಸದಸ್ಯೆ ವರದಲಕ್ಷ್ಮಿ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದರು.  ಕೇಂದ್ರದ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ನಿಕಟಪೂರ್ವ ಯೋಜನಾಧಿಕಾರಿಯವರು  ಜ್ಞಾನವಿಕಾಸ ಹಗೂ   ವಾತ್ಸಲ್ಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕೇಂದ್ರದ ಸದಸ್ಯರಿಗೆ ಆಟೋಟ ನಡೆಸಿ ಬಹುಮಾನ ವಿತರಣೆ  ಮಾಡಲಾಯಿತು. ಈ ಸಂದರ್ಭ ಕೇಂದ್ರ ದ ಸಂಯೋಜಕಿ ಶಾಲಿನಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಅಳಿಕೆ ವಲಯದ ಮುಳಿಯ ಜ್ಞಾನವಿಕಾಸದ ವಾರ್ಷಿಕೋತ್ಸವ Read More »

ಕಲಾವಿದತ್ರಯರ ಸಂಸ್ಮರಣೆ  ಸನ್ಮಾನ ಮತ್ತು ತಾಳ ಮದ್ದಳೆ

 ಉಪ್ಪಿನಂಗಡಿ : ಯಕ್ಷಗಾನದಲ್ಲಿ ಹಿಮ್ಮೇಳ ವಾದಕರಾಗಿ ಮತ್ತು ಅರ್ಥಧಾರಿಗಳಾಗಿ ಕೀರ್ತಿ ಶೇಷ ರಾಗಿರುವ ಕೆ. ಗಣಪತಿ ಆಚಾರ್ಯ ಹಳೆ ನೇರೆಂಕಿ , ಕೆ ವಿಠಲ ಆಚಾರ್ಯ ನೆಲ್ಯಾಡಿ ಮತ್ತು ಭಾಸ್ಕರ ಆಚಾರ್ಯ ಉಪ್ಪಿನಂಗಡಿ ಸಹೋದರರ ಐದನೇ ವರ್ಷದ  ಸಂಸ್ಮರಣ ಕಾರ್ಯಕ್ರಮವು ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಸೇವಾ ಸಂಘದ ಸಹಯೋಗದಲ್ಲಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು.  ಹರೀಶ ಆಚಾರ್ಯ ಬಾರ್ಯ ಕಲಾವಿದ ಸಹೋದರರ ಸಂಸ್ಮರಣೆ ಮಾಡಿದರು. ಸಂಸ್ಮರಣೆಯಂಗವಾಗಿ  ನಿವೃತ್ತ ಶಿಕ್ಷಕ,ಅರ್ಥಧಾರಿ ಗೋಪಾಲಶೆಟ್ಟಿ ಕಳೆಂಜ ಅವರನ್ನು ಗೌರವಿಸಲಾಯಿತು.  ಸಮಾರಂಭದ

ಕಲಾವಿದತ್ರಯರ ಸಂಸ್ಮರಣೆ  ಸನ್ಮಾನ ಮತ್ತು ತಾಳ ಮದ್ದಳೆ Read More »

ನಟಿ ರಶ್ಮಿಕಾ ಮಂದಣ್ಣಗೆ ಭದ್ರತೆ ಒದಗಿಸಲು ಅಮಿತ್‌ ಶಾಗೆ ಪತ್ರ

ಹೇಳಿಕೆಗಳಿಂದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ನಟಿ ಬೆಂಗಳೂರು: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಭದ್ರತೆ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ರಾಜ್ಯದ ಗೃಹ ಸಚಿವ ಜಿ.ಪರಮೇಶ್ವರ್‌ ಅವರಿಗೆ ಕೊಡವ ನ್ಯಾಶನಲ್‌ ಕೌನ್ಸಿಲ್‌ ಮನವಿ ಮಾಡಿದೆ. ಜನಪ್ರಿಯ ನಟಿಯಾಗಿರುವ ರಶ್ಮಿಕಾಗೆ ಮಂದಣ್ಣ ಅವರಿಗೆ ಬೆದರಿಕೆಯಿದೆ. ಹೀಗಾಗಿ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಗೃಹ ಸಚಿವರಿಗೆ ಬರೆದಿರುವ ಪತ್ರದಲ್ಲಿ ಕೊಡವ ನ್ಯಾಶನಲ್‌ ಕೌನ್ಸಿಲ್‌ ಹೇಳಿದೆ. ಹಲವು ಸೂಪರ್‌ ಹಿಟ್‌ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ರಶ್ಮಿಕಾ

ನಟಿ ರಶ್ಮಿಕಾ ಮಂದಣ್ಣಗೆ ಭದ್ರತೆ ಒದಗಿಸಲು ಅಮಿತ್‌ ಶಾಗೆ ಪತ್ರ Read More »

ದಿಗಂತ್‌ ಪತ್ತೆ ಆಗ್ರಹಿಸಿ ಪ್ರತಿಭಟನೆ ಮಾಡಿದ ಹಿಂದು ಮುಖಂಡನಿಗೆ ಜೀವ ಬೆದರಿಕೆ

ನಿಮ್ಮ ರಕ್ತ ಈ ಭೂಮಿಗೆ ಹರಿಸದೆ ಬಿಡುವುದಿಲ್ಲ ಎಂದು ಧಮ್ಕಿ ಮಂಗಳೂರು: ನಿಗೂಢವಾಗಿ ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಕಿದೆಬೆಟ್ಟು ನಿವಾಸಿ‌ ಪಿಯುಸಿ ವಿದ್ಯಾರ್ಥಿ ದಿಗಂತ್ ಪತ್ತೆಗೆ ಆಗ್ರಹಿಸಿ ಪ್ರತಿಭಟಿಸಿದ್ದ ಬಜರಂಗದಳ ಮುಖಂಡ ಭರತ್ ಕುಮ್ಡೇಲ್​ ಅವರಿಗೆ ಸಾಮಾಜಿಕ ತಾಣಗಳ ಮೂಲಕ ಕೊಲೆ ಬೆದರಿಕೆ ಹಾಕಲಾಗಿದೆ. BEARY_ROYAL_NAWAB, ಬ್ಯಾರಿ ಟ್ರೋಲರ್, ಮಂಗಳೂರು ಕಿಂಗ್ ಎಂಬ ಹೆಸರಿನ ಪೇಜ್​ಗಳ ಮುಖಾಂತರ ಕೊಲೆ ಬೆದರಿಕೆ ಹಾಕಲಾಗಿದೆ. ದಿಗಂತ್ ಪತ್ತೆಗಾಗಿ ಮಾರ್ಚ್​ 1ರಂದು ಬಜರಂಗದಳ ಮುಖಂಡ ಭರತ್ ನೇತೃತ್ವದಲ್ಲಿ ಫರಂಗೀಪೇಟೆ ಬಂದ್

ದಿಗಂತ್‌ ಪತ್ತೆ ಆಗ್ರಹಿಸಿ ಪ್ರತಿಭಟನೆ ಮಾಡಿದ ಹಿಂದು ಮುಖಂಡನಿಗೆ ಜೀವ ಬೆದರಿಕೆ Read More »

error: Content is protected !!
Scroll to Top